ರಂಗ ಭೂಮಿ
ಡಾ.ಸುಜಾತ.ಅಕ್ಕಿ ವಿರಚಿತ ಜಾನಪದ ನಾಟಕ
ಸೋಲಿಗರ ಬಾಲೆ
ನಾಟಕ-ಸೋಲಿಗರ ಬಾಲೆ
ಲೇಖಕರು-ಡಾ.ಸುಜಾತ.ಅಕ್ಕಿ
ವಿನ್ಯಾಸ ಮತ್ತು ನಿರ್ದೇಶನ-ವಿಕಾಸ್ ಚಂದ್ರ
ಸಂಗೀತ-ನಟರಾಜು.ಹೆಚ್.
ಪ್ರಸಾಧನ-ರೂಪ ಶ್ರೀಕಾಂತ್
ಬೆಳಕು-ಮಧು ಮಳವಳ್ಳಿ
ನೃತ್ಯ-ವಿದುಷಿ ನಾಗಶ್ರೀ
ರಂಗ ನಿರ್ವಹಣೆ- ಗಂಗಾಧರ
ಸಂಚಾಲಕರು-ರಾಧೇಶ್
25/10/2022
7.30 p.m
ರಂಗಶಂಕರ,ಬೆಂಗಳೂರು
: ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶೈವ ಮತ್ತು ವೈಷ್ಣವ ಪಂಥಗಳು ಸಂಘರ್ಷಗೊಂಡು ಶೈವ ವೈಷ್ಣವವಾಗಿವೆ.ವೈಷ್ಣವ ದೈವಗಳು ಶೈವವಾಗಿರುವುದು ಇತಿಹಾಸ.ಈ ದೈವಗಳು ಒಂದೊಂದು ಬುಡಕಟ್ಟಿಗೆ ದೈವವಾಗಿ ಮೌಖಿಕವಾಗಿ ಪರಂಪರೆಯಲ್ಲಿ ಬೆಳೆದು ಬಂದಿವೆ.ಇಂಥ ಬುಡಕಟ್ಟು ಜಾನಪದದಲ್ಲಿ ಸೃಜಶೀಲ ಮನಸ್ಸುಗಳು ದೇವತೆಗಳನ್ನು ತಮ್ಮ ಬದುಕಿನಲ್ಲಿ ಸಂಬಂಧ ಸೃಷ್ಟಿಸಿಕೊಂಡಿವೆ.ದೇವ ಮತ್ತು ಮಾನವರ ಸಂಬಂಧಪಟ್ಟಂತೆ ಸಾಂಸ್ಕೃತಿಕವಾಗಿ ಹಬ್ಬ ಆಚರಣೆ ಭಕ್ತಿಯ ಪರಂಪರೆಯನ್ನು ಹುಟ್ಟು ಹಾಕಿವೆ.
ಒಂದೊಂದು ಬುಡಕಟ್ಟುಗಳು ಆ ಪ್ರಾದೇಶಿಕ ದೈವವನ್ನು ತಂದೆ ಅಣ್ಣ ಭಾವ ಅಳಿಯ ಎಂದು ಬದುಕಿನಲ್ಲಿ ಜೀವನ ಮಾಡುತ್ತಲೇ ಆಚರಣೆ ಮತ್ತು ಸಂಬಂಧವನ್ನು ಬೆಳೆಸಿಕೊಂಡು ಸಂಭ್ರಮದಿಂದ ಅಸ್ಮಿತೆಯನ್ನು ಕಾಪಾಡಿಕೊಂಡು ಬಂದಿರುವುದು ಭಾರತೀಯ ಪರಂಪರೆಯ ದ್ಯೋತಕ.
ಧಕ್ಷಿಣ ಕರ್ನಾಟಕದ ಮೈಸೂರು ಪ್ಯಾಂತದಲ್ಲಿಯ ಹಲವು ಬುಡಕಟ್ಟುಗಳಲ್ಲಿ ಸೋಲಿಗರ ಬುಡಕಟ್ಟು ವಿಶಿಷ್ಟ ಜೀವನ ಶೈಲಿಯ ಸಮುದಾಯ.ಬಿಳಿಗಿರಿ ರಂಗನಾಥ ಬೆಟ್ಟದ ದೈವ ಸೋಲಿಗರ ಬುಡಕಟ್ಟಿಗೆ ದೈವ.ಮತ್ತೆ ತಮ್ಮ ಸಮುದಾಯದ ಹೆಣ್ಣುನ್ನು ವರಿಸಿ ಭಾವನಾಗಿರುವುದು.ಭಾವನಾತ್ಮಕ ಸಂಬಂಧವು ಕಾಡಿನಲ್ಲಿ ದಟ್ಟವಾಗಿದೆ.ಸೋಲಿಗರ ಬುಡಕಟ್ಟು ಹೆಣ್ಣುಮಗಳು ಕುಸುಮಾಲೆಗೆ ಮೋಹಗೊಂಡು ಬಿಳಿಗಿರಿ ರಂಗಯ್ಯನು ತನ್ನ ಭಕ್ತೆ ಎಂದು ಕುಸುಮಾಲೆಯನ್ನು ಕರೆದುಕೊಂಡು ನಗರಕ್ಕೆ ಬರುತ್ತಾನೆ.ಆಗ ರಂಗನ ಪತ್ನಿಯರಾದ ಲಕ್ಷ್ಮಿದೇವಿ ಮತ್ತು ತುಳುಸಮ್ಮರು ಕುಸುಮಾಲೆಯನ್ನು ಕಾಡಿನ ಹೆಣ್ಣು, ಕೀಳು ಕುಲದವಳು,ಕಪ್ಪು ಇದ್ದಾಳೆ ಎಂದು ಜರಿದು ಮನೆಯ ಕೆಲಸಕ್ಕೆ ಕೈ ಆಳು ಎಂದು ಕುಸುಮಾಲೆಯನ್ನು ಪರಿಗಣಿಸುವರು.
ಕುಸುಮಾಲೆಯು ಅವರ ಮನೆಯಲ್ಲಿ ಕೆಲಸ ಮಾಡುತ್ತಲೇ ನಿಮ್ಮ ನಗರ ಸಂಸ್ಕೃತಿ ಆಸೆ ಆಮಿಷದ ಸಂಸ್ಕೃತಿ.ಅಸಂಗ್ರಹದ ತೆಗೆದಿಟ್ಟು ತಿನ್ನವ ಜನ.ನಾವು ಆಗಾಗ ಏನು ಬೇಕೋ ಅಷ್ಟನ್ನು ತಾಜಾವಾಗಿ ತಂದು ಬಳಸುತ್ತೀವೆ.ನಮಗೆ ಆಸೆ ಇದೆ.ಅತೀ ಆಸೆ ನಮ್ಮ ಬುಡಕಟ್ಟಿನಲ್ಲಿ ಇಲ್ಲ ಎನ್ನುವಳು.ನಿಮ್ಮ ಹಾಗೆ ಪ್ರಕೃತಿ ಹಾಳು ಮಾಡಿ ನಾಡುಕಟ್ಟಿಲ್ಲ. ಗಡ್ಡೆ ಕಿತ್ತರೇ ಅಲ್ಲಿಯೇ ಗಡ್ಡೆಯನ್ನು ಭೂಮಿಯಲ್ಲಿ ಮರು ಬೆಳೆಗೆ ಹೂತಿಡುತ್ತೇವೆ.ಪರಿಸರ ಆಧರಿಸಿದ ಬದುಕು ನಮ್ಮದು.ಪರಿಸರ ಸಂರಕ್ಷಣೆಯೇ ನಮ್ಮ ಹೊಣೆ ಎಂದೇ ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ.ಬುಡಕಟ್ಟಿನ ಜನರಿಗೆ ಬದುಕು ಮುಖ್ಯ ಆಸೆ ಮುಖ್ಯವಲ್ಲ ಬುಡಕಟ್ಟಿನ ಜನರನ್ನು ಒಕ್ಕಲೆಬ್ಬಿಸಬೇಡಿ ಎನ್ನುತ್ತಾಳೆ.ಸಂಗ್ರಹಿಸಿಟ್ಟ ತಂಗಳು ಆಹಾರ ತಿನ್ನವುದಿಲ್ಲ ನಾವು.ಆಯಾಯ ಸಂದರ್ಭದಲ್ಲಿ ಏನು ಬೇಕೋ ಅಷ್ಟನ್ನು ಕಾಡಿನಿಂದ ತರುತ್ತೇವೆ.ಇದು ನಮ್ಮ ಜೀವನ ಎಂದು ಸಮರ್ಥನೆಯನ್ನು ಮಾಡಿಕೊಳ್ಳುವಳು ಕಾಡಿನ ಮೂಲ ನೆಲೆಗೆ ಹೋಗುವಳು ಕುಸುಮಾಲೆ.
ಕೆಲವೇ ದಿನಗಳಲ್ಲಿ ಬಿಳಿಗಿರಿ ರಂಗನಾಥನಿಗೆ ಹೊಟ್ಟೆ ನೋವು ವಾಂತಿ ಬೇಧಿ ಆಗಿ ಏನೇ ಔಷಧಿ ನೀಡಿ ಉಪಚಾರ ಮಾಡಿದರೂ ಬಿಳಿಗಿರಿ ರಂಗಯ್ಯನಿಗೆ ಗುಣ ಆಗುವುದಿಲ್ಲ.ಬುಡುಬುಡುಕೆ ಶಕುನ ಹೇಳಿದ ಮೇಲೆ ಹನುಮಂತನನ್ನು ಕರೆಯಿಸಿ ಲಕ್ಷ್ಮಿದೇವಿ ಮತ್ತು ತುಳುಸಮ್ಮರು ಕಾಡಿಗೆ ಹೋಗಿ ಸೋಲಿಗರ ಬಾಲೆ ಕುಸುಮಾಲೆಯನ್ನು ನಮ್ಮದು ತಪ್ಪಾಗಿದೆ.ನಮ್ಮ ಮಾಂಗಲ್ಯ ಭಾಗ್ಯ ಉಳಿಸಮ್ಮ ಎಂದು ದೈನೇಸಿ ಆಗಿ ಬೇಡಿಕೊಳ್ಳುವರು.ಕುಸುಮಾಲೆಯು ತಾನು ಬುಡಕಟ್ಟಿನಲ್ಲಿ ಕಂಡುಕೊಂಡ ಔಷಧಿ ಸಸ್ಯದಿಂದ ಉಪಚಾರ ಮಾಡುತ್ತಾಳೆ.ಬಿಳಿಗಿರಿ ರಂಗನಾಥನು ಗುಣಮುಖವಾಗುವನು.ಲಕ್ಷ್ಮೀ ಮತ್ತು ತುಳಸಮ್ಮರು ನಮ್ಮಲೇ ಇದ್ದು ಜನಪರ ಔಷಧ ಮಾಡಿಕೊಂಡಿರು ಎಂದು ಎಲ್ಲರೂ ಒಂದಾಗುವುದು ನಾಟಕ ಪ್ರದರ್ಶನದ ಕ್ಲೈಮಾಕ್ಸ್.
ಡಾ.ಸುಜಾತ.ಅಕ್ಕಿ