ಕಾವ್ಯಯಾನ
ಮಾನವರು ಮಾಲತಿ ಹೆಗಡೆ ಮಾನವರು! ತಾಳು ಅರಳಿಸಿ ನಗಿಸುವೆ ನನ್ನೊಡಲ ಮಗುವೆ ಎನುವ ಗಿಡಗಳ ಸಂಭ್ರಮದರಿವೆಲ್ಲಿದೆ ಹೂವಾಡಗಿತ್ತಿಗೆ.. ನಾಳೆಗರಳುವ ಹೂವ ಇಂದೇ ಕೊಯ್ದ ಬಳ್ಳಿಯಲಿ ಕಟ್ಟಿ ಮಾಲೆ,ದಂಡೆಯನ್ನಾಗಿಸಿ ಬುಟ್ಟಿ ತುಂಬಿ ಬೆಳಂಬೆಳಿಗ್ಗೆ ಅದನು ನೆತ್ತಿಗೇರಿಸಿ ‘ಮೊಲ್ಲೆ ಮಲ್ಗಿ ಮಾಲೇರಿ’ ರಾಗವೆಳೆಯುತ್ತ ಊರೆಲ್ಲ ಸುತ್ತದಿದ್ದರೆ ಅವಳ ಮನೆಯೊಲೆ ಉರಿಯುವುದಿಲ್ಲ… ಕೆಚ್ಚಲು ತುಂಬಿದ ಹಾಲ ಕರುವಿಗುಣಿಸಬೇಕೆಂಬ ಹಸುವಿನ ಮಮತೆಯ ಹಂಬಲದರಿವೆಲ್ಲಿ ಗೋವಳನಿಗೆ ಹಿಡಿಹುಲ್ಲು ಕರುವಿಗಿತ್ತು ಹಸುವಿನ ಹಾಲನೆಲ್ಲ ಹಿಂಡಿ ಕ್ಯಾನು ತುಂಬಿ ‘ಹಾಲರೀ ಹಾಲ’ ಎನ್ನುತ್ತ ವರ್ತನೆ ಮನೆಗಳ ಪಾತ್ರೆಗಳಿಗೆ […]
ಕಾವ್ಯಯಾನ
ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಡಾ.ಗೋವಿಂದ ಹೆಗಡೆ ಮೆಲುಮಾತುಗಳ ಮಡಿಲಲ್ಲಿ ನಕ್ಷತ್ರ ಯಾನ ಇಂಗುತ್ತಿರುವ ಒರತೆಯಿಂದ ಗುಟುಕುಗಳ ಮೊಗೆಯುತ್ತಲೇ ಇದ್ದೆ ನದಿಯೊಂದು ದಿಕ್ಕು ಬದಲಿಸಿ ತಂಪೆರೆಯುವುದೆಂದು ಊಹಿಸಿರಲಿಲ್ಲ ಈ ಸಾಲುಗಳು ( ದ್ವಿಪದಿ) ರೇಖಾರ ಗಜಲ್‌ಯಾನವನ್ನು ಸಮರ್ಥವಾಗಿ ಹೇಳುತ್ತವೆ ಎಂದು ಅನಿಸುತ್ತದೆ. ನಾನು ರೇಖಾ ಭಟ್ಟರನ್ನು ಮೊದಲು ಕಂಡಿದ್ದು ಸಾಹಿತ್ಯ ಸಮ್ಮೇಲನವೊಂದರ ಕವಿಗೋಷ್ಠಿಯಲ್ಲಿ.ಯಾರು ಯಾರೋ ಬಂದು ಬಾಲಿಶ ಸಾಲುಗಳನ್ನು ಕವನವೆಂದು ಓದಿದ ಅಲ್ಲಿ ರೇಖಾರ ಕವನ, ಮೆಲುದನಿಯ ಅವರ ವಾಚನ ‘ ಪರವಾಗಿಲ್ಲ , ಈ ಸಾಲುಗಳಲ್ಲಿ […]
ಕಾವ್ಯಯಾನ
ಬಡವರ ಸ್ವಾತಂತ್ರ್ಯ ರಾಜು ದರ್ಗಾದವರ ಬಡವರ ಸ್ವಾತಂತ್ರ್ಯ ಇನ್ನೆಷ್ಟು ಜೀವಬೇಕು ಕೇಳು ಸ್ವಾತಂತ್ರ್ಯವೊಂದು ಸಿಗಲಿ, ನಾಡಮಕ್ಕಳ ಬದುಕಿಗೆ; ಬೀಸಿರಕ್ತ ನಿನ್ನ ಬೇಡಿಕೆಯಾದರೆ ತಗೆದು ಬಿಡು ಖಡ್ಗವನ್ನು ತುಂಡರಸಿ ಕೊಡುವೆ ನಿನ್ನ ಪಾದಗಳಿಗೆ ಸ್ವಾತಂತ್ರ್ಯ ಸಿಗದ ಬದುಕು ಬೇಡವಾಗಿ ನರಕವೇ ಕಂಣ್ತುಂಬಿ ಹರಿದಿದೆ; ಬಡವನ ಮರಗು ತರುವುದಲ್ಲ ಮೆರಗು ಆಳಿದ್ದು ಸಾಕು,ಅರಸನಾಗಬೇಡ ಬಡವರ ಬದುಕಾಗು.. **********
ಕಾವ್ಯಯಾನ
ಕುರುಡು ಕಾಂಚಾಣ ಸುಜಾತಾ ರವೀಶ್ ಕುರುಡು ಕಾಂಚಾಣ ಬೇಂದ್ರೆಯವರ ಕುರುಡು ಕಾಂಚಾಣ ಸಾಮಾಜಿಕ ಅನಿಷ್ಟವನ್ನು ವೈಭವೀಕರಿಸುವ ದೃಶ್ಯದಲ್ಲಿ ಆ ಕರಾಳತೆಯನ್ನು ಕಟ್ಟಿಕೊಡುವ ಒಂದು ಅತ್ಯಂತ ಶಕ್ತಿಯುತ ಪ್ರಯತ್ನ .ಹಣದ ದಾಹ ಎಂಬ ಪಿಶಾಚಿಯ ಯಾವ ರೀತಿ ತನ್ನ ಕ್ರೂರತೆಯನ್ನು ತೋರಿಸುತ್ತದೆ ಹೇಗೆ ಅದಕ್ಕೆ ಕೊಂಚವೂ ದಯವಿಲ್ಲ ಎಂಬುದನ್ನು ಕವಿಯ ಪದಗಳು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ ಆ ಭೀಭತ್ಸ ತೆಯು ಮೈ ಝುಮ್ ಎನ್ನುವಂತೆ ಮಾಡುತ್ತದೆ .ಬಾಣಂತಿ ಎಲುಬಿನ ಬಿಳುಪಿನ ಕಿರು ಗೆಜ್ಜೆ ,ಸಣ್ಣ ಕಂದಮ್ಮಗಳ ಕಣ್ಣಿನ ಕವಡೆ, […]
ಕಾವ್ಯಯಾನ
ಪತ್ನಿಯ ದುಗುಡ ಮಾಲತಿ ಹೆಗಡೆ ಕತ್ತು ಚಾಚಿಕಣ್ಣು ಹಾಯುವವರೆಗೂ ನೋಡಿದರೂ ನೀ ಬರಲಿಲ್ಲ ಹೊರೆಗೆಲಸಗಳು ಮುಗಿದು ಕತ್ತಲಾವರಿಸಿದರೂ ನೀ ಬರಲಿಲ್ಲ ಸಂಜೆಗೊಂದಿಷ್ಟು ದೂರದ ಸಮುದ್ರತೀರದಲಿ ವಿಹರಿಸಬೇಕಿತ್ತು ಆಟ ಪಾಟಗಳೆಲ್ಲ ಮುಗಿಸಿ ಮಕ್ಕಳು ಮಲಗಿದರೂ ನೀ ಬರಲಿಲ್ಲ ಕಂಬನಿದುಂಬಿ ನಾಳೆಯಡುಗೆಗೆ ಖಾಲಿ ಡಬ್ಬಿಗಳ ತಡಕಾಡುತ್ತಿರುವೆ ಅಳಿದುಳಿದಿದ್ದರಲ್ಲೇ ಮಾಡಿದ ಅಡುಗೆ ಆರಿದರೂ ನೀ ಬರಲಿಲ್ಲ ಸಾಲ ಕೊಟ್ಟವರಿಗೆ ಅವಮಾನ ನುಂಗುತ್ತ ತಾರಮ್ಮಯ್ಯ ಆಡಿಸಿದೆ ನೀಲ ನಭದಿ ಚಂದಿರ ನನ್ನನ್ನು ಅಣಕಿಸಿದರೂ ನೀ ಬರಲಿಲ್ಲ ಮದಿರೆಗೆ ಮರುಳಾದವನಿಗೆ ಮಡದಿಯ ನೆನಪು ಕಿಸೆ […]
ಕಾವ್ಯಯಾನ
ಕೊರಳು ಬಿಗಿದ ಪ್ರೀತಿ ತುಳಸಿ ಭಟ್ (ಸಿಂಧು ಭಾರ್ಗವ್ ಬೆಂಗಳೂರು) ಮರಳ ಮೇಲೆ ಗೆರೆಯ ಗೀಚಿ ನಿನ್ನ ಹೆಸರ ಬರೆದೆನು ಬಳಿಗೆ ಬಂದು ಏನು ಎಂದು ನೋಡಬಾರದೇ? ಪ್ರೀತಿಯೀಗ ಮೊಳಕೆಯೊಡೆದು ರಕುತದಲ್ಲಿ ಬೆರೆತಿದೆ ಸನಿಹ ನಿಂತು ಮೊಗವ ನೋಡಿ ಕೇಳಬಾರದೇ? ಎತ್ತ ಹೋದೆ ಬರುವೆ ಎಂದು ಮತ್ತೆ ಕಾಣದೂರಿಗೆ ಸಂಜೆ ಸೂರ್ಯ ಅಳುತ ಕರಗಿ ಕಡಲ ಸೇರಿದೆ ಅಲೆಗಲೆಲ್ಲ ಕೆಂಪುಗಟ್ಟಿ ನೊಂದು ಮೂಕವಾಗಿವೆ ಬಂಡೆ ಮೇಲೆ ಬಡಿದು ಬಡಿದು ಹಿಂದೆ ತಿರುಗಿವೆ ನಿನ್ನ ನೆರಳ ಹೋಲುವಂತ ಪಿಂಡ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಹುರುಪೇ ಇಲ್ಲದೆ ಬಣ್ಣಗಳ ಬಳಿದೇನು ಲಾಭ ಎದೆಯೇ ಇಲ್ಲದ ಹಾಡುಗಳ ಬರೆದೇನು ಲಾಭ ಹೊತ್ತಿದರೆ ಹೊತ್ತು ಬೆಳಗು ಮಿಂಚಂತೆ ಸಿಡಿಲಂತೆ ಬರೀ ಹೊಟ್ಟಿನ ಹೊಗೆಯಾದರೆ ಆಗಿದ್ದೇನು ಲಾಭ ವಿರೋಧಿಗಳ ಎದುರಿಸು ವಾದ, ಕರ್ಮಭೂಮಿಕೆಯಲ್ಲಿ ಅಣಕು ಬೊಂಬೆಗಳ ಸುಡುತ್ತ ಬಂತೇನು ಲಾಭ ಕುಡಿದರೆ ಕುಡಿಯಬೇಕು ಇಡೀ ಮಧು ಶಾಲೆಯನ್ನು ಸೆರೆಮುಕ್ಕ ಸೆರೆಯ ತುಟಿಗೆರೆದೇನು ಲಾಭ ಹೊತ್ತು ಹೊತ್ತಿಸು ಉರಿ ಬೆಳಗಿಸು ಹೋರು ಎಣ್ಣೆ ಬತ್ತಿ ಹಣತೆಯ ದೂರಿದರೇನು ಲಾಭ ಆಳಕ್ಕಿಳಿ ಬಗೆ ಬರೆ ಹಾಡು […]
ಕಾವ್ಯಯಾನ
ಗಝಲ್ ಎ.ಹೇಮಗಂಗಾ ಎಲ್ಲ ಜಂಜಡಗಳ ಮರೆಸುವ ಮಾಯೆಯಿದೆ ನಿನ್ನ ನಗುವಿನಲ್ಲಿ ಎಲ್ಲ ಒತ್ತಡಗಳ ಶೂನ್ಯವಾಗಿಸುವ ಕಲೆಯಿದೆ ನಿನ್ನ ನಗುವಿನಲ್ಲಿ ನನಗೆಂದೇ ದೈವ ಬುವಿಗೆ ಕಳಿಸಿದ ಕೊಡುಗೆ ನೀನು ಮಗುವೇ… ಎಲ್ಲ ಚಿಂತೆಗಳ ಇಲ್ಲವಾಗಿಸುವ ಮೋಡಿಯಿದೆ ನಿನ್ನ ನಗುವಿನಲ್ಲಿ ಕಾಲದ ಪರಿವೆಯಿಲ್ಲದೇ ಕಾದೆ ಬರಿದಾದ ಮಡಿಲು ತುಂಬಲೆಂದು ಎಲ್ಲೆಡೆಯೂ ಮುದ ಹರಡುವ ಮುಗ್ಧತೆಯಿದೆ ನಿನ್ನ ನಗುವಿನಲ್ಲಿ ಹೆಣ್ತನಕೆ ಹಿರಿಮೆ ತಂದ ತಾಯ್ತನದ ಭಾಗ್ಯ ನನ್ನದಾಗಿದೆ ಇಂದು ಅಶಾಂತಿಯ ತೊಡೆವ ಶಾಂತಿಯ ನೆಲೆಯಿದೆ ನಿನ್ನ ನಗುವಿನಲ್ಲಿ ಕಿವಿಗಳ ತಣಿಸುತಿವೆ ನಿನ್ನ […]
ಕಾವ್ಯಯಾನ
ಹೇ ರಾಮ್ ಡಿ.ಎಸ್.ರಾಮಸ್ವಾಮಿ ಅವತ್ತು ಆ ದುರುಳನ ಗುಂಡಿಗೆಹೇ ರಾಂ ಎನ್ನುತ್ತಲೇ ಗುಂಡಿಗೆಯಿತ್ತವನನ್ನೂಅನುಮಾನಿಸಿ ಅವಮಾನಿಸಿದವರುಮತ್ತೀಗ ವಿಝೃಂಭಣೆಯ ತುರೀಯದಲ್ಲಿಗತದ ನೋವುಗಳನ್ನರಿಯದೇ ಬರಿದೇಸ್ವಚ್ಛತೆಯ ಮಾತ ಭಜನೆ ಮಾಡುತ್ತಿದ್ದಾರೆ, ಪೊರಕೆ ಹಿಡಿದಂತೆ ಆ ಅವರ ಭಂಗಿಕುಡಿಸಿ ಅಮಲೇರಿಸುವ ಮಾತುನಾಳೆಗಿರಲಿ ಇವತ್ತಿಗೇ ನಕಲಿ ಸಾಬೀತಾಗಿನಿಜಕ್ಕೂ ಕೊಳೆ ತೆಗೆಯ ಹೊರಟವರೆಲ್ಲರಿಗೂಆಘಾತ, ಸಂವಿಧಾನದ ವಿಧಿಗೂ ವಿಧ ವಿಧದಮರು ಜೋಡಣೆಯ ವ್ಯಾಖ್ಯಾನ ಗಾಂಧಿ ಎಂದರೆ ಅವನೊಬ್ಬನೇ ತಾತಈ ದೇಶಕ್ಕಷ್ಟೇ ಅಲ್ಲ, ಅವನು ವಿಶ್ವ ವಿಖ್ಯಾತ.ಬೋಂಗು ಬಿಡುವವರಿಗೆ ಸತ್ಯ ಬೇಕಿರುವುದಿಲ್ಲಅವರದೇನಿದ್ದರೂ ಮನ ರಂಜನೆಯದೇ ಗುರಿಚಪ್ಪಾಳೆಗೆ ಖುಷಿಪಡುವವರಿಗೆ ಬೌದ್ಧಿಕತೆಯಅಗತ್ಯಕ್ಕಿಂತಲೂ ದಿರಿಸಿನದೇ […]
ಕಾವ್ಯಯಾನ
ಗಝಲ್ ರುಕ್ಮಿಣಿ ನಾಗಣ್ಣವರ ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ […]