ಮಹಿಳಾ ದಿನದ ವಿಶೇಷ

ಮಹಿಳೆ

ವಿಶೇಷ ಲೇಖನ

ಭಾರತಿ ಅಶೋಕ್

ಹೆಣ್ಣು ತಾನೆಷ್ಟೇ ಬುದ್ಧಿವಂತಳಾದರೂ, ಹೊರಗೆ ತಾನೆಷ್ಟೇ ಮುಂದುವರಿದರೂ, ಮನೆಯೊಳಗೆ ಬಂದೊಡನೆ ತನ್ನ ಜವಾಬ್ಧಾರಿ ಯನ್ನು ಮರೆಯುವುದಿಲ್ಲ. ಹೆಚ್ಚು ಶಿಕ್ಷಣ ಪಡೆದ ಮಾತ್ರಕ್ಕೆ ಅವಳಿಗೆ ಜವಾಬ್ದಾರಿಗಳಿಲ್ಲ ಎನ್ನುವುದಲ್ಲ. ಇತ್ತೀಚಿನ ದಿನಗಳಲ್ಲಿ ಅನಕ್ಷರಸ್ಥ ಮಹಿಳೆಯರಿಗಿಂತ ವಿದ್ಯಾವಂತ ಮಹಿಳೆಯರೇ ಹೆಚ್ಚು ನೋವನ್ನು, ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಾರೆ. ಇದಕ್ಕೆಲ್ಲಾ ಅವಳ ಜವಾಬ್ದಾರಿಯ ವಿಸ್ತಾರ ಮತ್ತು ಸೈರಿಣಿಯೇ ಕಾರಣ. ಹಿಂದೆ ಅವಳು ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದ ಕಾಲವೊಂದಿತ್ತು. ಒಮ್ಮೆ ತಾಳಿಗೆ ಕೊರಳನ್ನು ಒಡ್ಡಿದಳೆಂದರೆ ಅವಳ ಬದುಕಲ್ಲಿ ಎಂಥ ಬದಲಾವಣೆ ಆಗುತ್ತಿತ್ತು ಮತ್ತು ಆಕೆಯ ಸಂಪೂರ್ಣ ಬದುಕು ಯಾರು ನಿಯಂತ್ರಿಸುತ್ತಿದ್ದರು ಎನ್ನುವುದನ್ನು ಬೆಳೆಗೆರೆ ಜಾನಕಮ್ಮನವರ ಕವಿತೆಯ ಸಾಲಗಳನ್ನು ಅವಲೋಕಿಸುವ ಮೂಲಕ ಗ್ರಹಿಸಬಹುದು

ಗಂಡನೆಂದರೆ ಪ್ರಾಣಗಂಡ ಹೆಣ್ಣೆ ನೀ ಗಂಡನ ಕೂಡಿಕೊಂಡ್ಯಾ
ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ
ಬಾಡೀಗೆ ಬಸವನು ಶಿರಬಾಗಿಕೊಂಡಂತೆ
ಅಧಿಕಾರಿ ನಿನಗವನೊಬ್ಬ ನಿರುತ ದುಡಿದರೆ ಆಶನದ ಹಬ್ಬ
ತಪ್ಪಿ ಬೇನೆ ಬೇಸರವಾಗಿ ಉಸ್ಸೆನ್ನಲಬ್ಬಬ್ಬ
ಏನಾಯ್ತು ಎಂದು ಗಂಟ್ಹಾಕುವ ಹುಬ್ಬ

ಇದು ಹೆಣ್ಣಿಗೆ ಮದುವೆ ಎಂಬುದು ಒಂದು ನೆರಳು ಸಿಕ್ಕಂತೆ ಎಂಬ ನಿಲುವನ್ನೇ ಬಡುಮೇಲು ಮಾಡುತ್ತದೆ. ಇದು ನೆರಳು ನಿಜ ಆದರೆ ಮಂಡೂಕದ ಹೆಡೆಯ ಕೆಳಗಿನ ನೆರಳು ಎಂಬುದಂತು ಸತ್ಯ ಅವಳು ಸದಾ ದುಡಿಯುತ್ತಿರಬೇಕು ಅಪ್ಪಿ ತಪ್ಪಿ ಅವಳು ಬೇಸರಿಕೆ ಬೇನೆ ಎಂದರೆ ಗಂಡನು ಅವಳನ್ನು ಸಹಿಸದಾಗುವನು. ಆದರೆ ಅವಳು ಇಂದು ಇದನ್ನು ದಾಟಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾಳೆ. ಮನೆಗೆ ಸೀಮಿತವಾಗಿದ್ದ ಅವಳ ಬದುಕು ಈಗ ತನ್ನ ಮನೆಯ ನಿರ್ವಹಣೆಗಾಗಿ ಹೊರಗೂ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯಾ ನಂತರದಲ್ಲಿ ಆದ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯು ಅವಳ ಬದುಕನ್ನು ಹೀಗೆ ಬದಲಿಸಿತು ಅಷ್ಟೇ ಅಲ್ಲದೇ ಅವಳ ಕಾರ್ಯ ಕ್ಷೇತ್ರವನ್ನೂ ವಿಸ್ತರಿಸಿತು. ಪುರುಷನಿಗೆ ಸರಿ ಸಮನವಾಗಿ ಜ್ಞಾನ, ಶಿಕ್ಷಣ ಸಾಮರ್ಥ್ಯ ಎಲ್ಲವೂ ಇರುವ ಆಕೆ ಕೇವಲ ಮನೆಗೆ ಮಾತ್ರ ಸೀಮಿತವಾಗದೇ ಜ್ಞಾನ, ಕಾರ್ಯಕ್ಷೇತ್ರವು ವಿಸ್ತಾರಗೊಂಡಿದ್ದರೂ ಮನೆಯನ್ನು ಮೊದಲಿಗಿಂತಲೂ ಚನ್ನಾಗಿ ನಿಭಾಯಿಸುವ ಕಲೆ ಕರಗತವಾಗಿದೆ.

ಸ್ತ್ರೀ ಮಾಡುವಷ್ಟು ಕೆಲಸವನ್ನು ಪುರುಷ ಮಾಡಲಾರ. ಮಾಡಲಾರ ಅಂದರೆ, ಅವನಿಗೆ ಶಕ್ತಿ ಸಾಮರ್ಥ್ಯ ಇಲ್ಲ ಎಂದಲ್ಲ ಗಂಡಸು ಹೊರಗೆ ದುಡಿದು ಬಂದನೆಂದರೆ ಆತ ಮನೆಯ ಕಡೆಗೆ ಜವಾಬ್ದಾರಿಯಿಂದ ನುಸಿಳಿಕೊಳ್ಳುವುದೇ ಹೆಚ್ಚು. ನಮ್ಮಲ್ಲಿ ಇದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕೆಲವು ಕುಟುಂಬಗಳಲ್ಲಿ ಹೊರಗು ದುಡಿಯದ ಗಂಡಸರು ಇರುವುದನ್ನು ಕಾಣುತ್ತೇವೆ. ಆದರೆ ಹೆಣ್ಣು ಇಂದು ಒಳ ಹೊರಗೂ ದುಡಿಯುವ ಯಂತ್ರವಾಗುತ್ತಿದ್ದಾಳೆ. ಆದರೂ ಕುಟುಂಬದಲ್ಲಿ ಅವಳಿಗೆ ಹತ್ತು ಹಲವು ತಾಪತ್ರಯಗಳು, ಅದೆಲ್ಲವನ್ನು ಮೀರಿ ತನ್ನ ಸ್ಥಾನ ಮಾನಗಳನ್ನು ಭದ್ರಪಡಿಸಿಕೊಳ್ಳುವ ಅಗತ್ಯವಿದೆ.

ಇದೆಲ್ಲದರ ಜೊತೆಗೆ ಮಕ್ಕಳ ಲಾಲನೆ-ಪಾಲನೆ ಮಾಡುವುದು ಮುಖ್ಯ ಕೆಲಸಗಳಲ್ಲಿ ಒಂದು, ಹಿಂದೆ ಅವಳು ಕೇವಲ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾಗ ಪುರುಷ ಕೊನೆಯ ಪಕ್ಷ ಹೊರಗೆ ದುಡಿದು ತರುತ್ತಿದ್ದ ಮನೆಯ ಸಂಪೂರ್ಣ ಜವಾಬ್ದಾರಿ ಅವಳು ನಿರ್ವಹಿಸುತ್ತಿದ್ದಳು ಆದರೆ ಬದಲಾದ ಸಂದರ್ಭದಲ್ಲಿ ಅವಳಿಗೆ ಇದೆಲ್ಲಾ ಹೊರೆ ಆಗುತ್ತಿದೆ.
ಆದರೂ ದೈರ್ಯಗೆಡದೇ ಗಂಡಸಿನ ಸಮನಾಗಿ ಎಲ್ಲಾ ರಂಗಕ್ಕೂ ಪಾದಾರ್ಪಣೆ ಮಾಡಿ ಈಗ ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆಗೈದ ಅವಳಿಗಾಗಿ ಒಂದು ದಿನವನ್ನು ಅವಳ ಸಾಧನೆಯನ್ನು ಮೆರೆಸುವ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಳೆದ ಒಂದು ಶತಮಾನದಿಂದ ಆಚರಿಸುತ್ತಾ ಬರಲಾಗುತ್ತಿದೆ. ೧೯೧೧ ರಲ್ಲಿ ಡೆನ್ಮಾರ್ಕ್, ಆಸ್ಟ್ರೀಯಾ,ಜರ್ಮನಿ,
ಸ್ವಿಟ್ಜರ್ಲ್ಯಾಂಡ್ ದೇಶಗಳಲ್ಲಿ ದಶಲಕ್ಷಗಟ್ಟಲೇ ಜನ ಸೇರಿ ಈ ದಿನವನ್ನು ಆಚರಿಸುತ್ತಿದ್ದರು. ಪ್ರಾರಂಭದಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ “ಕೂಲಿ ಚಳವಳಿ”ಯ ಮೂಲಕ(ಲೇಬರ್ ಮೂವ್‌ಮೆಂಟ್) ಉತ್ತರ ಅಮೇರಿಕಾ ಮತ್ತು ಯುರೋಪ್ ನಲ್ಲಿ ಆಚರಿಸಲಾಯಿತು. ಈ ದಿನವನ್ನು ಆಚರಿಸುವ ಮೂಲಕ “ಲಿಂಗ ಸಮಾನತೆ”ಯನ್ನು ರೂಪಿಸುವುದಾಗಿತ್ತು.
ಮಹಿಳೆಯ ಬಹುಮುಖ ಸಾಧನೆಯನ್ನು, ಆಕೆಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಮೀಸಲಾಗಿರಿಸಿದೆ. ಇಷ್ಟಾದರೂ ಗಂಡು ಹೊರಗೆ, ಹೆಣ್ಣು ಒಳಗೆ ದುಡಿಯುತ್ತಿದ್ದ ಕಾಲದಲ್ಲಿ ಅದನ್ನು “ಶ್ರಮ ವಿಭಜನೆ”ಎಂದು ಹೇಳಬಹುದು. ಆದರೆ ಇಲ್ಲೊಂದು ವಿಷಯ ಮರೆಯುವಂತಿಲ್ಲ ಗಂಡಸೇ ಯಾಕೆ ಹೊರಗಿನ ಕೆಲಸವನ್ನು ನಿರ್ವಹಿಸುತ್ತಿದ್ದ ಎನ್ನುವುದಿಲ್ಲಿ ನಿಜಕ್ಕೂ ಚರ್ಚಿಸುವ ವಿಚಾರ. ಇಂದು ಎಲ್ಲಾ ರಂಗದಲ್ಲೂ ಪುರುಷನಿಗೆ ಸಮಾನವಾಗಿ ದುಡಿಯುತ್ತಿರುವ ಅವಳಿಗೆ ವ್ಯವಹಾರ ಜ್ಞಾನ ಇರಲಿಲ್ಲವೇ? ಆದರೂ ಅವಳನ್ನು ನಾಲ್ಕು ಗೋಡೆಯ ನಡುವೆ ಹೊರಗಿನ ವ್ಯಹಾರಗಳಿಂದ ದೂರ ಇರಿಸಿದ್ದು ಮಾತ್ರ ಪುರುಷನ ವ್ಯವಹಾರ ಚತುರತೆಯೇ ಸರಿ

ಲೇಖಕಿ ಡಯೇನ್ ಮೇರಿ ಚೈಲ್ಡರ “ಮಹಿಳೆಯರಲ್ಲಿ ಸೃಷ್ಟಿಸುವ, ಪೋಷಿಸುವ, ಮತ್ತು ರೂಪಾಂತರಿಸುವ ಶಕ್ತಿ ಇದೆ” ಎನ್ನುವ ಮಾತು ಅತಿಶಯೋಕ್ತಿ ಎನಿಸದು. ಇತಿಹಾಸದುದ್ದಕ್ಕೂ ಅವಳ ಸಾದನೆಯನ್ನು ಕಾಣುತ್ತೇವೆ. ಮಹಿಳೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೇ, ಇಂದು ಆರ್ಥಿಕ. ಸಾಮಾಜಿಕ, ರಾಜಕೀಯ ಮತ್ತು ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಇಂಥಹ ಇವಳನ್ನು ಲಿಂಗ ಅಸಮಾತೆಯಂತಹ ಸಮಸ್ಯೆಯಿಂದ ದೂರ ಇಡಲು ಆಗದಿರುವ ದುರಂತ ಸಂದರ್ಭವನ್ನು ಎದುರಿಸುತ್ತಿದೆ-ಪ್ರಪಂಚ.ಆದ್ದರಿಂದ ೧೮/೧೯ನೇ ಶತಮಾದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ. ಇದು ಮತದಾನಕ್ಕೆ, ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಸರಕಾರಿ ವಲಯದಲ್ಲಿಯೂಜಂಡರ್ ಪೇ ಗ್ಯಾಪ್` ಬಗ್ಗೆ ಧ್ವನಿ ಎತ್ತಲಾಗಿದೆ. ಸಮಾನತೆಗಾಗಿ ಹಲವು ಮಹಿಳಾವಾದಿಗಳು ೧೯೭೦/೮೦ ರ ದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ. ಅವಳು ಹೋರಾಡುತ್ತಲೇ ಇದ್ದಾಳೆ ಅವಳ ದೈಹಿಕ, ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಲು ಆಗದಂತೆ.

“ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ಐದು ಮಹಿಳೆಯರಲ್ಲಿ ಒಬ್ಬ ಮಹಿಳೆ ಕೆಲವು ರೀತಿಯ ಮಾನಸಿಕ ಅಸ್ವಸ್ಥತೆಯನ್ನು ಅನುಭವಿಸುತ್ತಾಳೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ,ಧಾರ್ಮಿಕ ರಂಗಗಳಲ್ಲಿ ಲಿಂಗ ತಾರತಮ್ಯ, ಕೌಟುಂಬಿಕ ಹಿಂಸೆ,ಇತರ ಅಂಶಗಳಿಂದಾಗಿ ಮಹಿಳೆಯರು ಮಾಸಿಕ ಆರೋಗ್ಯದಂತಹ ಸಮಸ್ಯೆಗಳಿಂದಾಗಿ ಹೆಚ್ಚು ದುರ್ಬಲರಾಗಿದ್ದಾರೆ. ದೈಹಿಕ, ಮಾನಸಿಕ ಆರೋಗ್ಯದ ಸಮಸ್ಯೆಗಳು ಸಮಾಜಿಕ ಒತ್ತಡಗಳು, ಅವುಗಳ ವಿವರಣೆಯಿಂದ ಅಪಹಾಸ್ಯ ಮಾಡುವ ಮೂಲಕ ತರ್ಕಬದ್ಧಗೊಳಿಸಲಾಗುತ್ತಿದೆ ಮಹಿಳೆ ಎಂಬ ಕಾರಣದಿಂದ ಹೆಚ್ಚು ಋಣಾತ್ಮಕವಾಗಿದೆ. ಎಂದು ಕ್ಲಿನಿಕಲ್ ಸೈಕಾಲಜಿಷ್ಟ್ ರುಚಿ ಶರ್ಮ ಹೇಳುತ್ತಾರೆ.


ಭಾರತಿ ಅಶೋಕ್

2 thoughts on “ಮಹಿಳಾ ದಿನದ ವಿಶೇಷ

Leave a Reply

Back To Top