ಕಾವ್ಯಯಾನ
ವೈರಸ್ ಅಶ್ವಥ್ ಏನೋ ಬಲ್‌ಶಾಲಿ ಅನ್ಕೊಂಡ್‌ಬುಟ್ಟು ಬೇಕಾದ್ದೆಲ್ಲ ಮಾಡ್ಕೊಂಡ್‌ಬುಟ್ಟು ಭೂತಾಯ್ ಮುಂದ್ ಗತ್ತು ಗಮ್ಮತ್ತು ವೈರಸ್ ಬಂತು ಮಂಡಿಯೂರು ಅಂತು ನವರಂಗೀ ಮಾಧ್ಯಮ್‌ಗಳಾಗೆ ಪಟತೆಕ್ಕಂಡ್ ವಾಲಾಡುವಾಗೇ ಕಣ್ಣಿಗ್ ಕಾಣ್ದಿರ್ ಅಣುವೊಂದ್ ಬಂತು ಕೈಕಾಲ್ ಕಟ್ಕಂಡ್ ಮನೆಲ್ಕೂರ್ ಅಂತು ಜಗತ್ತೆಲ್ಲಾ ಚಿಂದಿ ಚೂರಾದ್ರೂನೇ ಕಣ್ಣಾಗ್ ಕಣ್ಣಿಟ್ ನೋಡೋದಾಗ್ದೇನೆ ಕಿಂಚಿತ್ ಅನ್ನೋ ವೈರಸ್ಸೇ ಬರ್‌ಬೇಕಾತು ನಮ್ ಸಂಬಂಧ್‌ಗೋಳ್ ಏನಂತ ತಿಳ್‌ಸ್ತು ನಮ್ ಕೈತೊಳ್ಕೊಂಡ್ರಷ್ಟ್ ಸಾಕಾಗಲ್ಲ ಮನ್ಸ್ ಉಜ್ಜುಜ್ಜಿ ತೊಳ್ಕೊಬೇಕೆಲ್ಲ ವದ್ದ್ ವೋಡ್ಸೋಕ್ ಮುಂಚೆ ವೈರಸ್ಸನ್ನ ಎತ್ತ್ ಹಿಡೀಬೇಕಾಗೈತೆ ಮನ್ಸತ್ವಾನಾ ********************
Read More
ಕವಿತೆಯ ದಿನಕ್ಕೊಂದು ಕವಿತೆ ನನ್ನೊಳಗೊಂದು ನಾನು ಅಂಜನಾ ಹೆಗಡೆ ನಾ ಹುಟ್ಟುವಾಗಲೇ ನನ್ನೊಂದಿಗೆ ಹುಟ್ಟಿದ ಕವಿತೆಯೊಂದು ಇದ್ದಕ್ಕಿದ್ದಂತೆ ಎದುರಿಗೆ ಬಂದು ನಿಂತಿತು ಥೇಟು ನನ್ನಂತೆಯೇ ಕಾಣುವ ಅದಕ್ಕೊಂದು ಉದ್ದನೆಯ ಬಾಲ…. ನಾ ಹೋದಲ್ಲೆಲ್ಲ ನನ್ನದೇ ವೇಗದಲ್ಲಿ ಹಿಂದೆಮುಂದೆ ಸುತ್ತುತ್ತಿತ್ತು ಬಾಲದ ಸಮೇತ ಉದ್ದಜಡೆಯ ಹೆಣ್ಣೊಂದು ಹೆಗಲೇರಿದ ಭಾರ ಅಯ್ಯೋ!! ಹೆಣ್ಣುಕವಿತೆಯೇ ಹೌದು…. ಸುಲಿದ ಬೆಳ್ಳುಳ್ಳಿಗಳನ್ನೆಲ್ಲ ಪ್ಲಾಸ್ಟಿಕ್ಕಿನ ಮೇಲಿಟ್ಟು ಜೋರಾಗಿ ಜಜ್ಜಿದೆ ಬಾಲವೂ ಅಲ್ಲಾಡಿತು ಯಾವ ಕೋಪಕ್ಕೆ ಬೆಳ್ಳುಳ್ಳಿ ಬಲಿ!! ಬಾಲ ನಕ್ಕಂತೆ ಭಾಸವಾಗಿ ಸಣ್ಣದೊಂದು ಅವಮಾನ ಈರುಳ್ಳಿಗೆ […]
Read More
ಕವಿತೆಯ ದಿನಕ್ಕೊಂದು ಕವಿತೆ ಸಜೀವ ಡಾ.ಗೋವಿಂದ ಹೆಗಡೆ ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ ಆಡಿಸಿ ನಕ್ಕು ಹಕ್ಕಿಗಳ ಪಕ್ಕ ಹಾರಿ ತಾರೆಗಳಿಗೆ ಕಣ್ಮಿಟುಕಿಸಿ ಅಲೆ-ದಂಡೆಗಳಗುಂಟ ಅಲೆದು ಮರುಳು ಮನೆ ಕಟ್ಟಿ ಕುಣಿದು ಮೈಪಡೆದ ಕವಿತೆ […]
Read More
ಗಝಲ್ ಡಾ.ಗೋವಿಂದ ಹೆಗಡೆ ಅರಳು ಹುರಿದಂತೆ ನುಡಿವವರೆದುರು ನಾನಾಗಿರುವೆ ಉಗ್ಗ ಅಣಕಿಸಿದರು ಅವರೆಲ್ಲ ನನ್ನನ್ನೀಗ ನಾನಾಗಿರುವೆ ಮೂಕ ಸ್ತುತಿ-ನಿಂದೆಗಳ ಮೀರಿ ಮುಂದೆ ಹೋಗಬೇಕು ಬದುಕಲು ಒಳದನಿಯ ಹೊರತೆಲ್ಲ ಸ್ವರಗಳಿಗೆ ನಾನಾಗಿರುವೆ ಬಧಿರ ಕತ್ತಲನ್ನೇ ಬೆಳೆದರು ಅವರು ನಡುವೆ ನೀನೊಂದು ಹಣತೆ ಒಳಿತಾಯಿತು ಜಡ ಜಂಜಡಗಳಿಗೆ ನಾನಾಗಿರುವೆ ಕುರುಡ ತಮ್ಮ ದಾರಿಯಲ್ಲೇ ಎಲ್ಲರೂ ಸಾಗಬೇಕೆಂಬ ವರಾತವೇಕೆ ದಾರಿ ಕಡಿಯುವೆ ನಾನೇ, ಉಳಿದಂತೆ ನಾನಾಗಿರುವೆ ಹೆಳವ ನನ್ನ ಕತ್ತಿನ ಪಟ್ಟಿ ಹಿಡಿದರೇನು ಒಲ್ಲದುದ ಮಾಡೆಂದು ‘ಜಂಗಮ’ ಸಾಕ್ಷಿ,ಅಹಿತವೆಸಗದಂತೆ ನಾನಾಗಿರುವೆ ಚೊಂಚ […]
Read More
ಗಝಲ್ ಶಂಕರಾನಂದ ಹೆಬ್ಬಾಳ ಬಡತನದ ಬವಣೆ ನೋವು ನಲಿವುಗಳಲಿ ಕಂಡೆ ಒಳಿತು ಕೆಡಕುಗಳ ನಿತ್ಯಸತ್ಯವ ಆಂತರ್ಯದಲಿ ಕಂಡೆ….!!! ಬಣ್ಣನೆಗೆ ನಿಲುಕದ ಮಾರ್ಮಿಕ ಕಟುಸತ್ಯಗಳ ಜೊತೆ ಜೀವಂತ ಹೆಣದಂತೆ ಬದುಕಿ ಇರುವವರಲಿ ಕಂಡೆ…!!! ಸೋತು ಸೊರಗಿ ಮೂಕವಾದ ಬದುಕಿನಲಿ ಸುಕ್ಕುಗಟ್ಟಿದ ಚರ್ಮ ಬತ್ತಿದ ಬೆವರಿನಲಿ ಕಂಡೆ…!!! ಹರಿದ ಚಿಂದಿ ಬಟ್ಟೆಗಳ ನಡುವೆ ನಾಳೆ ಶ್ರೀಮಂತನಾಗುವೆ ಎನ್ನುವ ಕನಸ ಹೊತ್ತುಕೊಂಡಿರುವ ಬಡವರಲಿ ಕಂಡೆ…!!! ಕೊನೆತನಕ ದುಡಿದರು ಬಡತನ ದೂರಾಗಲಿಲ್ಲ ಎಂಬ ಅಭಿನವನ ಮಾತು ಸುಳ್ಳಲ್ಲ ಎನ್ನುವರ ಮನದಲಿ ಕಂಡೆ…!!! ************
Read More
ನನ್ನೊಳಗೆ ನೀನಿರುವಾಗ… ಬಿದಲೋಟಿ ರಂಗನಾಥ್ ನನ್ನೊಳಗೆ ನೀನಿರುವಾಗ ಭಯದ ಬೆಂಕಿಯನ್ನು ಹಾರುವುದು ಕಷ್ಟವೇನಲ್ಲ ಸುಡುವ ನೆಲದ ತಂಪಿಗೆ ನೀನೆ ಬರೆದ ಪ್ರೇಮ ಪತ್ರವಿರುವಾಗ ಕಾಮನ ಬಿಲ್ಲು ಮಾತಾಡುವುದು ಕಷ್ಟವೇ ಅಲ್ಲ ಪರಿಷೆಯಲ್ಲು ಧ್ಯಾನ ನೇರಗೆರೆಯ ಮೇಲೆ ನಿಂತಿರುವಾಗ ಮನಸು ಯಾವ ಮೂಲೆಯಿಂದ ಪಲ್ಲಟಗೊಳ್ಳುವುದು ಹೇಳು ? ನಗುವ ಚಂದಿರನ ಮುದ್ದಿಸಿದ ನೀನು ಪ್ರೇಮದ ಹೂವಿನ ಸುಗಂಧವ ಮೂಸದೇ ಹೋದೆ ನಿನ್ನೊಳಗಿನ ದಾರಿಯ ಮೇಲೆ ಬೆಳೆದ ಮುಳ್ಳುಗಳು ಚುಚ್ಚುವಾಗ ಜಾತಿಯ ಬಣ್ಣಕೆ ಕಣ್ಣು ಮಂಜಾಗಿದ್ದು ಹೃದಯದ ಕಣಿವೆಗಳಲ್ಲಿ ಕಂದರ […]
Read More
ಅವರು ಒಪ್ಪುವುದಿಲ್ಲ. ! ವಿಜಯಶ್ರೀ ಹಾಲಾಡಿ ಕಾಫಿಯಲ್ಲಿ ಕಹಿ ಇರಬೇಕುಬದುಕಿನ ಹಾಗೆ ಮುತ್ತುಗದ ಹೂ ರಸಕುಡಿವ ಮಳೆಹಕ್ಕಿರೆಕ್ಕೆ ಸುಟ್ಟುಕೊಳ್ಳುತ್ತದೆ ಬೂದಿಯಾದ ದಿನಗಳಆಲಾಪಿಸುವ ಇರುಳಹಕ್ಕಿನಿರಾಳ ಕಂಡುಕೊಳ್ಳುತ್ತದೆ ದಟ್ಟ ನೋವು ಒಸರುವಅಂಟಿನ ಮರ ಯಾರಸಾಂತ್ವನಕ್ಕೂ ಕಾಯುವುದಿಲ್ಲ ಬೋರಲು ಬಿದ್ದ ಆಕಾಶಬುವಿಯ ಕಣ್ಣೀರಿಗೇನೂಕರಗಿದ್ದು ಕಂಡಿಲ್ಲ ನದಿಯಲ್ಲಿ ತೇಲಿಬಂದಹಸಿಮರ -ನಾಗರಿಕತೆಯಹೆಣವೆಂದು ಅವರು ಒಪ್ಪುವುದಿಲ್ಲ. *********
Read More
ಸೂತಕ ಶಾಂತಾ ಜೆ ಅಳದಂಗಡಿ ಹುಚ್ಚು ತುರಗ ಈ ಮನ ದಿಕ್ಕೆಟ್ಟು ಓಡುತಿದೆ ಕಾಣಲು ಹೂ ಬನ ಪ್ರೀತಿ ಎಂದರೆ ನೀರ್ಗುಳ್ಳೆ ಒಲವ ನುಡಿಯಲಿರುವುದೆಲ್ಲ ಸುಳ್ಳೆ ಹೂವ ಮಧುವ ಹೀರುವ ವರೆಗು ಮೋಹದ ಮಾತುಗಳ ಬೆರಗು ದಾಹ ತೀರಿದಮೇಲೆ ನದಿಯ ಹಂಗಿಲ್ಲ ವಶವಾದನಂತರ ಅವಳು ನಲ್ಲೆಯಲ್ಲ ಪ್ರೇಮ ಸಾಯುತ್ತೆ ನರಳಿ ನರಳಿ ಬಾರದೆಂದಿಗೂ ಅದು ಮರಳಿ ಮರುದಿನವೂ ರವಿ ಉದಯಿಸುತ್ತಾನೆ ಹೊಂಗಿರಣಗಳ ಭುವಿಗೆಲ್ಲ ಚೆಲ್ಲುತ್ತಾನೆ ಸತ್ತಪ್ರೀತಿಯ ಸೂತಕ ಆನಂದಿಸಲಾಗದು ಸುಂದರ ಬೆಳಕ ಮೈ ಮರೆತರೆ ಒಂದು ಕ್ಷಣ […]
Read More
ನೀನೀಗ ಇದ್ದಿದ್ದರೆ ಚೈತ್ರಾ ಶಿವಯೋಗಿಮಠ “ನೀನೀಗ ಇದ್ದಿದ್ದರೆ” ಆ ಕಲ್ಪನೆಯೇ ಚಂದ ಬಹುಶಃ ಹೋಗುತ್ತಿದ್ದೆವು ಗಿರಿ-ಕಣಿವೆಗಳ ಮೇಲೆ ಹತ್ತಿಳಿಯಲು!, ಹೂವಿಂದ ಹೂವಿಗೆ ಹಾರುವ ಬಣ್ಣದ ಚಿಟ್ಟೆಗಳ ಹಿಡಿಯಲು, ಓಡುವ ನದಿಯ ಬೆನ್ನುಹತ್ತಲು, ಹಿಮ ಪರ್ವತಗಳ ಮೇಲೇರಿ ಹಿಮದ ಬೊಂಬೆಯ ಮಾಡಿ ನಲಿಯಲು.. ನೀನೀಗ ಇದ್ದಿದ್ದರೆ ಬಹುಶಃ ನನ್ನೆಲ್ಲ ಕ್ಷಣಗಳು ಅಪ್ಪನೆಂಬ ಮಂತ್ರ ಪಠಣವೇ! ಹೊಸ ಪುಸ್ತಕಗಳೋದುವ ನನ್ನ ನೆಚ್ಚಿನ ಸಹಪಾಠಿಯಾಗುತ್ತಿದ್ದೆ ಬಂದ ಹೊಸ ಸಿನಿಮಾಗಳ ನನ್ನ ಖಾಸಗಿ ವಿಮರ್ಶಕನಾಗುತ್ತಿದ್ದೆ! ಎಲ್ಲ ಪ್ರಚಲಿತ ವಿಷಯಗಳ ಮೆಚ್ಚಿನ ವಿಶ್ಲೇಷಕನಾಗುತ್ತಿದ್ದೆ! ನೀನೀಗ […]
Read More
ಮಕ್ಕಳಪದ್ಯ ಅಪ್ಪನೇ ಪ್ರೀತಿ ನಾಗರೇಖಾ ಗಾಂವಕರ ಅಪ್ಪನದೇಕೆ ಕಂಚಿನಕಂಠ ನಿನ್ನಂತಿಲ್ಲಲ್ಲಾ ಕಣ್ಣುಗಳಂತೂ ಕೆಂಡದ ಉಂಡೆ ನೋಡಲು ಆಗೊಲ್ಲ ಅಮ್ಮ ಪುಕ್ಕಲು ನಾನಲ್ಲ. ಆದರೂಅಮ್ಮ ಅಪ್ಪನೇ ಪ್ರೀತಿ ಎದೆಯೊಳಗೊಂದು ಮೀಟುವ ತಂತಿ ಕಾರಣ ಹೇಳಮ್ಮ ಕೈಗಳ ಹಿಡಿದು ವಠಾರ ನಡೆದು ನಡೆಯಲು ಕಲಿಸಿದನು ದಾರಿಯ ಮಧ್ಯೆ ಸಿಕ್ಕವರಲ್ಲಿ’ ಮಗಳೆಂದು ಹೊಗಳಿದನು ಬೈಕಲಿ ಕೂರಿಸಿ, ಮರಗಿಡ ತೋರಿಸಿ, ಮನವನು ತಣಿಸುವನು ಅಪ್ಪನು ನಿನಗಿಂತ ಪ್ರಿಯನವನು. ಆಗೀಗೊಮ್ಮೆ ಉಪ್ಪಿನಮೂಟೆ ಮಾಡುತ ಮುದ್ದಿಸುವ ಮರುಕ್ಷಣ ನನ್ನ ಹಠವನು ಕಂಡು ಕೋಲನು ತೋರಿಸುವ ಅಮ್ಮಾ, […]
Read More| Powered by WordPress | Theme by TheBootstrapThemes