ಕಾವ್ಯ ಸಂಗಾತಿ
ಎ.ಹೇಮಗಂಗಾ
ಹಾಯ್ಕುಗಳು
ನಕ್ಷತ್ರಗಳ
ಮಾಲೆ ; ಹೊಳೆವ ಚಂದ್ರ
ಬೆಳ್ಳಿಪದಕ
ಮಾತನಾಡುವೆ
ನೀರವ ಮೌನದಲಿ
ನಾ ನನ್ನೊಳಗೇ
ನೀನು ಬಂದಿಲ್ಲ
ಮೊಗಸಾಲೆಯು ಖಾಲಿ
ತೀರದ ಮೌನ
ಆಶಾಗೋಪುರ
ಕುಸಿದಿದೆ ; ಕಟ್ಟಿದ್ದು
ನನ್ನದೇ ತಪ್ಪು
ಹಕ್ಕಿ ಕಡ್ಡಿಯ
ಹೆಕ್ಕಿದೆ ; ಭದ್ರವಾದ
ಗೂಡು ಕಟ್ಟಿದೆ
ಆಕರ್ಷಿಸಿದೆ
ತಾವರೆ ಕೆಸರಲ್ಲಿ
ತಾನು ಇದ್ದರೂ
ಕಂಬಳಿ ಹುಳು
ಚಿಟ್ಟೆಯಾದ ಪ್ರಕ್ರಿಯೆ
ಸೃಷ್ಟಿ ಸೋಜಿಗ
ಕನಸುಗಳು
ಸತ್ತಿವೆ ; ಚಿತ್ತ ಭಿತ್ತಿ
ಖಾಲಿಯಾಗಿದೆ
——————-
ಎ.ಹೇಮಗಂಗಾ