ಡಾ.ದಾನಮ್ಮ ಝಳಕಿ ಕವಿತೆ-ಚಿಗುರೊಡೆಯಲಿ

ಕಾವ್ಯ ಸಂಗಾತಿ

ಚಿಗುರೊಡೆಯಲಿ

ಡಾ.ದಾನಮ್ಮ ಝಳಕಿ

ಬ್ರೂಣದಿಂದ
ಗೆದ್ದು ಬಂದಾಗ
ಬದುಕಬೇಕೆಂಬ
ಬಯಕೆ ಚಿಗುರೊಡೆದಂತೆ

ಅಕ್ಷರಗಳು
ಎದೆಯಲ್ಲಿ
ಮೊಳಕೆಯೊಡದಾಗ
ಕಲಿಕೆ ಆಶೆ ಚಿಗುರೊಡೆದಂತೆ

ಹೆಣ್ಣೆಂದು ಜರಿಯದೇ
ಅವಕಾಶಗಳು ತೆಕ್ಕೆಯಲ್ಲಿದ್ದಾಗ
ಗರ್ವದಿಂದ ತಲೆ ಎತ್ತುವ
ತವಕ ಚಿಗುರೊಡೆದಂತೆ

ಆಡಳಿತದ ಚುಕ್ಕಾಣೆ
ಸಮನಾಗಿ ದೊರೆತಾಗ
ಭರವಸೆಯ ಬೆಟ್ಟ
ಚಿಮ್ಮಿ ಚಿಗುರೊಡೆದಂತೆ

ತಂಪಾದ ಗಾಳಿಯಂತೆ
ಮಣ್ಣಿನ ವಾಸನೆಯಂತೆ
ಬೆಳದಿಂಗಳ ಬಾಲೆಯಂತೆ
ಕಣ್ಣಿನ ಕಂಗಳದಂತೆ
ಚಿಗುರೊಡೆದ ಗುರಿ ಹೆಮ್ಮರವಾಗಲೀ


Leave a Reply

Back To Top