ಕಾವ್ಯ ಸಂಗಾತಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಮಲಯಾಮಾರುತ

ನಗು ಮುಖದವಳೇ //
ನಲಿ ಶುಕದವಳೇ //
ನವಿಲಂತೆ ಕುಣಿದವಳೇ
ಜಿಂಕೆಯಂತೆ ಜಿಗಿದವಳೇ//ನಗು//
ಮಾಯ ಮೃಗದಂತೆ ಬಂದವಳೇ
ಬಾನ ಚುಕ್ಕಿಯಂತೆ ಮಿಂಚಂವಳೇ/
ನೀ ಅನುರಾಗದ ಮೋಹದಲಿ
ಒಂದಾದ ಹೃದಯಗಳ ಕೊಂದವಳೇ//
ಅಂದದ ಹೂವಿನ ಶೃಂಗಾರದಲಿ ನೋವಿನ ಶಯ್ಯೇಯ ಮುಳ್ಳಾದವಳೇ../
ತಂಪಾದ ವಸಂತ ಗಾಳಿಯಲಿ ಬಿರುಗಾಳಿಯಾಗಿ ನೀ ಬಂದವಳೇ..//
ಸುರಿಯುವ ವರ್ಷಾಧಾರೆಯಲಿ
ಬಿರು ಮಿಂಚು ಗುಡುಗಾದವಳೇ../
ಬೀರು ಸ್ವಾರ್ಥದ ನುಡಿಯಲ್ಲಿ
ಅರ್ತಿಯ ಮನವ ಜರಿದವಳೇ..//
ಬಾಳಿನ ದೋಣಿ ತೇಲುತಲಿ
ಬಿಸಿಲಿನ ಬೇಗೆಯಲಿ ಬೇಯುತಲಿ..
ನಾದ ಸ್ವರದಲಿ ಅಪಸ್ವರ ಮೂಡಿ
ಬಿಸುಡು ಮಲಯಾಮಾರುತ ರಾಗವಾದೆ..//
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
