‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ.

‘ಅಂಬಿಕಾತನಯದತ್ತ

ಮುಂಬೈಯಲ್ಲೊಂದು

ಅಪರೂಪದರಂಗರೂಪಕ.

ಅಂಬಿಕಾತನಯದತ್ತ

ಮುಂಬೈಯಲ್ಲೊಂದು

ಅಪರೂಪದರಂಗರೂಪಕ.

ರಚನೆ: ಡಾ. ವರದರಾಜಚಂದ್ರಗಿರಿಮತ್ತುಸಾ.ದಯಾ

ಪ್ರಸ್ತುತಿ : ಕನ್ನಡಕಲಾಕೇಂದ್ರ, ಮುಂಬೈ.

ಸಮಯ- ಸಂರ‍್ಭ, ನವಿಮುಂಬಯಿಕನ್ನಡಸಂಘ, ವಾಶಿ, ನವಿಮುಂಬಯಿ , ಮೊನ್ನೆದಿನಆಯೋಜಿಸಿದರ‍್ನಾಟಕರಾಜ್ಯೋತ್ಸವಕರ‍್ಯಕ್ರಮದಂದು

ರೂಪಕದಲ್ಲಿ ನೃತ್ಯರೂಪಕ, ಸಂಗೀತರೂಪಕ ಇರುವಂತೆ, ಕಾವ್ಯವಾಚನ-ಗಾಯನ- ನಟನೆಯ ಮೂಲಕ ‘ರಂಗರೂಪಕ’ವನ್ನು ಸಾಧ್ಯವಾಗಿಸಿ ಸಾದರಪಡಿಸಿದವರು ಕಳೆದ ಮೂರು ದಶಕಗಳಿಂದ ಮುಂಬಯಿನ ಕನ್ನಡ ತುಳು ರಂಗಭೂಮಿಯಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವಸೃಜನಶೀಲ ನಾಟಕಕಾರ, ನಟ, ನಿರ‍್ದೇಶಕ, ಕವಿಮಿತ್ರ ಸಾ.ದಯಾ ಎಂಬ ಸರಳ ವಿರಳ ಸಹೃದಯಿ.

ಹಿನ್ನೆಲೆ ಸಂಗೀತ ಸರ್ವ   ಹೊಣೆ ಹೊತ್ತು ತಮ್ಮ ಮಧುರಕಂಠದಿಂದ ಬೇಂದ್ರೆಯವರ ಗೇಯಗೀತೆಗಳ ಭಾವಲಹರಿಯ ನಾದತರಂಗಗಳನ್ನು ಸಭಾಂಗಣದಲಿ ಪಸರಿಸಿದವರು ವಾಸು.ಜೆ.ಮೊಯಿಲಿ.ಸಂಕೋಚದ ಸ್ವಭಾವದ ಈತ ರಾತ್ರಿಶಾಲಾ ದಿನಗಳಿಂದಲೇ ಹಾಡನ್ನು ಗೀಳಾಗಿಸಿಕೊಂಡವರು.ಗೆಳೆಯರಿಂದ ಅಂದಿನಿಂದಲೂ ಮುಂಬೈನ ಪಿ.ಬಿ.ಶ್ರಿನಿವಾಸ್ ಅಂತಲೇ ಕರೆಯಿಸಿಕೊಂಡು,ಎಲೆಮರೆಯಲ್ಲೇ ಇರುವ ಇವರನ್ನು ಮುಂಬೈಯಲ್ಲಿ(ಪರಿಚಿತರೇ), ಮುಖ್ಯ ಕಾರ‍್ಯಕ್ರಮಗಳನಡುವಿನಸಮಯದಲ್ಲಿ ‘ಫಿಲ್ಲರ್‘ ತರಹ ಹಾಡನ್ನು ಹಾಡಲು ಉಪಯೋಗಿಸಿಕೊಂಡವರೇಹೆಚ್ಚು !!!

ಹೇಳಲೇಬೇಕಾದುದುಅಂದು ರೂಪಕದಲ್ಲಿ ಪಾಲುಗೊಂಡ ಪುಟ್ಟ ಪುಟ್ಟ ಮಕ್ಕಳಾದ ಪ್ರತೀಕ್ಷಾ, ಸುನಿಧಿ, ಸಾಕ್ಷೀ, ಸನಾತನ್, ಪ್ರಥ್ವಿ.ಅದರಲ್ಲೂ ಆಂಗ್ಲ ಮಾಧ್ಯಮ ಶಾಲೆಯ ಇವರಲ್ಲಿ ಹೆಚ್ಚಿನವರ ಮಾತೃಭಾಷೆ ಕನ್ನಡ ಅಲ್ಲ.ಬೆರಳೆಣಿಕೆಯ ತಾಲೀಮಿನಲ್ಲಿ ತಮ್ಮ ತಮ್ಮ ಪಾಲಿನದನ್ನು ಶ್ರದ್ದೆಯಿಂದ     ನಿರ‍್ವಹಿಸಿದ ಮಕ್ಕಳ ಹುರುಪು, ಉತ್ಸಾಹ ಚೇತೋಹಾರಿಯಾಗಿತ್ತು.ತಾಲೀಮಿಗೆ ದೂರ ದೂರದಿಂದ ಅವರನ್ನು ಕರೆತರುವ ಹೆತ್ತವರ ಸಹನೆ,ಕೊಡುಗೆಯೂಮಹತ್ತರವಾದುದ್ದೇ.

ಸಾ.ದಯಾ. ಅವರ ಐದು ವರ್ಷದ  ಮಗ ಮೊಹಿನೀಷ್, ತಬಲದಲ್ಲಿ ಸಾಥ್   ನೀಡಿದ ಅವರ ಹಿರಿಯ ಮಗ ರಾಘವೇಂದ್ರ ದೂರದ ದೊಂಬಿವಲಿಯಿಂದ

ಬರುವ ಪಾಡು; ಸಂಘದ ಕಾರ್ಯದರ್ಶಿ ಆಗಿದ್ದು ಗುರುತರ ಜವಾಬ್ದಾರಿಯ ಹೊರೆ ಹೊತ್ತ ಜಗದೀಶ್ ರೈಯವರು ತಮ್ಮ ಪೂರ‍್ಣ ಪರಿವಾರದ(ಮಡದಿ ಬಬಿತಾ ರೈ, ಮಗಳು ಸಾನ್ವಿ, ಮಗ ಸಾತ್ವಿಕ್) ಜೊತೆ ರೂಪಕದಲ್ಲಿ ತೊಡಗಿಸಿಕೊಂಡದ್ದು ಅವರ ಬದ್ಧತೆ ಬಗ್ಗೆ ಶರಣೆನ್ನದೆ ಬೇರೆ ಮಾತಿಲ್ಲ.

ಮಕ್ಕಳ ನೃತ್ಯವಿನ್ಯಾಸ ಮಾಡಿ, ಕೆಲವೊಂದು ಹಾಡಿಗೆ ತಮ್ಮ ಲಾಲಿತ್ಯಪೂರ‍್ಣ ಭಾವಾಭಿನಯ ನೃತ್ಯದ ಮೂಲಕ ರೂಪಕದ ಸೊಬಗಿಗೆ ರಂಗೇರಿಸಿದ ಕಲಾವಿದೆ ಸಹನಾ ಭಾರದ್ವಾಜ್,ಹಾರ‍್ಮೋನಿಯಂನಲ್ಲಿ ಶಿವಾನಂದ ಶೆಣೈ, ತಬಲಾದಲ್ಲಿ ಮರಾಠಿಗ ಶುಭಂ, ಕಲಾವಿದರಾದ ಗಣೇಶ್ಕುಮಾರ,

ಮಧುಸೂದನ ಟಿ.(ಕನ್ನಡಕಲಾ ಕೇಂದ್ರದ ಅಧ್ಯಕ್ಷರು),

ಬೆಳಕಿನಲ್ಲಿ ಸಹಕರಿಸಿದವರು ವೆಂಕಟ, ಪ್ರಸಾಧನದಲ್ಲಿ ಮಂಜುನಾಥ ೧ ಶೆಟ್ಟಿಗಾರ ಬಳಗ, ಇವರೆಲ್ಲರ ಸೃಜನಶೀಲ ಕೊಡುಗೆ ಮುಖ್ಯವಾದದ್ದು.

ನೇಪಥ್ಯದಲ್ಲಿ  ಸುಚೇತಾ ಶೆಟ್ಟಿ, ವೀಣಾ ಭಟ್  ಇವರ ನೆರವು ನೆನೆಸುವಂತಹದ್ದೇ.

ಪಶ್ಚಿಮೋತ್ತರ ಮುಂಬೈನ ದೂರದ ಕಾಂದವಲಿಯಿಂದ ವಾಶಿನವಿ ಮುಂಬೈಗೆ ಸುಮಾರು ೪೫ ಕಿ.ಮಿ. ದಾರಿಯನ್ನು ಕ್ರಮಿಸಲು ಏನೆಂದರೂ ಎರಡು ತಾಸು ಬೇಕೇಬೇಕು. ತಾಲೀಮಿಗೆ ನಾಲ್ಕಾರು ಬಾರಿ ತಮ್ಮ ಕಾರಿನಲಿ ಡ್ರೈವ್ಮಾಡಿಕೊಂಡೊಯ್ದು ಕರೆತರುತಿದ್ದ

ಕಲಾವಿದ ಗೆಳೆಯ ಗಣೇಶ್ಕುಮಾರರ ತಾಳ್ಮೆ ಅಪಾರವಾದುದು. ಅವರ ಸಹನೆ ಸಹಕಾರಕ್ಕೊಂದು ಸಲಾಮ್.

………………..

‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’

ಹೌದಲ್ಲ, ಭಾವ ಅದೊಂದು ಭೃಂಗದಂತೆ, ಮಿಂಚಿ ಮಾಯವಾಗುವಂತಹದ್ದು.ಆದರೆ ಕವಿ ಅಂತಹ ಮಿಂಚನ್ನೂ ಹಿಡಿದಿರಿಸಬಲ್ಲ! ಕಾವ್ಯ ಭಾವ ಕನ್ನಡಿಯ ಮೂಲಕ‘ ಅರ‍್ಥವಿಲ್ಲ ಸ್ವರ‍್ಥವಿಲ್ಲ ಬರಿಯ ಭಾವಗೀತ’ ಎಂಬ ಜೀವನ ದರ್ಶನವನ್ನು   ಮಾಡಿಸಬಲ್ಲ ದಾರ‍್ಶನಿಕನೂ ಹೌದು.

 ‘ರಸವೆ ಜನನ ವಿರಸ ಮರಣ ಸಮರಸವೇ ಜೀವನ’

ಎಂಬ ಸುಸೂತ್ರ ಸಂಸಾರಕೆ ಮೂಲಬೀಜ ಮಂತ್ರದ ಸೂತ್ರದಾರಿಯೂ ಹೌದು.

‘ಇದ್ದದ್ದು ಮರೆಯೋಣ,

ಇಲ್ಲದ್ದು ತೆರೆಯೋಣ

ಹಾಲ್ಜೇನು ಸುರಿಯೋಣ,

ಕುಣಿಯೋಣು ಬಾರಾ, ಕುಣಿಯೋಣು ಬಾ ಎಂದು ಬದುಕಿನ ಸಂತಸವನ್ನು ಕುಣಿಕುಣಿದು ಅನುಭವಿಸಲು ಹಾರೈಸುವಂತೆ,ಸಂಸಾರಸಾಗರದಾಗ ಕವಿ ಪಟ್ಟ ದು:ಖ ದುಮ್ಮಾನಗಳ ಹೊರೆ ಭಾರವೇನು ಕಡಿಮೆಯದಲ್ಲ.

‘ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರೆ ನನ್ನ

ತಿರುಗಿ ನಾ ಹ್ಯಾಂಗ ನೋಡಲೆ ನಿನ್ನ ?’

ಆಗ ತಾನೆ ಹುಟ್ಟಿದ ಇನ್ನೊಂದು ಮಗುವೂ ಕಣ್ಣು ಮುಚ್ಚಿದಾಗ, ಮಡದಿಯ ಆ ಕರುಳು ಹಿಂಡುವ ನೋಟವನ್ನು ನೋಡಲಾರದ ಕವಿಕರುಳು ಮಿಡಿವ ಬಗೆಯದು.

‘ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೋಯ್ದಾ, ನುಣ್ಣನೆ ಎರಕಾವ ಹೋಯ್ದಾ”

ಸುಮಾರು ನೂರಾ ಎರಡು ವರ‍್ಷಗಳ ಹಿಂದೆ ಸಾಧನಕೇರಿಯ ಮನೆ ಅಂಗಳದಿಂದ ಕವಿ ಕಂಡ, ಕಾಣಿಸುವ, ಸೂರ‍್ಯೋದಯ ವರ‍್ಣನೆಯಲ್ಲಿ ತೇಲಿಸುವ, ಇದು ಬರಿ ಬೆಳಗಲ್ಲೋ ಅಣ್ಣಾ ಎಂಬ ಅನೂಹ್ಯ ಅದ್ಭುತಕೆ ಸರಿಸಾಟಿಯಾದ ಕಾವ್ಯವೆಲ್ಲಿ?

ಬೆಳಗಲ್ಲಿ ಅದ್ಯಾತ್ಮ

ದರ್ಶನಗೈವ ಕವಿ ಸಂಜೆಹೊತ್ತಲ್ಲಿ ; ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತಾ, ಆಗ ಸಂಜೆಯಾಗಿತ್ತ’ ಅಂತ ಕಣ್ಣ ಮಿಟಿಕಿಸುವ ತುಂಟತನಕ್ಕೂ ಕಡಿಮೆ ಇಲ್ಲ.

ತಾನೊಲಿದವಳ ಮೊಗದ ಮೇಲೆ ನಗೆನವಿಲು ಆಡುವುದನ್ನು ಕಾಣುವ ಕವಿಯ ಕಲ್ಪನಾ ಕಾಣ್ಕೆಗೆ ಮಿಗಿಲುಂಟೇ ?

ಸಾಮಾನ್ಯರ ಪಾಲಿನ ಸಹಜ ಪ್ರೇಮಭಾವ ಮೆರೆವ

‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು, ಅದಕು ಇದಕು ಎದಕು…’

ಎಂಥ ಮಧುರ ಮಧುರ ಪ್ರೇಮಾಲಾಪವಿದು..!

ಪ್ರೇಮದ ಮುಂದಿನ ಹೆಜ್ಜೆ ಪ್ರಣಯವಲ್ಲವೇ.

‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತ್ತಿದೆ

ಸೂರ‍್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ…..’

ಕವಿ ಪ್ರಣಯ ಭಾವವನ್ನು ವ್ಯಕ್ತಪಡಿಸುವ ಪರಿ ನೋಡಿ!

ಆದರೆ ಇಲ್ಲಿ ಎಲ್ಲವೂ ಸರಿ ಇರುವುದೇ? ಇಲ್ಲ.ಸಮಾಜದಲ್ಲಿ ಮಾನವ ಪ್ರೇರಿತ ಅತಿರೇಕಕ್ಕೆ ಕೆರಳುವ ಕವಿಯೊಳಗಿನ ರುದ್ರವೀಣೆ ಮಿಡಿಯುವ ಬಗೆ;

‘ಧರ‍್ಮಾಸನಹೊರಳುತಿವೆ’ ಸಿಂಹಾಸನ ಉರುಳುತಿವೆ, ಜಾತಿಪಂಥ ತೆರಳುತಿವೆ ಮನದ ಮರೆಯಲಿ, ಯಾಕೋ ಕಾಣೆ ರುದ್ರವೀಣೆ ಮಿಡಿಯುತ್ತಿರುವುದು…’

ಹೀಗೆ ತನ್ನ ಸುತ್ತಲ ಆಗುಹೋಗುಗಳಿಗೆ

ಕಣ್ಣಾದ,ಕಿವಿಯಾದ ಕವಿ ನೊಂದಿದ್ದಾರೆ, ಮರುಗಿದ್ದಾರೆ ಮತ್ತು ಪ್ರತಿಭಟಿಸಲೂ ಹಿಂಜರಿಯದೆ ಧ್ವನಿಯಾಗಿದ್ದಾರೆ.

ಕವಿ ಜನರ ನಡುವೆ,ಜನರೊಂದಿಗೇಬದುಕುವವನು ಸಂವಹನಿಸುವವನು. ಆಗ ಹೊರಹೊಮ್ಮುವ ಜನಪದೀಯ ಹಿಗ್ಗಿನ ಹಾಡೇ;

‘ಮಲ್ಲೀಗಿ ಮಂಟಪದಾಗ, ಗಲ್ಲಗಲ್ಲ ಹಚ್ಚಿಕೂತು, ಮೆಲ್ಲ ದನಿಲೆ ಹಾಡೋಣಂತ, ಯಾರಿಗೂ,ನಾವು ಯಾರಿಗೂ ಹೇಳೋಣು ಬ್ಯಾಡ.’.

ಜನಸಾಮಾನ್ಯರ ಹಾಡಾಗುವುದು ಹೀಗೆ.

‘ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯೆ ಕಣ್ಣ, ನಕ್ಷತ್ರ ಜಾರಿ ತಮವೆಲ್ಲ ಸೋರಿ, ಮಿಗಿಲಹುದು ಬಾನಬಣ್ಣ….’ ಎಂದು ಮೈದಡವಿ ಎಚ್ಚರಿಸುವ ಕವಿ ಸ್ವತ: ಒಂದು ಕಡೆ ಹೀಗೆ ಹೇಳುತ್ತಾರೆ,

“ಈ ಬೇಂದ್ರೆ ಇನ್ನೂ ಬದುಕಿದ್ದಾನೆ. ಏಕೆ ಬದುಕಿದ್ದಾನೆ  ಅಂದ್ರೇ, ಹಿಂದಿನವರೆಲ್ಲ ಏನು ಹೇಳಿದ್ದಾರೆ ಅದನ್ನ ಹೇಳೋದಕ್ಕೆ ಬದುಕಿದ್ದಾನೆ…”

…..

ಇಂತಹ ಸಶಕ್ತವಾದ ಸ್ಕ್ರಿಪ್ಟ್, ನಾಡಿನ ಧೀಮಂತ ಕವಿವರ‍್ಯರ ಬದುಕನ್ನು ಅವರದ್ದೆ ಕವಿತೆಗಳ ಮೂಲಕ ಎಳೆಎಳೆಯಾಗಿ ತೆರೆದಿಡುವಲ್ಲಿ ಮುಖ್ಯ ಭೂಮಿಕೆ ನಿರ‍್ವಹಿಸುತ್ತದೆ. ಲೇಖಕದ್ವಯರಾದ ಡಾ.ವರದರಾಜಚಂದ್ರಗಿರಿ ಮತ್ತು ಸಾ.ದಯಾರಿಗೆ ವಂದನೆಗಳು, ಅಭಿನಂದನೆಗಳು.

……

ಕವಿವರ‍್ಯ ದ.ರಾ.ಬೇಂದ್ರೆಯವರುಬದುಕಿದ್ದರೆ ಅವರಿಗೀಗ ೧೨೫.

ಹೌದು, ಕವಿಗೆ ಸಾವಿಲ್ಲ. ಆತ ತನ್ನ ಕವಿತೆಗಳ ಮೂಲಕ ಕಾವ್ಯಪ್ರಿಯರ ಅಕ್ಕರಾಸ್ಥೆಯಲಿ ಮತ್ತೆಮತ್ತೆ ಉಸಿರಾಡುತ್ತಲೇ ಇರುತ್ತಾನೆ. ಈ ಅಂಬೋಣವನ್ನು ಅಕ್ಷರಶ:  ಸಾಕ್ಷಾತ್ಕಾರಗೊಳಿಸಿ ಮುದ ನೀಡಿದ ನಾದಮಯ ಸಂಜೆಯಾಗಿತ್ತು….

ಅಂಬಿಕಾತನಯದತ್ತ ಕೇವಲ ರೂಪಕವಲ್ಲ,

ಬದುಕಿನುದ್ದಕೂ ಕವಿ ಪ್ರತಿಪಾದಿಸುವ, ಅನುಭಾವ ಜೀವನದರ‍್ಶನವಾಗಿದೆ.

ನೆರೆದ ಸುಮಾರು ೨೫೦ ಮಂದಿ ನವಿಮುಂಬೈ ಕನ್ನಡಸಂಘದ ಬಂಧುಗಳಲ್ಲಿ ಹೆಚ್ಚಿನವರಿಗೆ ಈ ರಂಗ ರೂಪಕದ ಪರಿಕಲ್ಪನೆಯೇ ಹೊಸತು. ಆದರೆ ಆ ಒಂದು ತಾಸು ಸಭಾಂಗಣದಲ್ಲಿ ಪಿನ್ಡ್ರಾಪ್ಸೈಲೆನ್ಸ್. ಕೊನೆಯಲ್ಲಿ ಹೆಚ್ಚಿನವರ ನಿಂತು ಕರತಾಡನ ಮಾಡುವುದನ್ನು ವೀಕ್ಷಿಸುವ ಆ ಕ್ಷಣದ ಆನಂದ ವರ‍್ಣನಾತೀತ…

ಇಷ್ಟೆಲ್ಲ ಸೋಜಿಗ ಸಾಧ್ಯವಾದದ್ದು ಕವಿಶ್ರೇಷ್ಠ ಅಂಬಿಕಾತನಯದತ್ತರಕಾವ್ಯ ಭಾವವಿಲಾಸದ ಸಂಭ್ರಮದಿಂದಲೇ ಅಲ್ಲವೆ.


ಗೋಪಾಲತ್ರಾಸಿ



..

One thought on “‘ಅಂಬಿಕಾತನಯದತ್ತ’ಮುಂಬೈಯಲ್ಲೊಂದುಅಪರೂಪದರಂಗರೂಪಕ.

Leave a Reply

Back To Top