ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ ಅವರ
ತನಗಗಳು

ಕೆಂಪೇರಲು ಗಗನ
ನಾಚಿದಳು ಭುವನ
ಬೆಳ್ಳಕ್ಕಿ ನಿರ್ಗಮನ
ಚಂದ್ರಮನಾಗಮನ
ಮುತ್ತುಗಳ ಮಾಲಿಕೆ
ಕೊರಳ ಸೌಂದರ್ಯಕೆ
ನೋಟದಾಯಸ್ಕಾoತಕೆ
ಪ್ರಯಾಗದ ರೂಪಿಕೆ
ತೆನೆಯೆಲ್ಲ ಕಾಳಾಗಿ
ಕಣಜವ ಸೇರಿತು
ಗಿಡವೆಲ್ಲ ಹುಲ್ಲಾಗಿ
ಬಣವೆಯೆ ಆಯಿತು

ನೂರಾಸೆಯು ತುಂಬಿದ
ಮನ ಭಾರವಾಗಿತ್ತು
ಮೂರಾ ಬಟ್ಟೆ ಬದುಕು
ಸ್ವತಃ ಹೊರೆಯಾಯಿತು
ನೇಗಿಲಿನ ಹಿಂದೆಯೇ
ಬೆಳ್ಳಕ್ಕಿಗಳ ಹಿಂಡು
ಗೆರೆಯಲ್ಲಿ ಮೇಲ್ಬಂದ
ಎರೆಹುಳುವ ದಂಡು
ಹುಳು ಉಪ್ಪಟೆ ಸಿಕ್ಕ
ಖುಷಿ ಬೆಳ್ಲಕ್ಕಿಗಳಿಗೆ
ಉತ್ತಾಗ ಹೊಲ ಚೊಕ್ಕ
ಕಾರ್ಯಖುಷಿ ಯೋಗಿಗೆ
ಮಾಮರ ಚಿಗುರಿದೆ
ನಿಸರ್ಗಕೆ ತೋರಣ
ಹಲಸು ಘಮಿಸಿದೆ
ತೋಳೆಸಿಹಿ ಸ್ಪುರಣ
ರೆಪ್ಪೆಯ ಬಡಿಯುತ
ಧೂಳನು ಸರಿಸಿದೆ
ಕಂಗಳ ಕಂಬನಿಗೆ
ಹೇಳದಿಹ ಮಾತಿದೆ
ನಿದಿರೆ ಎವೆಮುಚ್ಚಿ
ನೋಟ ನಿತ್ರಾಣವು
ಕನಸು ಗರಿಬಿಚ್ಚಿ
ಹೊಸದು ಪ್ರಪಂಚವು
ಮಾಲಾ ಚೆಲುವನಹಳ್ಳಿ
