ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—52 ಯಕ್ಷಗಾನದ ಸಿಹಿ-ಕಹಿ ನೆನಪುಗಳು ಹವ್ಯಾಸಿ ಕಲಾವಿದನಾಗಿ ನಾನು ಯಕ್ಷಗಾನ ರಂಗದಲ್ಲಿ ತೊಡಗಿಕೊಂಡ ಬಳಿಕ ಕಾಲೇಜಿನ ಆಚೆಗೂ ನನ್ನ ಜೀವನಾನುಭವಗಳು ವಿಸ್ತಾರಗೊಂಡವು. ಪ್ರೇಕ್ಷಕರ ಅಭಿಮಾನ ಒಲವುಗಳು ಒಂದು ಕಡೆ ರೋಮಾಂಚನಗೊಳಿಸಿದರೆ ಸಂಘಟಕರ ಅಪೇಕ್ಷೆಯಂತೆ ನಡೆದುಕೊಳ್ಳಲು ಸಾಧ್ಯವಾಗದ ಸಂದರ್ಭಗಳಲ್ಲಿ ಅವರ ನಿಷ್ಠುರವನ್ನು, ವಿರೋಧವನ್ನು ಎದುರಿಸಬೇಕಾದ ಅನಿವಾರ್ಯ ಸನ್ನಿವೇಶಗಳೂ ಸೃಷ್ಟಿಯಾಗುತ್ತಿದ್ದವು. ಬೇರೆ ಬೇರೆ ಕೌಟುಂಬಿಕ ಪರಿಸರದಿಂದ ಬಂದ ಕಲಾವಿದರ ಆಲೋಚನೆ, ಸ್ವಭಾವಗಳಿಗೆ ಹೊಂದಿಕೊಳ್ಳುವುದು ಹಲವು ಬಾರಿ ಕಷ್ಟವೇ ಎನಿಸಿದರೂ ಯಕ್ಷಗಾನದ ಮೇಲಿನ ಪ್ರೀತಿಯಿಂದ ಎಲ್ಲವನ್ನೂ ಸಹ್ಯವಾಗಿಸಿಕೊಳ್ಳುವ ಅವಶ್ಯಕತೆಯಿರುತ್ತಿತ್ತು. ಜೊತೆಗೆ ನಾನೊಬ್ಬ ಕಾಲೇಜು ಉಪನ್ಯಾಸಕನಾದ್ದರಿಂದ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಲೇಬೇಕಾದ ಗುರುತರವಾದ ಜವಬ್ದಾರಿಯೂ ನನ್ನ ಮೇಲಿತ್ತು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಸಂಘಟಕರು ಸಂಘಟಿಸುವ ಕಾರ್ಯಕ್ರಮದಲ್ಲಿ ನಮಗೆ ಎಲ್ಲೆಡೆಯೂ ನಿರೀಕ್ಷಿತ ಮಟ್ಟದ ವ್ಯವಸ್ಥೆ ಇರುವ ಭರವಸೆಯೇನೂ ಇರುತ್ತಿರಲಿಲ್ಲ. ಎಲ್ಲೋ ಕುಳಿತು ಬಣ್ಣ ಬಳಿದುಕೊಳ್ಳುವ, ಎಂಥಹದೋ ನೆಲದಲ್ಲಿ ನಿದ್ದೆಗಾಗಿ ಒರಗಿಕೊಳ್ಳುವ, ಮೆಚ್ಚದ ಅಡಿಗೆಯನ್ನೂ ಹೇಗೋ ಉಂಡು ಹೊಟ್ಟೆತುಂಬಿಕೊಳ್ಳುವ ಸಂದರ್ಭಗಳು ಬಂದಾಗ ನನ್ನ ಉಪನ್ಯಾಸಕನೆಂಬ ಅಹಮಿಕೆಯನ್ನು ಬದಿಗಿಟ್ಟು ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆಗಳು ನನ್ನನ್ನು ಪರಿಪೂರ್ಣ ಮತ್ತು ಸಹನಶೀಲ ಮನುಷ್ಯನನ್ನಾಗಿ ರೂಪಿಸಲು ನೆರವಾದವು ಎಂದೇ ನನಗೆ ಅನಿಸುತ್ತದೆ. ಮತ್ತು ಅದೇ ಕಾರಣದಿಂದ ಎಲ್ಲರೊಡನೊಂದಾಗುವ ಸಂಯಮದ ಜೀವನ ಪಾಠ ನೀಡಿ ಯಕ್ಷಗಾನವೇ ನನ್ನನ್ನು ತಿದ್ದಿ ಪರಿಷ್ಕರಿಸಿದೆ ಎಂದು ನಂಬಿದ್ದೇನೆ. ಕಲೆಯೊಂದರ ಪ್ರಭಾವ ಮತ್ತು ಫಲಿತಾಂಶ ಅಂತಿಮವಾಗಿ ಇದೆ ಅಲ್ಲವೇ? ಯಕ್ಷರಂಗಕ್ಕೆ ಸಂಬಂಧಿಸಿದಂತೆ ಎರಡು ಮರೆಯಲಾಗದ ಸಿಹಿ-ಕಹಿ ಘಟನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು…….. ೧೯೮೮-೯೦ ರ ಸಮಯ. ಅಂಕೋಲೆಯ ನಮ್ಮ ಹವ್ಯಾಸಿ ಯಕ್ಷಗಾನ ತಂಡವು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡಬೇಕಿತ್ತು. ಅಂದು ತುಂಬ ಹೆಸರು ಮಾಡಿದ, ಹಲವಾರು ವೃತ್ತಿಮೇಳಗಳಲ್ಲೂ ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಪರಿಚಿತರಾದ ಅಗ್ಗರಗೋಣದ ಎಂ.ಎಂ. ನಾಯಕರು ನಮ್ಮ ತಂಡದ ನಾಯಕತ್ವ ಮತ್ತು ಪ್ರದರ್ಶನದ ಜವಾಬ್ದಾರಿ ವಹಿಸಿದ್ದರು. ಎಂ.ಎಂ.ನಾಯಕರು ವೃತ್ತಿಯಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲಾ ಶಿಕ್ಷಣ ತಪಾಸಣಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ಆದರೂ ಯಕ್ಷಗಾನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಹವ್ಯಾಸಿ ಕಲಾವಿದರಾಗಿ ಮೇಲಿಂದ ಮೇಲೆ ಯಕ್ಷಗಾನ ಪ್ರದರ್ಶನ, ಸಂಘಟನೆ ಪಾತ್ರ ನಿರ್ವಹಣೆಯಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಿದ್ದರು. ಅವರ ದುಷ್ಟ ಬುದ್ಧಿ, ಕಂಸ, ಜರಾಸಂಧ ಮುಂತಾದ ಪಾತ್ರಗಳು ಬಹಳಷ್ಟು ಜನಮನ್ನಣೆ ಗಳಿಸಿದ್ದವು. ಅಂದು ನಾವು ಹುಬ್ಬಳ್ಳಿಯಲ್ಲಿ ಪ್ರದರ್ಶನ ನೀಡಬೇಕಾದ ಪ್ರಸಂಗ “ಚಂದ್ರಹಾಸ ಚರಿತ್ರೆ”. ಅದರಲ್ಲಿ ಎಂ.ಎಂ. ನಾಯಕರ ದುಷ್ಟಬುದ್ಧಿ, ವಂದಿಗೆ ವಿಠೋಬ ನಾಯಕರ ಕುಳಿಂದ, ಗೋಕರ್ಣದ ಅನಂತ ಹಾವಗೋಡಿಯವರ ಮದನ, ನನ್ನದು ಚಂದ್ರಹಾಸ. ಮತ್ತಿತರ ಪಾತ್ರಗಳನ್ನು ತಂಡದ ವಿವಿಧ ಕಲಾವಿದರು ನಿರ್ವಹಿಸಬೇಕಿತ್ತು. ಸಂಜೆಯ ಆರು ಗಂಟೆಗೆ ನಮ್ಮ ಪ್ರದರ್ಶನ ಆರಂಭವಾಗಬೇಕಿದ್ದುದರಿಂದ ನಾವು ಮಧ್ಯಾಹ್ನ ಹನ್ನೊಂದು ಗಂಟೆಗೆ ಅಂಕೋಲೆಯಿಂದ ಪ್ರಯಾಣ ಆರಂಭಿಸಿದೆವು. ಒಂದು ಬಾಡಿಗೆ ಟೆಂಪೋ ಗೊತ್ತು ಮಾಡಿಕೊಂಡು ನಮ್ಮ ಯಕ್ಷಗಾನ ಪರಿಕರಗಳು ಇತ್ಯಾದಿ ಹೇರಿಕೊಂಡು ಹಿಮ್ಮೇಳ, ಮುಮ್ಮೇಳದ ಕಲಾವಿದರೆಲ್ಲ ಸೇರಿ ಟೆಂಪೋ ಭರ್ತಿಯಾಗಿತ್ತು. ಒಂದು ಒಂದುವರೆ ತಾಸಿನ ಪ್ರಯಾಣ ಮಾಡಿ ನಾವು ಅರಬೈಲ್ ಘಟ್ಟ ಹತ್ತಿಳಿದು ಯಲ್ಲಾಪುರ ನಗರ ಪ್ರವೇಶಕ್ಕೆ ಸನಿಹವಾಗಿದ್ದೆವು. ಸ್ವಲ್ಪ ದೂರದಿಂದಲೇ ನಮಗೆ ದ್ವಿಚಕ್ರವಾಹನಗಳೂ ಸೇರಿದಂತೆ ಸಾಲುಗಟ್ಟಿ ನಿಂತ ಬೇರೆ ಬೇರೆ ವಾಹನಗಳು ಗೋಚರಿಸಿದವು. ವಿಚಾರಿಸಿದಾಗ, “ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ” ಎಂಬ ವರ್ತಮಾನ ತಿಳಿಯಿತು. ನಮಗೆ ಸಮಯದ ಕಾಳಜಿ ತುಂಬ ಇದೆ. ನಾವು ಮುಂದಿನ ಎರಡು ಗಂಟೆಗಳ ಪ್ರಯಾಣ ಮಾಡಿ ಹುಬ್ಬಳ್ಳಿ ತಲುಪಬೇಕು. ಆ ಬಳಿಕ ವೇಷ ಇತ್ಯಾದಿ ಸಿದ್ಧಗೊಂಡು ಆರು ಗಂಟೆಗೆ ಪ್ರದರ್ಶನ ಆರಂಭವಾಗಬೇಕು! ತಂಡದ ನಾಯಕರಾದ ಎಂ.ಎಂ.ನಾಯಕ ಮತ್ತಿತರ ಕಲಾವಿದರು ವಾಹನದಿಂದ ಇಳಿದು ಮುಂದೆ ಹೋಗಿ ಪೊಲೀಸು ಅಧಿಕಾರಿಗಳನ್ನು ಕಂಡು ನಮ್ಮ ಪರಿಸ್ಥಿತಿಯನ್ನು ನಿವೇದಿಸಿಕೊಂಡರು. ಆದರೂ ಸರತಿಯ ಸಾಲಿನಲ್ಲೇ ಬರುವಂತೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಆದೇಶಿಸಿ ಅವರನ್ನು ಹಿಂದೆ ಕಳುಹಿಸಿದರು. ಅವರ ಪರಿಶೀಲನೆಯ ನಿಧಾನ ಗತಿಯಿಂದ ತಂಡದ ಎಲ್ಲ ಕಲಾವಿದರಿಗೂ ಚಡಪಡಿಕೆ ಆರಂಭವಾಗಿತ್ತು. ತಾಸು ಕಳೆದ ಬಳಿಕ ನಮ್ಮ ವಾಹನದ ಬಳಿ ಬಂದ ಕಾನ್‌ಸ್ಟೇಬಲ್ ಓರ್ವ ನಮ್ಮ ವಾಹನವನ್ನು ಹತ್ತಿಳಿದು, ವಾಹನಕ್ಕೆ ಒಂದು ಸುತ್ತು ಬಂದು ಪರಿಶೀಲಿಸಿದಂತೆ ಮಾಡಿ ಮರಳಿ ಹೊರಟವನು ನಮ್ಮ ವಾಹನ “ಓವರ್ ಲೋಡ್” ಆಗಿದೆಯೆಂದೇ ದೂರು ಸಲ್ಲಿಸಿದನಂತೆ. ದಂಡ ಇತ್ಯಾದಿ ವಸೂಲಿ ಪ್ರಕ್ರಿಯೆಗಳು ಮುಗಿಯದೇ ನಮ್ಮನ್ನು ಸುಲಭವಾಗಿ ಬಿಡಲು ಸಾಧ್ಯವೇ ಇಲ್ಲವೆಂದು ಪೊಲೀಸು ಅಧಿಕಾರಿ ಇನ್ನಷ್ಟು ಉಪೇಕ್ಷೆ ಮಾಡಿ ಬೇರೆ ವಾಹನ ಪರೀಕ್ಷೆಯಲ್ಲಿ ತಲ್ಲೀನರಾದರು. ಇನ್ನರ್ಧ ತಾಸು ವ್ಯರ್ಥ ಕಾಲ ಹರಣವಾಯಿತು. “ಇದು ಸುಲಭದಲ್ಲಿ ಬಗೆಹರಿಯುವ ಹಾಗೆ ಕಾಣುತ್ತಿಲ್ಲ” ಎಂದು ಕೊಳ್ಳುತ್ತ ಇದುವರೆಗೆ ವಾಹನದಿಂದ ಕೆಳಗಿಳಿಯದೇ ಕುಳಿತುಕೊಂಡಿದ್ದ ನಾನು ಮತ್ತು ಸಹ ಕಲಾವಿದರಿಬ್ಬರು ವಾಹನದಿಂದ ಇಳಿದು ರಸ್ತೆಗೆ ಬಂದೆವು. ದೂರದಲ್ಲಿ ಪೊಲೀಸು ಅಧಿಕಾರಿ ತನ್ನ ಮೋಟಾರ್ ಬೈಕನ್ನು ಅಡ್ಡವಿಟ್ಟು ಅದರ ಮೇಲೆ ಕುಳಿತುಕೊಂಡು ಕಾನ್‌ಸ್ಟೇಬಲ್‌ಗಳಿಗೆ ಸೂಚನೆ ನೀಡುತ್ತಿರುವುದು ಕಾಣಿಸುತ್ತಿತ್ತು. ನಮ್ಮ ತಂಡದ ಪರವಾಗಿ ಅಹವಾಲು ಸಲ್ಲಿಸುತ್ತಿದ್ದ ಹಿರಿಯರೂ ಅಲ್ಲಿಯೇ ನಿಂತಿದ್ದರು. “ನೋಡುವಾ ಏನು ನಡಿತೀದೆ ಅಲ್ಲಿ” ಎಂಬ ಕುತೂಹಲದಿಂದ ನಾವೂ ನಾಲ್ಕು ಹೆಜ್ಜೆ ಮುಂದೆ ನಡೆದು ಅವರನ್ನು ಸಮೀಪಿಸಿದೆವು. ಒಮ್ಮೆ ನಮ್ಮತ್ತ ನೋಡಿದ ಪೊಲೀಸು ಅಧಿಕಾರಿ ಕುತೂಹಲದಿಂದ ನಮ್ಮನ್ನು ಗಮನಿಸುತ್ತಲೇ ಚಂಗನೆ ತನ್ನ ಬೈಕ್ ಮೇಲಿಂದ ಕೆಳಗಿಳಿದು ನಿಂತವನು ನಮ್ಮತ್ತಲೇ ಧಾವಿಸಿ ಬರುತ್ತ ನೇರವಾಗಿ ನನ್ನ ಕೈಗಳನ್ನು ಹಿಡಿದುಕೊಂಡು “ಸರ್ ನೀವು?” ಎಂದು ಹಸನ್ಮುಖಿಯಾಗಿ ಉದ್ಘರಿಸಿದ! ನನ್ನನ್ನು ಸೇರಿ ನಮ್ಮ ಗುಂಪಿನ ಎಲ್ಲರಿಗೂ ಅತ್ಯಾಶ್ಚರ್ಯವಾಯಿತು. ಪೊಲೀಸು ಅಧಿಕಾರಿ ಯಾರೆಂದು ನನಗಿನ್ನೂ ಗುರುತೇ ಹತ್ತಿರಲಿಲ್ಲ! ಮೂಕ ವಿಸ್ಮಿತರಾಗಿದ್ದೆವಷ್ಟೇ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಆತನೇ ಮುಂದುವರಿದು “ಸರ್ ನಾನು ಸದಾನಂದ ನಾಯಕ…. ನಿಮ್ಮ ವಿದ್ಯಾರ್ಥಿ” ಎಂದು ಪರಿಚಯಿಸಿಕೊಂಡ ಕ್ಷಣದ ಸಂತೋಷವನ್ನು ಇಲ್ಲಿ ಶಬ್ಧಗಳಲ್ಲಿ ವರ್ಣಿಸಲು ಅಸಾಧ್ಯವೇ. ಮುಂದಿನದನ್ನು ನಾನು ವಿವರಿಸಬೇಕಿಲ್ಲ. ನಮ್ಮ ತಂಡಕ್ಕೆ ಗೌರವಪೂರ್ಣ ವಿದಾಯ ಯಲ್ಲಾಪುರ ಪೊಲೀಸ್ ಇಲಾಖೆಯಿಂದ ದೊರೆಯಿತು. ನಮ್ಮ ಯಕ್ಷ ತಂಡದ ಸದಸ್ಯರೆಲ್ಲ ನನ್ನನ್ನು ಹೃತ್ಪೂರ್ವಕ ಅಭಿನಂದಿಸಿದರು. ಸಕಾಲದಲ್ಲಿ ನಾವು ಹುಬ್ಬಳ್ಳಿ ತಲುಪಿ ಸಮಯಕ್ಕೆ ಸರಿಯಾಗಿಯೇ ಪ್ರದರ್ಶನ ನೀಡಿ ಊರಿಗೆ ಮರಳಿದ್ದೆವು. ನನಗೆ ಇಲ್ಲಿ ಬಹಳ ಮುಖ್ಯವಾಗಿ ಕಂಡದ್ದು ಸದಾನಂದ ನಾಯಕ ಎಂಬ ನನ್ನ ವಿದ್ಯಾರ್ಥಿಯ ಸೌಜನ್ಯಶೀಲತೆ. ನಾನು ಆತನಿಗೆ ಮಾಡಿದ ಪಾಠವೆಷ್ಟು? ಆತ ಬಿ.ಎಸ್.ಸಿ ಭಾಗ ಒಂದರ ಒಂದು ವರ್ಷ ಮಾತ್ರ. ಕನ್ನಡ ಓದಿದ ವಿದ್ಯಾರ್ಥಿ. ಅದರಲ್ಲೂ ವಾರದ ಮೂರು ತಾಸಿನ ಅವಧಿಯಲ್ಲಿ ನಾನು ಪಾಠ ಹೇಳಿದ್ದು ವಾರದ ಒಂದು ತಾಸು ಮಾತ್ರ. ಅಷ್ಟು ಅಲ್ಪಾವಧಿಯ ಪಾಠ ಕೇಳಿದ ಆತ ತನ್ನ ಹೃದಯದಲ್ಲಿ ಉಳಿಸಿಕೊಂಡಿದ್ದ ನನ್ನ ಕುರಿತಾದ ಗೌರವಾದರಗಳು ಬೆಲೆ ಕಟ್ಟಲಾಗದಷ್ಟು ಎಂಬುದು ನನಗೆ ಈ ಸನ್ನಿವೇಶದಲ್ಲಿ ಸ್ಪಷ್ಟವಾಯಿತು. ಶಿಕ್ಷಕ ವೃತ್ತಿಗೆ ಅಂತಿಮವಾಗಿ ಸಿಗುವ ಫಲವೆಂದರೆ ಎಲ್ಲೋ ಹೇಗೋ ಇರುವ ವಿದ್ಯಾರ್ಥಿಯೊಬ್ಬ ಅಭಿವ್ಯಕ್ತಿಸುವ ಗೌರವಾದರಗಳೇ ಅಲ್ಲವೇ? ಮುಂದಿನ ದಿನಗಳಲ್ಲಿ ಕಾರವಾರದ ಕೊಂಕಣ ಮರಾಠಾ ಸಮುದಾಯದ ಇದೇ ಸದಾನಂದ ನಾಯಕ ಎಂಬ ಪೊಲೀಸು ಅಧಿಕಾರಿ ಅಂಕೋಲೆಯ ಗೋವಿಂದರಾಯ ನಾಯಕ ಮಾಸ್ತರರ ಹಿರಿಯ ಮಗಳು (ಡಾ. ಶ್ರೀದೇವಿ ತಿನೇಕರ ಅವರ ಹಿರಿಯ ಸಹೋದರಿ) ವೀಣಾ ಎಂಬುವವರ ಕೈ ಹಿಡಿದು ಸಮೃದ್ಧ ದಾಂಪತ್ಯ ಜೀವನ ನಡೆಸಿದರು. ಇಲಾಖೆಯಲ್ಲಿ ಎಸ್.ಪಿ ಹುದ್ದೆಯವರೆಗೆ ಪದೋನ್ನತಿ ಪಡೆದು ಈಗ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದೇ ಕಾಲಾವಧಿಯಲ್ಲಿ ನಡೆದ ಒಂದು ನೋವಿನ ಕಥೆಯನ್ನೂ ಇಲ್ಲಿ ಪ್ರಸ್ತಾಪಿಸಬೇಕು. ನನ್ನ ಪತ್ನಿ ನಿರ್ಮಲಾ ನನ್ನ ಎರಡನೆಯ ಮಗನಿಗೆ ಜನ್ಮ ನೀಡಿ (ಅಭಿಷೇಕ) ಬಾಣಂತಿಯ ಉಪಚಾರದ ಅವಧಿ ಮುಗಿಸಿಕೊಂಡು ತೌರಿಂದ ಅಂಕೋಲೆಗೆ ಮರಳಿದ್ದಳು. ಮಕ್ಕಳು ಬಾಣಂತಿ ಮನೆಗೆ ಬಂದರೆಂದು ಅಡಿಗೆ ಇತ್ಯಾದಿ ಸಹಾಯಕ್ಕಾಗಿ ನನ್ನ ತಾಯಿ ನಮ್ಮನೆಗೆ ಬಂದು ಉಳಿದುಕೊಂಡಿದ್ದಳು. ಅದು ಯುಗಾದಿ ಹಬ್ಬದ ಮುನ್ನಾ ದಿನ. ಅಂಕೋಲೆಯ ಸಮೀಪದ ಹಾರವಾಡ ಎಂಬ ಹಳ್ಳಿಯಲ್ಲೊಂದು ಆಟ. ಹಾರವಾಡ ಗ್ರಾಮದಲ್ಲಿ ನನ್ನನ್ನು ತುಂಬಾ ಗೌರವಿಸುವ ಸಮಾಜದ ಹಿರಿಯರಾದ ಕಾನೂನು ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಥಾಕು ಹಾರವಾಡೇಕರ ಎಂಬುವರು. ಅವರ ಸಹೋದರ ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಜಿ.ಎಂ. ಹಾರವಾಡೇಕರ, ಮತ್ತವರ ಇಡಿಯ ಕುಟುಂಬ ನೆಲೆಸಿದೆ. ಅವರ ಒತ್ತಾಯದ ಮೇರೆಗೆ ಅಂದಿನ ಯಕ್ಷಗಾನ ಪ್ರಸಂಗದಲ್ಲಿ ನಾನೂ ಅತಿಥಿ ಕಲಾವಿದನಾಗಿ ಒಂದು ಪಾತ್ರವಹಿಸಲು ಒಪ್ಪಿಕೊಂಡೆ. ಅಂದು ಥಾಕು ಹಾರವಾಡೇಕರ, ಜಿ.ಎಂ.ಹಾರವಾಡೇಕರ ಸಹಿತ ಊರಿನ ಹಲವು ಸಮಾಜ ಬಂಧುಗಳೇ ಪಾತ್ರ ನಿರ್ವಹಿಸಿದ್ದರು. ನನ್ನದು ಒಂದು ರಕ್ಕಸ ಪಾತ್ರ. ಮಧ್ಯರಾತ್ರಿಯ ಬಳಿಕವೇ ರಂಗ ಪ್ರವೇಶಿಸುವ ನನ್ನ ಪಾತ್ರ ಬೆಳಕು ಹರಿಯುವವರೆಗೆ ಮುಂದುವರಿಯಬೇಕಿತ್ತು. (ಅಪರೂಪದ ಕಥಾನಕವಾದ್ದರಿಂದ ಪ್ರಸಂಗ ಮತ್ತು ಪಾತ್ರದ ಹೆಸರು ಮರೆತಿದೆ ಕ್ಷಮಿಸಿ) ಸಾಧಾರಣವೆನ್ನಿಸುವ ಮಟ್ಟಿಗಷ್ಟೇ ನನ್ನ ಪಾತ್ರ ನಿರ್ವಹಣೆ ನನಗೆ ಸಾಧ್ಯವಾಗಿತ್ತು. ಆಟ ಮುಗಿಸಿ ಹೊರಡುವುದಕ್ಕೆ ನನ್ನ ಸ್ವಂತ ವಾಹನವಿತ್ತು. ಈ ಮೊದಲಿನ ಎಜ್ಡಿ ಬೈಕ್‌ನ್ನು ಬದಲಾಯಿಸಿ ಕೆಲವೇ ತಿಂಗಳ ಹಿಂದೆ “ವೆಸ್ಪಾ ಎಲ್.ಎಂ.ಎಲ್” ಎಂಬ ಸ್ಕೂಟರ್‌ನ್ನು ಖರೀದಿಸಿದ್ದೆ. ನನ್ನ ಜೊತೆಯಲ್ಲಿಯೇ ಆಟಕ್ಕೆ ಬಂದ ನನ್ನ ಆಪ್ತ ಗೆಳೆಯ ವಸಂತ ಲಕ್ಷ್ಮೇಶ್ವರ ಮತ್ತು ನಾನು ಅಂಕೋಲೆಯತ್ತ ಹೊರಟೆವು. ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ನಮ್ಮೂರಿನಿಂದ ಆಟ ನೋಡಲು ಬಂದಿದ್ದ ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಊರಿಗೆ ಮರಳಲು ಬಸ್ಸಿಗಾಗಿ ಕಾಯುತ್ತ ನಿಂತಿದ್ದ. ಅವನನ್ನು ಅಂಕೋಲೆಯವರೆಗೆ ಬಿಡುವ ಮನಸ್ಸಿನಿಂದ ಸ್ಕೂಟರ್ ಏರಿಸಿಕೊಂಡೆ. ಮುಂದುವರೆದು ಅವರ್ಸಾ ಎಂಬ ಊರು ದಾಟಿ ಅಂದು ರಸ್ತೆಯ ಅಂಚಿಗೆ ಇರುವ ಗೌರಿ ಕೆರೆಯ ತಿರುವಿನಲ್ಲಿ ಆಕಸ್ಮಿಕವಾಗಿ ಲಾರಿಯೊಂದು ಎದುರಿಗೆ ಬಂದಿತು. ತಪ್ಪಿಸಿಕೊಳ್ಳಲು ಟಾರ್ ರಸ್ತೆಯಿಂದ ನನ್ನ ಸ್ಕೂಟರ್‌ನ್ನು ಕೆಳಗಿಳಿಸಿದೆ. ಕಚ್ಚಾರಸ್ತೆಯಲ್ಲಿ ಸಮತೋಲನ ತಪ್ಪಿದಂತಾದಾಗ ವಾಹನದ ಮೇಲಿದ್ದ ಇಬ್ಬರೂ ಜಿಗಿದು ಬಿಟ್ಟರು. ಸ್ಕೂಟರ್ ನಿಯಂತ್ರಣ ತಪ್ಪಿ ಟಾರ್ ರಸ್ತೆಯ ಮೇಲೆ ಬಿತ್ತಲ್ಲದೆ ನನ್ನನ್ನು ಕೊಂಚ ದೂರದವರೆಗೆ ಎಳೆದುಕೊಂಡು ಹೋಗಿತ್ತು. ಅತ್ತಿತ್ತಲಿಂದ ಯಾರೋ ಬಂದು ನನ್ನನ್ನು ಹಿಡಿದೆತ್ತಿದರು. ಮಂಡಿಯ ಚಿಪ್ಪಿನಿಂದ ಕೊಂಚ ಕೆಳಗೆ ಚರ್ಮ ಹರಿದು ಹೋಗಿ ಒಂದು ಕಾಲಿನ ಎಲುಬು ಕಣ್ಣಿಗೆ ಕಾಣಿಸುತ್ತಿತ್ತು. ಅದೇ ಕಾಲಿನ ಪಾದದ ಮೇಲ್ಭಾಗದಲ್ಲಿಯೂ ಆಳವಾದ ಗಾಯವಾಗಿತ್ತು. ಟಾರು ರಸ್ತೆಗೆ ಬಿದ್ದ ಎಡಗೈ ಅರ್ಧಭಾಗದ ಚರ್ಮ ಸಂಪೂರ್ಣ ಸುಲಿದು ಕೆಂಪಾದ ಮಾಂಸಖಂಡಗಳು ಕಾಣಿಸುತ್ತಿದ್ದವು. ಮೈಮೇಲಿನ ಬಟ್ಟೆಗಳೆಲ್ಲ ಹರಿದು ಚಿಂದಿಯಾಗಿದ್ದವು.! ಹೊಸತೇ ಆಗಿದ್ದ ಸ್ಕೂಟರ್‌ನ ಮುಂಭಾಗ ನುಜ್ಜು ಗುಜ್ಜಾಗಿ ನಡೆಸಲೂ ಆಗದಂತೆ ವಿಕಾರಗೊಂಡಿತ್ತು. ಯಾರೋ ಪುಣ್ಯಾತ್ಮರು ತಮ್ಮ ವಾಹನದಲ್ಲಿ ಅಂಕೋಲೆಯ ಮಿಷನರಿ ಆಸ್ಪತ್ರೆಗೆ ನನ್ನನ್ನು ತಲುಪಿಸಿ ಉಪಕಾರ ಮಾಡಿದರು. ಡಾ. ಅಬ್ರಾಹ್ಮಂ ಬಂದು ಪರೀಕ್ಷೆ ಮಾಡಿದ ಬಳಿಕ ಕೈ ಕಾಲುಗಳ ಎಲುಬು ಮುರಿದಿಲ್ಲವಾದರೂ ಆಗಿರುವ ಆಳವಾದ ಗಾಯಗಳ ಉಪಚಾರಕ್ಕೆ ದವಾಖಾನೆಗೆ ದಾಖಲಾಗುವಂತೆ ಸಲಹೆ ನೀಡಿದರು. ಆಗಲೂ ನಾನು ನಡೆದಾಡ ಬಲ್ಲೆನಾದ್ದರಿಂದ ಆಸ್ಪತ್ರೆಗೆ ದಾಖಲಾಗಲು ಒಪ್ಪದೆ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯಲು ವೈದ್ಯರ ಒಪ್ಪಿಗೆ ಪಡೆದೆ. ಗಾಯಕ್ಕೆ
‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ.
‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ‘ಅಂಬಿಕಾತನಯದತ್ತ’ ಮುಂಬೈಯಲ್ಲೊಂದು ಅಪರೂಪದರಂಗರೂಪಕ. ರಚನೆ: ಡಾ. ವರದರಾಜಚಂದ್ರಗಿರಿಮತ್ತುಸಾ.ದಯಾ ಪ್ರಸ್ತುತಿ : ಕನ್ನಡಕಲಾಕೇಂದ್ರ, ಮುಂಬೈ. ಸಮಯ- ಸಂರ‍್ಭ, ನವಿಮುಂಬಯಿಕನ್ನಡಸಂಘ, ವಾಶಿ, ನವಿಮುಂಬಯಿ , ಮೊನ್ನೆದಿನಆಯೋಜಿಸಿದರ‍್ನಾಟಕರಾಜ್ಯೋತ್ಸವಕರ‍್ಯಕ್ರಮದಂದು ರೂಪಕದಲ್ಲಿ ನೃತ್ಯರೂಪಕ, ಸಂಗೀತರೂಪಕ ಇರುವಂತೆ, ಕಾವ್ಯವಾಚನ-ಗಾಯನ- ನಟನೆಯ ಮೂಲಕ ‘ರಂಗರೂಪಕ’ವನ್ನು ಸಾಧ್ಯವಾಗಿಸಿ ಸಾದರಪಡಿಸಿದವರು ಕಳೆದ ಮೂರು ದಶಕಗಳಿಂದ ಮುಂಬಯಿನ ಕನ್ನಡ ತುಳು ರಂಗಭೂಮಿಯಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವಸೃಜನಶೀಲ ನಾಟಕಕಾರ, ನಟ, ನಿರ‍್ದೇಶಕ, ಕವಿಮಿತ್ರ ಸಾ.ದಯಾ ಎಂಬ ಸರಳ ವಿರಳ ಸಹೃದಯಿ. ಹಿನ್ನೆಲೆ ಸಂಗೀತ ಸರ್ವ ಹೊಣೆ ಹೊತ್ತು ತಮ್ಮ ಮಧುರಕಂಠದಿಂದ ಬೇಂದ್ರೆಯವರ ಗೇಯಗೀತೆಗಳ ಭಾವಲಹರಿಯ ನಾದತರಂಗಗಳನ್ನು ಸಭಾಂಗಣದಲಿ ಪಸರಿಸಿದವರು ವಾಸು.ಜೆ.ಮೊಯಿಲಿ.ಸಂಕೋಚದ ಸ್ವಭಾವದ ಈತ ರಾತ್ರಿಶಾಲಾ ದಿನಗಳಿಂದಲೇ ಹಾಡನ್ನು ಗೀಳಾಗಿಸಿಕೊಂಡವರು.ಗೆಳೆಯರಿಂದ ಅಂದಿನಿಂದಲೂ ಮುಂಬೈನ ಪಿ.ಬಿ.ಶ್ರಿನಿವಾಸ್ ಅಂತಲೇ ಕರೆಯಿಸಿಕೊಂಡು,ಎಲೆಮರೆಯಲ್ಲೇ ಇರುವ ಇವರನ್ನು ಮುಂಬೈಯಲ್ಲಿ(ಪರಿಚಿತರೇ), ಮುಖ್ಯ ಕಾರ‍್ಯಕ್ರಮಗಳನಡುವಿನಸಮಯದಲ್ಲಿ ‘ಫಿಲ್ಲರ್‘ ತರಹ ಹಾಡನ್ನು ಹಾಡಲು ಉಪಯೋಗಿಸಿಕೊಂಡವರೇಹೆಚ್ಚು !!! ಹೇಳಲೇಬೇಕಾದುದುಅಂದು ರೂಪಕದಲ್ಲಿ ಪಾಲುಗೊಂಡ ಪುಟ್ಟ ಪುಟ್ಟ ಮಕ್ಕಳಾದ ಪ್ರತೀಕ್ಷಾ, ಸುನಿಧಿ, ಸಾಕ್ಷೀ, ಸನಾತನ್, ಪ್ರಥ್ವಿ.ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಯ ಇವರಲ್ಲಿ ಹೆಚ್ಚಿನವರ ಮಾತೃಭಾಷೆ ಕನ್ನಡ ಅಲ್ಲ.ಬೆರಳೆಣಿಕೆಯ ತಾಲೀಮಿನಲ್ಲಿ ತಮ್ಮ ತಮ್ಮ ಪಾಲಿನದನ್ನು ಶ್ರದ್ದೆಯಿಂದ ನಿರ‍್ವಹಿಸಿದ ಮಕ್ಕಳ ಹುರುಪು, ಉತ್ಸಾಹ ಚೇತೋಹಾರಿಯಾಗಿತ್ತು.ತಾಲೀಮಿಗೆ ದೂರ ದೂರದಿಂದ ಅವರನ್ನು ಕರೆತರುವ ಹೆತ್ತವರ ಸಹನೆ,ಕೊಡುಗೆಯೂಮಹತ್ತರವಾದುದ್ದೇ. ಸಾ.ದಯಾ. ಅವರ ಐದು ವರ್ಷದ ಮಗ ಮೊಹಿನೀಷ್, ತಬಲದಲ್ಲಿ ಸಾಥ್ ನೀಡಿದ ಅವರ ಹಿರಿಯ ಮಗ ರಾಘವೇಂದ್ರ ದೂರದ ದೊಂಬಿವಲಿಯಿಂದ ಬರುವ ಪಾಡು; ಸಂಘದ ಕಾರ್ಯದರ್ಶಿ ಆಗಿದ್ದು ಗುರುತರ ಜವಾಬ್ದಾರಿಯ ಹೊರೆ ಹೊತ್ತ ಜಗದೀಶ್ ರೈಯವರು ತಮ್ಮ ಪೂರ‍್ಣ ಪರಿವಾರದ(ಮಡದಿ ಬಬಿತಾ ರೈ, ಮಗಳು ಸಾನ್ವಿ, ಮಗ ಸಾತ್ವಿಕ್) ಜೊತೆ ರೂಪಕದಲ್ಲಿ ತೊಡಗಿಸಿಕೊಂಡದ್ದು ಅವರ ಬದ್ಧತೆ ಬಗ್ಗೆ ಶರಣೆನ್ನದೆ ಬೇರೆ ಮಾತಿಲ್ಲ. ಮಕ್ಕಳ ನೃತ್ಯವಿನ್ಯಾಸ ಮಾಡಿ, ಕೆಲವೊಂದು ಹಾಡಿಗೆ ತಮ್ಮ ಲಾಲಿತ್ಯಪೂರ‍್ಣ ಭಾವಾಭಿನಯ ನೃತ್ಯದ ಮೂಲಕ ರೂಪಕದ ಸೊಬಗಿಗೆ ರಂಗೇರಿಸಿದ ಕಲಾವಿದೆ ಸಹನಾ ಭಾರದ್ವಾಜ್,ಹಾರ‍್ಮೋನಿಯಂನಲ್ಲಿ ಶಿವಾನಂದ ಶೆಣೈ, ತಬಲಾದಲ್ಲಿ ಮರಾಠಿಗ ಶುಭಂ, ಕಲಾವಿದರಾದ ಗಣೇಶ್ಕುಮಾರ, ಮಧುಸೂದನ ಟಿ.(ಕನ್ನಡಕಲಾ ಕೇಂದ್ರದ ಅಧ್ಯಕ್ಷರು), ಬೆಳಕಿನಲ್ಲಿ ಸಹಕರಿಸಿದವರು ವೆಂಕಟ, ಪ್ರಸಾಧನದಲ್ಲಿ ಮಂಜುನಾಥ ೧ ಶೆಟ್ಟಿಗಾರ ಬಳಗ, ಇವರೆಲ್ಲರ ಸೃಜನಶೀಲ ಕೊಡುಗೆ ಮುಖ್ಯವಾದದ್ದು. ನೇಪಥ್ಯದಲ್ಲಿ ಸುಚೇತಾ ಶೆಟ್ಟಿ, ವೀಣಾ ಭಟ್ ಇವರ ನೆರವು ನೆನೆಸುವಂತಹದ್ದೇ. ಪಶ್ಚಿಮೋತ್ತರ ಮುಂಬೈನ ದೂರದ ಕಾಂದವಲಿಯಿಂದ ವಾಶಿನವಿ ಮುಂಬೈಗೆ ಸುಮಾರು ೪೫ ಕಿ.ಮಿ. ದಾರಿಯನ್ನು ಕ್ರಮಿಸಲು ಏನೆಂದರೂ ಎರಡು ತಾಸು ಬೇಕೇಬೇಕು. ತಾಲೀಮಿಗೆ ನಾಲ್ಕಾರು ಬಾರಿ ತಮ್ಮ ಕಾರಿನಲಿ ಡ್ರೈವ್ಮಾಡಿಕೊಂಡೊಯ್ದು ಕರೆತರುತಿದ್ದ ಕಲಾವಿದ ಗೆಳೆಯ ಗಣೇಶ್ಕುಮಾರರ ತಾಳ್ಮೆ ಅಪಾರವಾದುದು. ಅವರ ಸಹನೆ ಸಹಕಾರಕ್ಕೊಂದು ಸಲಾಮ್. ……………….. ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಹೌದಲ್ಲ, ಭಾವ ಅದೊಂದು ಭೃಂಗದಂತೆ, ಮಿಂಚಿ ಮಾಯವಾಗುವಂತಹದ್ದು.ಆದರೆ ಕವಿ ಅಂತಹ ಮಿಂಚನ್ನೂ ಹಿಡಿದಿರಿಸಬಲ್ಲ! ಕಾವ್ಯ ಭಾವ ಕನ್ನಡಿಯ ಮೂಲಕ‘ ಅರ‍್ಥವಿಲ್ಲ ಸ್ವರ‍್ಥವಿಲ್ಲ ಬರಿಯ ಭಾವಗೀತ’ ಎಂಬ ಜೀವನ ದರ್ಶನವನ್ನು ಮಾಡಿಸಬಲ್ಲ ದಾರ‍್ಶನಿಕನೂ ಹೌದು. ‘ರಸವೆ ಜನನ ವಿರಸ ಮರಣ ಸಮರಸವೇ ಜೀವನ’ ಎಂಬ ಸುಸೂತ್ರ ಸಂಸಾರಕೆ ಮೂಲಬೀಜ ಮಂತ್ರದ ಸೂತ್ರದಾರಿಯೂ ಹೌದು. ‘ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ ಹಾಲ್ಜೇನು ಸುರಿಯೋಣ, ಕುಣಿಯೋಣು ಬಾರಾ, ಕುಣಿಯೋಣು ಬಾ ಎಂದು ಬದುಕಿನ ಸಂತಸವನ್ನು ಕುಣಿಕುಣಿದು ಅನುಭವಿಸಲು ಹಾರೈಸುವಂತೆ,ಸಂಸಾರಸಾಗರದಾಗ ಕವಿ ಪಟ್ಟ ದು:ಖ ದುಮ್ಮಾನಗಳ ಹೊರೆ ಭಾರವೇನು ಕಡಿಮೆಯದಲ್ಲ. ‘ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ ?’ ಆಗ ತಾನೆ ಹುಟ್ಟಿದ ಇನ್ನೊಂದು ಮಗುವೂ ಕಣ್ಣು ಮುಚ್ಚಿದಾಗ, ಮಡದಿಯ ಆ ಕರುಳು ಹಿಂಡುವ ನೋಟವನ್ನು ನೋಡಲಾರದ ಕವಿಕರುಳು ಮಿಡಿವ ಬಗೆಯದು. ‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೋಯ್ದಾ, ನುಣ್ಣನೆ ಎರಕಾವ ಹೋಯ್ದಾ” ಸುಮಾರು ನೂರಾ ಎರಡು ವರ‍್ಷಗಳ ಹಿಂದೆ ಸಾಧನಕೇರಿಯ ಮನೆ ಅಂಗಳದಿಂದ ಕವಿ ಕಂಡ, ಕಾಣಿಸುವ, ಸೂರ‍್ಯೋದಯ ವರ‍್ಣನೆಯಲ್ಲಿ ತೇಲಿಸುವ, ಇದು ಬರಿ ಬೆಳಗಲ್ಲೋ ಅಣ್ಣಾ ಎಂಬ ಅನೂಹ್ಯ ಅದ್ಭುತಕೆ ಸರಿಸಾಟಿಯಾದ ಕಾವ್ಯವೆಲ್ಲಿ? ಬೆಳಗಲ್ಲಿ ಅದ್ಯಾತ್ಮ ದರ್ಶನಗೈವ ಕವಿ ಸಂಜೆಹೊತ್ತಲ್ಲಿ ; ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತಾ, ಆಗ ಸಂಜೆಯಾಗಿತ್ತ’ ಅಂತ ಕಣ್ಣ ಮಿಟಿಕಿಸುವ ತುಂಟತನಕ್ಕೂ ಕಡಿಮೆ ಇಲ್ಲ. ತಾನೊಲಿದವಳ ಮೊಗದ ಮೇಲೆ ನಗೆನವಿಲು ಆಡುವುದನ್ನು ಕಾಣುವ ಕವಿಯ ಕಲ್ಪನಾ ಕಾಣ್ಕೆಗೆ ಮಿಗಿಲುಂಟೇ ? ಸಾಮಾನ್ಯರ ಪಾಲಿನ ಸಹಜ ಪ್ರೇಮಭಾವ ಮೆರೆವ ‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು, ಅದಕು ಇದಕು ಎದಕು…’ ಎಂಥ ಮಧುರ ಮಧುರ ಪ್ರೇಮಾಲಾಪವಿದು..! ಪ್ರೇಮದ ಮುಂದಿನ ಹೆಜ್ಜೆ ಪ್ರಣಯವಲ್ಲವೇ. ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತ್ತಿದೆ ಸೂರ‍್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ…..’ ಕವಿ ಪ್ರಣಯ ಭಾವವನ್ನು ವ್ಯಕ್ತಪಡಿಸುವ ಪರಿ ನೋಡಿ! ಆದರೆ ಇಲ್ಲಿ ಎಲ್ಲವೂ ಸರಿ ಇರುವುದೇ? ಇಲ್ಲ.ಸಮಾಜದಲ್ಲಿ ಮಾನವ ಪ್ರೇರಿತ ಅತಿರೇಕಕ್ಕೆ ಕೆರಳುವ ಕವಿಯೊಳಗಿನ ರುದ್ರವೀಣೆ ಮಿಡಿಯುವ ಬಗೆ; ‘ಧರ‍್ಮಾಸನಹೊರಳುತಿವೆ’ ಸಿಂಹಾಸನ ಉರುಳುತಿವೆ, ಜಾತಿಪಂಥ ತೆರಳುತಿವೆ ಮನದ ಮರೆಯಲಿ, ಯಾಕೋ ಕಾಣೆ ರುದ್ರವೀಣೆ ಮಿಡಿಯುತ್ತಿರುವುದು…’ ಹೀಗೆ ತನ್ನ ಸುತ್ತಲ ಆಗುಹೋಗುಗಳಿಗೆ ಕಣ್ಣಾದ,ಕಿವಿಯಾದ ಕವಿ ನೊಂದಿದ್ದಾರೆ, ಮರುಗಿದ್ದಾರೆ ಮತ್ತು ಪ್ರತಿಭಟಿಸಲೂ ಹಿಂಜರಿಯದೆ ಧ್ವನಿಯಾಗಿದ್ದಾರೆ. ಕವಿ ಜನರ ನಡುವೆ,ಜನರೊಂದಿಗೇಬದುಕುವವನು ಸಂವಹನಿಸುವವನು. ಆಗ ಹೊರಹೊಮ್ಮುವ ಜನಪದೀಯ ಹಿಗ್ಗಿನ ಹಾಡೇ; ‘ಮಲ್ಲೀಗಿ ಮಂಟಪದಾಗ, ಗಲ್ಲಗಲ್ಲ ಹಚ್ಚಿಕೂತು, ಮೆಲ್ಲ ದನಿಲೆ ಹಾಡೋಣಂತ, ಯಾರಿಗೂ,ನಾವು ಯಾರಿಗೂ ಹೇಳೋಣು ಬ್ಯಾಡ.’. ಜನಸಾಮಾನ್ಯರ ಹಾಡಾಗುವುದು ಹೀಗೆ. ‘ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ ತಮವೆಲ್ಲ ಸೋರಿ, ಮಿಗಿಲಹುದು ಬಾನಬಣ್ಣ….’ ಎಂದು ಮೈದಡವಿ ಎಚ್ಚರಿಸುವ ಕವಿ ಸ್ವತ: ಒಂದು ಕಡೆ ಹೀಗೆ ಹೇಳುತ್ತಾರೆ, “ಈ ಬೇಂದ್ರೆ ಇನ್ನೂ ಬದುಕಿದ್ದಾನೆ. ಏಕೆ ಬದುಕಿದ್ದಾನೆ ಅಂದ್ರೇ, ಹಿಂದಿನವರೆಲ್ಲ ಏನು ಹೇಳಿದ್ದಾರೆ ಅದನ್ನ ಹೇಳೋದಕ್ಕೆ ಬದುಕಿದ್ದಾನೆ…” ….. ಇಂತಹ ಸಶಕ್ತವಾದ ಸ್ಕ್ರಿಪ್ಟ್, ನಾಡಿನ ಧೀಮಂತ ಕವಿವರ‍್ಯರ ಬದುಕನ್ನು ಅವರದ್ದೆ ಕವಿತೆಗಳ ಮೂಲಕ ಎಳೆಎಳೆಯಾಗಿ ತೆರೆದಿಡುವಲ್ಲಿ ಮುಖ್ಯ ಭೂಮಿಕೆ ನಿರ‍್ವಹಿಸುತ್ತದೆ. ಲೇಖಕದ್ವಯರಾದ ಡಾ.ವರದರಾಜಚಂದ್ರಗಿರಿ ಮತ್ತು ಸಾ.ದಯಾರಿಗೆ ವಂದನೆಗಳು, ಅಭಿನಂದನೆಗಳು. …… ಕವಿವರ‍್ಯ ದ.ರಾ.ಬೇಂದ್ರೆಯವರುಬದುಕಿದ್ದರೆ ಅವರಿಗೀಗ ೧೨೫. ಹೌದು, ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಕಾವ್ಯಪ್ರಿಯರ ಅಕ್ಕರಾಸ್ಥೆಯಲಿ ಮತ್ತೆಮತ್ತೆ ಉಸಿರಾಡುತ್ತಲೇ ಇರುತ್ತಾನೆ. ಈ ಅಂಬೋಣವನ್ನು ಅಕ್ಷರಶ: ಸಾಕ್ಷಾತ್ಕಾರಗೊಳಿಸಿ ಮುದ ನೀಡಿದ ನಾದಮಯ ಸಂಜೆಯಾಗಿತ್ತು…. ಅಂಬಿಕಾತನಯದತ್ತ ಕೇವಲ ರೂಪಕವಲ್ಲ, ಬದುಕಿನುದ್ದಕೂ ಕವಿ ಪ್ರತಿಪಾದಿಸುವ, ಅನುಭಾವ ಜೀವನದರ‍್ಶನವಾಗಿದೆ. ನೆರೆದ ಸುಮಾರು ೨೫೦ ಮಂದಿ ನವಿಮುಂಬೈ ಕನ್ನಡಸಂಘದ ಬಂಧುಗಳಲ್ಲಿ ಹೆಚ್ಚಿನವರಿಗೆ ಈ ರಂಗ ರೂಪಕದ ಪರಿಕಲ್ಪನೆಯೇ ಹೊಸತು. ಆದರೆ ಆ ಒಂದು ತಾಸು ಸಭಾಂಗಣದಲ್ಲಿ ಪಿನ್ಡ್ರಾಪ್ಸೈಲೆನ್ಸ್. ಕೊನೆಯಲ್ಲಿ ಹೆಚ್ಚಿನವರ ನಿಂತು ಕರತಾಡನ ಮಾಡುವುದನ್ನು ವೀಕ್ಷಿಸುವ ಆ ಕ್ಷಣದ ಆನಂದ ವರ‍್ಣನಾತೀತ… ಇಷ್ಟೆಲ್ಲ ಸೋಜಿಗ ಸಾಧ್ಯವಾದದ್ದು ಕವಿಶ್ರೇಷ್ಠ ಅಂಬಿಕಾತನಯದತ್ತರಕಾವ್ಯ ಭಾವವಿಲಾಸದ ಸಂಭ್ರಮದಿಂದಲೇ ಅಲ್ಲವೆ. ಗೋಪಾಲತ್ರಾಸಿ ..
‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ. Read Post »

