ವಾಣಿ ಯಡಹಳ್ಳಿಮಠ-ಗಜಲ್

ಕಾವ್ಯ ಸಂಗಾತಿ

ಗಜಲ್

ವಾಣಿ ಯಡಹಳ್ಳಿಮಠ

ಬಂಡೆಗಲ್ಲೊಂದು ಭಾವನೆಗಳನಪ್ಪಳಿಸಿ ಛಿದ್ರಗೊಳಿಸಿದಂತಾಯಿತು
ಕಲ್ಲೊಂದ ಹೊಡೆದು,
ಕನ್ನಡಿಯನು ಚೂರಾಗಿಸಿದಂತಾಯಿತು

ನಲಿದು ,ನಕ್ಕು ಹೊಂಗನಸುಗಳ
ಬಿಂಬ ಹೆಣೆದಿದ್ದೆನಲ್ಲ
ನಿನ್ ಹೊಡೆತಕೆ ನುಜ್ಜುಗುಜ್ಜಾಗಿ
ಕನಸು ಕನಲಿದಂತಾಯಿತು

ನೇಯ್ದು ನಂಬಿಕೆಯ , ನಾ
ಸ್ನೇಹದಂಗಿಯನು ಹೊಲೆದಿದ್ದೆ
ತೇಪೆ ಹಚ್ಚದಷ್ಟು , ನೀ
ಮನಸನು ಹರಿದಂತಾಯಿತು

ಜಗವನೆಂದೂ ನಂಬದ ಜೀವ
ಮುದ್ದಾಗಿ ನಿನ್ಮುಂದೆ ಮಗುವಾಗುತಿತ್ತು
ನೀ ಕೊಟ್ಟ ಏಟಿಗೆ,
ಮುಗ್ಧತೆಯು ರಕ್ತಸಿಕ್ತವಾದಂತಾಯಿತು

ಮಾಡದ ತಪ್ಪಿಗೆ ,
ಮಾಯದ ಗಾಯ ‘ವಾಣಿ ‘
ಎದೆಬಗೆದು ಎನ್ನ ಭಾವನೆಗಳಿಗೆ
ಬೆಂಕಿಯಿಟ್ಟಂತಾಯಿತು..


Leave a Reply

Back To Top