ಕಾವ್ಯಸಂಗಾತಿ
ನಯನ. ಜಿ. ಎಸ್.
ಗಜಲ್
ಭಾವ ಭಾವಗಳು ಬೆಸೆಯುತಿರಲು ಹಸಿರಾಯಿತು ಎದೆಯ ನೆಲ
ಮನ ಮನಸ್ಸುಗಳು ಜೊತೆಗೂಡಿ ಹಸನಾಯಿತು ಎದೆಯ ನೆಲ
ವಿರಹ ಸರಿದು ಬಹುದೂರ ಮೇಳೈಸಿತು ಭಾವಯಾಣ ಚೆಲ್ವಲಿ
ಪ್ರೀತ್ಯಾದರಗಳ ಗಾಢ ಸಂಸರ್ಗದಿ ರಮ್ಯವಾಯಿತು ಎದೆಯ ನೆಲ
ಮುಂಗಾರಿನ ತಂಬೆಲರಂತೆ ಹಿತ ಹೊಂಗನಸುಗಳಲಿ ಮಂದಹಾಸ
ಕಳಚದ ಆಪ್ತ ಬಂಧದಿ ಬೆಸೆದು ಹದುಳವಾಯಿತು ಎದೆಯ ನೆಲ
ಆಂತರ್ಯದ ಅನುರಾಗವಿದು ಚಿಗುರೊಡೆಯಿತು ಹಾಸದ ಕುಡಿ
ನಂಬುಗೆಯ ಬಾಳ ನನಸುಗಳಲಿ ಭದ್ರವಾಯಿತು ಎದೆಯ ನೆಲ
ಸುಖದ ಸುಗ್ಗಿಯೊಳು ನಲಿದೆದ್ದು ಹಿಗ್ಗಿ ಸುಖಿಸುತಿಹಳು ‘ನಯನ’
ಅಸುಗಳ ಮಿಲನದಿ ಮನವೊಂದಾಗಿ ಶುಭ್ರವಾಯಿತು ಎದೆಯ ನೆಲ.
ನಯನ. ಜಿ. ಎಸ್
ಚೆನ್ನಾಗಿದೆ..