ಅನುವಾದಿತ ಕವಿತೆ
ಎತ್ತರೆತ್ತರಕೇ ಜೀಕಿದೇ ನಾನು
ಮೂಲ ಮರಾಠಿ ಪದ್ಯ—ಕವಿ—ಅರುಣ ಮಾಹ್ಹತ್ರೆ.
.
ಕನ್ನಡ ಅನುವಾದ-—ಶ್ರೀಮತಿ ಸುಲಭಾ ಜೋಶಿ ಹಾವನೂರ .
ಎಳೆಯ ಹೆಜ್ಜೆಗಳಿಗೆ ಇತ್ತು,ಬೆಳದಿಂಗಳು ಹಿಡಿಯುವ ಹುಮ್ಮಸು.
ಉರುಳಿತು ಸೇರು ಹೂಸ್ತಿಲೂಳಗೆ,ದೂರವಾದವು ಗೂಂಬೆಗಳೆಲ್ಲಾ.
ಇತ್ತು ಆಟವಾಡುವ ವಯಸ್ಸು,ಅಂಗಳದ ನೆನಪೇ ನೆನಪು
ಮ್ರದು ಮನದ ಮೂಲೆಯಲ್ಲಿ ಆಕಾದಾಶಯ ತುಂಬಿ ತುಳುಕಿತು.
ಥಟ್ಟನೆ ನಿಂತೆ ಹೂಸ್ತಿಲವೂಳಗೆ,ಕಣ್ಣಿಗೆ ತೋರುತ ನವಪ್ರಭಾತ.
ಅರಿತೇ,ಈ ಜನ್ಮವೇ ಹೂಸತು,ಹಣೆಗೆ ಹಚ್ಚುತ ಕುಂಕುಮ ತಿಲಕ.
ಸಂಪ್ರದಾಯದ ಪುಣ್ಯ ಕಲಶಕೆ,ದೂರೆಯಿತು ಸಖನ ಸೌಖ್ಯದ ಭಾಗ್ಯ.
ಆತನ ಕ್ರುತಾರ್ಥ ಕಣ್ಣಿನ ಹೂಳಪಿಗೆ,ಝಮ್ಮನೆತ್ತರಕೆ ಜೀಕಿದೆ ನಾನು.
ಎತ್ತರೆತ್ತರಕೆ ಜೀಕಿದೆ ನಾನು, ಎತ್ತರೆತ್ತರಕೆ ಜೀಕಿದೆ ನಾನು.
ತೇಲಿತು ದಟ್ಟವಾದ ಮೇಘ, ತುಂಬಿತು ನೀರು ಗಗನದ ತುಂಬ
ವ್ರುತದ ಮಾಲೆಯನ್ನು ಜಪಿಸಿ, ಮನೆಯೇ ಮಂದಿರವಾದ ಕ್ಷಣವು.
ಸವೆದ ಹೆಜ್ಜೆಯ ಗುರುತಿನಿಂದ, ತೇದ ಚಂದನವಾಯಿತು ಜನ್ಮವು.
ಆರತಿಯ ತಟ್ಟೆಯೂಳಗೆ ನೀಲಾಂಜನದ ನಿಷ್ಠೆಯ ಬೆಳಕು
ತುಳಸಿಯ ಅಗಿಯು ನನ್ನದು ಎತ್ತರೆತ್ತರಕೆ ಚಿಗಿಯುತ ಚಿಮ್ಮಿತು
ನಾನೇ ದಾಟಿದೆ ನನ್ನನ್ನು,ನನ್ನೂಂದಿಗೆ ಸದೈವ ಸಖನು
ಹಿಡಿಯುತ ಕೈಯಲ್ಲಿ ಆಕಾಶ,ಝಮ…