ಕಾವ್ಯಯಾನ
ಜುಗಲ್ಬಂಧಿ
ಬುದ್ದನ ಧಾಷ್ಟ್ರ್ಯದ ನುಡಿಕೇಳಿ
ಜುಗಲ್ಬಂದಿಗಿಳಿದೆ
ಪ್ರಶ್ನಿಸಿದೆ…
ನಿತ್ಯ ನರಳಾಟದ ವಾರ್ಧಕ್ಯ
ಸ್ವರವನಾಲಿಸಿ
ಥೂ…ಪೀಡೆ …..!
ಉಗಿದಿದ್ದೇವೆ..
ತೆಗಳಿದ್ದೇವೆ…
ಬುದ್ದ ನಸುನಕ್ಕ…
ದುರ್ಮಾರ್ಗಿಗಳ
ದುಃಖಕ್ಕೂ ಬೆಲೆನೀಡು
ಸತ್ವವನರಿವ ತತ್ವಬೋಧಿಸಿ
ಜಗವ ಸುತ್ತೊಮ್ಮೆ…
ಕಲ್ಮಷದ ಮನಸುಗಳು
ಪಾಚಿಗಟ್ಟಿವೆ…!
ಆಸೆ,ಮೋಹಗಳನು
ಸನ್ಮಾರ್ಗದ ಪೀನಾಯಿಲ್
ಹಾಕಿ ತೊಳೆಯೋ
ಎಂದರುಹಿರಿದ….
ಮೋಹಾಪಾಶಕ್ಕೆ ಒಳಗಾಗಿ
ಜೇಡರ ಬಲೆಯಲ್ಲಿ
ಸಿಲುಕಿ ನರಳಾಡುವ
ತಿಲದ ಸುಖವಿದಷ್ಟೆ…
ಹಳಸಾದ
ಮನಗಳ ತಿಕ್ಕಿ
ತೊಳೆವ ಕಾರ್ಯ
ಮಾಡಲೆಂದೆ
ಹೊರಟಿದ್ದೇನೆ
ಅರ್ಧ ರಾತ್ರಿಯಲಿ….!
ನಾನೆಂದೆ…
ಈ ಮನಗಳು
ಬದಲಾಗುವುದೇ….?
ಈ ಜಗ ಬದಲಾಗುವುದೇ…?
ಇದೆ ಚಿಂತೆಯಲ್ಲಿ
ಅರವತ್ತು ವಸಂತಗಳನ್ನು
ಜುಗಲ್ಬಂಧಿಯಲ್ಲಿ
ಕಳೆದಿದ್ದೇನೆ
ಉತ್ತರ ಮಾತ್ರ
ಅಗೋಚರವಾಗಿದೆ…
ಶಂಕರಾನಂದ ಹೆಬ್ಬಾಳ