ಯುಗಾದಿ ವಿಶೇಷ

ನೇಸರನ ಕೆಂಗಿರಣವು ಭೂಮಿಗೆ ತಾಗಿದೆ
ಮರಗಿಡಗಳಲಿ ಹೊಸ ಚಿಗುರು ಮೂಡಿದೆ
ಕುಹೂ ಕುಹೂ ಕೋಗಿಲೆಯು ಕೂಗುತಿದೆ
ಹೊಸ ವರುಷಕೆ ಸುಸ್ವಾಗತವ ಕೋರಿದೆ

ತಳಿರು ತೋರಣವ ಮುಂಬಾಗಿಲಿಗೆ ಕಟ್ಟಿದೆ
ರಂಗೋಲಿಯ ಚಿತ್ತಾರ ಅಂಗಳದಿ ರಂಗೇರಿದೆ
ಚಂಡು ಹೂವಿಂದ ಮನೆಯು ಕಂಗೊಳಿಸಿದೆ
ಹಬ್ಬದ ಸಂಭ್ರಮ ಎಲ್ಲರ ಮನದಲಿ ತುಂಬಿದೆ

ಬೇವಿನ ಕಹಿಯಲ್ಲಿ ಬೆಲ್ಲದ ಸಿಹಿಯ ತುಂಬಿಸಿ
ಸುಖ ದುಃಖವ ಬಾಳಲಿ ಸಮವಾಗಿ ಸ್ವೀಕರಿಸಿ
ಮಧುರವಾಗಿ ಮಾತನಾಡಿ ಪ್ರೀತಿಯ ಪಸರಿಸಿ
ಒಂದಾಗಿ ಬೆರೆಯೋಣ ಕಹಿ ನೆನಪುಗಳ ಅಳಿಸಿ

ಕಷ್ಟವು ದೂರವಾಗಿ ಸಂತಸ ಉಕ್ಕಿ ಹರಿಯಲಿ
ಬದುಕಿನಲ್ಲಿ ಆರೋಗ್ಯ ನೆಮ್ಮದಿಯು ಹೆಚ್ಚಲಿ
ಸಕಲ ಕಾರ್ಯಗಳಲಿ ವಿಜಯವು ದೊರಕಲಿ
ಯುಗಾದಿಯು ಎಲ್ಲರಿಗೂ ಶುಭವನು ತರಲಿ

One thought on “ಯುಗಾದಿ ವಿಶೇಷ

Leave a Reply

Back To Top