ವರ್ತಮಾನ

“ಓಟದಿಂದ ಕಲಿಯುವ ಆಡಳಿತದ ಪಾಠ”

ಗಜಾನನ ಮಹಾಲೆ

 ಓಟದ ಸ್ಪರ್ಧೆಯಲ್ಲಿ ಬೇರೆ ಬೇರೆ ರೀತಿಯ ಓಟಗಳಿರುತ್ತವೆ. 5000 ಮೀಟರ್‌ ಹಾಗೂ 100 ಮೀಟರ್‌ ಓಟಗಳ ಎರಡು ವಿಭಾಗದ ಮಧ್ಯೆ ಬಹಳಷ್ಟು ವ್ಯತ್ಯಾಸವಿರುತ್ತದೆ. ವ್ಯತ್ಯಾಸ ಓಡುವ ದೂರದ ಬಗ್ಗೆ ಮಾತ್ರವಲ್ಲ. ಓಡುವ ವಿಧಾನದಲ್ಲಿಯೂ ವ್ಯತ್ಯಾಸವಿದ್ದು ಸರಿಯಾದ ವಿಧಾನದಲ್ಲಿ ಓಡಿದ ಸ್ಪರ್ಧಿ ಮೊದಲಿಗನಾಗುವ ಸಂಭವ ಹೆಚ್ಚಿರುತ್ತದೆ.

100 ಮೀಟರ್ ಓಟದಲ್ಲಿ ಪ್ರಾರಂಭದಿಂದ ಅತ್ಯಂತ ವೇಗವಾಗಿ ಓಡಿದವರು ಮತ್ತು ಆ ಸಾಮರ್ಥ್ಯವಿದ್ದವರು ಪ್ರಥಮ ಸ್ಥಾನ ಗಳಿಸುತ್ತಾರೆ. 5000 ಮೀಟರ್ ಓಟದಲ್ಲಿ ಈ ವಿಧಾನ ಪ್ರಯೋಜನಕಾರಿಯಲ್ಲ. ಈ ವಿಭಾಗದಲ್ಲಿ ಮೊದಲು ನಿಧಾನವಾಗಿ ಪ್ರಾರಂಭಿಸಿ, ನಿರಂತರವಾಗಿ ಓಡುತ್ತಿದ್ದು,ಗುರಿಗೆ ಸಮೀಪ ಬಂದಾಗ ವೇಗವನ್ನು ಹೆಚ್ಚು ಮಾಡಿ ಗುರಿ ತಲುಪಲು ಪ್ರಯತ್ನಿಸುವವರು ಯಶಸ್ವಿಯಾಗುತ್ತಾರೆ. 100 ಮೀಟರ್ ಓಟದಲ್ಲಿ ಓಡಿದಂತೆ ಮೊದಲೇ ವೇಗವಾಗಿ ಓಡಲು ಪ್ರಾರಂಭಿಸಿದರೆ, ಮಧ್ಯದಲ್ಲಿಯೇ ಸುಸ್ತಾಗಿ ಹೊರ ಹೋಗುವ ಸಂಭವ ಹೆಚ್ಚು.

ಒಂದು ರಾಜ್ಯದ ಅಥವಾ ಒಂದು ದೇಶದ ಆಡಳಿತ ಚುಕ್ಕಾಣಿ ಹಿಡಿದವರಿಗೆ ಈ ಓಟದ ಸ್ಪರ್ಧೆಯ ಟೆಕ್ನಿಕ್ನ ಅರಿವಿದ್ದರೆ ತಮ್ಮ ಗುರಿ ತಲುಪುವುದರಲ್ಲಿ ಯಶಸ್ವಿಯಾಗುತ್ತಾರೆ. ದೇಶದ ಅಥವಾ ರಾಜ್ಯದ ಪ್ರಗತಿಯ ದೃಷ್ಟಿಯಿಂದ ಪ್ರಾರಂಭಿಸುವ ಯೋಜನೆಗಳು, ಜಾರಿಗೊಳಿಸುವ ಅಭಿವೃದ್ಧಿ ಕಾರ್ಯಗಳು,ಆಡಳಿತದ ವಿವಿಧ ಹಂತಗಳಲ್ಲಿ ಮಾಡುವ ಬದಲಾವಣೆಗಳು, ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಮಾಡುವ ತಿದ್ದುಪಡಿಗಳು ಇವು ಯಶಸ್ವಿಯಾಗಬೇಕಾದರೆ, ಓಟದ ಟೆಕ್ನಿಕ್ ನ ಅರಿವಿದ್ದರೆ ಯಶಸ್ಸು ಸಾಧ್ಯ.

 ಯಾವುದನ್ನು ವೇಗವಾಗಿ ಮಾಡಬೇಕು ಹಾಗೂ ಯಾವುದನ್ನು ನಿಧಾನವಾಗಿ ಪ್ರಾರಂಭಿಸಿ ಅನಂತರ ವೇಗವನ್ನು ಹೆಚ್ಚಿಸಬೇಕು ಎಂಬ ಅರಿವಿಲ್ಲದಿದ್ದರೆ, ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತು ಆಡಳಿತದ ವಿಷಯದಲ್ಲಿಯೂ ಅನ್ವಯಿಸುತ್ತದೆ…

*********************************************************

Leave a Reply

Back To Top