ಲಹರಿ
ಬಣ್ಣಗಳ ದಂಡು
ಶಿವಲೀಲಾ ಹುಣಸಗಿ
ಹೇಗೆ ಹೇಳಲಿ ಮನದ ತಳಮಳವ ಸಖಾ.ಬಲ್ಲೆ ನೀನು ನನ್ನಂತರಂಗವ.ನಿನ್ನ ಕಾಣುವ ಕೌತುಕಕೇ ಮೋಡಗಳು ತೊರಣ ಕಟ್ಟಿದಂತೆ ಇಳೆಯತ್ತ ಬಾಗಿವೆ.ಮಿಂಚುಗಳು ಆಗಾಗ ಹೃದಯ ಕಂಪನ ಮಾಡಿ ನಸುನಕ್ಕಿವೆ.ಹನಿಗಳೋ ಮದಿರೆಯಗುಂಗಿನಲಿ ಅವಿತು ನನ್ನ ತಣಿಸಲು ತವಕಿಸು ತಿವೆ.ಬಾನಿಗೆಲ್ಲ ಹಣತೆ ಹಚ್ಚಿ ನನ್ನಾಗಮನಕೆ ಕಾದಂತಿದೆ. ಪ್ರೀತಿ ತುಂಬಿದ ಹೃದಯವ ಬೊಗಸೆಯಲ್ಲಿ ಹಿಡಿದು ನಿಂ ತಂತೆ.ನಯನಗಳ ಪ್ರತಿಬಿಂಬಕೆ ನಿನೊಂದೆ ಉತ್ತರ ಸಖಾ.ನಿನ್ನ ಪ್ರೇಮದ ಶರವೇಗಕೆ ಎದೆಗೂಡು ತಲ್ಲಣಿಸಿದೆ. ನಿನ್ನಧರದ ಅಬ್ಬರಕೆ ಜೇನಹನಿಗಳು ತೊಟ್ಟಿಕ್ಕುತ್ತಿವೆ. ಜಾತಕ ಪಕ್ಷಿಯಂತೆ ಕಾದು ಕುಳಿತಿರುವೆ.
ಬಣ್ಣಗಳ ದಂಡು ಮುಂಬಾಗಿಲಿಗೆ ಬಂದಿದೆ.ರಂಗೇರುವ ಕ್ಷಣ ಗಣನೆ.ನೀ ಇಲ್ಲದೆ ಕೆನ್ನೆಗೆ ರಂಗು ಬರದು.ನಿನ್ನ ಸ್ಪರ್ಶವಿರದೇ ಯಾವ ಬಣ್ಣವು ನನ್ನ ಸಂತೈಸದು. ಅಂದು ನೀ ಕೊಟ್ಟ ನವಿಲುಗರಿಯೊಂದು ಚಿಗುರೊಡೆದಿದೆ. ಮನದಲಿಗ ಮೈದೆಳೆದು ನವಿರಾಗಿ ಗರಿಬಿಚ್ಚಿದೆ.ಆಗೊಮ್ಮೆ ಈಗೊಮ್ಮೆ ಇಣುಕುವ ಸವಿನೆನಪಂತೆ.ತೂಗು ಮಂಚದಲಿ ಎದೆಗೊರಗಿ ಕಾಡಿದಾಗೆಲ್ಲ,ಗಲ್ಲದ ತುಂಬ ನನ್ನ ಬಣ್ಣ ಮೆತ್ತಿ ದ್ದು ನೆನಪಾಗದೇ ಸಖಾ? ಪುಟಗಳಾಚೆ ಇಣುಕಿ ನಗಿಸುವ ನೀನು ಹೊಂಬೆಳಕಂತೆ ನನಗೆ.ಓಕುಳಿಯಾಡುವ ಪಿಚಕಾರಿಯಲ್ಲಿ ಅವಿತಂತೆ ನೀನು.ಮೈಮನಕೆ ಸೋಕಿದಾಗ ಅದ್ಭುತ ಸಾಂಗತ್ಯ ನಮ್ಮದು.ಬಾನು,ಭೂವಿಯು ನಾಚಿ ನೀರಾದಂತೆ ನಮ್ಮ ಪ್ರೇಮದ ಸಿಂಚನ.ಹೃದಯಕ್ಕೊಂದು ಜೀವಮಿಡಿತ ನೀನು.ನಿನ್ನೆದೆಯ ತುಡಿತ ನಾನು. ಹಕ್ಕಿಯಂ ತೆ ಗರಿಗೆದರಿ ಬಾನೆತ್ತರಕ್ಕೆ ಹಾರುವಷ್ಟು.ಗೂಡಿನೊಳಗೊಂ ದು ಗೂಡು ನಮ್ಮದು.ಕಣ್ಣಿಗೆ ಕಾಣದ ಪ್ರೇಮಲೋಕ. ನಮ್ಮೊಳಗಿನ ಸ್ವಪ್ನಲೋಕ.ಕಾಮನ ಬಿಲ್ಲಿನ ಪಲ್ಲಕ್ಕಿಯಲಿ ನಮ್ಮ ಪ್ರೇಮೋತ್ಸವ.ಕಡುಬಣ್ಣದಲಿ ಗಾಢವಾದ ನಿತ್ಯೋತ್ಸವ.ಕಾದ ಗಳಿಗೆಯೆಲ್ಲವೂ ನಿನಗರ್ಪಿತ ಸಖಾ. ಪ್ರೇಮವೆಂದರೆ ಅಮೂರ್ತಗಳ ಹೂ ಗುಚ್ಛ.ನಿನ್ನಾತ್ಮದ ಪ್ರತಿಬಿಂಬದಂತೆ.ನಿನ್ನ ವಿರಹದ ತಾಪದಲಿ.ದಾರಿ ದೂರ ವಾದರೂ ತಡೆದೆನು.ಮನಸಿಗೆ ದೂರವಾದರೆ ಬದುಕ ಲಾರೆ.ಕಾಡುವ ಗಳಿಗೆಗೆ ನೀ ಬೆಂದಿರಬಹುದು.ನೆನಪಿನ ಮಲ್ಲಿಗೆಯ ಮುಡಿಸಿ ಮರೆಯಾಗದಿರು.ಮೂರ್ತ ರೂಪವಾಗಿ ಪ್ರಕೃತಿಯ ಬಣ್ಣವಾಗಿ ಮೇಳೈಸು….ಕಾದಿರುವೆ ನೆನಪುಗಳ ಜಪಮಾಲೆ ಜಪಿಸುತ…..
**************************************
ಬಣ್ಣಗಳ ದಂಡು ಆಗಮಿಸಿ ಮನವ ತಣಿಸಿದರೂ ತಣಿಯದು ಮನ ಕಾರಣ ಇನಿಯನೊಲವಿನ ಸ್ಪರ್ಶಸುಖಕೆ ಕಾದಿದೆ ಹೃದಯ.ಆತ್ಮಗಳ ಬಂಧವದು ಕಾದಿದೆ ರಾಧೆ ಕೃಷ್ಣರ ಪ್ರೀತಿಯ ಅಮೃತದಂತೆ ಬದುಕಿಗೆ ಪರಿಶುದ್ಧ ಹೃದಯದ ಪ್ರೀತಿಯನು ಏಳು ಬಣ್ಣಗಳು ಮೇಳೈಸಿದ ಬಿಳಿಬಣ್ಣದಂತೆ ವಾವ್ ಎಂತಹ ವರ್ಣನೆ ಗೆಳತಿ ಅಭಿನಂದನೆಗಳು❤❤❤❤❤❤❤
ಬಣ್ಣಗಳು ಬದುಕಿನ ಕ್ಷಣಗಳೊಂದಿಗೆ ನವೀಕರಣ ಗೊಂಡು ಬದುಕಿಗೆ ಹೊಸ ಅರ್ಥ ಕೊಟ್ಟಿದ್ದು ನಿಜವಾಗಿಯೂ ತುಂಬಾ ಚೆನ್ನಾಗಿ ಬರೆದಿದ್ದೀರಿ.ತಮ್ಮ ಬರವಣಿಗೆ ಓದಲು ತುಂಬಾ ಇಷ್ಟ.