ಪುಸ್ತಕ ಸಂಗಾತಿ
ಆಶಾ ಶಿವು (ಆಶಾರಾಣಿ ಕೆ ಜಿ)ರವರ ಕೃತಿ
“ನಲ್ಮೆಯ ಅಂಬೆಗಾಲು”
ಸವಿತಾ ಮುದ್ಗಲ್
ಲೋಕೊರೂಢಿಯಂತೆ ಪ್ರತಿಯೊಬ್ಬರೂ ತಮ್ಮ ಮೊದಲ ಕೃತಿಗಳನ್ನು ತಮ್ಮ ಹೆತ್ತವರಿಗೆ ಸಮರ್ಪಿಸುತ್ತಾರೆ. ಇಲ್ಲಿಯು ಲೇಖಕಿ ತನ್ಮೊದಲ ಕೃತಿಯನ್ನು ಜನ್ಮವಿತ್ತ ಹಾಗೂ ಪೋಷಿಸಿದ ಪಾಲಕರಿಗೆ ಜೊತೆಯಾಗಿ ಅರ್ಪಿಸಿದ್ದಾರೆ.
ಇನ್ನು ಈ ಕೃತಿಯ ಮುನ್ನುಡಿಗೆ ವಿಶೇಷವಾಗಿ ನಮ್ಮೆಲ್ಲರ ನಾಡಿನ ಪ್ರಖ್ಯಾತ ಸಾಹಿತ್ಯದ ಬೇರು, ಹಿರಿಯ ಕವಿ, “ಪದ್ಮಶ್ರೀ” ಪ್ರಶಸ್ತಿ ಪುರಸ್ಕೃತ ಕವಿಗಳು ಆದಂತ ಡಾ|| ದೊಡ್ಡರಂಗೇಗೌಡರು ಬರೆದಿರುವುದು ತುಂಬಾ ವಿಶೇಷವಾಗಿದೆ.
ಕೃತಿಗೆ ಬೆನ್ನುಡಿ ಡಾ|| ಬೈರಮಂಗಲ ರಾಮೇಗೌಡರು ಸೊಗಸಾಗಿ ಬರೆದದ್ದು ಇನ್ನು ಕೃತಿಗೆ ಮೆರಗು ತಂದಿದೆ.
ಮುಖಪುಟದ ಮೂಲಕ ಸಾಹಿತ್ಯ ಬಳಗದಲ್ಲಿ ಪರಿಚಯವಾಗಿ ಒಬ್ಬ ಆತ್ಮೀಯ ಸೋದರಿಯಂತ್ತಿದ್ದು ಒಂದು ಸುಂದರ ಭಾವನೆಯ ಮನಸ್ಸಿನ ಗುಣ ಹೊಂದಿದ ಮಹಿಳೆ ಎಂದರೆ ಸುಳ್ಳಾಗದು. ತಮ್ಮ ಮನೆ, ಅಂಗಡಿ ಜವಾಬ್ದಾರಿ ಜೊತೆಗೆ ಸಾಹಿತ್ಯ ಸೇವೆಯನ್ನು ಸಲ್ಲಿಸುವ ಕೆಲಸಕ್ಕೆ ಶುಭವಾಗಲಿ,ತಮ್ಮ ಕೃತಿಯನ್ನು ಗೌರವ ಪೂರಕವಾಗಿ ಕಳಿಸಿದ್ದಕ್ಕೆ ಧನ್ಯವಾದಗಳು.
ಕೃತಿಯಲ್ಲಿ ಒಟ್ಟು 74 ಕವನಗಳು ಇವೆ ಹೆಣ್ಣು, ತಾಯಿ, ರೈತ,ಪ್ರಕೃತಿ ಪ್ರೀತಿ ಪ್ರೇಮ,ಬಾಂಧವ್ಯ ಬೆಸೆಯುವ ಕವಿತೆಗಳನ್ನು ಬರೆದಿದ್ದಾರೆ ಹಾಗೂ ನಮ್ಮ ಸಮಾಜದ ಹಾಗೂ ಹೋಗುಗಳ ಬಗ್ಗೆ ಹಲವು ದೃಷ್ಟಿಕೋನಗಳನ್ನು ಇಟ್ಟುಕೊಂಡು ಕವಿತೆಗಳನ್ನು ಬರೆದು “ನಲ್ಮೆಯ ಅಂಬೆಗಾಲು” ಸಂಕಲನವನ್ನು ಓದುಗರಿಗೆ ಅರ್ಪಿಸಿದ್ದಾರೆ.
ನನಗೆ ಈ ಕೃತಿಯ ಬಗ್ಗೆ ಮೊದಲು ಓದಬೇಕು ಎಂಬ ಆಶಯವಿತ್ತು ಏಕೆಂದರೆ ಇದಕ್ಕೆ ಮುನ್ನುಡಿಯನ್ನು ಡಾ. ದೊಡ್ಡ ರಂಗೇಗೌಡರು ಬರೆದಿದ್ದಕ್ಕೆ ಮೊದಲು ಓದಬೇಕು ಅನ್ನುವ ಮನೋಭಿಲಾಶೆ ಇತ್ತು.
ಡಾಕ್ಟರ್ ದೊಡ್ಡರಂಗೇಗೌಡ ರವರು ಬರೆದ ಮುನ್ನುಡಿಯ ಒಂದೆರಡು ಸಾಲುಗಳನ್ನು ಎಲ್ಲರ ಓದಿಗಾಗಿ ಬರೆಯುತ್ತಿದ್ದೇನೆ.
ಅಂಬೆಗಾಲು ಇರಿಸಿದ ಮೇಲೆ…
ಕವಿತೆಯೆಂಬುದು ಕಲೆಯ ಒಂದು ಮೌಲ್ಯ! ಅದು ಅಂತರಂಗದ ಅಭಿವ್ಯಕ್ತಿ ಅದು ನೈಜವಾದ ಹೃದಯದ ಪಿಸುಮಾತು ತನಗಾದ ಅನುಭವವನ್ನು ಕವಿಯಾಗಲಿ ಕವಯತ್ರಿಯಾಗಲಿ, ಒಳಗೆ ಬಚ್ಚಿಟ್ಟುಕೊಳ್ಳಲಾರಳು ಬರಹಗಾರರಿಂದ ಅದಕ್ಕೊಂದು ಗಂಭೀರ ಅಸ್ತಿತ್ವ.
ಧರಿತ್ರೆಯಲ್ಲಿ ಮುಚ್ಚಿಟ್ಟುಕೊಂಡರು ಕೆಲವು ವಸ್ತುಗಳು ಪದಾರ್ಥಗಳು ಬಿಚ್ಚಿ ಹೇಳಿದರೆನೆ ಸೊಗಸು. ಸಂಗೀತ ನೃತ್ಯ ಶಿಲ್ಪ ಚಿತ್ರಗಳು ಅಷ್ಟೇ ಹಾಗೆ ಅಭಿವ್ಯಕ್ತಿಯಾದ ಹಾಗೆ ಕಲರಸಿಕರು ಅದನ್ನು ಆಸ್ವಾದಿಸಿ ಸಂತೋಷಪಡುತ್ತಾರೆ. ಬೆಲೆಕಟ್ಟಿ ಬೇರೆಯವರೊಡನೆ ತುಲನೆ ಮಾಡುತ್ತಾರೆ.
ರಸಿಕರು ರಸಾಸ್ವಾದ ಪಡೆಯುವುದೇ ಹಾಗೆ ರಸಾನಂದ ಅನುಭವಿಸುವ ಪರಿಯೇ ಅದು.
ಕವಿತೆಯಲ್ಲಿ ವಾಗಾರ್ಥಗಳ ಮದುಮಧುರ ಹೊಂದಾಣಿಕೆ ಇರುತ್ತದೆ.
ನೀಲಿ ಬಾನಿನಲ್ಲಿ ಮೋಡಗಳ ಚಿತ್ತಾರ ವಿದ್ದ ಪರಿಸರದ ಪರಿಸ್ಥಿತಿ ಬದಲಾಗ ಬಗೆಯನ್ನು ತಮ್ಮ ನುಡಿಗಳಲ್ಲಿ ಬಿಂಬಿಸಿದ್ದಾರೆ.
“ತಂಗಾಳಿಯ ಸ್ಪರ್ಶಕ್ಕೆ ಕಾರ್ಮಿಕಲು ಹೊರಗಿದ್ದು ಮುತ್ತಿನ ಮಳೆ ಹನಿಯು ಭುವಿಯ ಚುಂಬಿಸಿತು”
ಮಳೆಯಲಿ ಮನಸಾರೆ ಮಿಂದ ಭುವಿಯು ಜೀವಕಳೆಯನ್ನು ಪಡೆದು ಸೃಷ್ಟಿ ಹೊಸದಾಯಿತು.
ಹೀಗೆ ಕವಿತ್ರಿಯ ಒಡಲಲ್ಲಿ ಮೂಡಿದ ಹಲವಾರು ಕವಿತೆಗಳಿಗೆ ಸೊಗಸಾದ ಮುನ್ನುಡಿಯೊಂದಿಗೆ ಕೃತಿಯ ಮೂಡಿಬಂದಿದೆ.
“ಕೆಂಬಾನಿನ ಕಡಲೊಳಗೆ ಕೆನ್ನೀರಿನ ಮಡಿಲೊಳಗೆ ಹೊನ್ನ ಕಿರಣ ಬೀರುತ ಹೊಂಬೆಳಕ ಭುವಿಗೆ ಚೆಲ್ಲುತ ಜಗವ ಬೆಳಗಲು ಅರಳಿದ ದಿನಕರ”
ಮೇಲಿನ ಚಾರಣದ ಮೂಲಕ ಕವಿಯಿತ್ರಿಯು ದಿನಕರನ್ನು ಕೆಂಪಾದ ಬಾನಿನಲ್ಲಿ, ಬಂಗಾರದ ಕಿರಣಗಳ ಸೂಸುತ ಜಗತ್ತಿಗೆ ಬೆಳಕನ್ನು ನೀಡಲು ಬಂದನೆಂದು ಸೊಗಸಾಗಿ ವರ್ಣಿಸಿದ್ದಾರೆ.
*ಸವಿ ನೆನಪುಗಳು ದಿನಬೆಳಗುವ ನೇಸರನಂತೆ
ಮೂಡುವ ಕನಸುಗಳು ನಾಳೆಯ ದಾರಿ ದೀಪದಂತೆ
ನಲಿವಿನ ಬದುಕಿದು ಮನವಿಂದ ಮಂದಾರ ಹೂ,ನೆನಪುಗಳ ಜೊತೆ ಜೀವನ ಯಾನ ಸಂಭ್ರಮವು*
ಈ ಮೇಲಿನ ನುಡಿಯಲ್ಲಿ ಕವಿಯಿತ್ರಿ ಕನಸುಗಳು ನಿತ್ಯ ಉದಯಿಸುವ ರವಿಯಂತೆ ಎಂದು, ಜೀವನಕ್ಕೆ ಕನಸುಗಳೇ ಬಲವೆಂದು, ಇವೆರಡರ ಸಮ್ಮೇಳನವೇ ಜೀವನ ಒಂದು ಮಂದಾರ ಹೂವಿನಂತೆ ಎಂದು ಕವನದಲಿ ವ್ಯಕ್ತವಾಗಿದೆ.
ಇನ್ನು ಕೃತಿಯಲ್ಲಿ ಒಟ್ಟಾರೆಯಾಗಿ ಎಲ್ಲಾ ಕವನಗಳು ಒಂದಕ್ಕಿಂತ ಒಂದು ಅದ್ಭುತವಾಗಿದೆ. ಕಾಫಿ ಹೂಗಳು, ಬಣ್ಣ ಹೊಸದಾಗಿದೆ, ಹೊಂಬಾಳೆ, ಮಮತೆಯ ಮಡಿಲು, ಹೆಣ್ಣೆಂದರೆ ಬೆಳಕು, ಬದುಕು,ಮರ್ಕಟ ಮನಸ್ಸು, ಯುಗಳ ಗೀತೆ, ಬೆರಗಾದೆಯ ಚಂದ್ರಮ ಹೀಗೆ ಒಂದೊಂದು ಶೀರ್ಷಿಕೆಯೊತ್ತ ಕವನಗಳು ಮೂಡಿಬಂದಿವೆ.
ಈ ಕವನದ ಬರಹದ ಮೂಲಕ ಶುಭ ಹಾರೈಕೆಯೊಂದಿಗೆ ಇವರ ಕೃತಿಗಳು ಇನ್ನಷ್ಟು ಕನ್ನಡ ಸಾಹಿತ್ಯದಲ್ಲಿ ಮೂಡಿ ಬರಲಿ, ಯಶಸ್ಸನ್ನು ಸಾಧಿಸಲಿ ಹಾಗೆ ಇವರ ಸಾಹಿತ್ಯ ಸೇವೆಯು ಮುಂದುವರೆಯಲಿ ಎಂದು ಹಾರೈಸುವೆ.
ಸವಿತಾ ಮುದ್ಗಲ್
ಅತ್ಯುತ್ತಮ