ಡಾ.ಡೋ ನಾ ವೆಂಕಟೇಶ-ಕವಿತೆ-ಗೆ!

ಕಾವ್ಯ ಸಂಗಾತಿ

ಗೆ!

ಡಾ.ಡೋ ನಾ ವೆಂಕಟೇಶ

ಲೇ,ನಿನ್ನ ಸ್ವಭಾವ ನನಗೆಗೊತ್ತಿಲ್ಲದೇ ಇಲ್ಲ!
ಕಂಡಾಗ ಬೀರುವಾವೋರೆ ನೋಟ, ಕಾಣದಿದ್ದಾಗ ಅದ ಹುಡುಕುವಾಟ ಎಲ್ಲ ನಾ ಬಲ್ಲೆ ಬಾಲೆ ನಿನ್ನ ರೀತಿ-ನೀತಿ,
ಕನಸು-ಮನಸು

ನೆಲ ಕೆರೆವ ನಿನ್ನ ಕಾಲ ಹೆಬ್ಬೆರಳು,ಕೆರೆದಾಗ ಕಾಣುವ ನಿನ್ನ ಮುಡಿಯ ಹೆರಳು
ಕತ್ತೆತ್ತಿ ಕಂಡಾಗ ನನ್ನ ಕಾಣದ ಬಿಂಕ ಎಲ್ಲ ಅಪರಿಚಿತವೇನಲ್ಲ ಗೊತ್ತ !

ನಾನಲ್ಲಿ ಬರುವಾಗ ನೀನೋಡಿ
ಮರೆಯಲ್ಲಿ ನಿಂತ ನಿಲುವು,
ಕೆಂಪು ಕೆನ್ನೆಯಲಿ ಮೂಡುವ
ಚೆಲುವು ನಿನ್ನ ಬೊಗಸೆ ಕಂಗಳ
ಬಸಿಯುವ ಬೆಳಕು
ಹೇಳುವುವು ಎಲ್ಲ ನಿನ್ನ ಗುಟ್ಟು!

ನಾ ಮೆಚ್ಚುವುದೆಲ್ಲ ನಿನ್ನಲ್ಲುಂಟು. ಭಾವ-ಭಂಗಿ
ಶಾಂತಿ-ಕಾಂತಿ
ಮೋಹಕತೆ-ಮುಗ್ಧತೆ.
ಸಾಕಷ್ಟು ಪ್ರಿಯೇ ನನಗೆ
ನಿನ್ನ ನೆನಪಿನ ಸವಿಗನಿಸಿಗೆ!!


Leave a Reply

Back To Top