‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ

‘ಅಲ್ಲಮ ಕಾವ್ಯ ಪ್ರಶಸ್ತಿ’ಗೆ

ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ

ಬೆಂಗಳೂರಿನ ಅಲ್ಲಮ ಪ್ರಕಾಶನದಿಂದ ಅಲ್ಲಮ ಕಾವ್ಯ ಪ್ರಶಸ್ತಿಗಾಗಿ ನಲವತ್ತೈದು ವರ್ಷದೊಳಗಿನ ಯುವಕವಿಗಳಿಂದ ಹಸ್ತಪ್ರತಿ ಆಹ್ವಾನ.  

ಹಸ್ತಪ್ರತಿ ಕಳಿಸಲು ನಿಯಮಗಳು ಈ ಕೆಳಗಿನಂತಿವೆ.

೧. ಮೂವತ್ತಕ್ಕಿಂತಲೂ ಹೆಚ್ಚಿನ ಸ್ವರಚಿತ ಕನ್ನಡ ಕವಿತೆಗಳನ್ನು ಹಸ್ತಪ್ರತಿಯು ಒಳಗೊಂಡಿರಬೇಕು.

೨. ಅನುವಾದಿತ, ಹನಿಗವನ ಮತ್ತು ಚುಟುಕು ಕವಿತೆಗಳ ಹಸ್ತಪ್ರತಿಗಳು ಬೇಡ.

೩. ಪ್ರವೇಶವನ್ನು ಕಳಿಸುವ ಯುವಕವಿಗಳು ನಲವತ್ತೈದು ವರ್ಷದೊಳಗಿನವರಾಗಿರಬೇಕು.

೪ ಈ ಪ್ರಶಸ್ತಿಯು ೫,೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

೫. ವಿಜೇತರಾದ ಕವಿಯ ಹಸ್ತಪ್ರತಿಯನ್ನು ಅಲ್ಲಮ ಪ್ರಕಾಶನದಿಂದ ಪ್ರಕಟಿಸಲಾಗುವುದು. 

೬.  ಶೀರ್ಷಿಕೆಯನ್ನೊಳಗೊಂಡ ಹಸ್ತಪ್ರತಿಯ ಯಾವ ಭಾಗದಲ್ಲಿಯು ತಮ್ಮ ಹೆಸರು ಮತ್ತು ಕಿರುಪರಿಚಯವನ್ನು ನಮೂದಿಸಬಾರದು. 

ತಮ್ಮ ಕಿರುಪರಿಚಯವು ಬೇರೆಯದೆ ಪುಟದಲ್ಲಿರಲಿ.

೭. ಡಿ.ಟಿ.ಪಿ ಮಾಡಿದ ಹಸ್ತಪ್ರತಿಗಳನ್ನು ತಮ್ಮ ಕಿರುಪರಿಚಯದೊಂದಿಗೆ  ಕೆಳಗಿನ ವಿಳಾಸಕ್ಕೆ ದಿನಾಂಕ ಡಿಸೆಂಬರ್ ೩೦, ೨೦೨೧ರ ಒಳಗಾಗಿ ಕಳುಹಿಸಬೇಕು. ಜೊತೆಗೆ ಹಸ್ತಪ್ರತಿಯ PDF (Soft Copy)ಯನ್ನು ತಮ್ಮ ಕಿರುಪರಿಚಯದೊಂದಿಗೆ ಈ ಕೆಳಗಿನ ಮಿಂಚಂಚೆಗೆ ಕಳುಹಿಸುವುದು ಕೂಡ ಕಡ್ಡಾಯವಾಗಿದೆ.

ಮಿಂಚಂಚೆಯ ವಿಳಾಸ: allamaprakashana1@gmail.com 

ಹಸ್ತಪ್ರತಿ ಕಳುಹಿಸಬೇಕಾದ ವಿಳಾಸ:

ವಿಶಾಲಾ ಆರಾಧ್ಯ

ಅಲ್ಲಮ ಪ್ರಕಾಶನ, ನಂ.೩೦೨ 

ಜಯಾಸ್ ಅದ್ವೈತ ಕಟ್ಟಡ

ಕಾಕಯ್ಯಪ್ಪ ಲೇಔಟ್

ಇಮ್ಮಡಿಹಳ್ಳಿ ಮುಖ್ಯರಸ್ತೆ

ನಾಗೊಂಡಹಳ್ಳಿ, ವೈಟ್ ಫೀಲ್ಡ್

ಬೆಂಗಳೂರು೫೬೦೦೬೬

ಮೊಬೈಲ್: ೯೮೮೬೪೬೪೭೧೧

ಧನ್ಯವಾದಗಳು,

ಅಲ್ಲಮ ಪ್ರಕಾಶನ


Leave a Reply

Back To Top