Day: December 11, 2021

ಕಾವ್ಯ ಸಂಗಾತಿ ನನಗೂ ನಿನ್ನಂತಾಗಬೇಕಿತ್ತು ಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆ ಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪುಗಳೂ ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು ಮೌನಗಳ […]

ಧಾರಾವಾಹಿ ಆವರ್ತನ ಅದ್ಯಾಯ-46 .ಆವತ್ತು ದೇವರಕಾಡಿನಲ್ಲಿ ನೆರೆದ ಭಕ್ತಾದಿಗಳೆದುರು ತಮ್ಮ ಚಮತ್ಕಾರವನ್ನು ಪ್ರದರ್ಶಿಸಿ ಜೀರ್ಣೋದ್ಧಾರಕ್ಕೆ ನಾಂದಿ ಹಾಡಿ ಬಂದಿದ್ದ ಗುರೂಜಿಯವರು ಅಲ್ಲಿನ ನಾಗ ಭವನ ನಿರ್ಮಾಣದ ಕಾಮಗಾರಿಯನ್ನು ಶಂಕರನಿಗೆ ಒಪ್ಪಿಸಲು ಇಚ್ಛಿದರು. ಆದ್ದರಿಂದ ಅಂದು ಬೆಳಿಗ್ಗೆ ಅವನನ್ನು ತಮ್ಮ ಬಂಗಲೆಗೆ ಬರಹೇಳಿದರು. ಗುರೂಜಿಯವರು ದೇವರಕಾಡಿನ ದೊಡ್ಡ ಪ್ರಾಜೆಕ್ಟ್‍ನ್ನು ಕೈಗೆತ್ತಿಕೊಂಡಿರುವುದು ಶಂಕರನಿಗೂ ಗೊತ್ತಿತ್ತು. ಅಲ್ಲದೇ ಅದರ ಕೆಲಸವನ್ನು ಅವರು ತನಗೇ ಕೊಡುತ್ತಾರೆಂಬುದೂ ಅವನಿಗೆ ಖಚಿತವಿತ್ತು. ಹಾಗಾಗಿ,‘ಶಂಕರಾ ನಿನ್ನ ಹತ್ತಿರ ಒಂದು ಮುಖ್ಯ ವಿಷಯ ಮಾತಾಡಲಿಕ್ಕಿದೆ ಮಾರಾಯಾ, ಬೇಗ ಬಂದುಬಿಡು!’ […]

Back To Top