ಅನುಭವ
ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ ಮನೆ……. ಹಕ್ಕಿ ಮನೆ ಈ ಮರೆವು ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ…… ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ […]
ಪ್ರಸ್ತುತ
ಕೊರೊನಾ ಕಾಲದ ರಂಗಸಂಸ್ಕೃತಿ ಚಿಂತನೆಗಳು ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ರಾಕ್ಷಸ ಹಾವಳಿಯಿಂದಾಗಿ ಮನುಷ್ಯರ ಬದುಕು ತೀವ್ರ ಸ್ವರೂಪದ ಆಘಾತವನ್ನು ಎದುರಿಸುವಂತಾಗಿದೆ. ಸಾಂಸ್ಕೃತಿಕ ಬದುಕಿಗೂ ತೀವ್ರವಾದ ಪೆಟ್ಟು ಬಿದ್ದಿದೆ. ನಿಸ್ಸಂದೇಹವಾಗಿ ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗಂತ ಕೊರೊನಾ ಪೂರ್ವದಲ್ಲಿ ನಮ್ಮ ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಕಲೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹ, ಸಹಾಯ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಅಮೋಘವಾಗಿತ್ತು. ಅದರಿಂದಾಗಿ ಅತ್ಯಂತ ಸಮೃದ್ಧವಾದ ಸಾಂಸ್ಕೃತಿಕ ಬದುಕು ಮೈಮನ ತುಂಬಿ ಚೆಂಗುಲಾಬಿಯಂತೆ ಅರಳಿಕೊಂಡಿತ್ತೆಂದು ಭ್ರಮಿಸಬೇಕಿಲ್ಲ. ಈಗ ಕೊರೊನಾ […]
ಪ್ರಸ್ತುತ
ಅಪ್ಪ ರಾಘವೇಂದ್ರ ಈ ಹೊರಬೈಲು “ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಭೂಮಿಯ ಮೇಲೆ ಕಣ್ಣಿಗೆ ಕಾಣುವ, ಜೊತೆಯಲ್ಲಿಯೇ ಇರುವ, ಕಷ್ಟವೆಂದಾಗ ಮರುಗುವ, ದಾರಿಗೆಡದಂತೆ ಮಾರ್ಗದರ್ಶನ ಮಾಡುವ ಮೂರು ದೈವಗಳೆಂದರೆ ತಂದೆ, ತಾಯಿ ಮತ್ತು ಗುರು. ಇಡೀ ಭೂಮಂಡಲದ ಪ್ರತಿಯೊಬ್ಬರಿಗೂ ಇವರೇ ನಿಜವಾದ ತ್ರಿಮೂರ್ತಿಗಳು. ಮಗುವನ್ನು ಸದ್ಗತಿಗೆ ತರುವಲ್ಲಿ ಮೂವರ ಪಾತ್ರವೂ ಬಹುಮುಖ್ಯವಾದುದು. ತಾಯಿಯಾದವಳು ಕರುಣಾಮಯಿಯಾಗಿ, ಮುದ್ದು ಮಾಡುತ್ತಾ, ಸದಾ ಮಗುವಿನ ಹಿತಕ್ಕಾಗಿಯೇ ಬದುಕುವವಳು. ಗುರುವಾದವನು ಮಗುವು ದಾರಿ ತಪ್ಪದಂತೆ ಮಾರ್ಗದರ್ಶನ ನೀಡಿ, ಜಗತ್ತಿನ ಪರಿಚಯ ಮಾಡಿಕೊಡುವವನು. ಆದರೆ […]
ಪ್ರಸ್ತುತ
ಶಿಕ್ಷಣದ ಬದಲಾವಣೆ ಅನಿವಾರ್ಯ ರೇಷ್ಮಾ ಕಂದಕೂರ ಶಿಕ್ಷಣದ ಬದಲಾವಣೆ ಅನಿವಾರ್ಯ ಶಾಲೆ ಎಂಬುದು ಗಾರೆ ತುಂಬಿದ ಕಟ್ಟಡವಲ್ಲ ಜೀವಕೆ ಜೀವನ ನೀಡುವ ಸಂಗ್ರಹಾಗಾರ .ಕಾಲ ಘಟ್ಟದೊಂದಿಗೆ ಸದಾ ಹರಿವ ನೀರಿನಂತೆ ಬದಲಾಗುವ ರೀತಿಯ ಅರಿತು ಮಕ್ಕಳ ಮನವ ಅರಿತು ಬದಲಾಗುವ ಶೈಲಿಯ ರೂಢಿಸಿಕೊಂಡು ಮುಗ್ಧ ಮನಸುಗಳ ವಿಕಾಸಕ್ಕೆ ದಾರಿ ದೀಪವಾಗ ಬೇಕೆ ವಿನಃ ಕಟ್ಟುಪಾಡುಗಳಿಂದ ಚೌಕಟ್ಟಿನಲಿ ಜೋತು ಬೀಳಬಾರದು. ಅಂಕ ಶ್ರೇಣಿಯ ಹೊರತಾಗಿಯೂ ಬದುಕುವ ಜೀವನ ಶೈಲಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಸಾಗಬೇಕು. ಮಾನವ ಜನಾಂಗದ ಪ್ರಗತಿಗೆ […]
ಹರಟೆ
ಮರೆವು ಅನುಪಮಾ ರಾಘವೇಂದ್ರ ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು. ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ […]
ಲಹರಿ
ಮಾಸ್ಕಿನ ಮುಸುಕಿನಲಿ ಮುಂಗಾರು ಶಾಲಿನಿ ಆರ್. ಮತ್ತೆ ಮುಂಗಾರು. ಆದರೆ ಇದು ಕೊರೋನಾ ಮುಂಗಾರು. ಜೀವನದಲ್ಲಿ ಮೊದಲ ಬಾರಿ ಮಳೆ ಮತ್ತು ನಾನು, ನನ್ನ ಗಾಡಿ ಮತ್ತೆ ನಿನ್ನ ಮೌನ, ಒಂದಕ್ಕೊಂದು ಸಂಬಂಧ ಇಲ್ಲದ ಹಾಗೆ ಲಾಕ್ ಡೌನ್ ಆಗಿರೋದು. ಪ್ರತಿ ಸಾರಿ ಕಾಯೋ ಹಾಗೆ ಈ ಸಾರಿ ಮುಂಗಾರು ಅನುಭವಿಸಲಿಕ್ಕೆ ಮನಸ್ಸು ಹಿಂದೆ ಮುಂದೆ ನೋಡ್ತಿದೆ.ಇಳೆಯೇನೋ ತೋಯ್ತಾ, ಅದರ ಸಿರಿ ಸಂಭ್ರಮನ ಅದು ಸಂಭ್ರಮಿಸ್ತಿದೆ. ಯಾಕಂದ್ರ ಬಾಳ ವರುಷದ ಮ್ಯಾಲ ಅದಕ್ಕೆ ತನ್ನದೇ ಆದ ಸಮ್ಮಾನ […]
ಶಿಶುಗೀತೆ
ಇರುವೆ ತೇಜಾವತಿ ಹೆಚ್.ಡಿ. ಇರುವೆ ಇರುವೆ ಎಲ್ಲಿರುವೆಎಲ್ಲಾ ಕಡೆಯಲು ನೀನಿರುವೆಶಿಸ್ತಿಗೆ ನೀನೇ ಹೆಸರಾಗಿರುವೆಹೆಚ್ಚಿನ ಭಾರವ ನೀನೊರುವೆ ಇರುವೆ ಇರುವೆ ಕೆಂಬಿರುವೆಕೋಪದಿ ಏಕೆ ನೀನಿರುವೆಅರಿಯದೆ ನಿನ್ನ ಮುಟ್ಟಿದರೆಚುರುಚುರು ಅಂತ ಕಚ್ಚಿರುವೆ ಇರುವೆ ಇರುವೆ ಕಟ್ಟಿರುವೆದಾರಿಲಿ ಏಕೆ ನಡೆದಿರುವೆಅರಿಯದೆ ಪಾದವ ಮೆಟ್ಟಿದರೆಸಾಲನು ಬಿಟ್ಟೇ ಚುಚ್ಚಿರುವೆ ಇರುವೆ ಇರುವೆ ಚಗಳಿರುವೆಕೊಟ್ಟೆಯ ಎಲ್ಲಿ ಕಟ್ಟಿರುವೆಚಟ್ನಿಗೆ ನೀನು ಚಂದಿರುವೆಮಲ್ನಾಡ ಸೀಮೆಲಿ ನೀನಿರುವೆ ಇರುವೆ ಇರುವೆ ಕಪ್ಪಿರುವೆತತ್ತಿಯ ಎಲ್ಲಿ ಬಿಟ್ಟಿರುವೆಬೆಲ್ಲವ ನೀನು ಮುತ್ತಿರುವೆಹಿಡಿಯ ಹೋದ್ರೆ ಬುಳುಗುಡುವೆ ***********
ಲಹರಿ
ಮಳೆಗಾಲದ ಹಸಿ ಪ್ರೇಮಪತ್ರ… ಆಶಾಜಗದೀಶ್ ಯಾರೋ ಹುಡುಗ ಹೇಳಿದನಂತೆ ತನ್ನ ಹುಡುಗಿಗೆ, “ಹೋಗಿ ಮಳೆಯ ಹನಿಗಳನ್ನು ಎಣಿಸು.. ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ” ಎಂದು. ನನ್ನ ಅದೆಷ್ಟೋ ಸಂದರ್ಭಗಳ ಪ್ರೇಮದ ಉತ್ಕಟತೆಗೆ ಮಾತಾಗಿ ನಿಂತಿತ್ತು ಈ ಕಥೆ. ಏನೊಂದು ಹೇಳದೆಯೂ “ನನ್ನ ಪ್ರೀತಿ ಇದು” ಎಂದು ಹೇಳಿದ ಮೌನ ಮಾತಾಗಿತ್ತು ಈ ಕಥೆ. ಅರೆ… ಆ ಹೆದ್ದಾರಿಯ ಮಗ್ಗುಲ ಕಾಲುದಾರಿಯ ಪೊದೆಗೆ ಎಲ್ಲ ಗೊತ್ತಿದೆ. ನಾವು ಹೃದಯವನ್ನು ಹಂಚಿಕೊಳ್ಳುತ್ತಾ ನಮ್ಮ ಆತ್ಮಗಳನ್ನು ಒಂದಾಗಿಸಿದ್ದನ್ನು ಕಂಡಿದೆ ಅದು. ನೋಯಿಸುವಷ್ಟು […]
ಲಹರಿ
ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು […]
ಮಕ್ಕಳ ವಿಭಾಗ
ಮಕ್ಕಳ ಗೀತೆ ಮಂಜುಳಾ ಗೌಡ ಬನ್ನಿರಿ ಬನ್ನಿರಿ ಗೆಳೆಯರೆಶಾಲೆಗೆ ಹೊಗೋಣವಿದ್ಯೆಬುದ್ದಿ ಕಲಿತು ನಾವುಜಾಣರಾಗೋಣ. ಹೂವುಗಳಂತೆ ನಾವೆಲ್ಲನಗುತ ಅರಳೋಣಅರಳಿ ನಿಂತು ಕೀರ್ತಿಯಪರಿಮಳ ಹರಡೋಣ. ಪಾಠವ ಕಲಿಯೋಣನಾವು ಆಟವ ಆಡೋಣಪಾಠವ ಕಲಿತು ಆಟವ ಆಡಿನಕ್ಕು ನಲಿಯೋಣ. ಹಕ್ಕಿಯಂತೆ ಹಾರಾಡೋಣದುಂಬಿಯಂತೆ ಝೇಂಕರಿಸೋಣನವಿಲಿನಂತೆ ನರ್ತಿಸೋಣಕೋಗಿಲೆಯಂತೆ ಹಾಡೋಣ. ಕಥೆಗಳ ಹೆಳೋಣ ನಾವುನೀತಿಯ ತಿಳಿಯೋಣ.ರಂಗುರಂಗಿನ ಚಿತ್ರವ ಬಿಡಿಸುತಖುಷಿಯಾಗಿರೋಣ. ಪುಸ್ತಕ ಓದೋಣ ವಿಧವಿಧವಿಷಯವ ಅರಿಯೋಣ.ಜ್ಞಾನವಪಡೆದು ಸುಜ್ಞಾನಿಗಳಾಗಿದೇಶವ ಕಟ್ಟೋಣ. *******