Category: ಕಾವ್ಯಯಾನ

ಕಾವ್ಯಯಾನ

ಏನು ಬರೆಯಲಿ ……!

ಕವಿತೆ ಏನು ಬರೆಯಲಿ ……! ಅಕ್ಷತಾ ಜಗದೀಶ. ಬರೆಯೆಂದೊಡನೆ‌ ಏನುಬರೆಯಲಿ ನಾನುಕವನದ ಸಾಲುಗಳಿವುತಾವಾಗಿ‌ ಸಾಗುತಿಹವು… ಎಂದೂ ಕಾಣದ ಮೊಗವಜೊತೆಯಲಿ ಕಳೆಯದ ದಿನವಆ ಕ್ಷಣಗಳ ಕುರಿತು….ಏನೆಂದು‌ ಬರೆಯಲಿ ನಾನು… ದೂರದ ಕಾನನದೊಳಿರುವತೊರೆಯ‌ ಮೇಲಿನ ಬುಗ್ಗೆನಾ ಕಾಣ ಹೊರಟಾಗ…ಮಾಯವಾಗಿ‌ ಹೋದಾಗ….ಆ ಬುಗ್ಗೆಯ ಕುರಿತು‌ ನುಡಿಯೆಂದರೆಏನು‌ ನುಡಿಯಲಿ ನಾನು…. ಬಾನಲಿ ಮೂಡಿದ‌ ಮಿಂಚೊಂದುಕ್ಷಣದಲಿ ಮೂಡಿ ಮಾಯವಾಗಿಇರುಳ ದಾಟಿ ನಾ ಬಂದಾಗಹಗಲಲಿ ಏನು‌ ಹೆಳಲಿ ನಾನು.. ಬರೆಯೆಂದೊಡನೆ ಏನು‌ಬರೆಯಲಿ ನಾ‌ನು…….***

ಲಂಕೇಶ-೭೮

ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ […]

ಗಝಲ್

ಗಝಲ್ ರತ್ನರಾಯ ಮಲ್ಲ ಅಸಹಾಯಕತೆಯ ಬೇರಿಗೆ ನೀರೆರೆಯಬೇಡಿಮನಸ್ಸಿನ ಆತ್ಮವಿಶ್ವಾಸವನ್ನು ಚಿವುಟಬೇಡಿ ಕರುಣೆ-ಕನಿಕರದಿಂದ ಒಡಲ ಹಸಿವು ನೀಗದುಸಹಾನುಭೂತಿಯ ಜಾಲದಲ್ಲಿ ಸಿಲುಕಬೇಡಿ ಪಾಪ ಎಂದು ಪಾಪಿ ಎನ್ನುವರು ಜಗದೊಳಗೆಸಾಧನೆಯ ಶಿಖರದಿಂದ ಜಾರಿ ಬೀಳಬೇಡಿ ಕಾರಣಗಳು ಇತಿಹಾಸವನ್ನು ನಿರ್ಮಿಸುವುದಿಲ್ಲನೋವನ್ನು ಪ್ರದರ್ಶನದ ವಸ್ತು ಮಾಡಬೇಡಿ ‘ಮಲ್ಲಿ’ ಮಲ್ಲಿಗೆಯ ಮೊಗ್ಗನ್ನು ಪ್ರೀತಿಸುವರೆಲ್ಲರುಅನ್ಯರ ಕೈಯಲ್ಲಿ ಆಡುವ ಗೊಂಬೆ ಆಗಬೇಡಿ ***************************************

ಗಝಲ್

ಗಝಲ್ ಮುತ್ತು ಬಳ್ಳಾ ಕಮತಪುರ ಮಾತನಾಡುವದೇ ಬಿಟ್ಟಿರುವೆ ನುಡಿಗಳು ತಿರುಚಲಾಗುತ್ತಿದೆ |ಕೇಳಿಸಿಕೊಳ್ಳುವುದೇ ಬಿಟ್ಟಿರುವೆ ಸುಳ್ಳುಗಳು, ವಿಜೃಂಭಿಸಲಾಗುತ್ತಿದೆ || ನೋಡುವುದೇ ಬಿಟ್ಟಿರುವೆ ಬೆಂಕಿ ಹಚ್ಚುವುದು ಚಿತ್ರಿಸಲಾಗುತ್ತಿದೆ |ಪ್ರಶ್ನಿಸುವುದೇ ಬಿಟ್ಟಿರುವೆ ನಾಲಿಗೆಗೆ ಬೀಗ ಹಾಕಲಾಗುತ್ತಿದೆ || ಪುಸ್ತಕ ಓದುವದೇ ಬಿಟ್ಟಿರುವೆ ಕಂದಕ ಉಂಟು ಮಾಡುವುದೇ ಮುನ್ನೆಲೆಗೆ |ತಿನ್ನುವದೇ ಆತಂಕ ಹೊಲಗಳಲ್ಲಿ ವಿಷವನ್ನು ಬಿತ್ತಿ ಬೆಳೆಯಲಾಗುತ್ತಿದೆ || ಕಲಾ ಲೋಕದಲ್ಲಿ ಬಣ್ಣದ,ಬಾಚಣಿಗೆಯ ಮಂದಿಯೇ ತುಂಬಿಕೊಂಡಿದ್ದಾರೆ |ಎಲ್ಲಾ ಉಚಿತವಾಗಿ ವಿತರಣೆ ಮನುಜ ಪ್ರೀತಿ ಪೇಟೆಯಲಿ ಬಿಕರಿಯಾಗುತ್ತಿದೆ || ಜೀವನ ಪುಷ್ಪ ಮೊಗ್ಗಾಗಿ ಅರಳುವ […]

ಬಿಂದಿಗೆ ಕಳೆದಿದೆ

ಕವಿತೆ ಬಿಂದಿಗೆ ಕಳೆದಿದೆ ಸುಮಾವೀಣಾ ನಂಬಿಕೆಯೆಂಬೋ ಬಿಂದಿಗೆ ಕಳೆದಿದೆಕಳ್ಳನ ಮನೆಗೆ ಮಹಾಕಳ್ಳ ಹೊಕ್ಕಂತೆ!ಅಪನಂಬಿಕೆಯ ಮೇಲೆ ಅವಿಶ್ವಾಸ ಹೊಕ್ಕಿದೆನಂಬಿಕೆ ಕಳೆದರೂ ಕಳೆಯಿತುಕಳೆದು ಹೋಗುವ ಮುನ್ನ ಹೇಳಲೇಬೇಕಿತ್ತು!ಹೇಗೆ ?ಹೇಳುವೆ! ನಾ ಮರೆತಿದ್ದೆ ನೀ ಕಳ್ಳ ತಾನೆ!ನಂಬಿಕೆ ಮೂರು ಕಾಸಿನದ್ದೆ?ನಿನಗಿದ್ದರೂಇರಬಹುದು!ಇರಬಹುದು!ಮೂರು ಕಾಸಾದರೂ ಕಾಸೇ ತಾನೇಆತ್ಮಘಾತಕತನ ಮಾಡಲುಬಾರದುಬಿಂದಿಗೆ ಕಳೆದಿದೆ! ಬಿಂದಿಗೆ ಕಳೆದಿದೆ!ಕದ್ದು ಹೋಗಿದೆ ನಂಬಿಕೆತಿರುಗಿ ಬಂದರೂ ವಿಶ್ವಾಸವಲ್ಲದ ನಂಬಿಕೆಹೋದರೆ ಹೋಗಲಿ ಬಿಂದಿಗೆಒಳಿತೇ ಆಯಿತುನಿನ್ನ ವ್ಯಘ್ರತೆ, ರಾಕ್ಷಸತ್ವ ದರ್ಶನವಾಯಿತಲ್ಲ! *******************************

ಗಝಲ್

ಗಝಲ್ ಪ್ರತಿಮಾ ಕೋಮಾರ ನೆನಪುಗಳನ್ನೆಲ್ಲ ಕಣ್ರೆಪ್ಪೆಯಲಿ ಸೆರೆಯಾಗಿಸಿದ್ದೇನೆ ಕುಕ್ಕಬೇಡ ನೋಡುನಿರೀಕ್ಷೆಗಳನ್ನೆಲ್ಲ ಅಟ್ಟ ಏರಿಸಿದ್ದೇನೆ ಇಳಿಸಬೇಡ ನೋಡು ಒಳಗುದಿಯ ಒಳಗೇ ಇಟ್ಟು ಕುದಿಯುವುದೇಕೆ? ಹೇಳಿಬಿಡುಕೇಳಲೆಂದೆ ಎದೆಗಿವಿಯನ್ನು ತೆರೆದಿದ್ದೇನೆ ಮುಚ್ಚಿಡಬೇಡ ನೋಡು ಎನ್ನೆಲ್ಲ ಭಾವಗಳ ಚಿತ್ರ ಶಾಲೆಗೆ ಚಿತ್ತಾರಿಗನಾದವನು ನೀನುನಿನ್ನಾಸರೆಯಲಿ ನಲಿವ ರಾಶಿ ಹಾಕಿದ್ದೇನೆ ತೂರಬೇಡ ನೋಡು ತಪ್ಪನ್ನು ಕ್ಷಮಿಸಿ ಮುಂದಡಿ ಇಟ್ಟಾಗಲೇ ಸಾಗುವುದು ಪಯಣಘಾತದ ಭೂತವನ್ನೆಲ್ಲ ಮರೆತು ಬಿಟ್ಟಿದ್ದೇನೆ ಕೆದಕಬೇಡ ನೋಡು “ಪ್ರತಿ” ಯ ನಿಗ೯೦ಧ ಬಾಳು ಬಂಜರು ಭೂಮಿಗೆ ಸಮಾನಕನಸಗನ್ನಡಿಯ ಜೋಪಾನ ಮಾಡಿದ್ದೇನೆ ಒಡೆಯಬೇಡ ನೋಡು ********************************

ವಿರಹಿ ದಂಡೆ

ಪುಸ್ತಕ ಪರಿಚಯ ವಿರಹಿ ದಂಡೆ ವಿಪ್ರಯೋಗದಲ್ಲಿ ಅರಳಿದ ಶೃಂಗಾರ ಕವಿತೆಗಳು ವಿರಹಿ ದಂಡೆಕವನ ಸಂಕಲನಲೇಖಕ : ನಾಗರಾಜ ಹರಪನಹಳ್ಳಿಪ್ರಕಾಶನ: ನೌಟಂಕಿ. ರಾಜಾಜಿ ನಗರ, ಬೆಂಗಳೂರು.ಬೆಲೆ : ೮೦/- ನಾಗರಾಜ್ ಹರಪನಹಳ್ಳಿ ಎಂಬ ಮಹೋದಕ ಪ್ರತಿಭೆ ಪ್ರೀತಿ, ಪ್ರೇಮ, ಪ್ರಣಯದ ಪರಾಕಾಷ್ಠೆಯನ್ನು ತಲುಪಿ ಸದಾ ಯಯಾತಿಯ ಧಿರಸನ್ನು ತೊಟ್ಟು ಎದೆ ತೆರೆದು ನಿಂತ ಅಪ್ಪೆ ಹುಳಿ, ಒಗರನ್ನು ಮೈಗೂಡಿಸಿಕೊಂಡಿರುವ ಬಯಲು ಸೀಮೆಯಿಂದ ದಂಡೆಗೆ ಬಂದ ಪ್ರೀತಿಯ ಕಡುಮೋಹಿ. ಈ ಕವಿ ಹುಟ್ಟಿದ್ದೇ ಗಾಢ ಆಲಿಂಗನದ ಆರ್ದ್ರ ಉಸಿರಿನ, ಅದುರುವ […]

ಬದುಕುವೆ ರಾಜಹಕ್ಕಿಯಾಗಿ

ಕವಿತೆ ಬದುಕುವೆ ರಾಜಹಕ್ಕಿಯಾಗಿ ರಾಘವೇಂದ್ರ ದೇಶಪಾಂಡೆ ಈಡೇರುವವು ಆಸೆಗಳು ಸಾವಿರಾರುಈ ಭವದಲಿ…ಗಟ್ಟಿತನದ ಅಪೇಕ್ಷೆಯ ಆಶಯದಲಿನನ್ನೀ ಭಾವಪರವಶದಲಿ… ಹೊರಹೊಮ್ಮಿದವು ನಿರೀಕ್ಷೆಗಳುಕಮ್ಮಿಯೆನಿಸಿತಾದರೂ…ಪ್ರೀತಿಯ ಹುಟ್ಟು ಮತ್ತು ಸಾವಿನಲಿಕಾಣಸಿಗದಿಲ್ಲಿ ವ್ಯತ್ಯಾಸ… ಜೀವಿಸುತಿರುವೆ ಅಸದೃಶವಾಗಿಕತ್ತಲ ಗರ್ಭದಲಿ…ಕಟ್ಟಿಕೊಂಡ ಹಾಳೆಯ ಕೋಟೆ ಮಧ್ಯೆತೂರಿಬರುವ ಪ್ರೇಮಗಾಳಿಯಲಿ… ಇದೆ ಎನಗೆ ತಾಳ್ಮೆ ಕಾಯುವಲಿಅದೇ ತೃಪ್ತಭಾವದಲಿ…ಬದುಕುವೆ ಖಂಡಿತ ಆಸೆಗೂಡಿನಲಿಸ್ವಚ್ಛಂದದ ರಾಜಹಕ್ಕಿಯಾಗಿ… **************************************

ಸೋಜಿಗವಲ್ಲ ಈ ಜಗವು

ಕವಿತೆ ಸೋಜಿಗವಲ್ಲ ಈ ಜಗವು ರೇಷ್ಮಾ ಕಂದಕೂರ. ಸೋಜಿಗವಲ್ಲ ಈ ಜಗವುಪೇಚಿಗೆ ಸಿಲುಕದಿರಿ ನಿರ್ಲಕ್ಷ್ಯ ತನದಿಉನ್ನತ ವಿಚಾರ ಧಾರೆ ಅನುಕರಿಸಿ ಭಾಜನಾರಾಗುವೆವು ಸುಕೃತಿಗಳ ಔತಣಕೆಶೂದ್ರತನವು ಏಕೆ ತೃಣಮಾತ್ರಕೆಭದ್ರವಾಗಿರಿಸಿ ಕಾಮನೆಗಳ ಕೀಲಿಕೈ ತದ್ರೂಪ ಮೋಹಕೆ ಬಲಿಯಾಗದೇಬದ್ಧತೆಯಲಿರಲಿ ಜೀವಯಾನದ ನೌಕೆಅರಳಲು ಬಿಡಿ ಸುಕೋಮಲ ಮನ ಪುಷ್ಪವ ವ್ಯವಹಾರದಲಿ ವ್ಯವಧಾನದ ನಂಟಿರಲಿಬಿದ್ದವನು ಮರುಘಳಿಗೆ ಏಳಲೇಬೇಕುಕದ್ದ ಮನೋಭಾವ ನರಳುವುದು ಶುದ್ಧ ಸರಳತನಕೆ ಬೆಲೆ ಕೊಡಿಅರಿಯಿರಿ ವಿರಳವಾದುದು ಮಾನವ ಜನ್ಮಕಲಹ ಕೋಲಾಹಲದಲಿ ಬೇಡ ಕಾಲಹರಣದ ಕುರೂಪತೆ ನಡೆಬಡಿವಾರದ ಕೂಗು ಬೇಕೆಹಗೆತನದ ಮತ್ತಿನ ಸುತ್ತ ಚರ್ಮದ […]

ಗಝಲ್

ಮಕ್ಕಳಿಗಾಗಿ ಗಝಲ್ ಲಕ್ಷ್ಮೀದೇವಿ ಪತ್ತಾರ ಜೇಡ ತುಂಬಿದ ನಿಮ್ಮ ಮನದ ಮನೆಯ ಜಾಡಿಸಿ ಶುಭ್ರವಾಗಿಸುವ ಜಾಡು ನಾನಾಗುವೆ ಮಕ್ಕಳೆಪದೇಪದೇ ದೂಳು ತುಂಬಿದ ಜೀವನ ನಿಮ್ಮದಾಗಿಸಿ ಕೊಳ್ಳಬೇಡಿ ಮಕ್ಕಳೆ ನಿಮ್ಮ ಮಬ್ಬಾದ ಬಾಳ ಬಾನಿನಲ್ಲಿ ಬಣ್ಣ ಬಣ್ಣದ ತಾರೆಗಳನ್ನು ಇರಿಸಿ ಬೆಳಗಿಸುವೆ ಮತ್ತೆ ಮತ್ತೆ ಕಾರ್ಮೋಡಗಳ ಮುಂದಿರಿಸಿ ಕತ್ತಲಲ್ಲಿ ಮೂಳಗಬೇಡಿ ಮಕ್ಕಳೇ ನಿಂತ ನೀರಾಗಿ ಕೊಳೆಯುತ್ತಿರುವ ನಿಮ್ಮ ಬಾಳ ಹೊಳೆಗೆ ಮಳೆ ನಾನಾಗಿ ಚೈತನ್ಯ ಚಿಲುಮೆಯಾಗಿ ಹರಿವಂತೆ ಮಾಡುವೆಮತ್ತೆ ಜಡತೆಯ ಬಂಡೆ ಅಡ್ಡವಿರಿಸಿ ನಿಸ್ತೇಜರಾಗಿ ಕೂಡಬೇಡ ಮಕ್ಕಳೆ ಹಸಿರಾಡದ […]

Back To Top