ಬಸವಣ್ಣ ಕನ್ನಡದ ,ಕರ್ನಾಟಕದ ಅಸ್ಮಿತೆ. ನಾಗರಾಜ ಹರಪನಹಳ್ಳಿ

ಜನರನ್ನು ಶೋಷಿಸುತ್ತಿದ್ದ ಪುರೋಹಿತ ಶಾಹಿ‌ ಅಧರ್ಮದ ವಿರುದ್ಧ ಚಲನಶೀಲ ಮನುಷ್ಯ ಸಮಾನತೆಯ ಧರ್ಮ ಕಟ್ಟಿದ , ದುಡಿದುಣ್ಣುವವರ‌ನ್ನು ಗೌರವಿಸಿದ, ಜಾತಿ ಅಸಮಾನತೆಯನ್ನು ಕಿತ್ತು ಹಾಕಿದ ಜಗತ್ತಿನ ಮೊಟ್ಟ ಮೊದಲ ಧರ್ಮ ಲಿಂಗಾಯತ. ‌ಇಂಥ‌ ಮಾನವೀಯ ಐಡಿಯಾಜಿಯನ್ನು ತನ್ನ ಬದುಕಿನ ಕಾಲದಲ್ಲೇ ಕ್ರಿಯಾರೂಪದಲ್ಲಿ‌ ತಂದ ಅಪರೂಪದ ಮನುಷ್ಯ ಬಸವಣ್ಣ. ಬಸವಣ್ಣ ಕನ್ನಡದ ,ಕರ್ನಾಟಕದ ಅಸ್ಮಿತೆ.
ಬಸವಣ್ಣನ ಜನನವನ್ನೇ ನೆನಪಿಸಿ ಕೊಂಡರೆ ಜನಿವಾರ ಬೆಚ್ಚಿ ಬೀಳುತ್ತದೆ. ೧೨ ನೇ‌ಶತಮಾನ ಬಿಡಿ, ೨೧ ನೇ‌ ಶತಮಾನದಲ್ಲಿ  ಬಸವಣ್ಣನ ಹೆಸರು, ಆತನ ವಚನಗಳು ನೆನಪಿಸಿಕೊಳ್ಳದ ಸಾರ್ವಜನಿಕವಾಗಿ ಬಸವಣ್ಣನ ನಿಲುವು ಮಾತನಾಡದ ಕನ್ನಡದ ಸಾಹಿತಿಗಳ ಸಾಲು ದೊಡ್ಡದು. ಅವರೇ ಸಮಾನತೆಯ ಶತೃಗಳು. ಇದನ್ನು ಅರಿತರೆ ಬಸವಣ್ಣ ಜನ್ಮ ದಿನಕ್ಕೆ , ಅದೇ  ಜಾಗೃತ ಪ್ರಜ್ಞೆ.

ಮಾದಾರ ಚೆನ್ನಯ್ಯನ ಮನೆಯ  ಮಗ ‌ನಾನು ಎಂಬುದು ಬಸವಣ್ಣನ  ವಿನಯ..
…..

ಎನ್ನ ಕಾಲೇ ಕಂಬ, ಶಿರವೇ ಹೊನ್ನ ಕಳಶ,
ದೇಹವೇ ದೇಗುಲ ;  ಎಂಬುದು ಪ್ರಜ್ಞೆ
……

ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು; ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತಲ್ಲದೆ! ಅದಂದೇ ಹುಟ್ಟಿತ್ತು, ಅದಂದೇ ಹೊಂದಿತ್ತು; ಕೊಂದವರುಳಿದರೇ ,ಕೂಡಲಸಂಗಮದೇವಾ?
ಎಂಬುದು  ಸವಾಲು
…..

ತಾಯ ಮೊಲೆಹಾಲು ವಿಷವಾದೋಡೆ
ಇನ್ನಾರಿಗೆ ದೂರಲಿ ಕೂಡಲಸಂಗಮದೇವಾ ……
…. ಎಂಬುದು ವ್ಯವಸ್ಥೆಗೆ ಎಸೆದ ಪ್ರಶ್ನೆ .

ಇದು ವಚನ ಸಾಹಿತ್ಯ ಕಾಲದ , ಕನ್ನಡ ನೆಲದ ಸಾಂಸ್ಕೃತಿಕ ಅರಿವು

One thought on “ಬಸವಣ್ಣ ಕನ್ನಡದ ,ಕರ್ನಾಟಕದ ಅಸ್ಮಿತೆ. ನಾಗರಾಜ ಹರಪನಹಳ್ಳಿ

Leave a Reply

Back To Top