ಪುಸ್ತಕ ಸಂಗಾತಿ
ಸಮಸ್ಯೆಯ ಸುಳಿಯಲ್ಲಿ ಜೀವನಾನುಭವ
ಒಂದು ಅವಲೋಕನ
ಸಮಸ್ಯೆಯ ಸುಳಿಯಲ್ಲಿ ಜೀವನಾನ
ಲೇಖಕಿ, ಶ್ರೀಮತಿ ರೇವತಿ ,
ಪ್ರಥಮ ಮುದ್ರಣ: 2022,
ಪುಟಗಳು: 450,
ಮುಖಬೆಲೆ : 200/,00
ಈ ಪುಸ್ತಕಕ್ಕೆ ಮುನ್ನುಡಿ ಬರೆದಂತಹ ಶ್ರೀ ಯುತ,ಡಾ, ಶ್ರೀ ವತ್ಸ ಎಸ್,ವಟಿ,ಅವರು ಅದೆಚನ್ನಾಗಿದೆ, ಎನಿಸಿತು,ಅದನ್ನೆಬರೆದುಕಳಿಸಿದ್ದೇನೆ, ನನ್ನ ಕುರಿತು ಬರೆದಂತ,ಆಪ್ತ, ಸ್ನೇಹಿತರು, ಶಕುಂತಲಾ, ರಾಜಶೇಖರ್, ಅವರು ಆಪ್ತವಾಗಿ ಬರೆದಿದ್ದಾರೆ,
“ಸಮಸ್ಯೆ ಯ ಸುಳಿಯಲ್ಲಿ ಜೀವನಾನುಭವ,”
ಎಂಬ ಆತ್ಮ ಕಥೆ, ಬರೆದಿದ್ದೇನೆ, ಇದು ಆತ್ಮ ಕಥೆ ಅನ್ನುವುದು ಕಿಂತ ನನ್ನ ಅನುಭವ ಗಳನ್ನು ಹಂಚಿ ಕೊಂಡು ಬರೆದಿದ್ದು, ನಾನು ಬರೆದ, ಉದ್ದೇಶ ನನ್ನ ಜೀವನದ ಅನುಭವಗಳು, ನನ್ನ ಕಥೆ, ನನ್ನ ತಾಯಿ, ಅಜ್ಜಿ, ಇನ್ನಿತರ ಹೆಂಗಸರಂತೆ,ಅಲ್ಲ, ನನ್ನ ಜೀವನ ಒಂದು, ವಿಶೇಷ ವಾದದ್ದು, ವಿಶಿಷ್ಟ,ವಾದದ್ದು, ಎಲ್ಲವೂ ಸರಿಇದ್ದು, ನನ್ನ ದೈಹಿಕ ತೊಂದರೆಗಳು, ಹೆರಿಗೆ ತೊಂದರೆ ಗಳು, ತಪ್ಪು ಚಿಕೆತ್ಸೆ ಗಳು, ಅತಿಯಾದ ಔಷಧಿ ಪರಿಣಾಮ, ಇವುಗಳಿಂದ ಬಹಳಷ್ಟು ತೊಂದರೆ ಗಳನ್ನು,ನಾನು ಮನೆಯವರು ಅನುಭವಿಸ ಬೇಕಾಯಿತು, ಇಲ್ಲಿ ಯಾರ ಬಗ್ಗೆಯಾಗಲಿ, ಯಾವುದರ ಬಗ್ಗೆ, ದೂರಲೆಂದು,ಅಲ್ಲ, ನಮ್ಮ ನಮ್ಮ, ಕರ್ಮಾನುಸಾರ ವಿಧಿ ನಿಯಮದಂತೆ, ನಡೆಯುತ್ತಿರುತ್ತದೆ, ಅದಕ್ಕೆ ಕೆಲವರು ಪಾತ್ರ ದಾರಿ ಆಗಿರು ತ್ತಾರೆ, ಅದೆಲ್ಲ ಅನುಭವಿಸಿದ ನಂತರ, ನನಗೆ ಸಿಕ್ಕ “ಸಾರ್ಥಕ್ಯ!ದ ಅನುಭವ ಅನುಗೃಹ, ವರ್ಣಿಸಲು ಸಾಧ್ಯವಿಲ್ಲ, ಈ ಅನುಭವ ಉಂಟಾಗಲು, ಏನೇನು ಆಯ್ತು!?, ನನಗೆ ಸಾಹಿತ್ಯ ದಲ್ಲಿ ಆಸಕ್ತಿ ಇರುವುದರಿಂದ ನನ್ನ ಜೀವನವನ್ನು, “ಅವಲೋಕನ,” ಮಾಡಿ ಕೊಂಡಾಗ, ಹೊರಗೆ ಸಾಮಾಜಿಕ ವಾಗಿ ಯಾವುದೇ ಸಾಧನೆ ಯಾಗಲಿ ಜನಪ್ರಿಯತೆ ಯಾಗಲಿ ಇಲ್ಲವಾದರು, ಇಷ್ಟೆಲ್ಲಾ, ಅನುಭವ ಗಳು ವಿಚಾರಗಳು ಹಾಗೆ”ವ್ಯರ್ಥಗೊಳಿಸಲು”ಮನಸ್ಸಾಗದೆ, ಸಂಕ್ಷಿಪ್ತ ವಾಗಿಬರೆದಿದ್ದೇನೆ, ಬರೆಯಬೇಕೆಂದು ಬಹಳ ದಿವಸದ ಕನಸು,ಬರೆಯಲು ತೊಡಗಿದಾಗ, ಯಾವುದೇ,,: ಪೂರ್ವ: ತಯಾರಿ ಇರಲಿಲ್ಲ,ಊರಿನ ವಿಷಯ ವಾಗಲಿ ಅದನ್ನು ಪರಿಚಯಿಸುವ, ಇನ್ನಿತರ ಯೋಜನೆ ಗಳಿರಲಿಲ್ಲ,ಬರೆಯುತ್ತಾ, ತಾನಾಗಿ ವಿಷಯ ಗಳು ಹೊಳೆದು,ಸಲಿಸಾಗಿ ಬರೆಯಲು ತೊಡಗಿದೆ, ಅಲ್ಲಿ ನಾನು, ನಿಮಿತ್ತ ಮಾತ್ರವಾದೆ,ನಾನು ನಿಮಿತ್ತ ಎಂಬ ಪದ ಉಪಯೋಗಿಸಿದ್ದು ಪೂರ್ಣ ಓದಿದ ಮೇಲೆ, ಅರ್ಥವಾಗುತ್ತದೆ, ಪುಸ್ತಕ ದಲ್ಲಿ ಪ್ರಾರಂಭಿಕ ವಾಗಿ,ನಾನು ಬೆಳೆದು ಬಂದ ಹಳ್ಳಿ,ಯ ಜೀವನದ ಸಾಂಸ್ಕೃತಿಕ, ಮತ್ತು ಸಂಪ್ರದಾಯ,ಅಲ್ಲಿಯ, ಹಬ್ಬ ಗಳು ಮತ್ತು ನಮ್ಮ, ಮನೆಯಲ್ಲಿ, ಶಿವರಾತ್ರಿ ಹಬ್ಬದ ವಿಶೇಷತೆ, ಚರಂತಿಮಠ,ದ ಆ ಮಠದವರು, ಪ್ರತಿದಿನ ಹೋಳಿಗೆ ಊಟ ಹಾಕಿ ಭಾವಿ ತೆಗಿ ಸಿದ್ದು, ಊರಿನ ಜನ ಭಾವಿ ನೀರು ವೈಯುವುದು, ನಮ್ಮ ತಂದೆ ತಾಯಿ, ಊರಿಂದ ಬಂದಾಗ ಆಮಠದಲ್ಲಿ ಆಶ್ರಯ ನೀಡಿದ್ದರು, ನಮ್ಮತಂದೆ ಡಾಕ್ಟರ್, ಬೇರೆ ಮನೆ ಕೊಂಡ ಮೇಲೆ ಆಮಠ ಬಿಟ್ಟು ಬಂದದ್ದು,ಆ ಊರಿನ ಎಮ್,ಎಲ್,ಎ, ಅವರು ನಮ್ಮ “ತಂದೆ”ಗೆ ಸಹಾಮಾಡಿದ್ದು,ನಮಣ್ಣ,ನಾನು ಜನಿಸಿದ್ದು, ನಮ್ಮ ದೊಡ್ಡಪ್ಪನ ಕುತತಂತ್ರದಿಂದ ನಮ್ಮ ತಂದೆ ಕುಡಿಯಲು ತೊಡಗಿ ನಾವೆಲ್ಲರೂ ತೊಂದರೆ ಗೆ ಒಳಗಾಗಿದ್ದು,
ಇಲ್ಲಿಂದ, ಶ್ರೀಯುತರ,
ಮುನ್ನುಡಿ, ಸಾಮಾಜಿಕ, ಸಾಂಸಾರಿಕ, ಮಾನಸಿಕ, ಅಧ್ಯಾತ್ಮಿಕ,, ದೈವಿಕ, ಮುಂತಾದ ಅಂಶಗಳು, “ಲೇಖಕಿ”ಯ ಮೇಲೆ, ಬೀರಿರುವ ಪ್ರಭಾವವನ್ನು, ತನ್ಮೂಲಕ ಅವರಿಗೆ, ಸಂಸ್ಕಾರ, ವೈವಿಧ್ಯಗಳನ್ನು, ಅದರಿಂದ ಲಭ್ಯವಾದ ಅನುಭವ ಗಳ, ವರ್ಣಮಯ, ಛಾಯೆಗಳನ್ನು, ನಾವು ಮನಗಾಣ ಬಹುದು, ಪುಸ್ತಕ ದುದ್ದಕ್ಕೂಅಲ್ಲಲ್ಲಿ, ಪ್ರಸಂಗ ತ್ವೇನ ಹರಡಿ ಕೊಂಡಿರುವ,ಇಂಥ ಉದಾಹರಣೆಗಳಲ್ಲಿ, ಗಮನ ಸೆಳೆಯುವ,ಕೆಲವೊನ್ನು, ಆಯ್ದು ಅವನ್ನು, ಒಂದು ಕ್ರಮದಲ್ಲಿ ಸಂಕಲಿಸಿ, ಗಮನಿಸಲು, ಯತ್ನಿಸಿದ್ದೇನೆ, ಕೌಟುಂಬಿಕ, ಸಾಮಾಜಿಕ, ವಿದ್ಯಮಾನಗಳು,ಈ ಪುಸ್ತಕ ದಮೂಲವೇದಿಕೆ, ಇದರಲ್ಲಿ,ತಂದೆ ತಾಯಿ, ಮಗಳು,ಅಳಿಯ, ಬಂಧುಗಳು, ಸ್ನೇಹಿತರು,ನೆರೆ ಹೊರೆ ಯವರು, ಮುಂತಾದವರು, ಸ್ವಾಭಾವಿಕವಾಗಿ ವರ್ಣಿತವಾಗಿದ್ದು, ಇವುಗಳ ಹಿಣ್ಣೆಲೆ ಯಲ್ಲಿ ಯಾರೂ, ಬದುಕಿನಲ್ಲಿ ಕಲಿಯಬಹುದಾದ, ವೈವಿಧ್ಯಮಯ ಪಾಠಗಳು ಅಡಗಿವೆ,ನೆರೆ ಹೊರೆ ಯವರ ಪೈಕಿ ಕೆಲವರ ಪ್ರೀತಿ, ಸಹಾನುಭೂತಿ ಗಳು, ಕೆಲವರಲ್ಲಿ,ಸ್ವಾರ್ಥ,ತರಲೆ, ಛಿದ್ರನ್ವೇಷನೆ,ಸ್ಯಾಡಿಸ್ಟ್ ಮನೋಭಾವ,
ಇತ್ಯಾದಿ ಆದರೆ ಕೌಟುಂಬಿಕ ವಾಗಿ, ಲೇಖಕಿ,ಯ ತಾಯಿ, ತನ್ನ ಗಂಡ ನ ಅನಧಿಕೃತ ಪತ್ನಿ,ಅಂದರೆ (ಸವತಿ)ಯನ್ನು ದೊಡಮ್ಮ ಎಂದು ಕರೆಯಲು ತಾಯಿಯೆ ತನ್ನ ಮಕ್ಕಳಿಗೆ ಕಲಿಸುವುದು,’ಅವಳ ಆಸ್ತಿ ಯನ್ನು, ಮಾರುವುದು,ಬೇಡ ಎಂದು ತಡೆಯುವುದು, ಗಮನಾರ್ಹ, ಅದಕ್ಕಿಂತ,ಕುತೂಹಲ.ವೆಂದರೆ, ಲೇಖಕಿ,ಯ ದೊಡ್ಡಪ್ಪ, ಕುಡುಕರಾಗಿದ್ದು, ಲೇಖಕಿ ಯತಂದೆ, ಅದನ್ನು ತೀವ್ರ ವಾಗಿ, ಆಕ್ಷೇಪಿಸುತಿದ್ದರಂತೆ, ಇದರಿಂದ ದೊಡ್ಡ ಪ್ಪ’ ನಿನಗೂ ಕುಡಿಯಲು ಕಲಿಸುತ್ತೇನೆ,”ಎಂದು ಶಪಥ, ಮಾಡಿ ಕುಡಿ ಯಲು ಕಲಿಸೇ ಬಿಟ್ಟಿದ್ದು, ಇದರಿಂದ ತಂದೆ ಕುಡುಕರಾಗಿ, ಸಂಸಾರ ವೇ ಹಾಳಾದ್ದು, ಇವೆಲ್ಲ ನಮ್ಮ ಸಮಾಜದ ಕ್ಕೆ, ಒಂದು ಪಾಠವಾಗುತ್ತದೆ, ಇಷ್ಟಾಗಿ ಊರಿಗೆ ಮಧ್ಯವನ್ನು ಮಾರುತಿದ್ಧವ, ತಾನು ಮಾತ್ರ ಕುಡಿಯುವ ಚಟಕ್ಕೆ ದಾಸನಾಗದೆ, ಇದ್ದದ್ದು ಇದರ ಇನ್ನೊಂದು,ಕುತುಹಲಕರ ಮುಖ, ಪುಸ್ತಕ ,ಕ್ಕೆ ಆರಂಭದಲ್ಲಿ ಹಳೆಯಕಾಲದ ಗ್ರಾಮದ ಪರಿಸರ ಅಲ್ಲಿನ ಹವಾಮಾನ,ಪ್ರವಾಹ,ನಾಟಕ,ಗಳು,ಊಊರ ಹಬ್ಬ ಗಳು, ಇತ್ಯಾದಿಗಳು, ನಾಂದಿ ತೋರಣವಾಗಿವೆ, ಊರಿ ನ ಹಲವು, ಜಾತಿ,ವೀರಶೈವ ರ, ಧಾರ್ಮಿಕ ಕ್ರಮಗಳು, ಶರಣಮ್ಮ ನ, ಚಿತ್ರ ನ, ವಿವಿಧ ಜಾತಿಗಳ ಪರಸ್ಪರ ಹಾರ್ದಿಕ ವ್ಯವಹಾರ, ಜಂಗಮರ “ಚರಂತಿಮಠ” ದಲ್ಲಿ ನೆಲೆಸಿ ದ್ಧ, ಮುಸ್ಲಿಂ ಬಾಬಾ, ಇಂಥ ಚಿತ್ರಗಳಲ್ಲಿ ,ಹಿಂದೂ ಮುಸ್ಲಿಂ,ರ ಸಾಮಾಜಿಕ ಸಂಬಂಧಗಳು, ಅಂದಿನ, ಜಾತಿ ವ್ಯವಸ್ಥೆಯ ದಾಖಲೆ ಗಳಾಗಿವೆ, ಗ್ರಾಮೀಣ ಸಮಸ್ಯೆ ಗಳು, ಅಲ್ಲಿ ನ ಬಯಲು ಶೌಚ ದ, ಗ್ರಾಮ,ಪಟ್ಟಣ, ನಗರಗಳಲ್ಲಿ ಶೌಚದ ಸಮಸ್ಯೆ ಯ,ಮುಖ ಗಳು,ಪ್ರಾಣಿಹಿಂಸೆ,, ಗ್ರಾಮೀಣ ರಿಗೆ ಬಹಿಷ್ಕಾರ, ಗ್ರಾಮೀಣ ಮದುವೆಯ ಕ್ರಮ, ಅಂದಿನ ಆಕರ್ಷಣೆ ಯಾಗಿದ್ದ, ಸಿನಿಮಾ ಗಳು, ಇತ್ಯಾದಿ ಗಳವರ್ಣನೆ, ಮನಸೆಳೆಯುತ್ತದೆ, ಇನ್ನು ಸ್ತ್ರೀಯರ ಕುರಿತಾದ, ಸಮಸ್ಯೆ ಗಳನ್ನು, ಸ್ತ್ರೀ ಯಾಗಿ ಗಾಢವಾಗಿ ಚಿಂತಿಸಿ, ಪುಸ್ತಕ ದಲ್ಲಿಅಳವಡಿಸಿದ್ದಾರೆ,ಈ ಹಿನ್ನೆಲೆಯಲ್ಲಿ ” ಮಗುವಿನ ಆಯ್ಕೆ ಹೆರುವವಳದೆ ಆಗಿ ರಬೇಕು ಎನ್ನುವ ಅವರ ಅನುಭವ ಪೂರ್ವಕ ಚಿಂತನಾ, ವೈಖರಿ, ಗಮನಾರ್ಹ ವೆನಿಸುತ್ತದ. ಉತ್ತರ ಕರ್ನಾಟಕ ದಲ್ಲಿ, ಬಳಕೆಯಲ್ಲಿದ್ದ, ದೇವದಾಸಿ ಪದ್ಧತಿಯ ನೇರ ಚಿತ್ರ,ಣ “ಮನಸ್ಸು”ಈ “ಗೃಂಥ” ,ದ ಒಂದು ಪ್ರಮುಖ, ಅಧ್ಯಯನದ ವಸ್ತು, ನಾನು ಎಂಬುದು, ಪ್ರಕೃತಿ, ಕೊಟ್ಟ ದೇಹಮಾತ್ರವೆ,ಅಲ್ಲ, ಅದಕ್ಕೆ ಮನಸ್ಸು, ಬುದ್ಧಿ, ಚಿಂತನ ಶಕ್ತಿ, ಮುಂತಾದುವಗಳಿವೆ ಮಾನವನ ಗುಣ, ಸ್ವಭಾವ ,ಗಳು, ಮಾನಸಿಕ ವಿಕೃತಿ, ಗೆ ಕಾರಣ ವಾಗುತ್ತದೆ, ಎನ್ನುವ ಲೇಖಕಿ, ಒಂದು ಕಾಲದಲ್ಲಿ ಆರೋಗ್ಯದ ಜೊತೆಗೆ,ಮೆಟಬಾಲಿಸಂ,ಅನ್ನೆ ಕಳೆದು ಕೊಂಡು, ದೈಹಿಕ ವಾಗಿ ಜರ್ಜಿತಳಾಗಿ, ಮಾನಸಿಕವಾಗಿ ಕುಗ್ಗುತ್ತಾ ಕ್ರಮೇಣ, ದೇಹವು, ಯಾವುದೇ ಕಾರ್ಯ ಕ್ಕೂ ಸಹಕರಿಸದೆ, ನಿರುಪಯುಕ್ತ ಆಗುತ್ತಾ ಇನ್ನೇನು ಈಕೆ ಕೈಬಿಟ್ಟು ಹೋಗುತ್ತಾಳೆ, ಎಂಬತ್ತಾದದ್ದು ಒಂದು ಹಂತ, ಆದರೆ ಅದನ್ನು ಎದುರಿಸಿದ,ಅಂತ:ಸತ್ವ, ಇನ್ನೊಂದು ಹಂತ! ಸಮಸ್ಯೆ ಯ ಸುಳಿಗೆ ಸಿಕ್ಕಿ, ಪಾರಾಗಲು ಹಾತೊರೆಯುವಾಗ’ನನ್ನದೇಹದಲ್ಲಿ ಜೀವ,ಪ್ರಾಣ, ಧೈರ್ಯ, ಜ್ಞಾನ ಅರಿವು,ತುಂಬಿದೆ’ಎಂಬ “ಆತ್ಮ ವಿಶ್ವಾಸ” ವು ಮುಳು ಗುವವನಿಗೆ, ಹುಲ್ಲು ಕಡ್ಡಿ ಯ ಆಸರೆ, ಸಿಕ್ಕಿದಂತಾಯಿತು, ಯೋಗಾಭ್ಯಾಸ ಧ್ಯಾನ,ಎಂದರೇನು? ಗೊತ್ತಿಲ್ಲದೆ, ಗುರು ವಿನ ಮಾರ್ಗದರ್ಶನ ಇಲ್ಲದೆ,ಆಗ ಆದ “ಅನುಭವ” ದಿಂದ ತನ್ನದೆ ಕ್ರಮ ದಿಂದಸಾಧನೆ ನಡೆಸಿ, ಆನಂತರ ಓದಿದ್ದು,” “ಧ್ಯಾನ “ದಿಂದಮನಸ್ಸು, ಮತ್ತು,ದೇಹ ಎರಡನ್ನೂ, ನಿಯಂತ್ರಿಸಬಹುದು, ಎಂಬ ಆತ್ಮವಿಶ್ವಾಸ ದಿಂದ,ಸುಪ್ತ, ಮನಸ್ಸಿನ, ಆಂತರಿಕ ಶಕ್ತಿಯನ್ನು, ಊರ್ಜಿತ ಗೊಳಿಸಿ ಕೊಂಡಿದ್ದಾರೆ.’ಧ್ಯಾನ’ದಿಂದ ಸಕಾರಾತ್ಮಕ ತರಂಗ, ಗಳ ಉತ್ಪಾದನೆ ಯಾಗುತ್ತದೆ, ಎಂಬ ಸಾಧಾನಾ ಜನ್ಯ ನಂಬಿಕೆ,ಋಣಾತ್ಮಕ ಅಂಶಗಳ’ವಿಸರ್ಜನೆ, ಧನಾತ್ಮಕ, ಅಂಶಗಳ ಪುಷ್ಟಿ ಕರಣ, ಇವುಗಳಿಂದ ಧ್ಯಾನ’ ದಮೂಲಕ ದೇಹ ಶುದ್ದಿ ಕರಣ, ಸಾಧ್ಯತೆ ಗಳನ್ನು, ಅನುಷ್ಠಾನಗೊಳಿಸಲು ಯತ್ನಿಸಿದ್ದಾರೆ. ಮುಖ್ಯತ; ತನ್ನ ಮನಸ್ಸಿಗೆ,ತಾನೆ ಅಧಿಸೂಚನೆ (ಸೆಲ್ಪ್ಇನ್ಸಟ್ರಕ್ಷ ನ್)ಗಳನ್ನು ನೀಡುತ್ತಾ ದೈಹಿಕ, ಮಾನಸಿಕವಾಗಿ ಬಲಗೊಳ್ಳುವಿಕೆಯ ಬಗ್ಗೆ, ಅಲ್ಲಲ್ಲಿ ಅವರು ಮಾಡುವ ಪ್ರಯೋಗಗಳು, ತತ್ಪರಿಣಾಮವಾಗಿ ತನ್ನ ಮಾನಸಿಕ ದೈಹಿಕ (ಮನೋದೈಹಿಕ ಸೈಕೋಪಿಜಿಕಲ್) ಆರೋಗ್ಯ ವನ್ನುಸಾಧಿಸುತ್ತಾ ಹೋಗು ವಿಕೆಯ ಚಿತ್ರಣ ,ದಲ್ಲಿ ಅದರ ಹಿಂದಿದ್ದ, ಆತ್ಮ ಶಕ್ತಿ ಯಪ್ರಭಾವ, ನಮ್ಮನು ಚಿಂತನೆಗೆ ಹಚ್ಚುತ್ತದೆ. ದೇಹದ ಕುರಿತು ಚಿಂತನೆ ಯಲ್ಲಿ ‘ಸುಖಭೋಗವನ್ನು ಅನುಭವಿಸುತ್ತಿರುವವರೆಲ್ಲ, ಪ್ರತಿದಿನ ಒಂದು ಸಲ ವಾದ್ರುತಮ್ಮ ದೇಹವನ್ನು, ನೋಡಿ ಕೊಂಡು, ಕೃತಜ್ಞತೆ ಸಲ್ಲಿಸಿ, ಎಂಬ ಮಾತು ಅಧ್ಯಾತ್ಮಿಕ ಜ್ಞಾನಿ ಗಳ’ಸಾಧನಾ ಶರೀರ”ತತ್ವವನ್ನಾದರಿಸಿದೆ, ಆತ್ಮ ನಿಗೆ ದೇಹವು ಒಂದು ಸಾಧನ ಮಾತ್ರ ಸ್ವಸಾಧನೆ ಯಿಂದಲೆ, ಮನಸ್ಸಿನ ಜಾಗ್ರತ,ಸುಪ್ತ, ಸುಷುಪ್ತ, ತುರೀಯ ಎಂಬ ಆವಸ್ತೆಗಳನ್ನು, ಅನುಭವಿ ಸಿ ಅರಿತಿದ್ದಾರೆ, ಹೀಗೆ “ಧ್ಯಾನ” ದಿಂದನನ್ನನ್ನು ನಾನು ನಿಯಂತ್ರಿಸುವುದು ಲಭಿಸಿತು ಎನ್ನುವ ಲೇಖಕಿ,ಆ ಸಾಧನೆ ಯ ಏಣಿ ಏರಿ ‘ಆತಂಕದ ಮನೋಭಾವದಿಂದ ನಿರಲ್ಲಿಪ್ತತೆಯತ್ತಸಾಗುತ್ತಾರೆ ಪುಸ್ತಕ ದ ಅಲ್ಲಲ್ಲಿ ತಮ್ಮ ಅನುಭವ ಗ್ರಹಿತ’ಧ್ಯಾನ ,ದಪ್ರಭಾವದ, ಬಗ್ಗೆ ಹೇಳಿ ದ್ದಾರೆ ಗ್ರಂಥ, ದ ಕೊನೆಯಲ್ಲಿ, ಬೇರೆ ಬೇರೆ ಮೂಲಗಳಿಂದ”ಧ್ಯಾನ’ದಕ್ರಮ ವನ್ನುಓದುಗರಿ ಉಪಯುಕ್ತ ವಾಗುವಂತೆ ಸಂಗ್ರಹಿಸಿ ನೀಡಿದ್ದಾರೆ, ಸ್ವತಃ ಸಾಧಿಸಿ ಮನೋದೈಹಿಕ ಅಂತ: ಸತ್ವದ ಬಲದಿಂದ, ಅಧ್ಯಾತ್ಮ ದತ್ತ ಸಾಗುವಿಕೆಯೂ ಕುತುಹಲಕರವಾಗಿದೆ, ಕೇವಲ ದೇವರ ಬಗ್ಗೆ ಅಲ್ಲ, ದೇವರು ಕೊಟ್ಟ ಅದ್ಭುತ ಗಳಬಗ್ಗೆ ತಿಳಿಯುವುದೇ , ಅಧ್ಯಾತ್ಮ. ಎಂಬುದು ಇವರ ದ್ರಷ್ಟಿ,ಅಕ್ಷಯತ್ರತಿ ಯೆಂದುಹಿಂದುಗಳಿಗೆ ಒಂದು ಮುಖ್ಯ ದಿನ ಇದನ್ನು ಅಕ್ಷಯ ತೃತೀಯಾ,ಎಂದು ಕರೆದು ಈದಿನ ಕೊಂಡದೆಲ್ಲ ಅಕ್ಷಯವಾಗುತ್ತದೆ ಎಂಬ ಭಾವ ದಿಂದ ಚಿನ್ನ ಭೂಮಿ, ಮನೆ ಇತ್ಯಾದಿ ಕೊಳ್ಳುವ, ಪರಿಪಾಠ ವಿದೆ, ಆದರೆ ಆರೋಗ್ಯ, ಶಕ್ತಿ ಧೈರ್ಯ,ಭಕ್ತಿ, ಜ್ಞಾನ,ವಿವೇಕ, ಆತ್ಮ ವಿಶ್ವಾಸ, ಪ್ರತಿಭೆ ಗಳೆ ಜೀವನ ದ, ಆಸ್ತಿ, ಎಂದು ನಂಬಿದ “ಲೇಖಕಿ”, ಅದನ್ನು ಅಕ್ಷಯವಾಗಿಸಲು, ಕೊಡುವ ಬೆಲೆ ಮೌನ ವ್ರತ, ಅಕ್ಷಯ ತೃತೀಯ ದಂದು ನನ್ನ ಸಾಧನೆಗಳೆಲ್ಲ ಫಲಿಸಲಿ, ಎಂಬ ಅವರ ಆಶಯವು, ವಿಶೇಷ ವಾಗಿ ನಮ್ಮ ಗಮನ ಸೆಳೆಯುತ್ತದೆ,ಆರನೇಯ, ಭಾಗದಲ್ಲಿ,ದೇಹ, ಮನಸ್ಸು, ಇಂದ್ರಿಯ ಗಳ, ಸಂಬಂಧ ಗಳಬಗ್ಗೆ, ಆತ್ಮಾವಲೋಕನ, ನಡೆಸಿದ್ದಾರೆ, ನಾನಿನ್ನೂ,ದೇಹ ಮನಸ್ಸಿನ,ಗುಲಾಮಳು, ಎಂದು ಅನುಭವ ಪೂರ್ವಕವಾಗಿ ಅರಿತಿದ್ದಾರೆ, ಆಸಕ್ತಿ ಇರುವುದು ದೇಹಕ್ಕೊ ಮನಸ್ಸಿಗೊ,ದೇಹ, ಜೀವಾತ್ಮ,ಗಳ ಸಂಬಂಧ ದಲ್ಲಿ ನೋವು ಮುಕ್ತಿ, ಯಾವುದಕ್ಕೆ? ದೇಹಕ್ಕೊ ಆತ್ಮ ಕ್ಕೊ?ಎಂಬ, ಪ್ರಶ್ನೆ ಗಳನ್ನು, ಹಾಕಿಕೊಂಡು,ದೇಹ, ಮನಸ್ಸು,ಸಾವು, ಮರುಜನ್ಮ, ಮುಂತಾದ ಜಿಜ್ಞಾಸೆ ಗಳ ಬಗ್ಗೆ, ತಮ್ಮ ದೆ ರೀತಿಯ ಲ್ಲಿಚಿಂತನೆ ನಡಿಸಿದ್ದಾರೆ,
ಬ್ರಹ್ಮ ಚರ್ಯ,ಗ್ರಾಹಸ್ಥ್ಯ, ವಾನಪ್ರಸ್ಥ,ಸನ್ಯಾಸ, ಎಂಬ ಚತುರಾಶ್ರಮ,ಗಳನ್ನು, ತಮ್ಮ ಜೀವನದ , ಹಂತಗಳಲ್ಲಿ, ಅನುಭವಿಸಿ ಅನುಭಾವಿಸಿದ್ದಾರೆ, ಸನ್ಯಾಸತ್ವ, ಎಂಬುದು, ಮನಸ್ಸಿನಿಂದ ಆಗುವಂತದ್ದು, ಎಂಬ ಪರಮ ಸತ್ಯ ವನ್ನು ಅರಿತಿದ್ದಾರೆ,ಅನಾರೊಗ್ಯದ ಕಾರಣ,ಮರಣಭೀತಿ ಇದ್ದರು ನಡೆ ನಡೆ, ನನಗಿನ್ನೂ ಕೆಲಸ ವಿದೆಎಂದು ಎಡಗೈ ಯಲ್ಲಿ,ಓಡಿಸಿ ಬಿಟ್ಟಿದ್ದೆ, ಸಾವನ್ನು, ಎಂದೆನ್ನುವ, ಮನೋಬಲವನ್ನು, ಪ್ರದಶ್ರಿಸಿ ದ್ದಾರೆ ಅವರ ಆತ್ಮ ಶಕ್ತಿ ಸತ್ವದಿಂದ, ಮಾನಸಿಕ, ದೈಹಿಕ, ತೊಂದರೆ ಗಳನ್ನು, ಪವಾಡ ದಂತೆ ಮಾಯವಾಗುವ, ಸಂದರ್ಭವು,ಕುತುಹಲ ಮೂಡಿಸಿ ಓದುವಂತೆ ಯು ಆಲೋಚಿಸುವಂತೆ ಯು ಮಾಡುತ್ತದೆ,ಸ್ವತಹ ಚಿಂತನೆ ಗಳನ್ನು ನಡೆಸುತ್ತ ನಡೆಸುತ್ತಾ, ತಮಗೆ ತಿಳಿದಂತೆ ಅಹಂ ಬ್ರಹ್ಮಾಸ್ಮಿ,ನಾನೆ ಬ್ರಮ್ ನು ಎಂಬ ಆಧ್ಯಾತ್ಮಿಕ,ತಥ್ಯವನ್ನು, ತಮ್ಮ ದೆ ರೀತಿಯಲ್ಲಿ ಅನುಭವಿ ಸಿ ಬ್ರಹ್ಮಾಂಡ ದ ಒಡೆಯನ ಮಗಳು ನಾನು ಎಂಬ ಭಾವೋಚ್ಚತೆಗೆ ಎರಿದರೂ ಸಹ ಆಳುತ್ತಿರುವ ನಿರಾಕಾರ ಶಕ್ತಿ ಗೆ ಎಲ್ಲ ವನ್ನು ಅರ್ಪಿಸಿ,ಅವನು ತೋರಿದ ದಾರಿ ಯಲ್ಲಿ ನಡೆಯು ತ್ತಬಂದೆ ಎಂಬ ನಿರ್ಲಿಪ್ತ ಅರ್ಪ ನಾ ಭಾವವನ್ನು ನಿರ್ವಹಿಸಿದ್ದಾರೆ. ನಿರಾಕಾರ ವಿಶ್ವ ನಿಯಾಮಕ,ಸರ್ವ ಶಕ್ತಿ ಯನ್ನೆ ದೇವರು ಎಂದು ಕರೆ ಯುತ್ತೇವಷ್ಟೆ, ಅಂಥ ದೇವರೊಂದಿಗೆ ಇವರು ಛಲಬಿಡದ ತ್ರಿವಿಕ್ರಮ ನಂತೆ ಜಗಳ ಆಡಿದ್ದು ಇದೆ,ನೀಏನೆಮಾಡು ಹೆದರುವೆ ನೇನು? ಬಾಳುವೆ ನು ನೋಡು ಬದುಕು ವೆನು ನೋಡು, ಎಂದು ಪಂಥ ಕಟ್ಟಿ ದ್ದು ಇದೆ, ಅಂತೆಯೇ ಕಣ್ಣೀರಿನಿಂದ ದೇವರಿಗೆ ಕೃತಜ್ಞತೆ ಅರ್ಪಿಸಬೇಕು ಎಂದದ್ದು ಇದೆ ಮನುಷ್ಯ ರು ಈ ಜಗತ್ತಿನಲ್ಲಿ ದೇವರನ್ನು ಕ್ಷಮಿಸು ವಷ್ಟು ಬೇರೆ ಯಾರನ್ನೂ ಕ್ಷಮಿಸು ವುದಿಲ್ಲ, ಎಂಬ ವಾಸ್ತವ ವನ್ನು ಹೇಳುತ್ತಲೆ ನನ್ನ ಕಾಯಕಲ್ಪ,ನಾನೆಮಾಡಿಕೊಳ್ಳಬೇಕು, ಎಂಬ ಆತ್ಮ ವಿಶ್ವಾಸ ದೊಂದಿಗೆ ಎಲ್ಲಕ್ಕಿಂತ ಮೇಲಾಗಿ ನನ್ನ ವೈದ್ಯ ಇದ್ದಾನಲ್ಲ ಎಂದು ದೇವರಮೇಲೆ ಭರವಸೆಯ ನ್ನು ಹೊಂದಿದ್ದಾರೆ., ಸಮಸ್ಯೆ ಗಳ ಸುಳಿಯನ್ನು ಧ್ಯಾನ ದಮೂಲಕ ಎದುರಿಸು ವಾಗ ಆದ ತುರೀಯ ಅನುಭವದ ಬಗ್ಗೆ ಇದನ್ನು ಜ್ಞಾನೋದಯ, ಎನ್ನಬೇಕು, ದರ್ಶನ, ಎನ್ನಬೇಕೋ, ಎಂಬುವುದೆ ಪ್ರಶ್ನೆ ಯಾಗಿ ಎದರು ನಿಂತರೂ, “ಜೀವನ ದಲ್ಲಿ ಆದದ್ಧುಅನುಭವಿಸಿದ್ದುಇದನ್ನು, ತಿಳಿ ಸುವ ಉದ್ದೇಶ ದಿಂದ”ಆತ್ಮ ಕಥೆಯ ರಚನೆಗೆ ಹಂಬಲಿಸಿದ್ದಾರೆ”ಅವರ ಜೀವನ ಚರಿತ್ರೆ,ಬರೆಯಬೇಕು ಎನ್ನುವಾಗ ಅದಕ್ಕೆ, ಸಾಹಿತ್ಯ ಕ ಸಿದ್ದಿಕೂಡ ಬೇಕಲ್ಲವೆ, ಅದಕ್ಕೆ ತಕ್ಕ ಆತ್ಮಾವಲೋಕನ,ವನ್ನು ಯೋಗ್ಯ ಅಧ್ಯಯನ ವನ್ನು ಲೇಖಕಿ ಯಥಾಶಕ್ತಿ, ನಡೆಸಿದ್ದಾರೆ, ಆತ್ಮ ವಿಶ್ವಾಸ ಅವರಲ್ಲಿ ತುಂಬಿದೆ, ಇದಕ್ಕೆ ಕಾರಣ ಅವರ ನಿರಂತರ, ಅಧ್ಯಯನ, ಯೋಗಶಾಸ್ತ ಶರಣ ಸಾಹಿತ್ಯ, ಕಾದಂಬರಿ ಗಳು ಓಶೋ ಭೋದನೆ ಗಳು ಡಿ,ವಿ, ಜಿ, ಬರಹಗಳು ಕೆ,ಎಸ್,ಎ, ನಾ ಕವಿತೆ ಗಳು ವಿವಿಧ, ಬಗೆ ಯ ಸಾಹಿತ್ಯ ಗಳು, ಮಹಾತ್ಮ ಗಾಂಧೀಜಿ, ಅಬ್ದುಲ್ ಕಲಾಂ,ಎಸ್ ಎಲ್ಲ ಬೈರಪ್ಪ, ಶಿವರಾಂ ಕಾರಂತ, ಅನುಪಮ ನಿರಂಜನ್,ಸುಧಾಮುರ್ತಿ, ಮುಂತಾದ,ಸಾಧಕರ ಆತ್ಮ ಚರಿತ್ರೆ ಗಳು ಇತ್ಯಾದಿ ಗಳ ಅಧ್ಯಯನ ವು ಅವರಮೇಲೆ, ಅಚ್ಚಳಿಯದ, ಪ್ರಭಾವ ಬೀರಿದೆ, ಸಿನಿಮಾ ಸಾಹಿತ್ಯ, ಸಂಗೀತ ಮುಂತಾದವು ಬರಿ ಮನರಂಜನೆಗಾಗಿ ಅಲ್ಲ, ಎಂದು ಮನದಾಳದಿಂದ, ಒಪ್ಪಿ ಸಾಮಾನ್ಯರಿಗಿರುವ, ನಿರ್ಲಿಪ್ತತೆ ಯಮಿತಿ ಮಾನಸಿಕ ದೂರ (ಸೈಕೋಲಜಿಕಲ್ ಡಿಸ್ಟೆನ್ಸ್)ನ್ನು ಮೀರಿ ಸಿನಿಮಾ ಕಥೆ, ಚಿತ್ರಗೀತೆ, ಪಾತ್ರ ಗಳ ಒಳಗೇ ಪ್ರವೇಶಿಸಿ, ಅವನ್ನು, ತಾದಾತ್ಮ್ಯ ತೆ ಯಿಂದ, ಅನುಭವಿಸಿದ್ದಾರೆ. ಅದರಲ್ಲಿ, ತಮ್ಮನ್ನು ಕಂಡು ಕೊಂಡಿದ್ದಾರೆ, ಚಿತ್ರ ಗೀತೆ,ಶರಣ, ಸಾಹಿತ್ಯ ಗಳ ಸಾಲುಗಳನ್ನು, ತಮ್ಮ ಜೀವನ ಕ್ಕೆ, ಅಳವಡಿಸಿ ಕೊಂಡಿದ್ದಾರೆ.ಸಾಧಕರು ಗಳ ಅನುಭವ ಜನ್ಯ ಮಾತು ಗಳನ್ನು,ಧ್ಯೆಯವಾಗಿಸಿಕೊಂಡಿದ್ದಾರೆ, ಆತ್ಮ ಕಥೆ ಬರೆಯಲು ಸೂಕ್ಷ್ಮ ತೆ ಬೇಕು ಎಂಬ ಸತ್ಯವನ್ನು, ಅದರೊಂದಿಗೆ,ಮಳೆ ನೀರು ಭಾವಿಯ ಆಳಕ್ಕೆ ಇಳಿಯುವಂತೆ, ಜ್ಞಾನ ವು ಮನಸ್ಸಿನ ಆಳಕ್ಕೆ ಇಳಿಯ ಬೇಕು, ಎಂಬ ತತ್ಯ ವನ್ನು ಅರಿತಿರುವ ಅವರು ತಮ್ಮ ನ್ನು ತಾವೆ ಒಳಗಣ್ಣಿನಿಂದ ವೀಕ್ಷಿಸಿಸುತ್ತ ತಮ್ಮ ಜೀವನ ಚರಿತ್ರೆ ಯನ್ನು ರಚಿಸಿದ್ದಾರೆ, ಈ ಆತ್ಮ ಚರಿತ್ರೆ ಮೂಲಕವೆ ನಾನು ಇತಿಹಾಸ ವಾಗಬೇಕು, ಸಾವಿರಾರು ವರ್ಷಗಳ ವರೆಗೆ, ಈ ಕೃತಿ ಯಮೂಲಕ, ಜೀವಿಸಿ ರಬೇಕು ಎಂದು ಆಶಿಸಿದ್ದಾರೆ, ಸಾಮಾನ್ಯ ಹಳ್ಳಿ ಯೊಂದರಲ್ಲಿ,ಜನಿಸಿ ಸಾಮಾನ್ಯ ಕುಟುಂಬದಲ್ಲಿ ಗೃಹಿಣಿ ಯಾದ, ಶ್ರೀ ಮತಿ, ರೇವತಿ,ಯವರು ಬದುಕಿನ ಸಮಸ್ಯೆ ಗಳ ಸುಳಿ ಎಂಬ, ಅಗ್ನಿ ನಿಕಷದಲ್ಲಿ, ಮಾನಸಿಕ ಪರಿಸ್ಕಾರ ಹೊಂದುತ್ತಾ ಈ ತಮ್ಮ ಜೀವನ ಚರಿತ್ರೆ ಯನ್ನು ತಮಗೆ ತಿಳಿದ, ಕ್ರಮ ದಲ್ಲಿ, ರಚನೆ ಮಾಡಿದ್ದಾರೆ, ಸಾಮಾಜಿಕ ವಾಗಿಯಾವುದೆ, ಕ್ರಾಂತಿ ಕಾರಕ, ಸಾಧನೆ ಗಳನ್ನು,ಮಾಡದೆ ಇದ್ದರು ಇವರು ಆತ್ಮ ಕಥೆ ಯು ಈಮೇಲೆ, ವಿಮರ್ಶಿಸಿ ರುವ ಕಾರಣ ಗಳಿಂದಾಗಿ,ಅದ್ಯಾಯನಾಹ್ರ ವಾಗಿದೆ, ಏಕೆಂದರೆ ಇವರಜೀ ವನಾನುಭವಗಳು ಇನ್ನೂ ಬದುಕಿನ ಆರಂಭದಲ್ಲಿರುವವರಿಗೆ,ಪಾಠಗಳೆ ಆಗಿವೆ ಈ ದೃಷ್ಟಿಯಿಂದ’ಇದುಒಂದು, ಉಪಯುಕ್ತ ರಚನೆ’ಎಂಭ ಭಾವದಿಂದ, ಲೇಖಕಿ ಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ
ಲೇಖಕಿ ಶ್ರೀಮತಿ ರೇವತಿ ಅವರಮನದಾಳದಲ್ಲಿಅಂಕುರಿಸಿರುವ ಇನ್ನಿತರ ಪುಸ್ತಕ ಗಳ ರಚನೆಯೂ ಇವರಿಂದ ಸಾದ್ಯ ವಾಗಲಿ, ಮಾರ್ಗದರ್ಶಕ,ವಾಗಲಿ, ಏತನ್ಮಧ್ಯೆ,ಅವರಭಾಷೆ ಶೈಲಿ, ನಿರೂಪಣಾ ಸಾಮರ್ಥ್ಯ ಗಳು ಇನ್ನೂ ಪಳಗಳಿ’ಎಂದುನನ್ನ ಶುಭಹಾರೈಕೆಗಳು
ಸರೋಜ