ನಾ ನೆಂಬ ಭ್ರಮೆಯಲ್ಲಿ.

ಪ್ರಬಂಧ

ನಾ ನೆಂಬ ಭ್ರಮೆಯಲ್ಲಿ.

  ಜ್ಯೋತಿಡಿ.ಬೊಮ್ಮಾ

Disaster patriarchy: how the pandemic has unleashed a war on women | Women  | The Guardian

ಪೇಪರ್ ನಲ್ಲಿ ಸುಪರ್ ಉಮನ್ ಸಿಂಡ್ರೋಮ್ ಕುರಿತ ಲೇಖನ ಓದಿದಾಗ ನನಗನಿಸಿದ್ದು , ನಾವು ಎಲ್ಲವನ್ನೂ ಮೈಮೇಲೆಳೆದುಕೊಂಡು ನಮಗೆ ನಾವೆ ನಿರ್ಭಂದಿಸಿಕೊಂಡು ಬಿಟ್ಟಿದ್ದೆವೆ .ಜವಾಬ್ದಾರಿಗಳನ್ನು ಮಹಿಳೆಯರು ಗೀಳಾಸಿಕೊಳ್ಳುತಿದ್ದಾರೆ. ಪರ್ಫೆಕ್ಟ್ ಎನಿಸಿಕೊಳ್ಳುವ ವ್ಯಸನ ಒಂದು ರೀತಿಯ ಮಾನಸಿಕ ಖಿನ್ನತೆಗೆ ದೂಡುತ್ತಿದೆ. ಹೆಣ್ಣಿಗೆ ಮನೆಯ ಒಳಗೂ ಹೊರಗು ಸರಿದೂಗಿಸಿಕೊಂಡು ಹೋಗುವ ಕೆಲಸ ಸವಾಲಿನದು. ಈಗ ಬಹುತೇಕ ಸ್ತ್ರೀಯರು ವರ್ಕಿಂಗ್ ವುಮನ್ ಗಳು.ಎಲ್ಲರಿಗೂ ತಮ್ಮ ಕರಿಯರ್ ನದೇ ಚಿಂತೆ . ಮಹತ್ವಾಕಾಂಕ್ಷಿ ಗಳು , ತಾವು ಮುನ್ನಲೆಗೆ ಬರಬೇಕೆಂಬ ಹಠ. ಇವುಗಳೊಂದಿಗೆ ಮನೆಯ ಭಾದ್ಯತೆಗಳನ್ನು ನಿಭಾಯಿಸಬೇಕು.

ಆಗ  ಅಡುಗೆ  , ಮನೆ ಮಕ್ಕಳನ್ನು ನೋಡಿಕೊಳ್ಳುವದು ಹೆಣ್ಣಿನ ಕೆಲಸ ಮಾತ್ರ ಎಂಬಂತೆ ಭಾವಿಸಲಾಗುತಿತ್ತು. ಈಗ ಪುರುಷರು ಅಡುಗೆ ಮಾಡಲು ಒಲವು ತೋರುತಿದ್ದಾರೆ. ತಂದೆತನ ಅನುಭವಿಸುತ್ತ ಮಕ್ಕಳನ್ನು ನೋಡಿಕೊಳ್ಳುತಿದ್ದಾರೆ. ದುಡಿಯುವ ಹೆಂಡತಿಗೆ ಸಪೋರ್ಟ್ ಮಾಡುವ ಪುರುಷರು ಇರುವರು .ಇದಕ್ಕೂ ಮೀರಿ ಹೆಣ್ಣಿಗೆ ಮನೆ ಮಕ್ಕಳ ಜವಾಬ್ದಾರಿ ಹೆಚ್ವಿಗೆ ಇರುತ್ತದೆ.ಅವಳು ಸುಲಭವಾಗಿ ಇದನ್ನು ಯಾರಿಗೆ ವಹಿಸಲಾರಳು.ಗಂಡ ಮನೆ ಮಕ್ಕಳ ಯೋಗಕ್ಷೇಮ ದ ಜವಾಬ್ದಾರಿ ಹೆಣ್ಣಿನದೆ ಎಂಬ ಸಂಪ್ರದಾಯಕ್ಕೆ ಅವಳು ತನಗರಿವಿಲ್ಲದೆ ಒಗ್ಗಿಕೊಂಡಿರುತ್ತಾಳೆ.ತನಗೆಷ್ಟೆ ಕಷ್ಟವಾದರು ಅವಳಿಗೆ ಇದರಿಂದ ಹೊರಬರಲಾಗದು. ತನಗಿಂತ ಚನ್ನಾಗಿ ತನ್ನ ಮನೆ ಗಂಡ ಮಕ್ಕಳನ್ನು ಮತ್ತಾರೂ ನೋಡಿಕೊಳ್ಳರು ಎಂದು ಬಲವಾಗಿ ನಂಬಿರುತ್ತಾಳೆ. ಉದ್ಯೋಗ ಮತ್ತು ಮನೆಯ ಜಂಜಡಗಳನ್ನು ನಿಭಾಯಿಸುತ್ತ ಅದರಲ್ಲಿ ಕಳೆದುಹೊಗಿರುತ್ತಾಳೆ.

ಎಷ್ಟೋ ಜನ ಮಹಿಳೆಯರು ಗಂಡನಿಗೆ ಯಾವ ಕೆಲಸ ಮಾಡಗೊಡದೆ ಮನೆವಾರ್ತೆ ಪೂರ್ಣ ತಾವೊಬ್ಬರೆ ನಿಭಾಯಿಸುತ್ತಾರೆ.ಅವನ ಸಂಬಳದ ಹಣ ಪೂರ್ಣ ವಾಗಿ ಅವಳಿಗೊಪ್ಪಿಸಬೇಕು ಅಷ್ಟೆ. ಇಲ್ಲಿ ತಾನೆ ಹೆಚ್ಚು ಪ್ರಜ್ಞೆ ಉಳ್ಳವಳು ಎಂಬ ಭಾವನೆ ಬೆಳೆಯತೊಡಗಿ ತನ್ನ ನಿರ್ಣಯ ವೇ ಸೂಕ್ತ ವಾಗಿರುತ್ತದೆ ಎಂದು ಗಂಡನಿಗೆ ನಂಬಿಸುತ್ತಾಳೆ . ಹೇಗೋ ಅವಳೆ ಎಲ್ಲಾ ನಿಭಾಯಿಸುತ್ತಿರುವಳೆಂದು ಗಂಡ ಎಲ್ಲವನ್ನೂ ಅವಳ ಮೇಲೆ ಬಿಟ್ಟು ನಿರಾತಂಕ ನಾಗುತ್ತಾನೆ.ಇವಳು ತಾನಾಗೇ ಎಲ್ಲವೂ ಮೈಮೇಲೆ ಎಳೆದುಕೊಂಡು  ಒತ್ತಡವನ್ನಭವಿಸುತ್ತಾಳೆ.ಈ ಒತ್ತಡಕ್ಕೆ ಮುಖ್ಯ ಕಾರಣ ತಾನಲ್ಲದೆ ಇವನ್ನೆಲ್ಲ ಮತ್ತಾರೂ ನಿಭಾಯಿಸಲಾರರೆಂಬ ಅನಿಸಿಕೆ. ಮತ್ತು ತಾನು ಮಾತ್ರ ಎಲ್ಲವೂ ಸರಿತೂಗಿಸಬಲ್ಲೆನೆಂಬ  ಭ್ರಮೆ.

ಹೆಣ್ಣಿನ ಬಗ್ಗೆ ಇರುವ ಸಮಾಜದ ಗ್ರಹಿಕೆಯು ಕೆಲವೊಮ್ಮೆ ಹೆಣ್ಣು ಮಕ್ಕಳು ಅತಿ ದುಡಿಯುವಂತೆ ಮಾಡುತ್ತದೆ. ಕಸ ಮುಸುರೆ ಪಾತ್ರೆ ತೊಳೆಯುವದು ಬಟ್ಟೆ ಒಗೆಯುವದು ಗಂಡು ಮಾಡುತಿದ್ದರೆ ವ್ಯಂಗವಾಡುವ ಸಮಾಜದಲ್ಲಿ ಹೆಂಡತಿಯರು ಗಂಡನಿಗೆ ಈ ಕೆಲಸ ಹೇಳಲು ಮಜುಗರ ಅನುಭವಿಸುತ್ತಾರೆ.ಹೊರಗೆ ದುಡಿಯುವ ಮಹಿಳೆಯರು ಮನೆಗೆ ಬಂದ ಮೇಲೂ ಈ ಕೆಲಸಗಳು ಅವರೇ ಮಾಡಬೇಕು.  ಮಗ ಸೊಸೆಗೆ ಅಡುಗೆಮನೆಯಲ್ಲಿ ಸಹಾಯ ಮಾಡುವದು ತಾಯಿಯಾದವಳಿಗೆ ಸಹಿಸದ ವಿಷಯ ,     ಗಂಡ  ನಿಂದ ಈ ಕೆಲಸಗಳನ್ನು ಮಾಡಿಸಲು ಹೆಂಡತಿಯರು ಮಜುಗುರ ಅನುಭವಿಸುವದರಿಂದ ಹೊರಗೆ ಮತ್ತು ಮನೆಯೊಳಗಿನ ದುಡಿತ ಅವರನ್ನು ಹೈರಾಣಾಗಿಸುತ್ತದೆ.

ಇದು ಉದ್ಯೋಗಸ್ಥ ಮಹಿಳೆಯರ ಸಮಸ್ಯೆಯಾದರೆ ಮನೆಯಲ್ಲೇ ಇರುವ ಗೃಹಿಣಿ ಯರದು ಬಿಡುವಿಲ್ಲದ ದುಡಿತ. ಗಂಡನ ಯೋಗಕ್ಷೇಮ ನೋಡಿಕೊಳ್ಳುವದೇ ಪರಮ ಗುರಿ ಎಂಬಂತೆ ವರ್ತಿಸುವ ಇವರು ಮುಂಜಾನೆ ಗಂಡನ ಬ್ರಷಿಗೆ ಪೇಸ್ಟ ಅಂಟಿಸಿ ಕೊಡುವದು , ಸ್ನಾನಕ್ಕೆ ನೀರು ಬೆರೆಸುವದು ತಿಂಡಿ ಊಟ ಮಾತ್ರೆ  ರಾತ್ರಿ ಮಲಗುವ ವರೆಗೂ ಎಟ್ ಯುವರ್ ಸರ್ವಿಸ್ ಎಂಬಂತೆ ನಿರಂತರ ಅವರ ಹಿಂದೆ ಇರುತ್ತಾರೆ. ಹೀಗೆ ನಿರಂತರ ಗಂಡ ಮಕ್ಕಳ ಕೆಲಸಗಳನ್ನೆಲ್ಲ ತಾವೇ ಮಾಡುತ್ತ ಅವರನ್ನು ಪರಾವಲಂಬಿ ಗಳನ್ನಾಗಿ ಮಾಡುತ್ತಿದ್ದೆವೆ. ಒಂದು ಕ್ಷಣವೂ ಅವಳಿರದೆ‌ ನಡೆಯದು ಎಂಬಂತೆ ವರ್ತಿಸುವ ಮನೆಯವರು ,ಮತ್ತು ಇವಳು ಅದೆ ತನ್ನ ಸಾಧನೆ ಎಂಬಂತೆ ಜೀವನವೆಲ್ಲ ಅದರಲ್ಲೆ ಮುಳುಗಿಬಿಡತ್ತಾಳೆ. ಒಂದು ದಿನ ಮನೆ ಬಿಟ್ಟು ಇರುವದೆಂದರು ಆಗದಂತೆ ತನ್ನನ್ನು ತಾನು ಸಂಪೂರ್ಣ ನಿರ್ಭಂದಿಸಿಕೊಂಡು ಬಿಟ್ಟಿರುತ್ತಾಳೆ.

ಒಂದು ದಿನವು ತಾನಿಲ್ಲದೆ ತನ್ನವರು ಹೇಗಿರುತ್ತಾರೆಂಬುದೆ ಚಿಂತೆ. ಕೆಲದಿನ ಊರಿಗೆ ಹೋದರು ಮನೆಯವರದೆ ಚಿಂತೆ. ತಾನಿಲ್ಲದೆ ಅವರನ್ನು ನೋಡಿಕೊಳ್ಳುವರಾರು ಎಂಬ ತಳಮಳ ,  ನಾವು ತಿಳಿದುಕೊಂಡತೆ ಯಾವ ತಾಪತ್ರಯವೂ ಇರದೆ ಚನ್ನಾಗೆ ಇರುತ್ತಾರೆ. ಅವರು ನನ್ನನ್ನು ಅವಲಂಬಿಸಿರುವರು  ಎಂಬುದಕ್ಕಿಂತ ನಾನೆ ಅವರನ್ನು ಒಂದು ದಿನವೂ ಬಿಡಲಾರದಂತೆ ಅವಲಂಬಿಸಿರುವೆವು  ಎನ್ನುವ ಸೂಕ್ಷ್ಮ ಅರ್ಥಮಾಡಿಕೊಳ್ಳಬೇಕು. ಇದು ನಮ್ಮ ದುರ್ಬಲತೆಯಾಗಲು ಬಿಡಬಾರದು.

ಸ್ಕೂಲ್ ಕಾಲೇಜಿಗೆ ಹೊಗುವ ಮಕ್ಕಳಿಗೂ ತುತ್ತು ಮಾಡಿ ತಿನ್ನಿಸುವ ತಾಯಂದಿರಿರುತ್ತಾರೆ. ಮಕ್ಕಳಿಗೆ ಯಾವ ಕೆಲಸವೂ ಹೇಳದೆ ಸದಾ ಅವರು ಓದುತ್ತಲೇ ಇರಬೆಕೆಂದು ಬಯಸುತ್ತ ಅವರು ಕುಳಿತ ಜಾಗ ಬಿಡದಂತೆ ಅವರ ಎಲ್ಲಾ ಕೆಲಸ ತಾನೆ ನಿರ್ವಹಿಸುತ್ತಾರೆ. ಇದೆ ರೂಢಿಯಾದ ಮಕ್ಕಳು ಮನೆಯ ಯಾವ ಕೆಲಸ ಮಾಡದೆ ಮನೆಯ ಯಾವ ಜವಾಬ್ದಾರಿಯ ಅರಿವಿರದೆ ಬೆಳೆಯುತ್ತವೆ.ವಿದ್ಯಾಭ್ಯಾಸಕ್ಕಾಗಿ ಅಥವಾ ಇನ್ನಾವದೇ ಸಂದರ್ಬದಲ್ಲಿ ಮನೆಯಿಂದ ದೂರವಿರಬೇಕಾದ ಸಂದರ್ಬದಲ್ಲಿ ಹೋಮ್ ಸಿಕ್ ನೆಸ್ ಗೆ ಒಳಪಡುತ್ತವೆ. ಅವರ ಕೆಲಸಗಳನ್ನು ಅವರಿಗೆ ಮಾಡಲು ಬಿಟ್ಟು ಮಕ್ಕಳನ್ನು ಸ್ವಾವಲಂಬಿಯನ್ನಾಗಿ ಬೆಳೆಸುವದು ಅತಿ ಅವಶ್ಯಕ.

ತಾನಿಲ್ಲದೆ ಒಂದು ಕ್ಷಣವೂ ನಡೆಯದು ಎಂಬ ಭ್ರಮೆಯಲ್ಲಿರುವ ಹೆಣ್ಣು ಮಕ್ಕಳು ಕೆಲವು ದಿನ ಮನೆ ಗಂಡ ಮಕ್ಕಳಿಂದ ದೂರವಿದ್ದು ನೋಡಬೇಕು. ಎಲ್ಲಿ ಏನು ಬದಕಲಾಗದು.ಎಲ್ಲರ ಜೀವನ ಹಾಗೇಯೇ ಸಾಗುತ್ತಿರುತ್ತದೆ. ಈ ಸತ್ಯ ಗೊತ್ತಿರುವದೆ ಆದರೂ ತಾನೆಷ್ಟು ಅನಿವಾರ್ಯ ವೆಂದುಕೊಂಡ ಅನುಭೂತಿ ಬಿಡಲಾಗದು.

ಹೆಣ್ಣು ಗಂಡ ಮನೆ ಮಕ್ಕಳನ್ನು ನೋಡಿಕೊಳ್ಳುವದರಲ್ಲಿ ಒಂದು ಸಾರ್ಥ್ಯಕ್ಯ ಕಾಣುವದು ಸಹಜ.ಆದರೆ ತನ್ನತನವನ್ನೆಲ್ಲ ಬದಿಗಿಟ್ಟು ಜೀವನವೆಲ್ಲ ಇದಕ್ಕೆ ಮುಡಿಪಾಗಿಡುವದು ಎಷ್ಟು ಸರಿ..! ಮದುವೆ ಆದ ತಕ್ಷಣ ಹೆಂಡತಿಯಾಗಿ ಸೊಸೆಯಾಗಿ ತಾಯಿಯಾಗಿ ಎಲ್ಲರ ಅಪೇಕ್ಷೆಗಳನ್ನು ತಣಿಸುವದೆ ಅವಳ ಕರ್ತವ್ಯ ವೇ. ಎಲ್ಲರಿಗೂ ಒಳ್ಳೆಯವಳಾಗಿರಬೆಕೆಂಬ ನಿಟ್ಟಿನಲ್ಲಿ ಅವಳತನವೆಂಬುದು ಎಲ್ಲೋ ಮಾಯವಾಗಿರುತ್ತದೆ.

ಮನೆಯಲ್ಲಿ ಮತ್ತು ಹೊರಗೆ ದುಡಿದು ಪರಿಪೂರ್ಣ ಎನಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯು ಸುಪರ್ ಉಮನ್ ಸಿಂಡ್ರೋಮ್ ನ ಮುಖ್ಯ ಲಕ್ಷಣ.ಯಾರು ಯಾವ ಕೆಲಸ ಮಾಡಿದರು ಇಷ್ಟವಾಗದೆ ಎಲ್ಲವನ್ನೂ ತಾನು ಮಾಡಿದರೆ

 ಮಾತ್ರ ಸರಿಯಾಗಿರುತ್ತದೆಂಬ ಗೀಳು ಅಂಟಿಸಿಕೊಂಡಿರುತ್ತಾಳೆ. ಎಲ್ಲರಿಗೂ ಅವರವರದೆ ಆದ ಭಾದ್ಯತೆಗಳಿರುತ್ತವೆ. ಮಾನಸಿಕವಾಗಿ ಸದೃಢ ವಾಗಿರುವ ಹೆಣ್ಣುಮಗಳು  ದೈಹಿಕವಾಗಿ ಸ್ವಲ್ಪ ದುರ್ಬಲಳಾಗಿರುವದು ಒಪ್ಪಿಕೊಳ್ಳಬೇಕು.ತನ್ನ ಸಾಮರ್ಥ್ಯ ಮೀರಿದ  ದುಡಿತ ಆರೋಗ್ಯ ಕ್ಕೆ ಮಾರಕ. ಎಲ್ಲರನ್ನೂ ಮೆಚ್ಚಿಸುತ್ತ ಇತರರಿಗೋಸ್ಕರ ಬದುಕುವದನ್ನು ವ್ಯಸನ ಮಾಡಿಕೊಂಡ ಹೆಣ್ಣು ಇದರಿಂದ ಹೊರಬರುವ ಪ್ರಯತ್ನ ಮಾಡಬೇಕು.ಬಿಟ್ಟೆನೆಂದರು ಬಿಡದ ಈ ಸಂಸಾರದ ಮಾಯೆಯಲ್ಲಿ ನಮ್ಮನ್ನು ನಾವು ಸಿಕ್ಕಿಸಿಕೊಂಡು ಗೊಣಗುತ್ತ ಬದುಕುತ್ತೆವೆ. ಎಲ್ಲವನ್ನೂ ತನ್ನ ಮೈಮೇಲೆಳೆದುಕೊಂಡು ಬದುಕುವದಕ್ಕಿಂತ ಅವರವರ ಜವಾಬ್ದಾರಿ ಗಳನ್ನು ಅವರಿಗೆ ವಹಿಸುವದು ಒಳಿತು.ಸಂಸಾರಕ್ಕೆ ನಾನೊಬ್ಬ ಮುಖ್ಯ ವ್ಯಕ್ತಿಯೇ ಹೊರತು ತಾನೇ ಎಲ್ಲಾ ಎಂಬ ಭ್ರಮೆ ಬೇಡ.


  ಜ್ಯೋತಿ ಡಿ.ಬೊಮ್ಮಾ.

3 thoughts on “ನಾ ನೆಂಬ ಭ್ರಮೆಯಲ್ಲಿ.

  1. ಹೆಚ್ಚು ಕಡಿಮೆ ಎಲ್ಲಾ ಹೆಣ್ಣು ಮಕ್ಕಳು ಹೀಗೇ ಇರುತ್ತಾರೆ. ಆದರೇ ಅವರ ಆರೋಗ್ಯ ಚೆನ್ನಾಗಿರುವ ತನಕ ನಡೆಯುತ್ತದೆ ಆಮೇಲೆ…? ನಮ್ಮ ಹೆಣ್ಣು ಮಕ್ಕಳು ಅತೀ ಭಾವುಕತೆಯಿಂದ ಹೊರಬಂದು ಉಳಿದವರಿಗೂ ಜವಾಬ್ದಾರಿಯನ್ನು ಕಲಿಸಿದರೆ ಎಲ್ಲರಿಗೂ ಒಳ್ಳೆಯದು. ಚೆನ್ನಾಗಿದೆ ಮೇಡಂ ಲೇಖನ.

  2. ತಾವು ಮೊದಲೇ ಹೇಳಿದಂತೆ ಗೃಹಿಣಿಗೆ ಇದೊಂದು ಸಿಂಡ್ರೋಮವೇ ಸರಿ, ಕೆಲಸ ಹಂಚಿಕೊಳ್ಳುವಾಗಲು ಹೆಣ್ಣು ಮಕ್ಕಳಲ್ಲಿ ಹಂಚಿಕೊಳ್ಳುತ್ತಾಳೆ, ಪುಣ್ಯ ಮದುವೆ ಮುಂಜಿ ದೊಡ್ಡ ಕಾರ್ಯಕ್ರಮದ ಅಡುಗೆ ಬಿಟ್ಟು.

    ಉಳಿದಂತೆ ಈ ಬದುಕಿಗೆ,‌ಕುಟುಂಬಕ್ಕೆ ಎಲ್ಲಾ ವಯಸ್ಸಿನಲ್ಲಿ ನನ್ಮದೆ ಜವಾಬ್ದಾರಿ ಎನ್ನುವ ಮನಸ್ಥಿತಿ ಅವಳದು, ವರ್ಕಿಂಗ್ ವುಮನ್ ‌ಆದರೂ‌ ತಪ್ಪಿಲ್ಲ .

    ಚಿಂತನೆಗೆ‌ ಹಚ್ಚುವ ತಮ್ಮ ಬರಹಕ್ಕೆ, ತಮಗೂ ಧನ್ಯವಾದಗಳು.

Leave a Reply

Back To Top