ಆಶಾ ಯಮಕನಮರಡಿ ಕವಿತೆ-ಗಜಲ್

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ಗಜಲ್

ನಾನು ಮಾತುನಾಡುವಾಗಲೆಲ್ಲಾ ನೀನು ಮೌನವಾಗಿ ಕೇಳುತ್ತಿದ್ದೆ ಯಾಕೆ ಹೇಳು
ನಿನ್ನ ಹಾಡಿಗೆ ನಾನು ದನಿ ಸೇರಿಸಿದಾಗಲೆಲ್ಲಾ ಸುಮ್ಮನಿರುತ್ತಿದ್ದೆ ಯಾಕೆ ಹೇಳು

ಲೋಕದ ಜ್ಞಾನವೆಲ್ಲಾ ನನಗಿಲ್ಲಾ ಎಂದು ನನಗೂ ಗೊತ್ತು
ಎಲ್ಲವನ್ನೂ ಅರಿತಿರುವ ನೀನು ಏನನ್ನು ತಿಳಿಸದೆ ಇರುತ್ತಿದ್ದೆ ಯಾಕೆ ಹೇಳು

ನಿನ್ನೆತ್ತರದ ಸಮಕೆ ನಾನಿಲ್ಲಾ ಎಂಬುದು ನಿನ್ನ ನೋಟದಲ್ಲಿ ಕಾಣುತಿತ್ತು
ಜೊತೆ ನಡೆಯುವಾಗಲೆಲ್ಲಾ ಹೆಜ್ಜೆ ಹಿಂದಕ್ಕೆ ಸರಿಸುತ್ತಿದ್ದೆ ಯಾಕೆ ಹೇಳು

ಎಲ್ಲವು ವ್ಯಕ್ತಪಡಿಸಲು ಎಷ್ಟೇಲ್ಲಾ ಭಾವಗಳಿವೆ ಎಂಬುದು ಗೊತ್ತೆ
ಮುಕ್ತವಾಗಿ ಹೇಳದೆ ನಿನ್ನಲ್ಲೆ ಬಚ್ಚಿಟ್ಟುಕೊಳ್ಳುತ್ತಿದ್ದೆ ಯಾಕೆ ಹೇಳು

ಅದುಮಿಟ್ಟ ಭಾವಗಳನ್ನು ಅರುಹದೆ ತೊಳಲಾಡುತ್ತಿರುವೆ
ಅರಿತಿರುವಳು ಆಶಾ ಚಹರೆ ಓದುವುದನ್ನು ಮನಸು ಮುಸುಕು ಮುಚ್ಚಿಕೊಳ್ಳುತ್ತಿದ್ದೆ ಯಾಕೆ ಹೇಳು


ಆಶಾ ಯಮಕನಮರಡಿ

Leave a Reply

Back To Top