“ಯುವಜನತೆಗೊಂದು ಕಿವಿಮಾತು”ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ವಿಶೇಷ ಲೇಖನ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

“ಯುವಜನತೆಗೊಂದು ಕಿವಿಮಾತು”

ನಮಗಿಂದು ಬೇಕಾಗಿರುವುದು
ಕಬ್ಬಿಣದಂತಹ ಮಾಂಸ ಖಂಡಗಳನ್ನು ಹೊಂದಿದ
ಉಕ್ಕಿನ ನರಮಾಂಸಗಳನ್ನು ಹೊಂದಿದ  ಸಮುದ್ರದ ತಳವನ್ನಾದರೂ ಹೊಕ್ಕು ಅನರ್ಘ್ಯ ಮುತ್ತು ರತ್ನಗಳನ್ನು  ಹೊರ ತೆಗೆಯಬಲ್ಲ ಯುವ ಜನತೆ ನಮಗಿಂದು ಬೇಕು .

ಎಂದು ಹೇಳಿದ ಸ್ವಾಮಿವಿವೇಕಾನಂದರ ಈ ನುಡಿಮಾತಿನ ಅರ್ಥವು ಇವತ್ತಿನ ಯುವಕರಿಗೆ ಎಷ್ಟೊಂದು ಸಮಂಜಸವಾಗಿದೆ ಅಲ್ಲವೇ ?
ಇಂದಿನ ಯುವಕರೇ ನಾಡಿನ ನಾಯಕರು ಎಷ್ಟು ಸತ್ಯ ?

ಯುವಜನತೆ ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವುದು
 ತಮ್ಮ ಕೈಯಲ್ಲಿಯೇ ಇದೆ .ಹಾದಿ ತಪ್ಪುವುದು ತಮ್ಮ ಕೈಯಲ್ಲಿಯೇ ಇದೆ .
ಕ್ಷಣಿಕ ಸುಖಕ್ಕಾಗಿ ಇಡೀ ತಮ್ಮ ಬದುಕನ್ನೇ ನರಕಗೊಳಿಸಿಕೊಳ್ಳುವ ಯುವಕರಿಗೆ ಅದಾವ ಬುದ್ಧಿ ಮಾತು ಹೇಳಿ ತಿದ್ದಬೇಕು ಹೇಳಿ ?
ಹೆತ್ತ ತಂದೆ ತಾಯಿಯ ಮಾತುಗಳನ್ನೇ ಕೇಳದ ಯುವಕರ ಮನ ಇನ್ನಾರ ಮಾತುಗಳನ್ನು ಕೇಳುವುದು  .
ತಪ್ಪು ಮಾಡಿದಾಗ ಖಂಡಿಸುವ ಸ್ವಾತಂತ್ರ್ಯ ಅದೇಷ್ಟು ಶಿಕ್ಷಕರಿಗೆ ಇದೆ ಹೇಳಿ ?
ಬೈದು ಬುದ್ಧಿಯ ಹೇಳುವಂತಿಲ್ಲ ಹೆದರಿಸಿ, ಬೆದರಿಸಿ ಹೊಡೆಯುವಂತೆಯೂ ಇಲ್ಲ.
 ವಿದ್ಯಾರ್ಥಿಗಳ ನಡೆ ತಪ್ಪಿದಾಗ ಶಿಕ್ಷಕರು ತಿದ್ದುವರು ಬಯ್ಯುವರು
ಆದರೆ ಎಷ್ಟು ಯುವಕರು ಅವುಗಳನ್ನು ಸ್ವೀಕರಿಸಿ ಒಪ್ಪಿಕೊಂಡಿದ್ದಾರೆ ಹೇಳಿ .?
ಬಯ್ಯುವರು ನಮ್ಮ ಒಳ್ಳೇಯದಕ್ಕೆ ಎಂದು ಅದೇಷ್ಷು ಯುವ ಮನಗಳು ಸುಮ್ಮನಾಗಿದ್ದಾವೆ ಹೇಳಿ ?
ಪ್ರತಿ ದಿವಸ ಪ್ರತಿ ಪಾಠದಲ್ಲಿಯೂ ಬದುಕಿನ ಬಗ್ಗೆ ನಾನು ಉದಾಹರಣೆಯ ಮುಖಾಂತರ ತಿಳಿಸಿ ಹೇಳಿದ್ದನ್ನು .ನೂರಾರು ಯುವಕ ಯುವತಿಯರು ಸುಂದರ ಬದುಕನ್ನು ಕಟ್ಟಿಕೊಂಡು ತಮ್ಮ ಕಾಲ ಮೇಲೆ ತಾವು ನಿಂತಿದ್ದಾರೆ. ಇನ್ನೂ ಕೆಲವು ಯುವಕ ಯುವತಿಯರು ಮಾತುಗಳನ್ನು ಕೇಳದೇ ಎದುರು ಉತ್ತರ ನೀಡಿ
ನಮ್ಮ ಅವ್ವ ಅಪ್ಪಗ ನಾನು ಕೇಳುವುದಿಲ್ಲ ನೀವ್ ಏನ್ ಹೇಳುತ್ತಿರಿ ಎಂದಾಗ ನನ್ನ ಮನಸ್ಸಿನಲ್ಲಿ   ಸಿಟ್ಟು ಬರಲಿಲ್ಲ ಅದೇಷ್ಷೋ ವಿದ್ಯಾರ್ಥಿಗಳು ಗುರುಗಳ ಮಾತಿಗೆ ಎದುರು ಉತ್ತರ ಕೊಡುವ ಈ ವ್ಯವಸ್ಥೆಯಲ್ಲಿ ಗುರುವಾಗಿದ್ದು ಪ್ರಯೋಜನ ಏನು ?  ಎಂಧು ತುಂಬಾ ಖೇದ ಆಯಿತು .ಅದೇಷ್ಟೋ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳುವ ಸುಂದರ ಹಣ್ಣುಗಳಲ್ಲಿ ಅದೇಷ್ಷೋ ಹಣ್ಣುಗಳು  ಕೊಳೊತಿರುತ್ತವೆ.ಹುಳು ಹತ್ತಿರುತ್ತವೆ ಎಂದು ಸುಮ್ಮನಾದೆ .

ಮಾರನೇಯ ದಿನ ಎದುರುತ್ತರ ನೀಡಿದ ವಿದ್ಯಾರ್ಥಿನಿ ಆಫೀಸಿಗೆ ಬಂದು ಗಟ್ಟಿಯಾಗಿ ಕಾಲು ಹಿಡಿದು ರೋದಿಸಿ ತನ್ನ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟಳು.   ಇನ್ನೊಬ್ಬರ ಚಾಡಿ ಮಾತುಗಳಿಗೆ ನಾವು ಕಿವಿ ಕೊಡಬಾರದು ಎಂದೆ .
ಗುರುಗಳ ಹಡೆದ ತಂದೆ ತಾಯಿಯ ಮಾತುಗಳನ್ನೇ ಕೇಳದ ಬೀದಿ ಬಸವಿ ತರ ತಿರುಗಾಡುವ ಇಂಥಹ ವಿದ್ಯಾರ್ಥಿಗಳ ತಂದೆ ತಾಯಿಯಾದರೂ ಹೇಳಲಾರರೇ ಎಂದು ಅನಿಸಿತು .
 ನಾನು ನಿನ್ನ ಕಪಾಳಕ್ಕೆ ಹೊಡೆಯುವೆ ಎಂದೆ ನಮ್ಮ ಅವ್ವ ಅಪ್ಪನೇ ನನಗೆ ಹೊಡಿದಿಲ್ಲ ಅನ್ನುವುದೇ? ನಿನ್ನ ವೇಲ್ ಸರಿ ಮಾಡಿಕೊಳ್ಳಮ್ಮ ಎಂದೆ ಇಷ್ಟೇ ಅಂದ ಮಾತು ಎಷ್ಟು ದೊಡ್ಡದು ಆಯಿತು ನೋಡಿ  .ಇದು ಇಂದಿನ ಯುವಕ ಯುವತಿಯರು ಅದೇಷ್ಟು ಮಾತಿಗೆ ಗೌರವ ಕೊಡುತ್ತಾರೆ ಹೇಳಿ ? ಅದೇಷ್ಷು ಮನ ವಿಕಾರ, ಎದುರು ಉತ್ತರ ಕೊಡುವುದು ಅಷ್ಟೇ ಅಲ್ಲ. ಗುರುಗಳ ಮೇಲೆಯೇ  ಕೈ ಮಾಡುವ  ಯುವಕ ಯುವತಿಯರು ಸ್ವಲ್ಪ ವಿಚಾರ ಮಾಡಲೇಬೇಕು .

ಬದುಕು ಸುಂದರ ಅದಕ್ಕೆ ಬಣ್ಣ ವಿಲ್ಲ ಮೋಸವಿಲ್ಲ ,ಸುಳ್ಳಿಲ್ಲ, ಕಪಟವಿಲ್ಲ, ವಂಚನೆಯಿಲ್ಲ ಅದು ತಿಳಿ ನೀರಿನಂತೆ ಶುದ್ಧ, ಪವಿತ್ರ, ನಿಷ್ಕಲ್ಮಷ, ಸ್ನೇಹ, ಪ್ರೀತಿಯ  ಸಾಗರ .
ಇಂಥಹ ಸುಂದರ ಬದುಕನ್ನು ಅಂದವಾಗಿ ಹೆಚ್ಚಿಸಿಕೊಂಡು ಬದುಕನ್ನು ಕಟ್ಟಿಕೊಂಡವರು.

ಕೆಲವು ವಿದ್ಯಾರ್ಥಿಗಳು ನನಗೆ  ಭೇಟಿಯಾದಾಗ ಮೆಡಂ ರೀ ನೀವು ನಮಗ ಬಹಳ ಬಯ್ಯುತ್ತ, ಬುದ್ಧಿ ಹೇಳುತ್ತ ಕಲಿಸಿದಾಗ ನಾ ಈ ನೌಕರಿ ಹಿಡಿದಿನ ರ್ರೀ ನೀವ್ ನನಗ ಹೆಂಗ ಇರಬೇಕ್ ಅಂತ್ ಹೇಳಿದ ಗುರು ಮಾತೆ ಅವ್ವ ನಮ್ಮ ಅವ್ವನಂಗ ರೀ ಅದಕ್ಕ ನಾವ್ ಕಲಿವಾಗ್  ನಿಮಗ್ ಅವ್ವ ಅಂತಾ ಕರಿತ್ತಿದ್ದೀವಿ ರೀ ಎಂದು ಹೇಳಿದಾಗ

 ನನಗೆ ಒಮ್ಮೆಲೇ ನನಗೆ ಎದುರು ಉತ್ತರ ಕೊಟ್ಟ ಆ ಯುವತಿಯ ನೆನಪಾಯಿತು .ಅವತ್ತೇ ನಾನು ಅವಳಿಗೆ ಹೇಳಿದೆ ನಿನಗೆ ಒಬ್ಬರು ಗುರುವಾಗಿ ,ಬಂಧುವಾಗಿ ,ಅಕ್ಕಳಾಗಿ ತಾಯಿಯಾಗಿ ,ಹೊಡೆಯುತ್ತೇನೆ ಎಂದು. ಅದೇಷ್ಟು ಆಕೆಯನ್ನು ನಾನು ನಂಬಿ, ಒಲವು ತೋರುತ್ತಿದ್ದೆ,ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಭಯ ಇರುವುದಿಲ್ಲ ಎಲ್ಲಿ ಭಯ ಇರುವುದಿಲ್ಲವೋ ಅಲ್ಲಿ ಗೌರವ ಕೂಡಾ ಕಡಿಮೆ ಎಂದು ತಿಳಿಯಿತು. ನಮ್ಮ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಇನ್ನೂ ಎಷ್ಟೊಂದು ಯುವಕ ಯುವತಿಯರ ನಡೆ ನುಡಿ ಅದೇಷ್ಟು ಬದಲಾಗುತ್ತದೆ  ಬದಲಾಗಿದೆ ಎಂದು ಸ್ವಲ್ಪ ವಿಚಾರಿಸಿ ಮೆಲಕು ಹಾಕಿ ಈ ಲೇಖನ ಬರೆದೆ .
ಹೀಗೆ ಬದಲಾವಣೆಯ ಕಾರಣಗಳನ್ನು ಹುಡುಕಿದಾಗ ಪಿಯುಸಿ ಯ ಹಂತವನ್ನು ದಾಟುವುದು ಒಂದೇ ಯುವಕರಿಗೆ ಆಮೇಲೆ ಯಾರು ಹೇಳಬೇಕು ಅವರಿಗೆ ಮನದ ಕಾಮನೆಗಳನ್ನು ಹತೋಟಿಯಲ್ಲಿ ಇಡದೇ ಅಡ್ಡ ದಿಡ್ಡಿ ಹಾದಿ ತುಳಿಯುವ  ಮನಸ್ಸುಗಳು ಅರ್ಥ ಮಾಡಿಕೊಳ್ಳಬೇಕಾಗಿದೆ .
ಅದೇಷ್ಷು ಕಷ್ಟದಿಂದ ನಮ್ಮ ತಂದೆ ತಾಯಿಗಳು ಬೆಳೆಸಿದರು ಶಾಲೆಯನ್ನು ಈ ಹಂತದವರೆಗೆ ಕಲಿಸಿ ಬೆಳೆಸುತ್ತಿದ್ದಾರೆ ಎನ್ನುವ ತಿಳುವಳಿಕೆಯ ಅರಿವು ಇದ್ದಾಗ  ಮಾತ್ರ ಆ ಯುವಕ ಅಥವಾ ಯುವತಿ ತಮ್ಮ ಸುಂದರ ಬದುಕನ್ನು ಕಟ್ಟಿಕೊಳ್ಳುವರು.

ಈ ದೇಶದಲ್ಲಿ ಅದೆಷ್ಟೋ  ಉನ್ನತ ಹುದ್ದೆಯನ್ನು ಏರಿದವರ ಹಾಗೂ ದೇಶದಲ್ಲಿ ಅತ್ತ್ಯುತ್ತಮ ಆಡಳಿತ ನಡೆಸಿದವರ ಜೀವನದ ಘಟನೆಗಳನ್ನು ಕೇಳಿದಾಗ ಅಚ್ಚರಿ ಆಗುತ್ತದೆ .ಓ ಇಂಥಹ ಗಣ್ಯ ವ್ಯಕ್ತಿ ಇದ್ರಾ ಅವರು ಯುವಕರಿದ್ದಾಗ ಹೀಗೆ ಇದ್ರಾ  ಎನಿಸುತ್ತದೆ .
ಅದೆಲ್ಲ ಹೇಳಿದಾಗ ಇಂದಿನ ಯುವ ಪೀಳಿಗೆ ಏನು ಅನ್ನುತ್ತೆ ಗೊತ್ತೇ? ಅದೆಲ್ಲ ಅವಾಗಿನ ಕಾಲ ಈವಾಗ ನಮ್ಮ ಕಾಲ .ಅನ್ನುವ ಯುವಕ/ಯುವತಿಯರು .ಕಾಲ ಯಾವದಾದರೂ ಏನು ? ನಮ್ಮ ಇರುವಿಕೆಯನ್ನು ಕಾಲವು ತಿಳಿಸುತ್ತದೆ .ಹೇಗೆ 12  ನೇ ಶತಮಾನದ ಕಾಲದಲ್ಲಿ  ಶಿವಶರಣರ ನಡೆ ನುಡಿಗಳು ಒಂದಾಗಿದ್ದವೋ ಈಗೂ ಕೂಡ ಎಲ್ಲ ಯುವ ಯುವತಿಯರ ಮನಸ್ಸಗಳು ಇದ್ದರೇ ಎಷ್ಟು ಚೆನ್ನ ಅಲ್ಲವೇ ?

ಇವತ್ತಿನ ಯುವ ಮನಸ್ಸುಗಳು ಬದಲಾಗಬೇಕು .

ನಡೆ – ನುಡಿಗಳಲ್ಲಿ ವಿನಯ ಇರಬೇಕು .

ಕಲಿಸಿದ ಗುರುಗಳಲ್ಲಿ ಭಯ ಭಕ್ತಿ ಇರಬೇಕು .

ಹೆತ್ತ ತಂದೆ ತಾಯಿ ಹಾಗೂ ಗುರು ಹಿರಿಯರ ಮಾತುಗಳನ್ನು ಕೇಳಬೇಕು .

ತಮ್ಮದೇ ಒಂದು ಆದರ್ಶದ ಕನಸ್ಸನ್ನು ಹೊಂದಿ, ಅದರ ಇಡೇರಿಕೆಗಾಗಿ ಗುರಿಮುಟ್ಟಲು ಸದಾ ಪ್ರಯತ್ನ ಪಡಬೇಕು .
ನಮ್ಮಿಂದ ಈ ಕಾರ್ಯ ಆಗದು ಎನ್ನುವ ಹಿಂಜರಿಕೆ ಇರಬಾರದು .

ಕಾರ್ಯ ಮಾಡಲು ಆಗದಿದ್ದರೂ ಅದನ್ನು ಕೇಳಿ ತಿಳಿದುಕೊಳ್ಳಲು ಆ ಕೆಲಸದ ಸಮೀಪಕ್ಕಾದರೂ ಹೋಗಲು ಪ್ರಯತ್ನಿಸಬೇಕು .

ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಬೇಕು .

ದುಷ್ಟವಾದ ಕಾರ್ಯಕ್ಕೆ ಕೈ ಹಾಕದೇ ದುಷ್ಟ ಜನರಿಂದ ದೂರ ಇರಲು ಪ್ರಯತ್ನಿಸಬೇಕು .

ಬೀಡಿ, ಸಿಗರೇಟ ,ಅಪೀಮು, ಗಾಂಜಾ ಸಿಂಧಿ ಸಾರಾಯಿ ತಂಬಾಕು ,ಗುಟ್ಕಾ  ಇದರಿಂದ ದೂರ ಇರಬೇಕು .

ಅತಿಯಾದ ಶೋಕಿ ಮಾಡುವ ಸ್ನೇಹಿತರಿಂದ ದೂರವಿದ್ದು ,ತಮಗಿಂತ ಉತ್ತಮರ ಜಾನರ ,ಒಳ್ಳೆಯವರ ಸಂಘವನ್ನು ಮಾಡಬೇಕು .

ಒಳ್ಳೆಯ ಸ್ನೇಹಿತರು ಸಿಗದಿದ್ದರೆ ಒಂಟಿಯಾಗಿ ಆದರೂ ಚೆನ್ನಾಗಿ ಓದುವ ಕಡೆ ಗಮನ ಕೊಟ್ಟು
ಪುಸ್ತಕಗಳೇ ನಮ್ಮ ಸ್ನೇಹಿತರು ಎಂದು ತಿಳಿದುಕೊಳ್ಳಬೇಕು.

ಯಾವಾಗಲೂ ಸತ್ಯದಿಂದ ನಡೆದುಕೊಳ್ಳಬೇಕು .

ಯಾರು ಎಷ್ಟೇ ನಮಗೆ ಮೋಸ ಮಾಡಿದರೂ ನಾವು ಅವರ ವಿರುದ್ಧ ವಾಗಿ ಸೇಡು ತೀರಿಸಿಕೊಳ್ಳಲು ಹೋಗಬಾರದು.

ಗೆಳೆಯರೇ ಇರಬಹುದು ಗೆಳತಿಯರೇ ಇರಬಹುದು ಬಂದು ಬಳಗವೇ ಇರಬಹುದು ಅವರಲ್ಲಿ ಪದೇ ಪದೇ ಸಾಲ ಕೇಳಬಾರದು .

ಒಮ್ಮೆ ಅವಶ್ಯಕತೆ ಬಿದ್ದಾಗ ಸಾಲವನ್ನು ಕೊಟ್ಟವರಿಗೆ ಮರಳಿಸುವ ಪ್ರಯತ್ನ ಮಾಡಬೇಕು .

 ಬೆಲೆ ಬಾಳುವ ವಸ್ತ್ರ, ವಡವೆ  ನಗ ನಾಣ್ಯ ಸಿಕ್ಕರೆ ಸಂಬಂಧ ಪಟ್ಟವರಿಗೆ ಮುಟ್ಟಿಸುವ ಪ್ರಾಮಾಣಿಕತೆ ಮೆರೆಯಬೇಕು.

ಇಸ್ಪೀಟ್ ಆಟ ಜೂಜಾಟ ರೇಸ್ ಆಟಕ್ಕೆ ಹಣವನ್ನು ತೊಡಗಿಸಬಾರದು .

ಸಮಾಜದಲ್ಲಿ ಬಳಲಿದವರಿಗೆ ,ವಯಸ್ಸಾದವರಿಗೆ ಅನಾಥರಿಗೆ ದುರ್ಬಲರಿಗೆ ರೋಗಿಗಳಿಗೆ  ಸಹಾಯ  ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು .

ಸಮಾಜದ ಆಸ್ತಿ ಸಂಪತ್ತಿಗೆ, ಪ್ರಾಣಿ, ಪಕ್ಷಿಗಳಿಗೆ ಹಾನಿಯನ್ನು ಉಂಟು ಮಾಡಬಾರದು .

ಇನ್ನೊಬ್ಬರ ಮಾತನ್ನು ಕೇಳಿ ಪ್ರಮಾಣಿಕ ವ್ಯಕ್ತಿಯ ಮೇಲೆ ಯಾವತ್ತೂ ಸುಳ್ಳಿನ ಆರೋಪ ಹೇರಬಾರದು.

ಇನ್ನೊಬ್ಬರ ವಿರುದ್ಧ ಪಿತೂರಿ ಕೆಲಸ ಮಾಡದೇ ಇನ್ನೊಬ್ಬರ  ಕೆಲಸಕ್ಕೆ ನೆರವಾಗಬೇಕು .

ಅಕ್ಕ ಪಕ್ಕ ದವರೊಂದಿಗೆ, ಸ್ನೇಹಿತರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು . ಹಾಗೂ ಸುಳ್ಳು ಕಪಟ ಕಳುವು ವಂಚನೆ ಮೋಸ ಮಾಡಬಾರದು .

ಎಲ್ಲಕ್ಕಿಂತ ಹೆಚ್ಚಾಗಿ ಅತಿಯಾದ ಮೊಬೈಲ್ ಬಳಕೆಯನ್ನು ಮಾಡದೇ ಅವಶ್ಯಕವೆನಿಸಿದಾಗ  ಮಾತ್ರ ಮೊಬೈಲ್ ಬಳಸಬೇಕು .

ಇನ್ನೊಬ್ಬರ  ನಂಬಿಕೆ ವಿಶ್ವಾಸ ಪ್ರೀತಿಯನ್ನು ಗಳಿಸಿ ಉಳಿಸಿಕೊಂಡು ಹೋಗಬೇಕು .

ತಂದೆ -ತಾಯಿಗಳು ಹಾಗೂ ಗುರುಗಳು ಹೇಳಿದ ಕೆಲಸವನ್ನು ಶಿರಸಾ ಪಾಲಿಸಿಕೊಂಡು ಹೋಗಬೇಕು .

ತಂದೆ ತಾಯಿಯರ ಮೇಲೆ ಗುರು ಹಿರಿಯರ ಮೇಲೆ ಯಾವುದೇ ಕಾರಣಕ್ಕೂ ಕೈ ಮಾಡಬಾರದು .

ಇವೆಲ್ಲವುಗಳನ್ನೆಲ್ಲ ಇಂದಿನ ಯುವಜನತೆ ರೂಢಿಸಿಕೊಂಡರೆ ನಮ್ಮ  ಈ ದೇಶ ಈ ನಾಡು ಈ ಸಮಾಜ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ ? ನಾವು ನೀವುಗಳೆಲ್ಲ 12 ನೇ ಶತಮಾನದ ಸುಂದರವಾದ ನಾಡನ್ನು ಕಂಡಂತೆ ಆಗುವುದು ಅಲ್ಲವೇ ?

——————————————-
 ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Leave a Reply

Back To Top