Category: ಕಾವ್ಯಯಾನ

ಕಾವ್ಯಯಾನ

ನಕ್ಷತ್ರ ನೆಲಹಾಸು

ಕವಿತೆ ನಕ್ಷತ್ರ ನೆಲಹಾಸು ಸ್ವಭಾವ ಕೋಳಗುಂದ ನಕ್ಷತ್ರಗಳ ಹಾದಿಗುಂಟ ಹಾಸಿಸಿಂಗರಿಸಿ ನಿನ್ನ ಕೊಳಲ ಪಾದನೆನಪಿನೆದೆಯ ತುಳಿಯಲಾಶಿಸಿದೆ ಅರ್ಧ ಕತ್ತಲಲಿ ಎದ್ದು ಹೊರಟುನಿನ್ನ ತಬ್ಬಲಿ ಮಾಡಿನಾ ಬುದ್ಧನಾಗಲಾರೆ ಈ ಹಾದಿಗಳೆಲ್ಲಾಎಷ್ಟೊಂದು ಆಮಿಷ ಒಡ್ಡುತ್ತಿವೆಹೃದಯ ಬಂಧಿಯ ಮುಕ್ತಿಗಾಗಿ ನನ್ನೊಳಗಿನ ಸೀತಾಮೀನ ಮೊಟ್ಟೆಯ ಕಾವಲಲಿಸಾವಿರ ಸಂತತಿಯ ಬೆಳಕು ನನ್ನ ಅಸ್ತಿತ್ವದ ಬಿಂದುವಿಗೆನಿನ್ನೊಲವಿನ ಮೊಲೆಹಾಲ ಸ್ಪುರಣಭರವಸೆಯ ಮುತ್ತ ಮಣಿಹಾರ ಹಿಮ ಮಣಿಯ ಮರಳಿನಮರೀಚಿಕೆಯ ಸಾಗರಪಾರಿಜಾತದ ಪರಿಮಳದ ಸಂದೇಶ ಹನಿ ಬೀಜಕ್ಕೆ ಸಾವಿರ ಸಂತಾನನೆಲದ ನಾಲಗೆಯಲಿಸಾವಿನ ಸಂಚಾರಿ ಹಸಿ ಮಣ್ಣ ಮೈಯೊಳಗೆಕನಸ ಕಲ್ಪನೆಯ ಕೂಸುಬಿತ್ತಿ […]

ಗಝಲ್

ಗಝಲ್ ರತ್ನರಾಯ ಮಲ್ಲ ಅಕ್ಕಸಾಲಿಗನಲ್ಲಿ ಕಾಲ್ಗೆಜ್ಜೆ ತಂದಿರುವೆನು ಪ್ರೀತಿಯಿಂದಬಲಗಾಲು ಮುಂದೆಯಿಡು ತೊಡಿಸುವೆನು ಪ್ರೀತಿಯಿಂದ ಮಯೂರವು ವಿಹರಿಸಿದಂತಾಗುತಿದೆ ಈ ಹೃದಯದಲ್ಲಿಹಂಸದ ನಡಿಗೆಯನು ಪ್ರೀತಿಸುತಿರುವೆನು ಪ್ರೀತಿಯಿಂದ ಹಕ್ಕಿಗಳ ಕಲರವವು ಆಲಂಗಿಸುತಿದೆ ಈ ಮೈ-ಮನಗಳನ್ನುಶಕುಂತಲೆಯ ನಾಟ್ಯದಿ ಮೈ ಮರೆತಿರುವೆನು ಪ್ರೀತಿಯಿಂದ ಗೆಜ್ಜೆ ಎದೆ ಬಡಿತದೊಂದಿಗೆ ಪ್ರೇಮ ರಾಗವ ನುಡಿಸುತಿದೆನಿದ್ದೆ ಮರೆತು ನಿನ್ನನ್ನೆ ಕನವರಿಸುತಿರುವೆನು ಪ್ರೀತಿಯಿಂದ ‘ಮಲ್ಲಿ’ ನಿನ್ನ ಹೆಜ್ಜೆಯಲ್ಲಿ ಗೆಜ್ಜೆಯನು ಹುಡುಕುತಿರುವನುನಿನ್ನ ಪಾದಗಳನ್ನು ಅಲಂಕರಿಸುತಿರುವೆನು ಪ್ರೀತಿಯಿಂದ **********************************

ಬಾಲ್ಯ

ಕವಿತೆ ಬಾಲ್ಯ ತಿಲಕ ನಾಗರಾಜ್ ಹಿರಿಯಡಕ ಅರೆ! ಎಷ್ಟು ಚೆನ್ನಾಗಿತ್ತಲ್ಲ?ಅಲ್ಲಿ ಯಾವ ನೋವಿನಹಂಗಿರಲಿಲ್ಲ….ಚಿಂತೆಗಳ ಬರೆಯಿರಲಿಲ್ಲಮುದವೀಯುತ್ತಿದ್ದವಲ್ಲಕಾಡು ಮೇಡುಗಳ ಅಲೆದಾಟಗದ್ದೆ ಬಯಲುಗಳ ಓಡಾಟ…ಲಗೋರಿ ಕಣ್ಣಾಮುಚ್ಚಾಲೆಚಿನ್ನಿದಾಂಡು ಉಯ್ಯಾಲೆಕ್ರಿಕೇಟು ಕುಂಟೆಬಿಲ್ಲೆಆಟಗಳಾಡಿ ರಾತ್ರಿಯಲ್ಲಿಕಾಲಿಗೆ ಚುಚ್ಚಿದ ಮುಳ್ಳುಗಳನೋವಿನ ಜೊತೆಹಿರಿಯರ ಬೈಗುಳದ ಜೋಗುಳಒಂದಷ್ಟು ಹಾಯಾದ ನಿದ್ದೆಮರವೇರಿ ಕೊಯ್ದಮಾವಿನ ಕಾಯಿಗಳಬಚ್ಚಿಟ್ಟು ಹಣ್ಣಾಗಿಸಿ ತಿಂದಸ್ವಾದ ನಾಲಗೆಯಲ್ಲಿ ಸದಾ ಅಮರಹಚ್ಚಿಟ್ಟ ಚಿಮಣಿ ದೀಪದಆಚೆಗೆ ಬೀಡಿ ಎಲೆಗಳ ಸುರುಳಿಸುತ್ತುತ್ತಿದ್ದ ಅಮ್ಮನ ಬೆರಳುಗಳುಈಚೆಗೆ ಪುಸ್ತಕಗಳ ಮೇಲೆಕಣ್ಣಾಡಿಸುತ್ತಿದ್ದ ನಾವುಗಳುಒಮ್ಮೊಮ್ಮೆ ಬೇಸರೆನಿಸಿದಾಗಪಠ್ಯ ಪುಸ್ತಕಗಳ ನಡುವೆಇರಿಸಿ ಓದುತ್ತಿದ್ದ ಕತೆ ಪುಸ್ತಕಗಳಮುಖಾಂತರ ಕಲ್ಪನಾ ಲೋಕದಲ್ಲಿಒಂದು ಸಣ್ಣ ವಿಹಾರ..ಮರೆಯಲಾಗದ್ದು, ಮರಳಿ ಬಾರದ್ದುಎಷ್ಟು […]

ಆಹುತಿ

ಕವಿತೆ ಆಹುತಿ ಅನಿಲ ಕಾಮತ ದೇಹ ಹಿಂಡಿಹಿಪ್ಪೆಯಾಗಿಸಿದೆಕಾರಿನಲ್ಲಿ ಬಸ್ಸಿನಲ್ಲಿಹಗಲಲ್ಲಿ ನಸುಕಿನಲ್ಲಿಕಾನನದಲ್ಲಿನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನಬ್ರೇಕಿಂಗ್ ನ್ಯೂಸ್‌ಗಳಿಗೆಆಹಾರಭುವನ ಸುಂದರಿಸ್ಪರ್ಧೆಯಲ್ಲಿದೇಹ ಸೌಂದರ್ಯದ ಬಗ್ಗೆತೀರ್ಪುಗಾರರತಾರೀಪು ಹೆಣ್ಣು ಭ್ರೂಣಪತ್ತೆ ಮಾಡುವತವಕದಲ್ಲಿಸ್ಕೆನ್ನಿಂಗ್ಮಿಷನ್ ಗಳಿಗೆಪುರುಸೊತ್ತಿಲ್ಲ ನದಿಯ ತಟದಲ್ಲಿರೇಲ್ವೆ ಸೇತುವೆಯಕೆಳಗೆಅರೆಬೆಂದ ಶವವಾಗಿಖಾಕಿಗಳಿಗೆ ಮಹಜರುಮಾಡಲು…. ****************

ಮಳೆಗಾಲದ ಬಿಸಿಲುಕವಿತೆ

ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************

ಬದುಕು- ಬವಣೆ

ಕವಿತೆ ಬದುಕು- ಬವಣೆ ಸಹನಾ ಪ್ರಸಾದ್ ಗಂಡ ಹೆಂಡಿರ ಸಂಬಂಧಸಂಸಾರಕ್ಕೆ ಇದೇ ಮೆರಗುಉಫ಼್ಫ಼್ ಹೇಳಲಾಗದು ಅನುಬಂಧಜತೆಗಿರುವರು ಸಾಯುವವರೆಗೂ ಆದರೆ ಇರಲೇಬೇಕಿಲ್ಲ ಪ್ರೀತಿವ್ಯಾವಹಾರಿಕವಾದರೂ ನಡೆದೀತುಇದ್ದರೆ ಸಮಾಜದ ಭೀತಿಪ್ರೀತಿಯೂ ಗಿಲೀಟು ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆಜತೆಗಿರುವುದೂ ಅನಿವಾರ್ಯವಾದಾಗಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕುಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು! *************************

ರಚ್ಚೆ ಹಿಡಿದ ಮನ

ಕವಿತೆ ರಚ್ಚೆ ಹಿಡಿದ ಮನ ಸ್ವಭಾವ ಕೋಳಗುಂದ ಮಳೆ ನಿಂತ ನೆಲದಲ್ಲಿನಡೆಯುತ್ತಲೇ ಇದ್ದಳುಗುರುತು ಮಾಡಿ ಗುರಿಯೆಡೆಗೆ ಹಸಿಟ್ಟಿಗೆ ಬಿಸಿ ನೀರು ಸುರುವಿತಟ್ಟಿ ಬೆಳರ ಚಿತ್ರದ ಹಚ್ಚೆಬೆಂದ ರೊಟ್ಟಿ ಹಸಿದ ಹೊಟ್ಟಗೆ ಹರಗಿದ ಹೊಲಕ್ಕೆ ಬೀಜ ಬಿತ್ತಿನೀರು ಹಾಯಿಸಿ ಕಳೆ ಕಿತ್ತುಕೊಯ್ಲಿಗೆ ಕಾದು ರಾಶಿ ಪೈರಾಗಿಸಿದ್ದ ರಚ್ಚೆ ಹಿಡಿದ ಕೂಸುನೆಟಿಗೆ ತೆಗೆದು ನೀವಾಳಿಸಿರಂಚು ಬೂದಿಯ ತಿಲಕದ ಕೈಚಳಕ ಗುಡಿಯ ಗಂಟೆಯ ನಾದಕ್ಕೆತಲೆದೂಗಿದ ಎಳೆ ಜೋಳದ ತೆನೆನೊರೆ ಉಕ್ಕಿ ಕೆಚ್ಚಲ ತಂಬಿಗೆ ಸೋರಿತ್ತು ಕೊಟ್ಟಗೆಯ ಕರು ಚಂಗನೆ ಎಗರಿಅಂಗಳದ ರಂಗೋಲಿ […]

ಗಝಲ್

ಗಝಲ್ ಸ್ಮಿತಾ ಭಟ್ ಒಲವಿನ ನಿರೀಕ್ಷೆಯ ಬದುಕ ಮುಗಿಸಿದ್ದೇನೆನಲಿವಿನ ದೀಪದೆದುರು ಕಣ್ಮುಚ್ಚಿ ಕುಳಿತಿದ್ದೇನೆ/ ಯಾರಿಗೆ ಯಾರೂ ಆಸರೆಯಲ್ಲ ಇಲ್ಲಿಸೆರೆಯಾದ ಉಸಿರಿನ ಕೀಲಿ ತೆಗೆದಿದ್ದೇನೆ / ಕ್ಷಮಿಸು ಕಣ್ಣತೇವಕ್ಕೆ ನನ್ನ ಹೊಣೆ ಮಾಡದಿರುಕರವಸ್ತ್ರ ಇರಿಸಿಕೊಳ್ಳುವ ರೂಢಿ ಮರೆತಿದ್ದೇನೆ/ ಮೊಗಕೆ ಒಳಗುದಿಯ ತೋರುವ ಇರಾದೆ ಇಲ್ಲಬರಿದೇ ತರತರದ ಮಾತಾಗಿ ನಗುತ್ತಿದ್ದೇನೆ/ ಬಲಹೀನ ಮನಸು ಏನೂ ಸಾಧಿಸದು ಮಾಧವಾಭವಿತವ್ಯದ ಬಾಗಿಲಿಗೆ ತೋರಣವ ಕಟ್ಟಿದ್ದೇನೆ/ *********************************

ಆಯ್ಕೆ ನಿನ್ನದು

ಕವಿತೆ ಆಯ್ಕೆ ನಿನ್ನದು ಸುಮಾ ಆನಂದರಾವ್ ಜುಳುಜುಳು ಹರಿವ ಝರಿ ತೊರೆಗಳುನಯನ ಮನೋಹರ ಪರ್ವತ ಶಿಖರಗಳುಬಣ್ಣ ಬಣ್ಣದ ಹೂ ಗೊಂಚಲುಗಳುಹೀರಿದ ಮಕರಂದದಿ ಮಧು ಪಾತ್ರೆಯಸಿಹಿ ತುಂಬಿಸಿ ಝೇಂಕರಿಪ ದುಂಬಿಗಳುಕಣ್ಮನ ಸೂರೆಗೊಳ್ಳುವ ಹಚ್ಚ ಹರಿದ್ವರ್ಣಒಳನುಸುಳಲು ಹೊಂಚುಹಾಕುತಿಹ ಸೂರ್ಯಕಿರಣಒಂದೇ ಎರೆಡೇ ಗೋವರ್ಧನ ಗಿರಿ ಸಂಪತ್ತು ಶ್ಯಾಮನೇಕೆಭಾರದ ಗಿರಿಯ ಒಂದೇ ಬೆರಳಲಿ ಹಿಡಿದ ?ಹಗುರಾದ ಕೊಳಲನೇಕೆ ಎರಡು ಕೈಯಲಿ ಪಿಡಿದ!ಅಚ್ಚರಿಯೊಡನೆ ದಿವ್ಯ ಸತ್ಯವೊಂದಿಹುದುಗಿರಿಯಲಿ ಸೌಂದರ್ಯ ತುಂಬಿಕೊಂಡರೂಗಾಢ ಕತ್ತಲು, ಭಯಂಕರ ಮೃಗಗಳು, ಸರೀಸೃಪಗಳುಓಡಲಾಳದಿ ಇವೆಯಲ್ಲವೇ?ಕೊಳಲಾದರೋ ತನ್ನೊಳಗೆ ನುಗ್ಗಿದ ಶ್ವಾಸವನ್ನು ಸಹ ಹಿಡಿದಿಡದೆಸುಶ್ರಾವ್ಯವಾಗಿ ಕಿವಿಗೆ […]

ಈ ರೋಗ…

ಕವಿತೆ ಈ ರೋಗ… ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊರಗೆ ಕಾಯುತ್ತ ಇದ್ದಾನೆನನಗಾಗಿಕ್ಲಿನಿಕ್ ರಷ್ ಆಗಿದೆಹೇಳಿ ಕೇಳಿಕೋವಿಡ್ ಕಾಲ!ಆತನ ಮನೆಗೆ ಹೋಗಿಬರಬೇಕಿದೆ… ಬೈಕ್ ಹತ್ತಿ ಹೊರಟಾಗಹೊರಟಾಗ ಗಾಢ ಸಂಜೆನಾ ಮುಂದು ಆತ ಹಿಂದೆಯಾರದೋ ಜಮಾನಿನಕಾಲುದಾರಿ ಹಿಡಿದುಹಳ್ಳಿಯಕಡೆ… ಝಗಮಗವಿಲ್ಲದ ಊರಲ್ಲಿಎಲ್ಲೆಲ್ಲೂ ಮಬ್ಬುಗತ್ತಲೆಇಲ್ಲಿ ಈ ಹೆಂಚಿನಮನೆಯೊಳಗೂ ಅರೆಜೀವದಮಿಣುಕುದೀಪಅದೇ ಅವಸ್ಥೆಯಲಿನರಳುತ್ತಮೂಲೆಯ ಮಂಚವೊಂದರಮೇಲುರುಳಿದ್ದವಯೋವೃದ್ಧಆಗಲೇ ಅರೆಜೀವದ ಸೊಪ್ಪು…ಮೂಳೆ ಚಕ್ಕಳ!ಜೊತೆಗೆ ಬಿಡುವಿಲ್ಲದ ಕೆಮ್ಮಿಗೆಉಬ್ಬಿಳಿವ ಹೊಕ್ಕುಳ…ಮೈ ಕೆಂಪಾದ ಜ್ವರದ ತಾಪಉಲ್ಬಣಿಸಿತ್ತುಅಷ್ಟರಲ್ಲಿ ಕ್ಷಯ ಆಸ್ಥಿತಿಗೆ!ಎಂಥ ರೋಗ ಈಜನದ ನಡುವೆ!ಎಲ್ಲಿ ಕೊಡಲಿ ಮದ್ದುಇಲ್ಲಿ ಇಂಥ ಮನೆಯಲ್ಲಿಇಂಥ ರೋಗಿಗೆತೊಟ್ಟಿಮನೆಯಂಥಈ ಕುಟುಂಬದಲ್ಲಿ!ಸಾವಿಗೆ ಒಂದೇ […]

Back To Top