ಕುಮ್ಚೆಟ್ ಹಾರುವ ಬನ್ರೋ

ಮಕ್ಕಳ ಪದ್ಯ ” ನಿಮ್ಮ ಓದಿಗಾಗಿ

ಮಕ್ಕಳ ಪದ್ಯ ” ನಿಮ್ಮ ಓದಿಗಾಗಿ

ರೇಖೆ ಮತ್ತು ಪದ್ಯ : ವಿಜಯಶ್ರೀ ಹಾಲಾಡಿ

ಲಿಲ್ಲಿ ಹೂವು ಕಿಚಾಯ್ಸಿ
ಅಳಿಲಿಗೆ ಸಿಟ್ಟ್ ಬಂತು
ಕಾಗೆಹಣ್ಣು ತಿಂದದ್ದಕ್ಕೆ
ನಾಲಗೆ ಕಪ್ಪಾಯ್ತು !


ಮೊಲದ ಮಗುವಿಗೆ
ಉಣ್ಣೆ ಸ್ವೆಟರು
ಮಳೆಯಲಿ ನೆನೆದೋಯ್ತು
ಮುಂಗುಸಿಯಕ್ಕನ
ಉದ್ದನೆ ಬಾಲ
ಬಿಲದಲಿ ಸಿಕ್ಕೊಂತು !


ರಾತ್ರಿ ಪೂರಾ
ನರಿಗಳ ಕಾಟ
ಕಾಳು ಗೊಣಗ್ತಿತ್ತು
ಗುಡ್ಡೆ ಹೆಗ್ಗಳ
ಕಚ್ಚಿಯೇ ಬಿಡ್ತು
ಬೀರಿ ಅಳ್ತಿತ್ತು !


ನಮ್ಮೂರ್ ಸಂತೆ
ಚುರುಮುರಿ ತಿಂದು
ನಾಲಗೆ ಉರಿದೋಯ್ತು
ದಮ್ರೂಟ್ ನೆಕ್ಕಿದೆ
ಜಿಲೇಬಿ ಮುಕ್ಕಿದೆ
ಬೆವರು ಹರಿದೋಯ್ತು!


ಶಾಲೆಲಿ ಶಿಸ್ತು
ಮನೆಯಲಿ ಗಸ್ತು
ಪಾಟಿ ಚಾಟಿ ಅಯ್ಯಯ್ಯೋ
ಕಾಡಲಿ ಸುತ್ತಿ
ಮರವಾ ಹತ್ತಿ
ಕುಮ್ಚೆಟ್ ಹಾರುವ ಬನ್ರೋ !!
*********************************

Leave a Reply

Back To Top