ದೇವರಾಜ್ ಹುಣಸಿಕಟ್ಟಿಕವಿತೆ-ಕವಿತೆಯಾಗುವುದು…!!

ಕಾವ್ಯ ಸಂಗಾತಿ

ದೇವರಾಜ್ ಹುಣಸಿಕಟ್ಟಿ

ಕವಿತೆಯಾಗುವುದು…!!

ನೀವು ನದಿಯ ಬಗೆಗೆ
ಮಾತನಾಡುತ್ತೀರಿ..!
ಕೆಲವರು ಬೊಗಸೆಯಲ್ಲಿಯೇ
ದಾಹ ನೀಗಿಬಿಡುತ್ತಾರೆ…!!

ನೀವು ಆಧ್ಯಾತ್ಮದ ಬಗೆಗೆ ಮಾತನಾಡುತ್ತೀರಿ…!
ಕೆಲವರು ಆತ್ಮವಾಗಿಬಿಡುತ್ತಾರೆ…!!

ನೀವು ವಿಶಾಲ ಜ್ಞಾನದ ಬಗೆಗೆ
ಮಾತನಾಡುತ್ತೀರಿ…!
ಕೆಲವರು ಬೆಳಕಾಗಿಬಿಡುತ್ತಾರೆ…!!

ನೀವು ಆಗಸದ ವಿಶಾಲತೆಯ
ಬಗೆಗೆ ಮಾತನಾಡುತ್ತೀರಿ..!!
ಕೆಲವರು ಸದ್ದಿಲ್ಲದೇ ಮನದಲಿ
ಕೂತು ಬಿಡುತ್ತಾರೆ…!!

ನೀವು ನಶೆಯ ಬಗೆಗೆ
ಮಾತನಾಡುತ್ತೀರಿ…!
ಕೆಲವರು ಪ್ರೀತಿಯಲಿ ಮುಳುಗಿ ಬಿಡುತ್ತಾರೆ….!!
ನೀವು ಸಮುದ್ರದ ಬಗೆಗೆ
ಮಾತಾಡುತ್ತೀರಿ…!
ಕೆಲವರು ಕಣ್ಣoಚಲ್ಲಿ ಮುಳುಗಿ ಬಿಡುತ್ತಾರೆ….!!

ನೀವು ಗೀತೆಯ ಬಗೆಗೆ ಮಾತನಾಡುತ್ತೀರಿ…!
ಕೆಲವರು ಕವಿತೆಯಾಗಿ ಬಿಡುತ್ತಾರೆ..!!


Leave a Reply

Back To Top