ಮಲೆನಾಡ ಆಚರಣೆಯ ಒಂದು ನೋಟ ” ಫಣಿಯಮ್ಮ “

ಪುಸ್ತಕ ಸಂಗಾತಿ

ಮಲೆನಾಡ ಆಚರಣೆಯ ಒಂದು ನೋಟ

” ಫಣಿಯಮ್ಮ “

ಖ್ಯಾತ ಲೇಖಕಿ ಕಾದಂಬರಿಗಾರ್ತಿ ಎಂ ಕೆ ಇಂದಿರಾ ಅವರು ಬರೆದಿರುವ ” ಫಣಿಯಮ್ಮ ” ಮಲೆನಾಡಿನ ವರ್ಣನೆ ಅಲ್ಲಿನ ಆಚಾರ – ವಿಚಾರ .ಜಾತಿ – ಧರ್ಮ ಎಲ್ಲವನ್ನು ಕಾದಂಬರಿಯ ಮೂಲಕ ಸುಂದರವಾಗಿ ಮೂಡಿ ಬಂದಿದೆ.ಈ ಕಾದಂಬರಿಯ ಕುರಿತು ಕಿರು ಪರಿಚಯಾತ್ಮಕ ವಿಮರ್ಶೆ.

ಎಂ ಕೆ ಇಂದಿರಾ ಅವರು ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ..? ಇಂತಹ ಮಹಾನ್ ಲೇಖಕಿಯ ಅನೇಕ ಕಾದಂಬರಿಗಳಲ್ಲಿ ” ಫಣಿಯಮ್ಮ” ಕೂಡ ಒಂದು.ಹೀಗಾಗಿ ಪ್ರಸುತ್ತ ಕಾದಂಬರಿಯನ್ನು ವಿಮರ್ಶಿಸಲು ನನ್ನದೊಂದು ಸಣ್ಣ ಪ್ರಯತ್ನವಷ್ಟೇ.ನಾನು ಈಗೀಗ ಬರಹ ಕಲಿಯುವ ವಿದ್ಯಾರ್ಥಿನಿ.ಈ ಆಧುನಿಕ ಬದುಕಿನ ಅನೇಕ ಆಚಾರ – ವಿಚಾರ ಚಿಂತನ ಬರಹಗಳನ್ನು ಬರೆಯಬೇಕು ಎನ್ನುವ ಹಂಬಲ.ಮಿಗಿಲಾದ ತುಡಿತದ ಭಾವ ಅದೆಷ್ಟೋ ಬದುಕಿನಲ್ಲಿ ನಡೆದ ಸಂಗತಿಯನ್ನು ಕಾದಂಬರಿಯ ರೂಪದಲ್ಲಿ ಹೊರತಂದಿದ್ದಾರೆ. ಅವರ ಬರಹದ ಶೈಲಿಯ ಕುರಿತು ನನಗೆ ಮೂಕವಾಗಿಸಿದೆ.ಓದುಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.ಹುಚ್ಚೆದ್ದು ಓದಬೇಕಾದಂತಹ ಕಾದಂಬರಿಗಳನ್ನು ರಚಿಸಿದ್ದಾರೆ.

ಮಲೆನಾಡು ಅಲ್ಲಿನ ಪ್ರದೇಶದ ಸುಂದರವಾದ ವರ್ಣನೆ.ಆಚಾರ – ವಿಚಾರಗಳು.ಅಲ್ಲಿನ ಜನರ ಜೀವನ ಶೈಲಿ.ತಾರತಮ್ಯ.ಬಾಲ್ಯವಿವಾಹ ” ಫಣಿಯಮ್ಮ” ಎಂಬ ನಿಜಜೀವನದ ಬಾಲವಿಧವೆಯ ಜೀವನ ಹೇಗಿತ್ತು ಎಂಬುವುದು ಈ ಕಾದಂಬರಿಯ ತಿರುಳು.ಈ ಕಾದಂಬರಿ ಯಾರಿಗೆ ಹೇಗೆ ಕಂಡಿದೆಯೋ ಎಂತಹ ಅನುಭವ ನೀಡಿದೆಯೋ. ಆಗಿನ ಕಾಲದಲ್ಲಿ ಇಂತಹ ಘಟನೆಗಳು ನಡೆಯುವುದು ಅಸಂಭವವೇನಲ್ಲ ಇದು ನಮ್ಮ ಸಮಾಜದ ಒಂದು ನಂಬಿಕೆ.ಒಂದು ತಿಂಗಳ ಹಿಂದೆ ಈ ಕಾದಂಬರಿಯನ್ನು ಓದಿದ್ದೆ.ಫಣಿಯಮ್ಮ ಚಲನಚಿತ್ರವನ್ನು ವಿಕ್ಷಿಸಿದ್ದೆ.ಈ ಪಾತ್ರವು ನನ್ನ ಮನಸ್ಸಿನಲ್ಲಿ ಅಚ್ಚಾಗಿ  ದೆ ಇದರಲ್ಲಿ ನನಗೆ ಫಣಿಯಮ್ಮನ ಪಾತ್ರ ಬಹಳ ಮೆಚ್ಚುಗೆಯಾಯಿತು.ಏಕೆಂದರೆ ಅವಳ ತಾಳ್ಮೆ . ಶಾಂತ ಸ್ವಭಾವ ತನ್ನೆಲ್ಲ ಆಸೆ- ಕನಸುಗಳನ್ನು ತೊರೆದು ತ್ಯಾಗ ಮಯಿಯಾಗಿದ್ದಳು ..

ಲೇಖಕಿಯ ಅಜ್ಜ ಕಿಟ್ಟಪ್ಪನವರ ತಂಗಿಯೇ ಫಣಿಯಮ್ಮ.ಮಲೆನಾಡು ಹತ್ತಿರ ಒಂದು ಪುಟ್ಟ ಹಳ್ಳಿ ಹಸಿರನ್ನೇ ಮೈದುಂಬಿಕೊಂಡಿರುವಂತಹ ಪ್ರದೇಶ ಸದಾಕಾಲ ಮಳೆರಾಯ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.ಯಾವಾಗಲು ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮರಗಳು ಮಧ್ಯ – ಮಧ್ಯ  ಹರಿದುಬರುವ ಜಲಾಶಯ ಯಾವುದೇ ನಿಷ್ಕಲ್ಮಶ ವಿಲ್ಲದೆ ಬೀಸುವ ಗಾಳಿ.ಎಂತಹಾ ಜನರನ್ನು ಕೂಡ ತನ್ನ ಮುಂದೆ ಸೋತು ಶರಣಾಗುವಂತೆ ಮಾಡುತ್ತದೆ ಪ್ರಕೃತಿ.ಅಂಚಿನ ದೊಡ್ಡ ಮನೆಗಳು.ನೂರಾರು ಜನರು ಜೊತೆಯಾಗಿ ವಾಸಿಸುತ್ತಿದ್ದರು.ಈ ಹಳ್ಳಿಯಲ್ಲಿ ಆಗ ಅಂಚೆ ಕಛೇರಿಯ ಸೌಲಭ್ಯ ಹೊಂದಿರಲಿಲ್ಲ . ಆದ್ದರಿಂದ ಫಣಿಯಮ್ಮ ನ ಮನೆಯವರೆ ಹಳ್ಳಿ – ಹಳ್ಳಿಗೆ ಸುತ್ತಿ ಅಂಚೆಯನ್ನು ತಲುಪಿಸುತ್ತಿದ್ದರು .ಹೆಂಗಸರೆಲ್ಲರು ಮನೆಯ ಕೆಲಸ ನಿರ್ವಹಿಸುತ್ತಿದ್ದರು.ಗಂಡಸರು ತೋಟ ಗದ್ದೆ ಹೊರಗಿನ ಕೆಲಸವನ್ನು ನಿರ್ವಹಿಸುತ್ತಿದ್ದರು.ನಂತರ ” ಫಣಿಯಮ್ಮ” ನ ಜನನವಾಯಿತು .ಆಗಿನ ಕಾಲದ ಜನರಿಗೆ  ಶಾಲೆಯ ಬಗ್ಗೆ ಅಷ್ಟೊಂದು ತಿಳುವಳಿಕೆ ಹೊಂದಿರಲಿಲ್ಲ . ಆದ್ದರಿಂದ ಫಣಿಯಮ್ಮ ಮನೆಯ ಕೆಲಸವನ್ನು ಕಲಿಯುತ್ತಿದ್ದಳು. ಎಂಟನೇ ವಯಸ್ಸಿನಲ್ಲಿಯೇ ಮುಖವನ್ನೇ ನೋಡದ ಹುಡುಗನೊಂದಿಗೆ ಮದುವೆಯಾಯಿತು.ಮದುವೆ ಎಂಬ ಪದದ ಅರ್ಥವನ್ನೇ ತಿಳಿಯದ ವಯಸ್ಸು. ಮದುವೆಯಾದ ಮೂರು ತಿಂಗಳಿಗೆ ಹಾವು ಕಚ್ಚಿ ಗಂಡ ತೀರಿಹೋದನು.ಏನು ಅರಿಯದ ವಯಸ್ಸಿನಲ್ಲಿ ಮದುವೆಯಾಗಿ.ವಿಧವೆಯಾಗಿ ತನ್ನ ಜೀವನವನ್ನು ಕಷ್ಟದಲ್ಲಿಯೇ ಕಳೆದಳು.ನುಣ್ಣಗೆ ಬೋಳಿಸಿದ ತಲೆ.ಬಿಳಿಸೀರೆ.ದಿನಾಲೂ ಒಪ್ಪೊತ್ತಿನ ಊಟ .ಮಡಿ . ಉಪವಾಸ ವ್ರತ ಒಟ್ಟಿನಲ್ಲಿ ಸನ್ಯಾಸಿಯ ಬದುಕಿನ ರೀತಿಯಾಗಿತ್ತು.ಬಣ್ಣ – ಬಣ್ಣದ ಬಟ್ಟೆ ಧರಿಸಿ ಮೂರು ಹೊತ್ತು ಊಟ ಮಾಡಿ ಮನೆ  ತುಂಬ ಆಟ ಆಡೋ ವಯಸ್ಸಿನಲ್ಲಿ ಕತ್ತಲೇ ಕೊಣೇ ಸೇರಬೇಕಾಯಿತು.ಹೀಗೆ ದಿನಗಳು ಕಳಿಯುತ್ತಾ ಹೋದವು.ಗಾಣದ ಎತ್ತಿನ ತರ ದುಡಿಯುತ್ತಿದ್ದಳು. ಆದರು ಸ್ವಲ್ಪ ಬೇಸರ ಪಟ್ಟುಕೊಳ್ಳದೇ ಎಲ್ಲ ಕೆಲಸವನ್ನು ತಾನೇ ನಿರ್ವಹಿಸುತ್ತಿದ್ದಳು. ದೇವರ ಧ್ಯಾನ ಜಪ – ತಪಗಳನ್ನು ತಪ್ಪದೇ ಅನುಸರಿಸುತ್ತಿದ್ದಳು.ವರ್ಷಗಳುರುಳಿದಂತೆ ಫಣಿಯಮ್ಮ ಬೌದ್ಧಿಕವಾಗಿ ಬೆಳೆಯುತ್ತ ಮಾನಸಿಕವಾಗಿ ವಿಕಾಸಗೊಳ್ಳುತ್ತಾಳೆ.ಆದ್ದರಿಂದಲೇ ಒಮ್ಮೆ ಹೊಲೆಯರ ಕೇರಿಯ ಸಂಕಿಗೆ ನಾಲ್ಕು ದಿನಗಳಿಂದ ಹೊಟ್ಟೆ ನೋವಿನಿಂದ ನರಳುತಿರುತ್ತಾಳೆ ಫಣಿಯಮ್ಮನಿಗೆ ವಾಸ್ತವದಲ್ಲಿ ಹೆರಿಗೆಯೆಂದರೆನೆಂದೇ ತಿಳಿಯದು.ಅವಳು ಯಾವತ್ತು ಬಾಣಂತನ ಮಾಡಿರುವುದಿಲ್ಲ.ಆದರೇ ನೂರಾರು ಬಾಣಂತನದ ಸೇವೆಗಳನ್ನು ಸರಾಗವಾಗಿ ಮಾಡಿದ್ದಳು.ಸಂಕಿಯು ಅನುಭವಿಸುತ್ತಿರುವ ನೋವನ್ನು ನೋಡಲಾಗದೆ.ಗರ್ಭದೊಳಗೆ ಅಡ್ಡ ಸಿಕ್ಕಿದ ಮಗುವನ್ನು ಸೂಲಗಿತ್ತಿಯ ಸಹಾಯದಿಂದ ಬಾಣಂತನ ಮಾಡಿ ತಾಯಿ – ಮಗು ಇಬ್ಬರನ್ನು ಉಳಿಸುತ್ತಾಳೆ.ಈ ಘಟನೆಯಿಂದ ನಾವು ಫಣಿಯಮ್ಮ ಎರಡು ಗುಣವನ್ನು ನೋಡಬಹುದು .ಒಂದು ಗೊಡ್ಡು ಸಂಪ್ರದಾಯವು ಜಾತಿ – ಧರ್ಮ.ಮಡಿ – ಮೈಲಿಗೆಗಳ ಹೆಸರಿನಲ್ಲಿ ಅಮಾನವೀಯತೆಯಿಂದ ಕ್ರೌರ್ಯ ವನ್ನು ಮೀರಿ ನಡೆದುಕೊಳ್ಳುವುದು.ಎರಡು ಮಡಿಯಾಗಿರುವ ತಾನು ಹೊಲೆಯರ ಗುಡಿಸಲಿನ ಒಳಹೊಕ್ಕ  ವಿಚಾರವನ್ನು ಗುಟ್ಟಾಗಿಟ್ಟು ಸಂಪ್ರದಾಯವನ್ನು ಆಚರಿಸುವವರ ವಿರುದ್ಧ ಸಂಘರ್ಷಕ್ಕಿಳಿಯದಿರುವುದು.

ಸಂಕಿಗೆ ಹೇರಿಗೆ ಮಾಡಿಸಿದ ನಂತರ ಶುದ್ದಿಯಾಗುವುದಕ್ಕೆ ಕೆರೆಯಲ್ಲಿ ಮುಳುಗಿ ಬರುವಾಗ ಸುಬ್ಬರಾಯನ ಹೆಂಡತಿ ಲಚ್ಚಮ್ಮ ಎಂಟು ತಿಂಗಳ ಬಸುರಿ.ಸುಬ್ಬರಾಯ ಬಂಡೆಕಲ್ಲ ಮೇಲೆ ಕುಳಿತು ಜನಿವಾರ ಬದಲಾಯಿಸುತ್ತಿದ್ದ.ಅವನನ್ನು ನೋಡಿ ಫಣಿಯಮ್ಮನಿಗೆ ಅಚ್ಚರಿಯಾಯಿತು.ಮನೆಗೆ ಬಂದು ವಿಚಾರಿಸಿದಾಗ ಆತ ಬೇರೆ ಜಾತಿಯ ಹೆಂಗಸರು ಸಹವಾಸ ಮಾಡಿ ಜನಿವಾರ ಬದಲಾಯಿಸಿ ಶುದ್ಧವಾಗಿ  ಬರುತ್ತಿದ್ದ ಸಂಗತಿ ಆಕೆಗೆ ಗೊತ್ತಾಗುತ್ತದೆ .ಆಗ ಸಮಾಜದ ತಾರತಮ್ಯ ಧೋರಣೆಯ ಬಗ್ಗೆ ಫಣಿಯಮ್ಮ ಯೋಚಿಸುವ ರೀತಿ ಯಾವ ಸ್ತೀ ವಾದಿಗೂ ಕಡಿಮೆಯಿರಲಿಲ್ಲ.

ದ್ರಾಕ್ಷಾಯಿಣಿ ಹದಿನಾರು ವರ್ಷದ ತರುಣಿಯಾಗಿದ್ದಾಗ ಅವಳ ಗಂಡ ಸಾಯುತ್ತಾನೆ .ಆದರೆ ಅವಳು ತಲೆ ಬೋಳಿಸಿ ಮಡಿಯುಟ್ಟುಕೊಳ್ಳದೆ ತನ್ನ ಅತ್ತೆಯೊಂದಿಗೆ ಮೊಂಡು ಹಠದಿಂದ ಗೆಲ್ಲುತ್ತಾಳೆ.ದ್ರಾಕ್ಷಾಯಿಣಿಯನ್ನು ಮಡಿಯಾಗಲು ಒಪ್ಪಿಸಲು ಇವರ ಅತ್ತೇ ” ಫಣಿಯಮ್ಮ” ನನ್ನು ಕರೆಸುತ್ತಾಳೆ ಫಣಿಯಮ್ಮ ದ್ರಾಕ್ಷಾಯಣಿಗೆ ಬೆಂಬಲವಾಗಿ ವಿಧವೆಯರ ಸ್ಥಿತಿಗತಿ ಬದಲಾಗಬೇಕು.ಅವರಿಗೂ ಆಯ್ಕೆಯ  ಸ್ವಾತಂತ್ರ್ಯ ಸಿಗಬೇಕು ಅನ್ನುವುದು ಅವಳದೊಂದು ನಿಲುವು.

” ಫಣಿಯಮ್ಮ ” ನಿಗೆ ಮಡಿಗಳಲ್ಲಿ ನಂಬಿಕೆಯಿಲ್ಲ.ಆದರೆ ತನಗೋಸ್ಕರ .ತನ್ನ ಅನುಕೂಲಗಳಿಗೋಸ್ಕರ ಅವಳು ಸಂಪ್ರದಾಯವನ್ನು ಮುರಿದು ನಂಬಿಕೆಯಿಟ್ಟು ಕೊಂಡವರ ಮನಸ್ಸನ್ನು ಯಾವತ್ತಿಗೂ ನೋಯಿಸಲು ಇಚ್ಚಿಸುವುದಿಲ್ಲ .

ಫಣಿಯಮ್ಮನ ಸಹನೆ.ಶಿಸ್ತು.ತ್ಯಾಗ.ಸಂಯಮಗಳಿಗೆ ತದ್ವಿರುದ್ಧವಾಗಿ ದ್ದಾಳೆ ದ್ರಾಕ್ಷಾಯಿಣಿ .ಸ್ತೀ ವಾದದ ಪ್ರತಿಭಟನೆಯನ್ನು ನಾವು ಅವಳಲ್ಲಿ ಕಾಣುತ್ತೇವೆ.ಫಣಿಯಮ್ಮ ಓದಿದವಳಲ್ಲ .ಅಕ್ಷರಬಲ್ಲವಳಲ್ಲ .ಆದರೂ ಆಕೆಗೆ ರಾಮಾಯಣ.ಮಹಾಭಾರತ.ಪುರಾಣಗ್ರಂಥ.ಪಂಚತಂತ್ರದ ಕಥೆಗಳೆಲ್ಲ ವೂ ಗೊತ್ತು.ಮಕ್ಕಳಿಗೆ ಇಷ್ಟವಾಗುವಂತೆ ಕಥೆಗಳನ್ನು ಹೇಳುವ ಕಲೆ ಆಕೆಯಲ್ಲಿದೆ.ಆ ಕಥೆಗಳ‌ ಹಲವು ಸನ್ನಿವೇಶಗಳಲ್ಲಿ ಹೆಣ್ಣಿಗಾದ ಅನ್ಯಾಯಗಳ ಬಗ್ಗೆ ವಿಚಾರವಾದಿಯಂತೆ ಚಿಂತಿಸುತ್ತಾಳೆ ಜಾತಿ ಧರ್ಮಗಳನ್ನು ಮೀರಿದ ಚಿಂತನೆ ಅವಳದ್ದು.ಜಾತಿ.ಧರ್ಮ .ಲಿಂಗಗಳನ್ನು ಮೀರಿದ ಮಾನವೀಯತೆಯ ನ್ನು ತೋರಿಸುವ ಫಣಿಯಮ್ಮ ನಮ್ಮ ನಿಮ್ಮೆಲ್ಲರ ಗಮನ ಸೆಳೆಯುತ್ತಾಳೆ .ವಿಧವೆಯೆಂದು ಮೂಲೆಗೆ ತಳ್ಳಿದ ಒಬ್ಬ ಹೆಣ್ಣಿನಲ್ಲಿ ಅದೆಂತ ಶಕ್ತಿ ಇರಬಹುದು ಎನ್ನುವುದಕ್ಕೆ ಫಣಿಯಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ.

ಇನ್ನು ಲೇಖಕಿಯ ಬರಹದ ಬಗ್ಗೆ ಹೇಳಲು ಮಾತುಗಳೇ ಇಲ್ಲ.ವರ್ಣನೆಗೂ ಮಿರಿದ್ದೂ .ಮಲೆನಾಡಿನ ಆಗಿನ ಸ್ಥಿತಿ ಗತಿ .ಜೀವನ ಶೈಲಿಯನ್ನು ಸುಂದರವಾಗಿ ಚಿತ್ರಿಸಿದ್ದಾರೆ…

********************

ದೇವಿಕಾ ಮ್ಯಾಕಲ್

Leave a Reply

Back To Top