ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌

ಡಾ.ಎಚ್.ಎಸ್.ಅನುಪಮಾ ಅವರು ಕನ್ನಡದ ಬಹುಮುಖ್ಯ ವಿಮರ್ಶಕರು‌ಮತ್ತು‌ಕವಯಿತ್ರಿ.ಅವರ ಮೊದಲಸಂಕಲನ ಕಾಡು ಹಕ್ಕಿಯ ಹಾಡು ಬಂದ ನಂತರ ಎರಡನೆಯ ಸಂಕಲನಸಹಗಮನ ಬಂದಿತು.
ಈ ಸಂಕಲನದ ಮುಖ್ಯ ಕವಿತೆಗಳಲ್ಲಿ ಒಂದು’ ಅಳಿ.’ಇದು ಬುದ್ಧ ದೇವ ಮತ್ತು ಅವನ ಶಿಷ್ಯಳೊಬ್ಬಳ ನಡುವಿನ ಸಂವಾದದ‌ ಕವಿತೆಯಿದು.ಬಟ್ಟೆ ಯಂತಹ ಬಟ್ಟೆ ಕೂಡ ಬಳಸಿ‌ ಬಳಸಿ‌ ಪಡೆಯುವ ಜೀರ್ಣ ರೂಪಗಳು‌ ಕೂಡ ಬೇರೆ ಬೇರೆ ಉಪಯೋಗಕ್ಕೆ ಬರುತ್ತವೆ ಎನ್ನುವದನ್ನು ಸಾರುವ ಕವಿತೆಯಿದು.
ಇಲ್ಲಿ ಶಿಷ್ಯೆಯೊಬ್ಬಳು ಗುರುವಿನ ಬಳಿ ಹೋಗಿ ಹರಿದು ಹೋಗಿ ದಟ್ಟಿ ಎನ್ನುತ್ತಾಳೆ. ಗುರು ಹರಿದರೇನಾಯು ಹಾಸಿ‌ ಮಲಗು ಎನ್ನುತ್ತಾನೆ.ಅಂದರೆ ದಟ್ಟಿ ಹರಿದರೂ ಅದು ಹಾಸಿಗೆಯಾಗಿ ಉಪಯೋಗವಾಗುತ್ತದೆ ಅದೂ ಬಳಸಿ ಹರಿಯುತ್ತದೆ
ಮತ್ತೆ ಗುರುವಿನ‌ಹತ್ತಿರ ಹೋದ ಶಿಷ್ಯೆ

ಗುರುವೆ ಹಾಸಿ ಹಾಸಿ ದಟ್ಟಿ‌
ಮತ್ತೆಲ್ಲೋ ಹಿಸಿಯಿತು

ಎನ್ನುತ್ತಾಳೆ.ಆಗ ಗುರು ‘ಹಿಸಿದರೇನಾಯ್ತು .ನೆಲವ ಒರೆಸುವ ಬಟ್ಟೆ ಮಾಡು ‘ ಎನ್ನುತ್ತಾನೆ.ನೆಲವ ವರೆಸಿ ವರೆಸಿ ಅರಿವೆ ತುಂಡು ತುಕಡಿಯಾಗುತ್ತದೆ. ಆಗ ಶಿಷ್ಯೆ‌ಬಂದು ಬಟ್ಟೆ ಚಿಂದಿ ಚೂರಾಯಿತು ಎನ್ನುತ್ತಾಳೆ.ಗುರುವಿನಲ್ಲಿ ಉತ್ತರ ಸಿದ್ಧವಿದ್ದೇ ಇದೆ.


ತುಂಡು ಬಟ್ಟೆಯಾದರೇನು ಮಗು
ಕಾಲು ವರೆಸಲು ಹಾಕು
ಎನ್ನುತಾನೆ. ಅಂದರೆ ನೆಲಕ್ಕೆ ವರೆಸಿದ ಬಟ್ಟೆ ಕೂಡ ಕೊನೆಗೆ‌ ಕಾಲು ವರೆಸಲು ಆಧಾರವಾಗುತ್ತದೆ. ಮುಂದಿನ ಅದರ ರೂಪಾಂತರ ಇನ್ನೂ ಮಹತ್ವದ್ದು.

ದಿನ ಉರುಳಿದವು
ಹೋಗಿ ಬರುವವರ ಪಾದಧೂಳಿ
ನೆತ್ತಿ ಮೇಲೆ ಹೊತ್ತೊತ್ತು
ದಟ್ಟಿ ಬಣ್ಣ ಸಮೇತ ಕರಗಿತು
ಅಂಗಾಲು ಶುಭ್ರ
ಕಾಷಾಯಕ್ಕೆ ಮಣ್ಣ ಮಣ್ಣ

ಇನ್ನೇನಞು ದಟ್ಟಿ ಪೂರ್ತಿ ನಾಶವಾಯಿತು ಎಂದು ನಾವು ಭಾವಿಸಿದರೆ ಗುರು ಹೇಳಿದ್ದು ವಿಸ್ಮಯ ಮೂಡಿಸುತ್ತದೆ.
ಗುರು ಹೇಳುವ ಈ‌ಮಾತು ಗುರುವಿನಘನತೆಯನ್ನು ಸಾರುತ್ತದೆ.

ದುಗುಡವೇಕೆ ಮಗೂ
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು
ಇಡಿಯ ಲೋಕವನ್ನ
ಕೊನೆಗು ಕಾಷಾಯ ತೊಡಲೇ ಬೇಕು ಮಣ್ಣಬಣ್ಣ

ಎನ್ಬುವ ಗುರು ಬಟ್ಟೆ ಮಣ್ಣಾದರೂ ” ಅದರಲ್ಕಿ ನೂಲು ಇರಬೇಕಲ್ಲ , ಅದನ್ನು ಹೊಸೆದು ಬತ್ತಿ ಮಾಡು ,ಬೆಳಗು ಹಣತೆಯನ್ನು”ಎನ್ನಲು


ಝಗ್ಗನೇ ಬೆಳಗಿತು ದೀಪ
ಕರಗಿತು ದಟ್ಟಿಯೋ ನೂಲೋ ಎಂಬ
ಇರುಳ ತರ್ಕ


ಹೀಗೆ ಮಣ್ಣಾದ ನೂಲಿನೊಳಗಿಂದಲೇ ದೀಪ ಝಗ್ಗನೇ ಬೆಳಗುತ್ತದೆ.ಇಡೀ ಕವಿತೆ ಬದುಕು ಸಾರ್ಥಕವಾಗಬೇಕಾದ ಬಗೆಯನ್ಜು ಸಾರುತ್ತದೆ.
ದಟ್ಟಿಯ ರೂಪ ಧರಿಸಿದ್ದ ಬಟ್ಟೆ ತನ್ನ ರ ಈ ಪ ಬದಲಿಸುತ್ತ ಬದಲಿಸುತ್ತ ಹಾಸಿಗೆಯಾಗಿ,ನೆಲ ಒರೆಸುವ ಅರಿವೆಯಾಗಿ ,ಕಾ ಕೆಳಗೆ ಹಾಸುವ ವಸ್ತ್ರವಾಗಿ,ಕೊ ನೆಗೆ ದೀಪಕ್ಕೆ ಬತ್ತಿಯಾಗಿ ಬೆಳಗಿ ಸಾರ್ಥಕತೆ ಪಡೆಯುತ್ತದೆ.ಬುದ್ಧ ದೇವ

ಅನು, ತಿಳಿದೆಯೇನು ಬೆಳಕಿನರಿವನ್ನು
ಅಳಿಸಲಾಗದು ರೂಹು ವಜನಿಲ್ಲದುದನು


One thought on “ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌

Leave a Reply

Back To Top