Category: ಇತರೆ

ಇತರೆ

ಪರಿಷತ್ತಿಗೆ ಚುನಾವಣೆ

ವಿಶೇಷ ಲೇಖನ ಕನ್ನಡ ಘಟಾನುಘಟಿಗಳ ಪ್ರಚಾರ ಶುರು..! ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕøತಿಯ ಉಳಿವು ಹಾಗೂ ಕನ್ನಡತನದ ಸಾಕಾರದ ಮೂಲಧ್ಯೇಯದೊಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಇಚ್ಛಾಶಕ್ತಿಯೊಂದಿಗೆ ಉದಯಿಸಿದ್ದೇ ಕನ್ನಡ ಸಾಹಿತ್ಯ ಪರಿಷತ್. ಪರಿಷತ್ತಿನ ಆರಂಭ ಕಾಲದಿಂದಲೂ 1940 ರವರೆಗೂ ಅಧ್ಯಕ್ಷರನ್ನು ಅವರ ಸಾಹಿತ್ಯ, ಕನ್ನಡ ನಾಡು-ನುಡಿಯ ಬಗೆಗಿನ ಸೇವೆ, ಬದ್ಧತೆಯನ್ನು ಪರಿಗಣಿಸಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಆ ನಂತರವೇ ಪರಿಷತ್ತಿಗೂ ಚುನಾವಣೆಯ ಪದ್ಧತಿ ಜಾರಿಗೊಂಡಿತು. ತಿರುಮಲೆ ತಾತಾಚಾರ್ಯ ಶರ್ಮ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಮೂರ್ತಿರಾವ್, ಜಿ.ವೆಂಕಟಸುಬ್ಬಯ್ಯ, […]

ಬಣ್ಣಗಳ ದಂಡು

ಲಹರಿ ಬಣ್ಣಗಳ ದಂಡು ಶಿವಲೀಲಾ ಹುಣಸಗಿ ಹೇಗೆ ಹೇಳಲಿ ಮನದ ತಳಮಳವ ಸಖಾ.ಬಲ್ಲೆ ನೀನು ನನ್ನಂತರಂಗವ.ನಿನ್ನ ಕಾಣುವ ಕೌತುಕಕೇ ಮೋಡಗಳು ತೊರಣ ಕಟ್ಟಿದಂತೆ ಇಳೆಯತ್ತ ಬಾಗಿವೆ.ಮಿಂಚುಗಳು ಆಗಾಗ ಹೃದಯ ಕಂಪನ ಮಾಡಿ ನಸುನಕ್ಕಿವೆ.ಹನಿಗಳೋ ಮದಿರೆಯಗುಂಗಿನಲಿ ಅವಿತು ನನ್ನ ತಣಿಸಲು ತವಕಿಸು ತಿವೆ.ಬಾನಿಗೆಲ್ಲ ಹಣತೆ ಹಚ್ಚಿ ನನ್ನಾಗಮನಕೆ ಕಾದಂತಿದೆ. ಪ್ರೀತಿ ತುಂಬಿದ ಹೃದಯವ ಬೊಗಸೆಯಲ್ಲಿ ಹಿಡಿದು ನಿಂ ತಂತೆ.ನಯನಗಳ ಪ್ರತಿಬಿಂಬಕೆ ನಿನೊಂದೆ ಉತ್ತರ ಸಖಾ.ನಿನ್ನ ಪ್ರೇಮದ ಶರವೇಗಕೆ ಎದೆಗೂಡು ತಲ್ಲಣಿಸಿದೆ. ನಿನ್ನಧರದ ಅಬ್ಬರಕೆ ಜೇನಹನಿಗಳು ತೊಟ್ಟಿಕ್ಕುತ್ತಿವೆ. ಜಾತಕ ಪಕ್ಷಿಯಂತೆ […]

ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ

ಪದಗಳು

ಲೇಖನ ಲಾವಣಿಪದ /ಗೀಗೀಪದ ಶಾಲಿನಿ ಆರ್. ಜನಪದ ಕಾವ್ಯದ ಕಥಾತ್ಮಕ ಭಾಗವನ್ನು ಕುರಿತದ್ದಾಗಿದೆ ಲಾವಣಿ/ ಗೀಗೀಪದಗಳು. ಲಾವಣಿ/ ಗೀಗೀಪದಗಳು ಮುಖ್ಯವಾಗಿ ಒಂದು ಹಾಡ್ಗತೆ. “ಕಥೆ ಹೇಳುವ ಗೀತೆ ಅಥವಾ ಗೀತೆಯಲ್ಲಿ ಹೇಳಿದ ಕಥೆ”. ಇವು ಕ್ರಿಯೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಕ್ರಿಯೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಕ್ರಮವನ್ನು ಅನುಸರಿಸುತ್ತದೆ. ಕ್ರಿಯೆ ಸಾಮಾನ್ಯವಾಗಿ ವಸ್ತುವಿನ ಸ್ವರೂಪದ್ದಾಗಿರುತ್ತದೆ. ಹಾಗೆಯೇ, ಇವುಗಳಲ್ಲಿ ಸರಳತೆ ಸಹ ಒಂದು ಅಂಶವಾಗಿದೆ. ಈ ಪದಗಳಲ್ಲಿ/ ಹಾಡುಗಾರಿಕೆಯಲ್ಲಿ ಏಕ ಘಟನೆಯ ಮೇಲೆ ನಿಂತಿದೆ ಎಂಬುದು ಇನ್ನೊಂದು ಲಕ್ಷಣ. […]

ನೋಟ

ನೋಟ ಕಮಲಾ ಹೆಮ್ಮಿಗೆ ಮೂರು ಬೆಟ್ಟದ ತಪ್ಪಲ ಮದ್ಯದಲ್ಲಿ ಆಡುವ ಹಿಡಿದು ಮೇಯಿಸುತ್ತಿರಲಾಗಿ ಅಡ್ಡ ಬೆಟ್ಟದಲ್ಲಿ ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ ಉದ್ದಿಹ ಬೆಟ್ಟದಲ್ಲಿ ಭದ್ರ ಗಜ ಬಂದು ಎಸೆದಿತ್ತು ಎತ್ತ ಮಧ್ಯದ ಬೆಟ್ಟದಲ್ಲಿತೋಳ ಕೋದಿತ್ತು  ಕರುವಿನ ಕರುಳ ಕಿತ್ತು ಹುಲಿ,ಗಜ,ತೋಳನ ಉಡ ನುಂಗಿದ್ದ ಕಂಡೆಗೋಪತಿನಾಥ ವಿಶ್ವೇಶ್ವರ ಲಿಂಗವನರಿಯಲಾಗಿ ಹನ್ನೆರಡನೆಯ ಶತಮಾನದ ತಳಮಟ್ಟದಿಂದ ಬಂದು ಜ್ಞಾನ ಪ್ರಸಾರ ಮಾಡಿದ  ಅಂಬಿಗರ ಚೌಡಯ್ಯ,ನುಲಿಯ ಚಂದಯ್ಯ,ಹೆಂಡದ ಮಾರಯ್ಯ, ಉರಿಲಿಂಗ ಪೆದ್ದಿ,ಕದಿರ  ರೇಮವ್ವೆ, ಕಾಳವ್ವೆ ಮುಂತಾದವರ ಗುಂಪಿನಲ್ಲಿ ಎದ್ದು ಕಾಣುವ […]

ಅಕ್ಕ, ಲಲ್ಲಾ, ರಾಬಿಯಾ..!

ಲೇಖನ ಅಕ್ಕ, ಲಲ್ಲಾ, ರಾಬಿಯಾ..! ಕೆ.ಶಿವು.ಲಕ್ಕಣ್ಣವರ ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೇ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ.     ಏಕೋ ಏನೋ ದಿನದ ಯಾವುದೇ ಕುಷಿಯ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ..! # ಅಕ್ಕಮಹಾದೇವಿ …………………… ಅಯ್ಯಾ, ಸರ್ವಮೂಲಹಂಕಾರವಿಡಿದು ಕುಲಭ್ರಮೆ ಲಭ್ರಮೆ ಜಾತಿಭ್ರಮೆ, ನಾಮ […]

ದಾರಾವಾಹಿ ಅದ್ಯಾಯ-08 ಆವತ್ತು ಬೆಳಿಗ್ಗೆ ರಾಧಾಳಿಂದ ಮುನ್ನೂರು ರೂಪಾಯಿ ಪಡೆದುಕೊಂಡು ಮನೆಯಿಂದ ಹೊರಟ ಗೋಪಾಲ ಪುತ್ತೂರಿನ ಶಂಕರನಾರಾಯಣ ದೇವಸ್ಥಾನದ ಎದುರುಗಡೆ, ರಸ್ತೆಬದಿಯ ಮೈಲುಗಲ್ಲೊಂದರ ಮೇಲೆ ಕಾಲೂರಿ ಸೈಕಲ್ ನಿಲ್ಲಿಸಿ ಬೀಡಿಯೊಂದನ್ನು ಹೊತ್ತಿಸಿ ನಿಧಾನವಾಗಿ ಸೇದಿದ. ನಂತರ ದೇವಸ್ಥಾನದ ಎದುರು ಹೋಗಿ ನಿಂತುಕೊಂಡು ಭಕ್ತಿಯಿಂದ ದೇವರಿಗೆ ಕೈಮುಗಿದು ಸೈಕಲು ಹತ್ತಿದವನು ನೆರ್ಗಿಹಿತ್ತಲು ಗ್ರಾಮದ ಶಂಕರನ ಸೈಟಿಗೆ ಬಂದು ತಲುಪಿದ. ಆ ಹೊತ್ತಿಗೆ ಶಂಕರ ತನ್ನ ಕೆಲಸಗಾರರಿಗೆ ಅಂದಿನ ಕೆಲಸಕಾರ್ಯದ ಮಾಹಿತಿ ನೀಡುತ್ತಿದ್ದ. ಅದನ್ನು ಗಮನಿಸಿದ ಗೋಪಾಲ ಸ್ವಲ್ಪ ದೂರದಲ್ಲಿ […]

ಸಿರಿಗರ ಹೊಡೆದವರ. . . . .

ಸಾರ್ವಜನಿಕವಾಗಿ ನಮ್ಮ ನಡೆ ನುಡಿ ಅಂದರೆ ನಾವು ಕಾಣಿಸಿಕೊಳ್ಳುವ ರೀತಿ ನಡೆಯುವಾಗಿನ ಗತ್ತು ನಿಲ್ಲುವ ಭಂಗಿ ಕೂರುವ ಬಗೆ ಮಾತನಾಡುವ ಪರಿ ಇದರ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಒಂದು ಚಿತ್ರಣ ರೂಪುಗೊಳ್ಳುತ್ತದೆ. ಆದರೆ ಕೇವಲ ಆಂಗಿಕ ಭಾಷೆಯಿಂದಲೇ ವ್ಯಕ್ತಿ ಅಹಂಕಾರಿ ಇಲ್ಲವೇ ವಿನಯವಂತ ಎಂದು ನಿರ್ಣಯಿಸಿ ಬಿಡುವುದು ಹಲವು ಸಲ ತಪ್ಪು ಎಂದೆನಿಸುವುದು

Back To Top