ಶೈವಾನೀಕ ಕವಿತೆ-“ಹೊತ್ತಿಗೆ”ಯೆಂಬ ನಿಜ ಸ್ನೇಹಿ

ಸ್ವಾರ್ಥ ಬಂಧಗಳ ನಶೆಯಲ್ಲಿ ನಿಸ್ವಾರ್ಥ ಸ್ನೇಹಿತನ ಮೂಲೆಗುಂಪಾಗಿಸಿ ಬಿಟ್ಟಿದ್ದೆ
ಸದಾ ಜೊತೆಯಲಿರುತ್ತಿದ್ದವನ ಮರೆತು ದೂರವಿಟ್ಟಿದ್ದೆ
ಬಣ್ಣ ಬಣ್ಣದ ಮುಖವಾಡ ಮನಗಳ ಮೇಲೆ ವ್ಯಾಮೋಹಕ್ಕೊಳಗಾಗಿ
ಗೆದ್ದರೂ ಸೋತರೂ ಬಿಟ್ಟೋಗದವ ನೀನೆಂದು ಅರಿಯದೆ  ನಿನ್ನ ಸಹವಾಸ ಬಿಟ್ಟಿದ್ದೆ

ಆದರೆ ಸತ್ಯದ ಅರಿವಾಗಲು ಕೊಂಚ ತಡಮಾಡಿಕೊಂಡಿದ್ದೆ
ನೀ ಎಂದಿಗೂ ನನ್ನನ್ನು  ಸೋಲಲು ಬಿಡದೆ ತಲೆ ಎತ್ತಿ ಮೆರೆಸಿದ್ದೆ
ನೀನಿತ್ತ ಬಿಕ್ಷೆಗೆ ಜ್ಞಾನವೆಂಬ ಹೆಸರಿಟ್ಟೆ
ನೀ ನಿರ್ಜೀವ ವಸ್ತುವೆಂದರೂ ನನಗೆ ಮಾತ್ರ ನನ್ನ ಪ್ರತಿ ಸಾರಿಯ ನೋವಿನಲ್ಲಿ ಕೈ ಹಿಡಿದು ನಡೆಸಿ
ಸಂತಸದ ಪಲ್ಲಕ್ಕಿಯಲ್ಲಿ ಮತ್ತೆ ಹೊಸಚೈತನ್ಯದಿಂದ ಮೆರೆಸುವ ತಾಯಾಗಿದ್ದೆ

ನೀನೆಂದಿಗೂ ನನ್ನ ಸಾಂಗತ್ಯ
ಅದೇ ಸತ್ಯ
ಉಳಿದೆಲ್ಲಾ ಬಂಧಗಳು ಮಿಥ್ಯ
ನೀನೇ ನನ್ನೆಲ್ಲ ಗೌರವ ಪ್ರತಿಷ್ಠೆಗಳಿಗೆ ಸಾರಥ್ಯ

ನೀನಿಲ್ಲದ ನಿನ್ನನಗಲಿದ ನಾನು ಬರೀ ಖಾಲಿ ಹಾಳೆಯ ದಾರುಣ್ಯ  
ನೀನೆಂದರೆ ಬೇರಾರೂ ಅಲ್ಲ ನೀನಲ್ಲವೇ ನನ್ನೊಲವಿಗೆಲ್ಲವೂ ಪುಸ್ತಕದ ಹೆಸರೊತ್ತ ನಿಜ ಸಾಂಗತ್ಯ ಸಂಗಾತಿ

ನನ್ನ ಜೀವನದಿ ಎಂದೂ ನನ್ನ ಸೋಲಲು ಬಿಡದ ನಿಜವಾದ ಸ್ನೇಹಿ ನನ್ನ ಪುಸ್ತಕ
ಮತ್ತೆ ಅದರ ಸಾಂಗತ್ಯದತ್ತ ನನ್ನ ಪ್ರಯಾಣ ಪ್ರಾರಂಭಕ್ಕೆ ನಾಂದಿ
ಬೇರೆಲ್ಲವುಗಳಿಗೂ ನೀಡಬೇಕಿದೆ ಮುಕ್ತಿ  

——————-

Leave a Reply

Back To Top