ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ

ಪ್ರತಿ ಸಂಬಂಧಗಳಲ್ಲಿ ಹೊಸತನ ಕಂಡೆ ಜಾನ್
ಪ್ರತಿ ಸಂಬಂಧಗಳಲ್ಲಿ ಸ್ವಾರ್ಥವನ್ನು ಕಂಡೆ ಜಾನ್

ಸುಖವನ್ನು ಅರಸುತ್ತ ಸಂಬಂಧ ಬೆಳೆಸಿದೆ ಜಾನ್
ಸುಖವೆಲ್ಲವೂ ಕಾಂಚಾಣದಲ್ಲಿ ಅಡಗಿದ್ದು ಕಂಡೆ ಜಾನ್

ಹೃದಯವನ್ನೇ ಕಳೆದುಕೊಂಡೆ ಜಾನ್
ಪ್ರೀತಿಯ ನೋವು ಪಡೆದುಕೊಂಡೆ ಜಾನ್

ಮುಖವಾಡಗಳನ್ನು ಬದಲಿಸುತ್ತ ಬದಲಿಸುತ್ತಾ ಮನಗಳನ್ನು ಗೆದ್ದರು ಜಾನ್
ಸಂಬಂಗಳನ್ನು ಉಳಿಸಿಕೊಳ್ಳುತ್ತ ಉಳಿಸಿಕೊಳ್ಳುತ್ತಾ ದಿವಾಳಿ ಆದರು ಜಾನ್


Leave a Reply

Back To Top