ಕಾವ್ಯಸಂಗಾತಿ
ಬತ್ತು
ಅಜಿತ್ ಹರೀಶಿ
ಬತ್ತಿ ಹೋಗುತ್ತಿರುವ ಮರವೊಂದು
ನೀಡುವುದು ಹೆಚ್ಚು ಫಲ
ಪ್ರಕೃತಿಯಿಂದ ಕಲಿತ ಪಾಠವೆಲ್ಲ
ಅದಕೇ ತಿರುಗಿಸಬಲ್ಲೆವು ಎಲ್ಲ
ಬತ್ತಿಹೋದ ನಂತರದ ಚಿಂತೆಯಿಲ್ಲ
ಒಳಬದುಕಿಗೆ ಒಳಪಡಿಸಬೇಕಾದ ವರ್ತಮಾನ
ಪರಿಸರಕ್ಕೆ; ನಮಗೆ ನಾಳೆಗಳಿಲ್ಲ
ಬತ್ತಿಸಿದ ಭಟ್ಟಿ ಸಾರಾಯಿ
ಶೀಷೆಗೆ ಸುರಿದು ಕಂಠಪೂರ್ತಿ
ಹೇಳುವ ವೇದಾಂತ ಭರ್ತಿ
ಕರುಳೊಳಗೆ ಇಳಿದು ಕ್ಷಣ ಮೇಲೆತ್ತಿ
ಬದುಕ ಬತ್ತಿಸುವ ಮದಿರೆ ಪ್ರೀತಿ
ವಿಸ್ತರಿಸಿದ ತೋಟಕ್ಕೆ ಅಡಚಣೆಯೆಂಬ
ಕಾರಣಕ್ಕೆ ಕಾಂಡಕ್ಕೆ ಮಾಡಿ ರಂಧ್ರ
ತುರುಕಿ ಇಂಗು ಉಪ್ಪು ತುಂಬ
ಹಾಕುವುದು ಮರವೊಂದ ಬತ್ತು
ಕ್ರಮೇಣವದು ಲಡ್ಡಾಗುವುದು ಸತ್ತು
ನಶೆಯೇರಿಸುವ ಹಣ ಕೀರ್ತಿ
ಸೇರಿ ಹಣಿದು ಹಾಕುವ ವೃಕ್ಷ ಪ್ರೀತಿ
ರಂಧ್ರ ರುದಯಕ್ಕೆ
ಪರಿಕರಗಳವೇ ಇಂಗು ಉಪ್ಪು
ಎಳೆಯುವುದು ಬೇಲಿ ಕಟ್ಟುವುದು ಗೋಡೆ
ಬತ್ತಿ ಹೋಗುವ ಹಾಗೆ ಅಕ್ಕರೆ ಮಕಾಡೆ
ಬತ್ತುವ ವೇಳೆಗೆ ಉಕ್ಕುವ ಪ್ರೇಮ
ದ ಸೋಗಿನಲಿ ಕಾಮ?
ಉತ್ತಮ ಕವಿತೆ. ಧನ್ಯವಾದಗಳು.