ಯುಗಾದಿ ವಿಶೇಷ

ತೋರಣಕೆ ಮಾವು ಬೇವು ಬೇಕು
ಇಂದು ಬೆಳಿಗ್ಗೆ ನನ್ನವಳ ಆಜ್ಞೆ
ಹುಡುಕುತ್ತ ಹೊರಟೆ ಕಾಂಕ್ರಿಟು
ಕಾಡಿನಲಿ ಸಿಮೆಂಟ್ ರಸ್ತೆ
ಎಂದೋ ಒಮ್ಮೆ ಇಲ್ಲಿ
ಅವುಗಳನ್ನು ನೋಡಿದ ನೆನಪು
ಗಡ ಬಡಿಸಿ ಹೋದೆ ಸ್ಥಳಕ್ಕೆ
ಮರಗಳು ಧರೆಗೆ ಉರುಳಿದ್ದವು
ಅಲ್ಲಿ ಗುಡಿ ಮಸಿದೆ ಕಟ್ಟುತಿದ್ದರು
ಬಡಿಗ ಕೊಂಬೆ ಕೊರೆಯುತ್ತಿದ್ದ
ನನಗೆ ಕಸಿವಿಸಿ ಸಂಕಟ
ಮರಗಳು ಅಳಲಿಲ್ಲ
ಮರದಲ್ಲಿನ ದೇವರ ಕೊಂದು
ಕಲ್ಲು ಗೋಡೆಯಲ್ಲಿ ಹುಡುಕುವರು
ಸುಡು ಸುಡು ಬಿಸಿಲು
ಬೆಂಕಿ ಬೇಗೆ ತಾಪ
ಅಂದು ಈ ಮರಗಳ ಕೆಳಗೆ
ತಂಪು ಮಜ್ಜಿಗೆ ಕುಡಿದ ನೆನಪು
ಅಲ್ಲಿ ಒಬ್ಬ ಬೇವು ಮಾವು
ತಪ್ಪಲು ಮಾರುತ್ತಿದ್ದ
ತೂಕ ಮಾಡಿ ಎಲೆ ಎಣಿಸಿ
ಕೊಂಡು ಮನೆಗೆ ಬಂದೆ
ದೊಡ್ಡ ಶಹರ ದಡ್ಡ ಜನರು
ಯುಗಾದಿ ದೀಪಾವಳಿಯಲ್ಲಿ
ಗಿಡ ಮರಗಳ ನೆನಪು
ನನ್ನ ದೀರ್ಘ ಆಯುಷ್ಯಕ್ಕೆ
ನನ್ನವಳು ವರ್ಷಕೊಮ್ಮೆ
ಹುಡುಕಿ ಅರಳಿ ಮರಕೆ
ಸುತ್ತು ಹೊಡೆಯುತ್ತಾಳೆ
ಕೊನೆಗೂ ಬೇವು ಮಾವು
ಸಿಕ್ಕ ಸಂತಸ ನೆಮ್ಮದಿ
ಸಂಭ್ರಮದ ಯುಗಾದಿ


10 thoughts on “ಯುಗಾದಿ ವಿಶೇಷ

 1. ಯುಗಾದಿಯ ಸಡಗರದಲ್ಲಿ … ಬೇವು -ಮಾವನ್ನು ಸವಿಯುವ ತಯಾರಿಯ ನಡುವೆ
  ವಾಸ್ತವದ ಚಿತ್ರಣವನ್ನು ಮೂಡಿಸಿದ್ದೀರಿ… ಸರ್

  ಸುಶಿ

  1. ಗಿಡ ಮರಗಳ ಪೋಷಿಸಿದರೆ , ಅವು ನಮ್ಮ ರಕ್ಷಣೆ ಮಾಡುತ್ತವೆ.

 2. ಎಷ್ಟು ಸುಂದರ ಕಾಳಜಿ ಸೃಷ್ಟಿಯ ರಕ್ಷಣೆ ಕಾಡು ಸಸ್ಯ ವಿನಾಶ

 3. ನಿಜ ಗಿಡಗಳೆಲ್ಲ ನಾಶ,
  ಬೆವು ಮಾವು ….. ಆರೋಗ್ಯಕ್ಕೆ ಒಳ್ಳೆಯದು….

  ಅಕ್ಕಮಹಾದೇವಿ

 4. ಅತ್ಯಂತ ಆಪ್ತವಾದ ಕವನ ಸರ್

 5. ಯುಗದ ಆದಿಯ ನೈ್ಜ ಚಿತ್ರಣ.ಬಹಳ
  ಮುಂದುವರೆದು ಏನು ಮಾಡಿದ್ದವೆ.ತಂತ್ರಜ್ಞಾನದ ಆವಿಷ್ಕಾರದ ಅನಾಹುತದ ನಡುವೆ ನೈ್ಜ ಉಸಿರಿಲ್ಲಾ.ನೈಜ ಪರಿಸರವಿಲ್ಲಾ.ಇವುಗಳಲ್ಲಿ ನಮ್ಮ.ಸಂತಸ ಸಡಗರ.ಸಂಭ್ರಮ. ನವೋಲ್ಲಸ
  ಕ್ಷಣಗಳ ಅನಾವಣವೆ ಕವಿ ಸಂವೇದನೆ.
  ಡಾ.ಕಸ್ತೂರಿ ದಳವಾಯಿ. ಗದಗ

Leave a Reply

Back To Top