ಅಂಕಣ ಸಂಗಾತಿ

ಪ್ರಸ್ತುತ

ಆಚರಣೆ ಅರ್ಥಪೂರ್ಣವಾಗಿರಲಿ

ಆಚರಣೆ ಅರ್ಥಪೂರ್ಣವಾಗಿರಲಿ

ಇನ್ನೇನು ಬಹುತೇಕ ಈ ಸಲದ ಪ೦ಚವಾಣಿ ತಲುಪಿದ ಒಂದೆರಡು ದಿನಗಳಲ್ಲೆ ನಾಗರ ಪಂಚಮಿ ಬ೦ದೇ ಬಿಡ್ತು , ಈ ಮಾಸದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅತ್ಯಂತ ಸಡಗರದಿಂದ ಒಂದಾಗಿ ನಾಗರಕಲ್ಲು ಅರಸಿಕೊ೦ಡು  ಹೋಗಿ ಅಳ್ಳಿಟ್ಟು, ಎಳ್ಳು ಚಿಗಳಿ ,ತಂಬಿಟ್ಟು , ಸಜ್ಜಿ ರೊಟ್ಟಿ . ಕಡ್ಲೆ ಕಾಳು , ಅಳ್ಳು ಎಲ್ಲವನ್ನೂ ಮಕ್ಕಳು ಮುಟ್ಟದಂತೆ  ಶುಧ್ಧಿಯಿಂದ ಮಾಡಿಕೊಂಡು ತಲೆ ಸ್ನಾನ ಮಾಡಿ ಹೊಸ ಸೀರೆ ಉಟ್ಟುಕೊಂಡು ಮಕ್ಕಳೊಂದಿಗೆ ಹೋಗಿ ಆ ಕಲ್ಲಿಗೆ ತಣಿ ಎರೆದು ಪೂಜೆ ಮಾಡಿ ಎಲ್ಲಾ ಸಿಹಿ ಖಾದ್ತಗಳ ನೈವೇದ್ತ ಮಾಡುತ್ತಾರೆ . ನೊತರ ಕೊಬ್ಬರಿ ಬಟ್ಟಲಲ್ಲಿ ಹಾಲು ಹಾಕಿಕೊಂಡು ಆಕಲ್ಲಿ ಎರೆಯುತ್ತಾ …ಅಮ್ಮನ ಪಾಲು , ಅಪ್ಪನ ಪಾಲು , ಗುರುವಿನ ಪಾಲು , ಎಂದು ಇದ್ದವರ , ಇಲ್ಲದವರ ಪಾಲು ಎಲ್ಲರ ಪಲು ಎಂದು ಹಾಕುತ್ತೀರಲ್ಲವೇ ? ಅಲ್ಲಿ ನೋಡಿ ಗೆಳತಿಯರೇ …ಕಲ್ಲು ನೆನೆದು ಕೆಳಗೆ ಹರಿದು , ನೀವು ಎರೆದ ಹಾಲು ಮಣ್ಣಿನ ಪಾಲಾಗುತ್ತಿದೆ . ಹೌದು ತಾನೆ ? ನಿಜ ಹೇಳಿ ನೀವು ಎರೆದ ಹಾಲು ಯಾರ ಪಾಲಾಯಿತೂ ?

        ಅಲ್ಲಿ ಹಳ್ಳಿಗಳಲ್ಲಿ ಹಾಲಿಲ್ಲದೆ ಕೊಳ್ಳಲಾಗದೆ(ಹಳ್ಳಿಗಳಲ್ಲಿ ಹೈನು ಬಹಳ ಅನ್ನೊದು ಆ ಕಾಲ ಈಗೆಲ್ಲ ತುಂಬ ಕಡಿಮೆ) ಕರಿ (ಕಪ್ಪು) ಚಹ ಕುಡಿಯುವ ಜನರಿದ್ದಾರೆ ಅಲ್ಲಿ ಮಗುವಿಗೆ ಅನ್ನ ಕಲೆಸಲು ಹಾಲಿಲ್ಲದೆ ಕಣ್ಣೀರಿಡುವ ಅಮ್ಮಂದಿರಿದ್ದಾರೆ ,ನಿಮ್ಮ ಊರ ಆಸ್ಪತ್ರ‍್ರೆಯಲ್ಲೇ ಹಾಲು ಕಾಣದ ರೋಗಿಗಳಿದ್ದಾರೆ, ಅಂತಹದರಲ್ಲಿ ನಾವು ಹೀಗೆ ಈತರ ಹಾಲು ಎರೆಯುವ, ಅಂತಹ ಆಚರಣೆಯ ನೆವದಲ್ಲಿ ಹಾಲು ಮಣ್ಣಿಗೆ ಚೆಲ್ಲುವುದು ಸರಿಯೆ ?

        ಹೌದು ಇದು ಹಿಂದಿನಿಂದ ಬಂದ ಸಂಪ್ರದಾಯ ಪದ್ದತಿ ಆದರೆ ಇಂದು ನಾವು ವಿಜ್ಞಾನ ಯುಗದಲ್ಲಿದ್ದು ಒಂಚೂರು ವೈಜ್ಞಾನಿವಾಗಿ ಯೋಚಿಸದಿದ್ದರೆ ನಾವು ಮುಂದುವರೆದವರೆAದು ಹೇಳೀಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ ? ಒಂದೆ ಸಾರಿ ತಿರುಗಿ ನೋಡಿ ಅಲ್ಲಿ ನೀವು ಎರೆದ,ಹರಿದ ಹಾಲು ನೆಕ್ಕಿ ನೀವಿತ್ತ ಆ ರುಚಿಯಾದ ಪೌಷ್ಠಿಕವಾದ ಖಾದ್ಯವನ್ನು ನಾಯಿಗಳು ತಿಂದು ಮತ್ತೆ ಹಾಲು ಹಾಕಲು ಬರುವ ಪೆದ್ದು ಹೆಂಗಸರ ದಾರಿ ನೋಡುತ್ತಿವೆ ಅಲ್ಲವೇ ? ಈಗ ಎನು ಅನಿಸುತ್ತೆ ? ನೀವು ಮಾಡಿದ್ದೆ ಸರಿ ಅಂತಾನ ?  ಅಥವಾ ಛೇ! ಅಂತಾನ ? ಹಾಲು ಹಾಕದಿದ್ದರೆ ಏನಾಗುತ್ತೋ ? ಹಾವು ಕಾಡುತ್ತೋ ?, ಕಚ್ಚುತ್‌ತೋ ? ಅನ್ನೊ, ಭಯ ಹಿಂದಿನಿAದ ಬಂದ ಪದ್ದತಿ ಹೇಗೆ ಬಿಡುವುದು ವರ್ಷಕ್ಕೋಮ್ಮೆ ಹಾಲು ಹಾಕಿದರೆನಾಯಿತು ?  ಅನಿಸಿದರೆ ನೀವು ಮೂರ್ತಿಯಾಗದ ಕಲ್ಲು ಅಂತಾಯ್ತು.

                           ಕಲ್ಲ ನಾಗರ ಕಂಡರೆ

                                  ಹಾಲನೆರೆ ಎಂಬರಯ್ಯ

                                  ದಿಟದ ನಾಗರ ಕಂಡರೆ

                                  ಕೊಲ್ಲು ಕೊಲ್ಲೆಂಬರಯ್ಯ…..

         ಬಸವಣ್ಣನವರು ಆಕಾಲಕ್ಕೆ ಅಂದರೆ ೯೦೦ವರ್ಷಗಳ ಹಿಂದೆಯೇ ಈ ಮೂಢ ನಂಬಿಕೆಯನ್ನು ತಡೆಯಲು ಯತ್ನಿಸಿದರೂ ಇಂದಿಗೂ ಆ ಮೌಢ್ಯತೆಯಿಂದ ಹೊರ ಬಂದಿಲ್ಲ ಎನ್ನುವುದು ವಿಷಾದನೀಯ

        ಹೌದು ಹಾಲು ನೆಕ್ಕಿ ಎಲ್ಲಾ ನೈವೆದ್ಯ ತಿನ್ನುವ ನಾಯಿಗೆ ಹಾವು ಏನೂ ಮಾಡುವುದಿಲ್ಲ ಯಾಕೆ ?

                                ಹಸಿದವರಿಗೆ ಅನ್ನವಿಕ್ಕಿ

                                ಅವರುಂಡು ತೇಗಿಬಿಟ್ಟ

                                ತೃಪ್ತಿ ನಿಮ್ಮ ಕಾವುದು

                                ಏನು ಕೊಟ್ಟರೆಸಿಕ್ಕಿತು ಆ

                                ಹಾರೈಕೆ ಹೇಳು ಗುರುದೇವ

           ಹಸಿದವರಿಗೆ ಅನ್ನ ಕೊಡಿ ಬಂದವರಿಗೆ ನೀರು ಕೊಡಿ ಅವರು ತಿಂದು ಕುಡಿದು ತೃಪ್ತಿಗೊಂಡು ಖುಷಿಯಾಗಿ’ ಒಳ್ಳೆಯದಾಗಲಿ ನನ್ನವ್ವ’ ಎನ್ನುವ ಆ ಮನಸು ಅದೇನು ಕೊಟ್ಟರೆ ಸಿಕ್ಕೀತು ಹೇಳಿ…ಆ ಕೊಡುವ ಖುಷಿಗೆ ಸಾಟಿಯೆ ಇಲ್ಲ. ಆ ಧನ್ಯತಾ ಭಾವವೇ ಆರೋಗ್ಯ .

   ಇದೊಂದೆ ಅಲ್ಲ ನಾವು ಮಾಡುವ ಎಲ್ಲಾ ಆಚರಣೆಗಳೂ ಅರ್ಥಪೂರ್ಣವಾಗಿರಬೇಕು ಮುಂದೆ ಬರುವ ದಸರಾ ಹಬ್ಬ……                                                                                                                                                                                                                                                                                                                                                                                                                                                                                                                                                                             

       ಅವಾಗ ಬಹುತೇಕ ಹೆಣ್ಣು ಮಕ್ಕಳು ನಸುಕಿನಲ್ಲೆ ಎದ್ದು , ಹತ್ತು ದಿನಗಳು ಬನ್ನಿ ಗಿಡಕ್ಕೆ ಪೂಜೆ ಮಡಿ ದಿನಾಲು ಒಂದು ಸಹಿ ಅಡುಗೆ ನೈವೇದ್ಯ ಮಾಡಿ ,ಆ ಗಿಡದ ಕೆಳಗಿಟ್ಟು ನಾಲ್ಕೆöÊದು ಸುತ್ತು ಹಾಕಿ  ಏನೋ ಒಂದು ಶಾಂತಿ ಹೊಂದಿದ ಭಾವದಲ್ಲಿ ಬರುತ್ತಾರೆ . ಅವರಿನ್ನು ಮನೆ ಮುಟ್ಟಿರುವುದಿಲ್ಲ ನಾಯಿ ಹಂದಿಗಳು ಆ ಸಿಹಿ ತಿಂದು ಉಚ್ಚೆ  ಮಾಡಿ ಮರುದಿನದ ನಸುಕಿಗಾಗಿ ಕಾಯುತ್ತವೆ . ಏನಿದೆಲ್ಲಾ ?

       ಒಂದು ವಿಚಾರ , ಬನ್ನಿ ಗಿಡದ ಕೆಳಗೆ ಪಾಂಡವರು ತಮ್ಮ ಆಯುಧಗಳನ್ನು ಅಡಗಿಸಿಟಿದ್ದ್ಟರೆಂದು ಪ್ರತೀತಿ , ಅದಕ್ಕೆ ಅದನ್ನು ಪೂಜಿಸಿ ತಮ್ಮ ಆಯುಧಗಳನ್ನು  ಇಷ್ಟು ದಿನ ಕಾಯ್ದದಕ್ಕೆ ಕೃತಜ್ಞತೆ ತೋರಿರಬಹುದು . ನಸುಕಿನಲ್ಲಿ ಒಳ್ಳೆ ಶುಧ್ಧ ವಾತಾವರಣದಲ್ಲಿ ಗಿಡ ಸುತ್ತುವದರಿಂದ ಶುಧ್ಧ ಆಮ್ಲಜನಕ ದೊರೆತು ಆರೋಗ್ಯ ಸುದಾರಿಸುವುದು . ಸುತ್ತುವ ನಡಿಗೆಯಿಂದ ವ್ಯಾಯಾಮ ವಾಗುವುದು . ಬೇಗ ಏಳುವ ಅಭ್ಯಾಸವಾಗುವುದು . ಮೌನವಾಗಿ ಬಂದು ಹೋಗುವುದರಿಂದ ಶಕ್ತಿ ಸಂಗ್ರಹವಾಗುವುದು . ಈ ವ್ರತದ ಅನುಕೂಲತೆಗಳು ಇದ್ದಾವು .

       ಇದು ಹೋಗ್ಲಿ ಬಿಡಿ , ಕೊನೆಯ ದಿನ ಅಂದರೆ ವಿಜಯದಶಮಿಯ ಹತ್ತನೆಯ ದಿನ ಬಹುತೇಕರು ಬನ್ನಿಗಿಡಕ್ಕೆ ಸೀರೆ ಉಡಿಸಿ ಪೂಜಿಸಿ ವ್ರತ ಸಂಪನ್ನಗೊಳಿಸುತ್ತಾರೆ . ಇದೆಂತಹ ಮೌಢ್ಯ ? ಕಳೆದ ವರ್ಷ ಉಡಿಸಿದ ಸೀರೆ ಬಿಸಿಲು ಗಾಳಿ ಮಳೆಗೆ ಸುಟ್ಟು ಸವೆದು ಹರಿದು ಹಾಳಾಗಿದೆ . ಮತ್ತೆ ಈಗ ಹೊಸ ಸೀರೆ .

ಮನೆಯಲ್ಲಿ ಅತ್ತೆ ಅಥವಾ ಅಮ್ಮ ಹರಿದ ಸೀರೆ ಕಾಲಿಗೆ ತೊಡರಿ ಎಡವಿದ್ದು ಕಾಣುವುದಿಲ್ಲ , ತಲೆಯ ಮೇಲೆ ಸೆರಗು ಹರಿದು ಬಿಳಿ ತಲೆ ನಗುವುದು ಕಾಣುವುದುಲ್ಲವೇ ? ಅದು ಬಿಡಿ ಎಲ್ಲಾ ಸರಿ ಇದೆ . ಮನೆಗೆ ಹಾಲು ತರುವ ಅಜ್ಜಿ ಯ ಹರಿದ ಸೀರೆ , ಅವಳ ಜೊತೆ ಬರುವ ಆ ಹುಡಿಗಿಯ ಹರಿದ ಅಂಗಿ ಕಾಣುವುದಿಲ್ಲವೇ ? ಅವರಲ್ಲಿ ಒಬ್ಬರಿಗೆ  ಆ ಬಟ್ಟಿ ಕೊಟ್ಟರೆ …? ಅನುಕೂಲವಾಗುತ್ತಲ್ಲವಾ ?  ಗೆಳತಿಯರೇ ನಾನು ವೇದಾಂತ ಹೇಳುತಿಲ್ಲ ಸತ್ಯ ಅನಾವರಣಗೊಳಿದೆ ಅಷ್ಟೆ ,

         ಬದಲಾಗೋಣ ಗೆಳತಿಯರೇ …ಸರಿ ತಪ್ಪುಗಳ ಪರಾಮರ್ಶಿಸಿ ನಡೆಯೋಣ . ಏನಂತೀರಿ ?

                             ಕಲ್ಲು ದೇವರೂ ದೇವರಲ್ಲ

                              ಮಣ್ಣು ದೇವರು ದೇವರಲ್ಲ

                              ಮರ ದೇವರು ದೇವರಲ್ಲ …..

                              ತನ್ನ ತಾನರಿದು ತಾನಾರೆಂದು ತಿಳಿದೊಡೆ

                             ತಾನೆ ದೇವ ಅಪ್ರಮಾಣ ಕೂಡಲ ಸಂಗಮದೇವ .


                                                  ನಿಂಗಮ್ಮ ಭಾವಿಕಟ್ಟಿ

                                                           .

ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ  ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.

One thought on “

  1. ಚಿಂತನೆಗೆ ಹಚ್ಚುವ ಉತ್ತಮ ಬರಹ..ನಮ್ಮ ಮಹಿಳೆಯರು ಅರಿತುಕೊಳ್ಳಬೇಕು

Leave a Reply

Back To Top