ಕಾರ್ಮಿಕ ದಿನದ ವಿಶೇಷ-ಬರಹ
ಮನೆಯ ಕಾರ್ಮಿಕರು ವಸುಂಧರಾ ಕದಲೂರು. ‘ಮನೆಯ ಕಾರ್ಮಿಕರು’ ‘ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ ‘ ಎಂದು ಪ್ರಾರಂಭವಾಗುವ ಬಸವಣ್ಣನವರ ಒಂದು ವಚನವಿದೆ. ‘ಕಾಯಕವೇ ಕೈಲಾಸ’ ವೆಂದು ಜೀವನದ ನಿಜತತ್ವ ಸಾರಿದ ಬಸವಣ್ಣನವರದು ಶರಣ ಸತಿ ಲಿಂಗ ಪತಿಯ ಭಾವ. ಲಾಕ್ ಡೌನ್ ಸಮಯದಲ್ಲಿ ಮನೆವಾರ್ತೆಗೆ ಎಳಸುತ್ತಿರುವ ಗಂಡಂದಿರು ಅದೆಷ್ಟು ಜನವೋ.. ಬಹುಶಃ ಕೆಲವರಿಗಾದರೂ ಈಗ ಮನೆಕೆಲಸದ ಮಹತ್ವ ಅರಿವಾಗಿರಬಹುದು. ಇಲ್ಲವಾದರೆ, “ನನ್ನ ಹೆಂಡತಿಯೇ..? ಎಲ್ಲೂ ಕೆಲಸಕ್ಕೋಗಲ್ಲ, ಮನೇಲಿರ್ತಾಳೆ” ಎಂದು ಮೂಗು […]
ಕಾರ್ಮಿಕ ದಿನದ ವಿಶೇಷ -ಲೇಖನ
ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಶಿವಲೀಲಾ ಹುಣಸಗಿ ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಇಂದು ಸಮಾನತೆ,ಅಸಮಾನತೆಗಳ ನಡುವೆ ತುಟಿಕಚ್ಚಿ ಹಿಡಿದು ಮೌನದೊಳಗೆ ತನ್ನಾತ್ಮವನ್ನು ಬಿಗಿದು ಒಡಲೊಳಗೆ ಅಗ್ನಿಯನ್ನು ಬಚ್ಚಿಟ್ಟು ನಡೆಯುವ ಸಂಸಾರದ ನೋಗವನ್ನು ಎಳೆಯುವ ಜೀವವೆಂದರೆ ಅದು ಹೆಣ್ಣು… ಸಾಧನೆಯ ಮೆಟ್ಟಿಲೇರಿದ ಮಹಿಳೆಯರ ಸಾಲು ಬೆರಳೆನಿಕೆಯಷ್ಟಿದ್ದರೂ,ಅದೇ ಮಹತ್ತರ ಶಿಖರವೆಂಬಂತೆ ಬಿಂಬಿಸಿ, ಮಹಿಳಾ ಸಬಲೀಕರಣವಾಗಿದೆಯೆಂದು ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ..ನಮ್ಮ ದೇಶ ಪುರುಷ ಪ್ರಧಾನ ಸಮಾಜದ ಅಡಿಯಲ್ಲಿ ಮುಂದುವರೆದಿದ್ದಕ್ಕೆ ಇತಿಹಾಸ ಸಾಕ್ಷಿ….ಆದರೆ ಸಾಧಕರೂ ಇನ್ನೂ ಎಲೆಮರೆಯಕಾಯಿಯಂತೆ […]
ಕಾರ್ಮಿಕದಿನದ ವಿಶೇಷ-ಲೇಖನ
ಅರ್ಥ ಕಳೆದುಕೊಳ್ಳುವ ಸಮಯ ಪ್ರಮೀಳಾ .ಎಸ್.ಪಿ.ಜಯಾನಂದ್. ಅರ್ಥ ಕಳೆದುಕೊಳ್ಳುವ ಸಮಯ. “ರೈತ ದೇಶದ ಬೆನ್ನೆಲುಬು” ಎನ್ನುವರು.ಹಸಿವು ಇಂಗಿಸುವ ಕಾಯಕ ಮಾಡುವ ರೈತ ದೇಹದ ಮತ್ತು ದೇಶದ ಆಧಾರ ವಾಗಿರುವುದು ಸತ್ಯ. ಹಾಗಾಗಿಯೇ ದೇಶದ ಹಲವಾರು ಯೋಜನೆಗಳು ರೈತರ ಪರವಾಗಿ ಬಂದು ನಿಲ್ಲುತ್ತವೆ.ಆದರೆ ಕೃಷಿಭೂಮಿ ಇಲ್ಲದವರು,ಕಾರ್ಖಾನೆ ಗಳಲ್ಲಿ ದುಡಿಯುವ ಮಂದಿ,ಕೂಲಿ ಕಾರ್ಮಿಕರು, ಹಲವಾರು ಸ್ತರಗಳಲ್ಲಿ ದುಡಿದು ದೇಶದ ಅಭಿವೃದ್ಧಿಗೆ ಕರಣರಾಗುತ್ತಾರೆ.ಇವರುಗಳಲ್ಲಿ ಎರಡು ವಿಧ. 1-ಸಂಘಟಿತ ಕಾರ್ಮಿಕರು 2-ಅಸಂಘಟಿತ ಕಾರ್ಮಿಕರು. ಈ ದೇಶದ ಕಾರ್ಮಿಕ ಕಾಯ್ದೆಯು ಹಲವು ಸೌಲಭ್ಯಗಳು ಮತ್ತು […]
ಕಾರ್ಮಿಕ ದಿನದ ವಿಶೇಷ ಲೇಖನ
ಕಾರ್ಮಿಕರಿಲ್ಲದ ಕಾರ್ಮಿಕ ದಿನಾಚರಣೆ ಗಣೇಶ್ ಭಟ್ ಶಿರಸಿ ಕಾರ್ಮಿಕರಿಲ್ಲದ ಕಾರ್ಮಿಕ ದಿನಾಚರಣೆ ಕೆಂಪು ಧ್ವಜಗಳ ಹಾರಾಟ, ಜನರ ಮೆರವಣ ಗೆಗಳಿಲ್ಲದ ಕಾರ್ಮಿಕ ದಿನಾಚರಣೆ ನಡೆಯುತ್ತಿದೆ. ಎಂದಿನಂತೆ ಸರ್ಕಾರ ರಜೆ ಘೋಷಿಸಿದ್ದರೂ, ರಜೆಯನ್ನು ಅನುಭವಿಸಲಾರದ ಸ್ಥಿತಿಗೆ ಜಗತ್ತಿನಾದ್ಯಂತ ಕಾರ್ಮಿಕರು ತಲ್ಪಿದ್ದಾರೆ. ಮೇ 1 ನೇ ತಾರೀಕಿನಂದು ಕಾರ್ಮಿಕ ದಿನ ಆಚರಿಸಲು ಕಾರಣವಾದ ಘಟನೆ ನಡೆದಿದ್ದು 1886 ರಲ್ಲಿ. ಅಮೇರಿಕಾವು ಅದಾಗಲೇ ಆರ್ಥಿಕ ಹಿಂಜರಿತದಿಂದ ಜರ್ಝರಿತವಾಗಿತ್ತು. 1882 ರಿಂದಲೂ ಮಂದಗತಿಯಲ್ಲಿದ್ದ ಆರ್ಥಿಕ ಸ್ಥಿತಿಯಿಂದಾಗಿ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದರು. […]
ಕಾರ್ಮಿಕ ದಿನದ ವಿಶೇಷ-ಲೇಖನ
ನಾವು ಬಾಲ ಕಾರ್ಮಿಕರು. ಗೌರಿ.ಚಂದ್ರಕೇಸರಿ ನಾವು ಬಾಲ ಕಾರ್ಮಿಕರು. ಹೌದು. ನಾವು ಕೂಲಿ ಮಾಡುವ ಮಕ್ಕಳು. ನಮ್ಮನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಾರೆ. ನಮ್ಮೆಲ್ಲರ ಕನಸುಗಳು ಹೆಚ್ಚೂ ಕಮ್ಮಿ ಒಂದೇ ತೆರನಾಗಿರುತ್ತವೆ. ಬೇರೆ ಬೇರೆ ಬಣ್ಣದ ಬಟ್ಟೆ ತೊಟ್ಟಿರುತ್ತವೆ. ಆದರೆ ಕನಸಿನ ಪರಿಧಿ ಭಿನ್ನ. ಅವು ಕೈಗೂಡಲಾರದ ಕನಸುಗಳೆಂದು ನಮಗೆ ಗೊತ್ತು. ಆದರೆ ಕನಸುಕಾಣಲು ಹಣವನ್ನೇನೂ ಕೊಡಬೇಕಿಲ್ಲವಲ್ಲ.ಸೈಕಲ್ ಶಾಪ್ ಒಂದರಲ್ಲಿ ಪಂಕ್ಚರ್ ಹಾಕುತ್ತ ನಾನೊಬ್ಬಸೈಕ್ಲಿಸ್ಟ್ ಆಗಬೇಕೆಂದೋ, ಹೋಟೆಲ್ ಒಂದರಲ್ಲಿ ಎಂಜಲುಹೊದ್ದು ಮಲಗಿದ ಟೇಬಲ್‌ನ್ನು ಶುಚಿಗೊಳಿಸುತ್ತ, ಗ್ರಾಹಕರ ಜೊತೆ […]
ಕಾರ್ಮಿಕ ದಿನದ ವಿಶೇಷ
ಅರಿವು ಬಹು ಮುಖ್ಯ..! ಕೆ.ಶಿವು ಲಕ್ಕಣ್ಣವರ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕ ದಿನದ ಅರಿವು ಬಹು ಮುಖ್ಯ..! ಮೇ 1, ವಿಶ್ವ ಕಾರ್ಮಿಕರ ದಿನಾಚರಣೆಯ ದಿನ. ಇದು ಮಹತ್ವದ ದಿವಾಗಿದೆ. ಮೇ ದಿನ ಅಥವಾ ವಿಶ್ವ ಕಾರ್ಮಿಕರ ದಿನಾಚರಣೆ ದಿನಕ್ಕೆಂಟು ಗಂಟೆಗಳ ನಿಗದಿತ ಕೆಲಸಕ್ಕಾಗಿ ಆರಂಭವಾದ ಹೋರಾಟವನ್ನು ಸ್ಮರಿಸುವ ಈ ದಿನವನ್ನು ಕಾರ್ಮಿಕರು ಇಡೀ ಜಗತ್ತಿನಾದ್ಯಂತ ತಮ್ಮ ಹಕ್ಕುಗಳಿಗಾಗಿ ನಡೆಸುವ ಹೋರಾಟದ ದಿನವನ್ನಾಗಿ ಆಚರಿಸುತ್ತಾರೆ. ಈ ಆಚರಣೆಗೆ ಒಂದು ಶತಮಾನಕ್ಕೂ ಮೀರಿದ ಸುದೀರ್ಘ […]
ಕಾರ್ಮಿಕ ದಿನದ ವಿಶೇಷ-ಲೇಖನ
ಪ್ರತಿಯೊಬ್ಬರೂ ಕಾರ್ಮಿಕರೇ ಶೃತಿ ಮೇಲುಸೀಮೆ ಪ್ರತಿಯೊಬ್ಬರೂ ಕಾರ್ಮಿಕರೇ ಇಂದು ಮೇ ಒಂದು, ಅಂತಾರಾಷ್ಟ್ರೀಯ ಕಾರ್ಮಿಕ ದಿನ. ಇದನ್ನು 1886, ಮೇ 4 ರಂದು ಚಿಕಾಗೋದಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಖಂಡಿಸಿದ ಪ್ರತೀಕದ ಕುರುಹುವಾಗಿ ಆಚರಿಸುತ್ತಾ ಬರಲಾಗುತ್ತದೆ. ಈ ಕಾರ್ಮಿಕ ದಿನದ ಮೂಲ ಕುರುಹು ಇರುವುದು ಅಮೆರಿಕದಲ್ಲಿ, ಅಲ್ಲಿ ಕಾಲರಾಡೋ ರಾಜ್ಯ 1887ರಲ್ಲಿ ಮಾರ್ಚ್ 15 ರಂದು ಕಾರ್ಮಿಕ ದಿನ ಆಚರಣೆಗೆ ಕಾನೂನನ್ನು ಮಾನ್ಯ ಮಾಡಿತು. ಭಾರತದಲ್ಲಿ ಈ ದಿನವನ್ನು 1927ರಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದು […]
ಕಾರ್ಮಿಕ ದಿನದ ವಿಶೇಷ -ಲೇಖನ
ಲೇಖನ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಚಂದ್ರು ಪಿ ಹಾಸನ್ ವಿಶ್ವದ ಕಾರ್ಮಿಕರು ಒಂದಾಗಿ ಎನ್ನುವ ಕಾರ್ಮಿಕ ದಿನಾಚರಣೆ ಕಾಯಕವೇ ಕೈಲಾಸವೆಂಬ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರ ರ ಸನ್ನುಡಿ ಗಳಂತೆ ಭೂಮಿಯ ಪ್ರತಿಯೊಂದು ಜೀವಿಯು ಜನಿಸಿದ ಮೇಲೆ ತನ್ನದೇ ಆದ ನಿತ್ಯಕರ್ಮ ಗಳಿಂದ ಜೀವನ ನಡೆಸಬೇಕಾಗುತ್ತದೆ ಕಾರ್ಮಿಕ ಜೀವನಶೈಲಿಯು ಅತ್ಯಂತ ಸುಂದರ ಹಾಗೂ ಸಮಾಧಾನಕರವಾಗಿದೆ . ಕರ್ಮಯೋಗಿ ಕಾರ್ಮಿಕ ಅವನು ಎಲ್ಲ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಕೊಂಡು ತನಗಾಗಿ, ತನ್ನವರಿಗೆ, […]
ಬಸವ ಜಯಂತಿ
ಬಸವ ಜಯಂತಿ ಜಾತಿಯನ್ನು ೧೨ ನೆಯ ಶತಮಾನದಲ್ಲಿಯೇ ಕಾಯಕ ಸೂಚಕವಾಗಿಸಿದ ಬಸವಣ್ಣ..! ನಾಳೆ ದಿನಾಂಕ ೨೬ ರಂದು ಬಸವಣ್ಣನವರ ಜಯಂತಿ. ಆ ನೆಪದಲ್ಲಿ ಈ ಲೇಖನ… ಬಸವೇಶ್ವರ ( ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು… ಬಸವಣ್ಣನವರು ೧೧೩೪ […]
ಅಪ್ಪಟ ಕನ್ನಡದ ವಿನಯ
ಅಪ್ಪಟ ಕನ್ನಡದ ವಿನಯ ಮಲ್ಲಿಕಾರ್ಜುನ ಕಡಕೋಳ . ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ. ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು […]