ಯುಗಾದಿ ವಿಶೇಷ

ಯುಗಾದಿ ಹಬ್ಬದ
ಸಂಭ್ರಮದಲ್ಲಿ ಪ್ರಾರಂಭವಾದ
ಪ್ರೀತಿ, ಯುಗ ಯುಗಾದಿ
ಕಳೆದರು ಹೊಸ ಚೈತನ್ಯವ ತರುತ್ತಿದೆ…

ಕಳೆದು ಹೋದ ಸಿಹಿ
ಅನುಭವಗಳು
ಮೂರು ಜನ್ಮ ಕಳೆದರು
ನೆನಪಿಗೆ ತರುತ್ತಿವೆ…

ನೆನಪುಗಳು ಮರೆಯಾಗುವ
ಮುನ್ನವೆ ತಂಗಾಳಿಯ
ಕಂಪನು ಸೂಸುತ
ಮುದ ನೀಡುವ
ಭಾವನೆಗಳ ಸುತ್ತ
ಅಲೆದಾಡುವ ಮನಕ್ಕೆ
ಕಳೆದು ಹೋದ ಕ್ಷಣಗಳನ್ನು
ಮರಳಿ ಪಡೆಯುವ
ಹಂಬಲ ಹೆಚ್ಚಾಗಿ,
ಹಳೆಯ ನೆನಪುಗಳಿಗೆ
ಸ್ಪಂದಿಸುವ
ಹೊಸ ಪ್ರೀತಿ ಸಂಬಂಧಕ್ಕೆ
ಆಹ್ವಾನ ಬಯಸುತ್ತಾ
ಸ್ವಾಗತಿಸುತ್ತಿದೆ ಯುಗಾದಿಯನ್ನು…

ಯುಗ ಯುಗಾದಿ ಕಳೆದರೂ
ಅದೇ ನೆನಪುಗಳು ಮರಳಿ ಬರುತ್ತಿದೆ.
ಹೊಸ ವರುಷಕೆ
ಹಳೆ ಪ್ರೀತಿಯನ್ನು
ಹೊಸತು ಹೊಸತು ತರುತ್ತಿದೆ.

3 thoughts on “ಯುಗಾದಿ ವಿಶೇಷ

Leave a Reply

Back To Top