ಗಜಲ್

ಗಜಲ್

ಉಕ್ಕಿದ ಹಾಲು ತಣ್ಣಗಾಯಿತು ನೋಡು
ಸೊಕ್ಕಿದ ಮನವು ತೆಪ್ಪಗಾಯಿತು ನೋಡು

ಜಗದ ನಿಯಮವ ಅಲ್ಲಗಳೆಯಲು ಸಾಧ್ಯವೇ
ಮೃಗದ ಹೃದಯ ಮೆತ್ತಗಾಯಿತು ನೋಡು

ಅಗಲಿದ ಬಂಧಗಳು ಕೂಡಿದ ನಿದರ್ಶನವಿದೆ
ಸೊಗದ ಕಕ್ಕಡವು ಕಪ್ಪಗಾಯಿತು ನೋಡು

ತೈಲದ ಪ್ರಣತೆಯ ಬೆಳಕಾಗಿ ಬಾಳುತಿರು
ಪಾಲಿನ ಕಾಳದು ತುತ್ತಿಗಾಯಿತು ನೋಡು

ಸ್ವಾರ್ಥ ಜೀವನದ ಅಭಿನವನ ತಿಲಾಂಜಲಿ
ವ್ಯರ್ಥ ಬದುಕು ಮಣ್ಣಿಗಾಯಿತು ನೋಡು

ಶಂಕರಾನಂದ ಹೆಬ್ಬಾಳ

Leave a Reply

Back To Top