ಸೋಜಿಗವಲ್ಲ ಈ ಜಗವು

ಕವಿತೆ

ಸೋಜಿಗವಲ್ಲ ಈ ಜಗವು

ರೇಷ್ಮಾ ಕಂದಕೂರ.

blue and orange smoke

ಸೋಜಿಗವಲ್ಲ ಈ ಜಗವು
ಪೇಚಿಗೆ ಸಿಲುಕದಿರಿ ನಿರ್ಲಕ್ಷ್ಯ ತನದಿ
ಉನ್ನತ ವಿಚಾರ ಧಾರೆ ಅನುಕರಿಸಿ

ಭಾಜನಾರಾಗುವೆವು ಸುಕೃತಿಗಳ ಔತಣಕೆ
ಶೂದ್ರತನವು ಏಕೆ ತೃಣಮಾತ್ರಕೆ
ಭದ್ರವಾಗಿರಿಸಿ ಕಾಮನೆಗಳ ಕೀಲಿಕೈ

ತದ್ರೂಪ ಮೋಹಕೆ ಬಲಿಯಾಗದೇ
ಬದ್ಧತೆಯಲಿರಲಿ ಜೀವಯಾನದ ನೌಕೆ
ಅರಳಲು ಬಿಡಿ ಸುಕೋಮಲ ಮನ ಪುಷ್ಪವ

ವ್ಯವಹಾರದಲಿ ವ್ಯವಧಾನದ ನಂಟಿರಲಿ
ಬಿದ್ದವನು ಮರುಘಳಿಗೆ ಏಳಲೇಬೇಕು
ಕದ್ದ ಮನೋಭಾವ ನರಳುವುದು

ಶುದ್ಧ ಸರಳತನಕೆ ಬೆಲೆ ಕೊಡಿ
ಅರಿಯಿರಿ ವಿರಳವಾದುದು ಮಾನವ ಜನ್ಮ
ಕಲಹ ಕೋಲಾಹಲದಲಿ ಬೇಡ

ಕಾಲಹರಣದ ಕುರೂಪತೆ ನಡೆ
ಬಡಿವಾರದ ಕೂಗು ಬೇಕೆ
ಹಗೆತನದ ಮತ್ತಿನ ಸುತ್ತ

ಚರ್ಮದ ಹೊದಿಕೆಯ ಮಾಂಸಕೆ
ಕರ್ಮದ ಫಲಿತಾಂಶವೇ ದೃಢ
ಬುರುಡೆಯ ಮಾತೆಗೇಕೆ ಮಣೆ

ಗೇಣುದ್ದ ಜಾಗವೇ ಕೊನೆ
ಮಾರುದ್ಧ ಭಾಷಣ ಮಾಡುತ
ಕಿಡಿ ಕಾರುವ ಬಡಿದಾಡುವ ಕಥನ

ಬಿಡಿ ಕ್ಷಣಕಾಲದ ಸುಖಕೆ ಗಮನ
ಅಂತರಾಳದ ಮಾತೊಮ್ಮೆ ಕೇಳುತ
ಸುಪ್ತಸ್ಥಿತಿಯ ಭಿತ್ತಿಯಲಿ ಬೇಡ ಕೂರ್ಮಾವತಾರ

ಅನುಬಂಧಧ ಅಲೆಯಲಿ ತೇಲುವ ಬಾ
ನಗೆ ಮಲ್ಲಿಗೆಯ ಅನುಭಾವದಿ
ಸಂಬಂಧಕೆ ಬೆಲೆ ನೀಡಿ
ಬರೆಯಿರಿ ಸತ್ಯಾಸತ್ಯದ ಗೋಡೆ ಬರಹ.

***********************************

Leave a Reply

Back To Top