ಸತೀಶ್ ಬಿಳಿಯೂರು ಅವರ ಕವಿತೆ -ಪಂಜರದ ಹಕ್ಕಿ

ಪಂಜರದೊಳಗಿನ ಹಕ್ಕಿ
ಪಂಜರದ ಬೇಲಿಯನ್ನು ಕುಕ್ಕಿಕುಕ್ಕಿ
ದುರ್ಬಲಗೊಂಡ ಮನಸ್ಸಿನ ಒಳಗಿಂದ
ರಕುತ ಕಣ್ಣೀರ ಕಾರುತ್ತಿದೆ
 ಪರಪಂಚದ ಸವಾರಿ ನನಗೆ ಸವಾಲು
ಬಯಕೆಯೆಲ್ಲ ಸುಡುಗಾಡು ದಿನಾಲು

ಯಾವ ದುರಾದೃಷ್ಟವು ಅವನ
ಮನೆ ಮನದ ಪಂಜರ ಸೇರಿ ಬಿಟ್ಟೆ
ನನ್ನೊಳಗಿನ ಕನಸುಗಳ ಕೈಯಾರೆ ಸುಟ್ಟೆ
ಭರವಸೆಯ ಬಾಗಿಲಿಗೆ ಬೀಗದ ಹಾರ
ನೆನಪು ಮಾತ್ರ ದಿನ ಮನಸನ್ನು ಸಂಹಾರ
ದಿನ ನನಗೇಕೆ ಕಗ್ಗತ್ತಲು ನೇಸರ

ಮೂಡುವ ಬೆಳಕು ನನ್ನೆದೆ ತಟ್ಟಲು
ಭಯ ಪಡುವಂತಿದೆ ಅವರಿಸಿದೆ ಕತ್ತಲು
ಹಿಂಜರಿದಿದೆ ಬೆಳಕಿನ ಕಿಡಿ ಕಾಣಲು
ನೆಮ್ಮದಿಯ ದಿನ ನನಗೇಲ್ಲಿ ದೇವರೆ
ಭರವಸೆಯ ಬೆಳಕು ತೋರಿಸು ಬಾರೆ
ಒಂಟಿಯಾಗಿ ನನ್ನ ಕೂಡಿ ಹಾಕಿದರೆ
ನಾನು ಸುರಿಸುವುದು ದಿನ ಕಣ್ಣೀರೆ
ನನ್ನ ಮೇಲೆ ಸ್ವಲ್ಪ ಕರುಣೆ ತೋರೆ

ಸ್ವಚ್ಚಂದವಾಗಿ ಹಾರಬೇಕು
ಎಲ್ಲರ ಜೊತೆ ಬೆರೆತು ಬಾಳಬೇಕು
ನನ್ನದೆ ಸುಂದರ ಕನಸುಗಳ ಕಾಣಬೇಕು
ಈ ಆಸೆಗಳಿಗೆ ಬೇಲಿಯೇಕೇ?
ನನ್ನ ಬಯಕೆಗಳ ನನ್ನೊಳಗೆ ಸುಡಬೇಕೇ?
 ಈ ಜೀವ ಕೊನೆಯುಸಿರೆಳೆವ ಮುನ್ನ
ನೆಮ್ಮದಿಯಾಗಿಸು ಕೈ ಮುಗಿವೆ
ನಿನ್ನ ಪಾದಕ್ಕೆ ನಿತ್ಯ ಎರಗುವೆ..


Leave a Reply

Back To Top