Category: ಗಝಲ್

ಕಾಫಿಯಾನ ಗಜಲ್

ಕಾಫಿಯಾನ ಗಜಲ್ ಅಮೃತ ಎಂ ಡಿ ಅಪ್ಯಾಯಮಾನ ಒಲವ ಹಂಚುವ ಸರದಿ ನನ್ನದುಅಭೂತಪೂರ್ವ ಸಾನಿಧ್ಯ ನೀಡುವ ಗುಣ ನಿನ್ನದು ತುಸು ತುಂಟಾಟವ ಮರೆಮಾಚು ಲಜ್ಜೆ ಆವರಿಸುತ್ತದೆನಡುವಿನ ಒನಪಿನಲ್ಲಿ ಕಾಡಿಸುವುದ ಯಾರು ಕಲಿಸಿದ್ದು.? ಅಧರದಲ್ಲಿ ಏನು ಮಧು ಬಟ್ಟಲು ಅಡಗಿ ಕುಳಿತಿದ್ಯ..?ಚುಂಬಿಸುವ ಪರಿಗೆ ಮೊಗವೆಲ್ಲ ಕೆಂಪೇರಿ ನಲಿಯುವುದು ಶರಾಬಿನ ರಸವ ಹೀರಿದಂತೆ ಒಷ್ಠದಲ್ಲಿಯೂ ಇರುವುದ..?ಪಾಪ ಮೊಗ್ಗಿನಂತೆ ಮೃದು ಆಕೆ, ಸೊರಗಿ ಬಿಟ್ಟಾದು. ಅಮ್ಮು ಈ ಹೈದನ್ಯಾಕೋ ಬಿಡುಗಡೆ ನೀಡುವಂತಿಲ್ಲಮನವು ಅವನ ಆಲಿಂಗನದಲ್ಲಿ ನಕ್ಕು ಕುಣಿಯುವುದು.. ****************************************************

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಎದೆಯೊಳಗೆ ನೂರು ಮುಳ್ಳುಗಳಿದ್ದರು ಮೊಗದಲ್ಲಿ ನಗೆಹೂ ಸುರಿದವಳು ನೀನಲ್ಲವೆ ಮನದೊಳಗೆ ನೂರು ಕಂಬನಿಗಳಿದ್ದರೂ ಕಣ್ಣಲ್ಲಿ ಬೆಳದಿಂಗಳ ಚೆಲ್ಲಿದವಳು ನೀನಲ್ಲವೆ ಏನೊಂದನೂ ಬಯಸದೆ ಬಂಡೆಗಲ್ಲಿನಲೂ ಬದುಕುವ ಛಲ ಹೊತ್ತು ಹಬ್ಬುತ್ತ ನಡೆದೆ ನಿಂತ ನೆಲದೊಳಗೆ ಬೇರಿಳಿಸುತ್ತಲೇ ಬೆಳಕಿನ ಪಥದಲ್ಲಿ ಹೆಜ್ಜೆ ಊರಿದವಳು ನೀನಲ್ಲವೆ ಸಾಗರದಷ್ಟು ಪ್ರೀತಿಯಿದ್ದರೂ ಭೋರ್ಗರೆಯುವುದನೇ ಮರೆತು ಹೊಯ್ದಾಡುತಲಿದ್ದೆ ಮುತ್ತು ರತ್ನ ಹವಳಗಳ ಒಡಲಲಿ ಹೊತ್ತು ಜಲಧಿಯ ಮುಸುಕ ಹೊದ್ದವಳು ನೀನಲ್ಲವೆ ಸುಂದರತೆ ಎಂಬುದೂ ಸೋತು ನಿನ್ನೆದುರು ಮಂಡಿಯೂರಿ ತನ್ನಸ್ತಿತ್ವಕೇ ನರಳಾಡಿತು ಆಗಸದಷ್ಟು […]

ಗಜಲ್

ಅವನೊಲವೇ ಉಚ್ಛ್ವಾಸ ನಿಶ್ವಾಸಕೆ ಪ್ರಾಣವಾಯುವಾಗಿತ್ತು
ಪ್ರಶ್ನೆಗಳ ಬಲೆಯಲ್ಲಿ ಉಸಿರುಗಟ್ಟಿಸಿದ ಕಾರಣ ತಿಳಿಯಲಿಲ್ಲ

ಕಾಫಿಯಾನ ಗಝಲ್

ಕಾಫಿಯಾನ ಗಝಲ್ ಜಬೀವುಲ್ಲಾ ಎಂ. ಅಸದ್ ಇರುಳಲ್ಲಿ ಹಚ್ಚಿಟ್ಟ ದೀಪಗಳ ಬೆಳಗು ಹಗಲಲ್ಲಿ ಮಾಯವಾಗಿದೆಹೃದಯದಲ್ಲಿ ಹುದುಗಿದ್ದ ಪ್ರೇಮದ ಬೀಜ ಈಗ ಮೊಳಕೆಯಾಗಿದೆ ಕಾಣದ ಭರವಸೆಯ ಕರಪಿಡಿದು ನಡೆದಿರುವೆ ಸುಮ್ಮನೆ ಎಲ್ಲಿಗೋನೆನಪಿನಾಗಸ ಗುಡುಗಿ ಧೋಗುಟ್ಟಿ ಸುರಿದು ಮನಸ್ಸು ಹಸಿಯಾಗಿದೆ ಹೃದಯದ ಹಾದಿಯಲ್ಲಿದೆ ನಿನ್ನ ಹೆಜ್ಜೆ ಗುರುತುಗಳ ಕಾಡುವ ಸದ್ದುಮದ್ದಿಲ್ಲದ ಮನದ ನೋವಿಗೆ ಕಣ್ಣ ಕಂಬನಿ ಸಾಂತ್ವನವಾಗಿದೆ ನಶ್ವರದ ಬಾಳಿದು ಸಾರ್ಥಕವಾಗಿಸಬೇಕು ಶಾಶ್ವತೆಯ ಅರಸದಿರುಮುಂಜಾವಿಗೆ ಅರಳಿ ಘಮಘಮಿಸಿದ ಸುಮ ಸಂಜೆಗೆ ಸಾವಾಗಿದೆ ಕಾಣದ ಕಿಚ್ಚು ಹುಚ್ಚೆದ್ದು ಹಬ್ಬಿ ಸುಡುತ್ತಿಹುದು ಸಂಬಂಧಗಳನ್ನುಒಡಲ […]

ಗಜಲ್

ಗಜಲ್ ವಾಯ್.ಜೆ.ಮಹಿಬೂಬ ಹೃದಯದಲಿ ಪ್ರೀತಿ ಅಂಕುರಿಸಿದೆ ಸಸಿಯಾಗಿಸಲು ಬಾ ಸಖಿಹದವಾಗಿ ಮನಬೆರೆಸಿ ಉದಯರಾಗದಿ ನೀರೆರೆಯಲು ಬಾಸಖಿ ಅನುಮಾನ ಸಂಶಯದ ಶೆಕೆ ಬಡಿಯದಿರಲಿ ಎಲ್ಲಿಯೂ ಇದಕೆನಂಬುಗೆ ವಿಶ್ವಾಸಗಳ ರೆಕ್ಕೆ-ಪುಕ್ಕಗಳಾಗಿ ವಿಹರಿಸಲು ಬಾ ಸಖಿ ಅನುವು-ತನುವುಗಳೆ ದಿನಮಂತ್ರಗಳಾಗಲಿ ನಮ್ಮಿಬ್ಬರ‌ ಬಾಳ್ಗೆನೀನಿರುವಾಗ ಹಂಗ್ಯಾತರದು ಸತ್ಕಾಲಕೆ ಹಿತವಾಗಲು ಬಾ ಸಖಿ ಹರಾಮಿನ ಅರಮನೆ ತೊರೆದುಬಿಡು,ಕಂಬಳಿ-ದಿನದಂಬಲಿ ಸಾಕುತಮಕೆ ಬೆಳಕು-ಅಹಂಗೆ ವಿರಾಮ,ನಾನು ಸಂಭ್ರಮಿಸಲು ಬಾಸಖಿ ‘ಅಜಾದ್’ಬಯಸುವುದೇನಿದೆ,ಬಯಕೆಯೂ ಅರಾಮಿನಲ್ಲಿದೆಸತ್ಕರಿಸಿದವನೇ ಜಗದೊಡೆಯನಿಗೆ ಕರಮುಗಿಯಲು ಬಾಸಖಿ ***********************************************************

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಲ್ಲಿಗೆಯಿಲ್ಲ ಮುಡಿಯಲಿ ಘಮವಾದರೂ ಇರುಳಿಗೆ ಇರಲಿಶಶಿಯಿಲ್ಲ ನಭದಲಿ ನಕ್ಷತ್ರ ವಾದರೂ ಇರುಳಿಗೆ ಇರಲಿ ಬತ್ತಿ ಎಣ್ಣೆ ಕುಡಿದು ಖುಷಿಯಲಿ ಹರಡಿತು ಬೆಳಕು ಕೋಣೆಯಲಿಅಮಲೇರಲು ಪ್ರೀತಿಯ ಮಧುವಾದರೂ ಇರುಳಿಗೆ ಇರಲಿ ಮೌನ ಚೂರಿಯಿಂದ ಇರಿದು ಗಾಯಗೊಳಿಸಿದೆ ಒಲಿದ ಹೃದಯಎದೆಯ ಉರಿ ಆರಲು ಲಾಲಿ ಹಾಡಾದರೂ ಇರುಳಿಗೆ ಇರಲಿ ಬಯಕೆಯ ಮೃಗಜಲದ ಬೆನ್ನಹಿಂದೆ ಓಡಿ ಓಡಿ ಬಳಲಿದೆಅನುರಾಗದ ಬದುಕಾಗಲು ಕನಸಾದರೂ ಇರುಳಿಗೆ ಇರಲಿ ಏಕಾಂಗಿಯ ಬೇಸರದ ಉಸಿರು ಎಣಿಸುತಿದೆ ತಾರೆಗಳನೊಂದ ಜೀವಿಗೆ ಸುಖದ “ಪ್ರಭೆ” […]

ಗಜಲ್

ಗಜಲ್ ಸರೋಜಾ ಶ್ರೀಕಾಂತ್ ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ ***********************************

ಗಜಲ್

ಗಜಲ್ ಶಿವರಾಜ್.ಡಿ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ *******************************************

ಗಜಲ್

ಗಜಲ್ ಎ. ಹೇಮಗಂಗಾ ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ ತನುವಿಂದು ಕೊರಡಾಗಿ ಬಾಡಿದೆ ಹಿತ […]

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

Back To Top