ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ʼಜಗದ ಬೆಳಕುʼ

ಅಮ್ಮ ನಿನ್ನ ತೋಳಿನಲ್ಲಿ
ಮಲಗುವಾಸೆ ನನ್ನದು
ನನ್ನ ತಲೆಯ ಸವರಿಕೊಂಡು
ಲಾಲಿ ಹಾಡು ನಿನ್ನದು
ನನ್ನ ಕಣ್ಣ ಬಿಂಬದಲ್ಲಿ
ಅಮ್ಮ ನಿನ್ನ ಛಾಯೆಯು
ಕಲ್ಮಶವೇ ಇಲ್ಲದಂತ
ನಿನ್ನ ನಗುವಿನಂದವು
ತುತ್ತು ನೀಡೋ ಕೈಗಳು
ವ್ಯತ್ಯಾಸ ಅರಿಯದೆಂದಿಗೂ
ಜನ್ಮ ಕೊಟ್ಟ ತಾಯಿಗೆ
ನಗುವೆ ಬರಿಸು ಎಂದಿಗೂ
ನಿನ್ನ ದುಡಿಮೆಯ ಫಲವು
ಅಮ್ಮನಿಗಿರಲಿ ಮುಕ್ತವು
ಅಮ್ಮನೆಂಬ ಪದವದು
ಜಗವೇ ಬೆಳಗೋ ಬೆಳಕದು
ಮನ್ಸೂರ್ ಮೂಲ್ಕಿ
