ಮರಣ ಮೃದಂಗ
ಮ ಫೌಝಿಯ ಬಿ.ಯಸ್
ಸಾವಿನ ಅಂಚಿನಲಿ ನಾವಿದ್ದೇವೆ
ನಾನೂ ಇದ್ದೇನೆ ●●●
ಕರ್ಮ ಕಾಂಡಗಳನು ಮುಗಿಸಿಯೋ, ಮುಗಿಸದೆಯೋ
ನಾನು ಅಂತಿಮ ಯಾತ್ರೆ ಹೊರಡಲಿರುವೆನು●●●
ಕಂಡ ಕನಸು ಕಂಡೋ ,ಕಾಣದೆಯೋ
ನಾನು ಸುಖ ನಿದ್ರೆಗೆ ಜಾರಲಿರುವೆನು ●●●
ಕುಟುಂಬಾದಿಗಳ ಅನುಮತಿ ಇದ್ದೋ ,ಇಲ್ಲದೆಯೋ ,
ಬಾರದ ಲೋಕಕ್ಕೆ
ನಾನು ತೆರಳಲಿರುವೆನು●●●
ಸ್ನೇಹಿತಾದಿ, ಕೈ ಹಿಡಿದವರ ಬಿಟ್ಟವರ , ಹಿಡಿಯುವವರ ಸಮ್ಮುಖದಲ್ಲೋ, ಅಲ್ಲದೆಯೋ
ನಾನು ಸಾಯಲಿರುವೆನು ●●●
ಬೆನ್ನು ತಟ್ಟಿ ಕೊಂಡಾಡಿದವರನ್ನೂ
ಜನ್ಮ ವಿತ್ತ ಮಾತೆಯನ್ನೂ
ಒಡ ಹುಟ್ಟಿದವರ ಮಧ್ಯದಿಂದಲೋ,
ನಾನು ಸಾಯಲಿರುವೆನು●●●
ಪ್ರೀತಿಸಿದವರ ನೆನಪಿನಿಂದಲೋ,
ಮುತ್ತಿಟ್ಟವರ ಸ್ಪರ್ಶದಿಂದಲೋ,
ಮಾತು ಬಿಟ್ಟವರ,
ಮಾತು ಕೆಟ್ಟವರ,
ಕೊಟ್ಟವರ,
ನಡುವಿನಿಂದಲೇ,
ನಾನು ಸಾಯಲಿರುವೆನು●●●
ಅಧಿಕಾರದ ದಾಹದಿಂದಲೋ
ಹಣದ ಮೋಹದಿಂದಲೋ ಬೆನ್ನಾದವರ ಆಸೆಗೂ , ಬೆಳಕಾಗಿ,
ನಾನು ಸಾಯಲಿರುವೆನು●●●
ಬಳಸಿಕೊಂಡವರೆಲ್ಲ… ಉಳಿಸಿಕೊಂಡವರಿಲ್ಲ…
ಸಹಿಸಿಕೊಂಡೆ,
ನಾನದನ್ನೆಲ್ಲ…
ನಾನೂ ಬೆತ್ತಲಾಗಿ, ಸಾಯಲಿರುವೆನು
ಅವಶ್ಯಕತೆ ಇದ್ದವರ
ಅನಿವಾರ್ಯ ವನ್ನ ,ಮುಗಿಸಿಯೋ ,
ಮುಗಿಸದೆಯೋ
ನಾನು ಸಾಯಲಿರುವೆನು●●●
ನನ್ನ ಅಂತಿಮ ದರ್ಶನಕ್ಕೆ ಕಾಯುವ ನನ್ನವರಿಗೆ ಸಿಹಿಯೋ,
ಕಹಿಯೋ ಉಣಬಡಿಸಿ
ನಾನು ಸಾಯಲಿರುವೆನು●●●
ಬೆಳವಣಿಗೆಯನ್ನು ಮೆಚ್ಚಿಕೊಂಡವರ,
ಮೆಟ್ಟಿಕೊಂಡವರಿಗೆ
ಎಲ್ಲವನ್ನಕೊಟ್ಟು,
ನಾನು ಸಾಯಲಿರುವೆನು●●●
ಕಣ್ಣೀರು ,ನೋವು,ದುಃಖ ನೀಡಿದವರ ಪಾಲಿಗೆ ವರ ವಾಗಿಯೋ ,
ಶಾಪವಾಗಿಯೋ,
ನಾನು ಸಾಯಲಿರುವೆನು●●●
ಜವಾಬ್ದಾರಿ ಗಳನು ಮುಗಿಸಿಯೋ ,
ವಹಿಸಿಯೋ ,
ನನ್ನ ದಾರಿಯನು ನಾ ಕಾಣಲಿರುವೆನು●●●
ನನ್ನವರೆಂದು ಅನಿಸಿಕೊಂಡವರ,
ಬಿಟ್ಟಾಕಿದವರ ,
ಬಿಟ್ಟೊದವರ,
ಬೊಟ್ಟು ಮಾಡಿದವರ,
ಪಾಲಿಗೆ ಒಳಿತನ್ನೇ ಬಯಸಿ,
ನಾನು ಸಾಯಲಿರುವೆನು●●●
ಹೇಳಿಯೋ,
ಹೇಳದೆಯೋ,
ಸಲಹೆ ಕೋರಿಯೋ ,
ಮೀರಿಯೋ ,
ನಾನು ಸಾಯಲಿರುವೆನು●●●
ಅದೆಷ್ಟು ಜನರ ಪಾಲಿಗೆ ಬೆಳಕಾಗಿಯೋ ,
ಕತ್ತಲಾಗಿಯೋ ,
ಭಾರವಾಗಿಯೋ ,
ಭಯವಾಗಿಯೋ, ,
ಸ್ನೆಹಿಯಾಗಿಯೋ,
ಪ್ರೇಮಿಯಾಗಿಯೋ,
ತಾಯಿಯಾಗಿಯೋ,
ಗುರುವಾಗಿಯೋ,
ಉಳಿದಿರುವ ,
ಜೀವನದಿಂದ
ನಾನು ದೂರವಾಗಲಿರುವೆನು●●●
ಇರುವಿಕೆ ನನ್ನವರ ಪಾಲಿಗೆ
ಮುಳ್ಳಾಗಿರುವವರಿಗೆ,
ಅವಕಾಶದ ಸಂತೋಷವನ್ನ ಕಲ್ಪಿಸಿ,
ನಾನು ಸಾಯಲಿರುವೆನು●●●
ಇರುವ ಜ್ಞಾನವನ್ನ ಹೊರ ಚೆಲ್ಲಿ
ಮಿಕ್ಕಿದ್ದನ್ನ ಮಣ್ಣು ಪಾಲು ಮಾಡಿ ,
ನಾನು ಮಣ್ಣ ಸೇರಲಿರುವೆನು●
ನಾ ಬೇಡ ,ನಾನೇ ಬೇಕು ಅನ್ನುವವರಿಂದ
ಇಳಿ ಸಂಜೆಯ ಅಸ್ತಮಾನದ0ಗೆ ನಾನು ಅಸ್ತ ಆಗಲಿರುವೆನು ●
ಹುಟ್ಟಿನ ತಪ್ಪಿಗೆ,
ಮರು ಹುಟ್ಟು ಎ0ದೂ ಬಯಸದೆ ,
ಬಾರದ ಲೋಕಕೆ ,
ಬಾಡದೆ,
ನಾನು ಪ್ರಯಾಣ ಬೆಳೆಸಲಿರುವೆನು●●●
ಆದರೆ ●●●
ಸಾವಿನ ಕಣ್ಣೀರ ಕಂಬನಿ ಮಿಡಿಯದಿರಿ,
ಶ್ರದ್ಧಾ0ಜಲಿ ಸಭೆ ಕರೆಯದಿರಿ,
ರಜೆ ಕೊರದಿರಿ,
ಗೋಡೆಗೆ ಮೊಳೆ ಹೊಡೆದು ,
ನೇತಾಡಿಸದಿರಿ,
ನಾನೂ ಸಾಯಲಿರುವೆನು●●●
ದಿನಚರಿ ಪುಸ್ತಕವನ ಹುಡುಕದಿರಿ,
ಯಾರ ಪ್ರೇಮಿಯೂ,ನಾನಲ್ಲ ಪ್ರಿಯಕರನೂ ನನಗಿಲ್ಲ,
ನಾನು ಸಾಯಲಿರುವೆನು●●●
ಎಲ್ಲಿಯೂ ಹುಡುಕದಿರಿ, ನನ್ನನ್ನು ಕಾಯದಿರಿ,
ಉಪ್ಪು,
ರೊಟ್ಟಿ,
ತೆಂಗಿನ ತುಂಡು ನೀಡದಿರಿ,
ಸಾವು ,
ತಿಥಿ,
ತೀರ್ಥ ಎಂದು ಭೋರಿ ಭೋಜನವ ಮಾಡದಿರಿ,
ನಾನು ಸಾಯಲಿರುವೆನು●●●
ಸಾವಿನ ಸಿಹಿ ಸುದ್ದಿಯನ್ನ ಹಂಚದಿರಿ,
ಪ್ರಯಾಣ ವೆಚ್ಚ ಮಾಡದಿರಿ,
ಮುಖ ನೋಡ
ದರ್ಶನಕೆ ,
ಪ್ರಯಾಸ ಪಡೆಯದಿರಿ, ನಿ0ತಲ್ಲೇ ಶುಭ ಕೋರಿ,
ನಾನು ಮರಣ ಹೊಂದಿರುವೆನು●●●
ಅಂತಿಮ ಕೈ ಹಿಡಿಯುವ
ನನ್ನ ಪಾಲಿನ
ವಿಳಾಸವಿಲ್ಲದ ಚೆಲುವ
ನೀರೋ,
ಬೆಂಕಿಯೋ,
ಬೆಟ್ಟದಡಿಯೋ ನಾನರಿಯೇ
ನಾನು ಸಾಯಲಿರುವೆನು●●●
Aವಳೆನ್ನ ಕ್ಷಮಿಸಿ, ಎಂದಾದರೂ ಜೊತೆಯಾಗುವಳೆoಬ ಭರವಸೆಯೊಂದಿಗೆ,
ನಾನು ಸಾಯಲಿರುವೆನು
—————
ಮ ಫೌಝಿಯ ಬಿ.ಯಸ್
Super mam.
Bohath khoob mdm