ಕಾವ್ಯ ಸಂಗಾತಿ
ಡಾ.ವೈ.ಎಂ.ಯಾಕೊಳ್ಳಿ
೨೩ ಮಾತ್ರಾ ಗಜಲ್
ಯಾರೋ ಹೇಳಿದರೆಂದು ನಿನ್ನಕ್ರಮ ತಪ್ಪಬೇಡ
ಏನೋ ದೂರಿದರೆಂದು ನಿನ್ನ ಶ್ರಮ ತಪ್ಪಬೇಡ
ಊರೇ ಮಾತನಾಡಿದರೇನು ನಿನ್ನ ದಾರಿ ನಿನದು
ಇಡುವ ಹೆಜ್ಜೆಯು ಸರಿಯಿರಲಿ ಆಯಾಮ ತಪ್ಪಬೇಡ
ಬೀಸುವ ಗಾಳಿಯಂತಿರಬೇಕು ಮನ ಕದಡಲು ರಾಡಿ
ಮನದೋಟಕೆ ಹಾಕು ಬೇಡಿಯ ಸಂಯಮ ತಪ್ಪಬೇಡ
ಸುರಿವ ಮಳೆ ಹರಿವ ನೀರೆಂದೂ ಹರಿವುದು ಬಿಟ್ಟಿಲ್ಲ
ಕುಡಿವ ನೀರಿಗೆ ವಿಷ ಬೆರೆಸಿ ಬಾಳ ಸಮ ತಪ್ಪಬೇಡ
ನೀನೊಬ್ಬನೆ ಇರಲೆಂದು ಈ ಭೂಮಿ ಬಯಸುವುದಿಲ್ಲ
ಜೋಗಿ ಅಹಮ್ಮಿನಲಿ ನೀಮೆರೆದು ನಿಯಮ ತಪ್ಪಬೇಡ
ಡಾ.ವೈ.ಎಂ.ಯಾಕೊಳ್ಳಿ
ಸುಂದರ ಭಾವ ಸರ್ ಧನ್ಯವಾದಗಳು