ಅನುಭವ ಸಂಪಾದನೆ
ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’ ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ! ‘ಹುಟ್ಟಿದ ಮೇಲೆ ಸಾವು […]
ಅಂಕಣ ಸಂಗಾತಿ ತೊರೆಯ ಹರಿವು ಭಾವಶುದ್ಧ ಇರದವರಲ್ಲಿ…. ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವ ಶುದ್ಭವಿಲ್ಲದವರಲ್ಲಿ ಧೂಪನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ – ಅಕ್ಕ ಮಹಾದೇವಿ. ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, […]
ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ […]
ಒಂದು ಸವಿ ಮುಂಜಾವಿನ ತಳ್ಳುಗಾಡಿಯ ಮಾರಾಟಗಾರರ ಕೂಗಿನ ಬನಿಯೊಡನೆ ಮೂಡಿನಿಂತ ಈ ಲೇಖನ, ‘ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣನನ್ನು ಕರೆದು ಗೌರವಿಸಲಾಗಿರುವಂತೆ, ‘ಹೊಸದಿನದ ಜಾಗೃತ ಮುಂಗೋಳಿ’ಗಳೆಂದು ನಾವು ಮುಂಜಾವಿನ ಈ ಮಾರಾಟಗಾರರನ್ನು ಕರೆದು ಗೌರವಿಸಬಹುದು ಅಲ್ಲವೇ ಎಂಬ ಸದಾಶಯವನ್ನು ಹಾಗೇ ಮನದ ಬಾನಿನಲಿ ತೇಲಿಸಿತು…
‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ; ಸಹಾಯ ಹಸ್ತ ಚಾಚುವ ಸಂದರ್ಭಗಳಲ್ಲಿ ಇದು ಅನ್ವಯಿಸಬಹುದೇ ಹೊರತು ಆಡು, ಮಾತನಾಡು, ಮಾತನಾಡಿದ್ದನ್ನು ಮಾಡು ಎಂಬುದನ್ನು ಎಲ್ಲ ವಿಚಾರಕ್ಕೂ ಪರಿಭಾವಿಸಿ ನಡೆದುಕೊಳ್ಳುವುದು ಅಗತ್ಯವಿಲ್ಲ.
ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ […]
ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ ಬರುವೆ, ಸೈನ್ಯ ತರುವೆ..‘ ಎಂದು ಚಡಪಡಿಸಿ ಬಡಬಡಾಯಿಸಿದ್ದ ಎಂದು ತಿಳಿದಾಗ, ಎಂಥಾ ರಾಜಾಧಿರಾಜ ಆದರೂ ಅಪ್ಪನೆಂಬ ಅಂತಃಕರಣ ಮೀರಲಾದೀತೇ ಎನಿಸುತ್ತದೆ.
ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.
ಹೆಸರಿನಲ್ಲಿ ‘ಸಮಾಜಶಾಸ್ತ್ರಜ್ಞೆ’ ಎಂದು ಇರುವುದರಿಂದ ಆಕೆ ಯಾರು? ಎಂಬ ಕುತೂಹಲದೊಡನೆ ಕತೆಗೆ ಪ್ರವೇಶ ಪಡೆದರೆ, ‘ನನ್ನ ಕಾಲದಲ್ಲಿ ಹೀಗಿತ್ತೆ? ನಾಲ್ಕು ದಿನದ ಮದುವೆ. ಈಗಿನದೆಲ್ಲಾ ಎಂತದು, ಬರೀ ನಾಟಕದ ಹಾಗೆ’ ಎಂದು ಗೊಣಗುತ್ತಾ ಸಮಾಜದ ಬದಲಾವಣೆಯ ಬಗ್ಗೆ ತಮ್ಮ ಟೀಕೆ-ಟಿಪ್ಪಣಿಗೆ ತೊಡಗುವುದರಿಂದ ಎದುರಾಗುವ ವಾಗತ್ತೆಯೇ ಸಮಾಜಶಾಸ್ತ್ರಜ್ಞೆ ಇರಬಹುದೇ ಎಂದು ಸಂಶಯಪಡಬೇಕಾಗುತ್ತದೆ. ಆದರೆ ವಾಗತ್ತೆ ಹಾಗೆ ಸಂಶಯಪಡಲು ಒಂದು ನಿಮಿತ್ತ ಜೀವ.