ಈ ರೋಗ…

ಕವಿತೆ

ಈ ರೋಗ…

ಡಾ. ಅರಕಲಗೂಡು ನೀಲಕಂಠ ಮೂರ್ತಿ

man in white face mask

ಹೊರಗೆ ಕಾಯುತ್ತ ಇದ್ದಾನೆ
ನನಗಾಗಿ
ಕ್ಲಿನಿಕ್ ರಷ್ ಆಗಿದೆ
ಹೇಳಿ ಕೇಳಿ
ಕೋವಿಡ್ ಕಾಲ!
ಆತನ ಮನೆಗೆ ಹೋಗಿ
ಬರಬೇಕಿದೆ…

ಬೈಕ್ ಹತ್ತಿ ಹೊರಟಾಗ
ಹೊರಟಾಗ ಗಾಢ ಸಂಜೆ
ನಾ ಮುಂದು ಆತ ಹಿಂದೆ
ಯಾರದೋ ಜಮಾನಿನ
ಕಾಲುದಾರಿ ಹಿಡಿದು
ಹಳ್ಳಿಯಕಡೆ…

ಝಗಮಗವಿಲ್ಲದ ಊರಲ್ಲಿ
ಎಲ್ಲೆಲ್ಲೂ ಮಬ್ಬುಗತ್ತಲೆ
ಇಲ್ಲಿ ಈ ಹೆಂಚಿನ
ಮನೆಯೊಳಗೂ ಅರೆಜೀವದ
ಮಿಣುಕುದೀಪ
ಅದೇ ಅವಸ್ಥೆಯಲಿ
ನರಳುತ್ತ
ಮೂಲೆಯ ಮಂಚವೊಂದರ
ಮೇಲುರುಳಿದ್ದ
ವಯೋವೃದ್ಧ
ಆಗಲೇ ಅರೆಜೀವದ ಸೊಪ್ಪು…
ಮೂಳೆ ಚಕ್ಕಳ!
ಜೊತೆಗೆ ಬಿಡುವಿಲ್ಲದ ಕೆಮ್ಮಿಗೆ
ಉಬ್ಬಿಳಿವ ಹೊಕ್ಕುಳ…
ಮೈ ಕೆಂಪಾದ ಜ್ವರದ ತಾಪ
ಉಲ್ಬಣಿಸಿತ್ತು
ಅಷ್ಟರಲ್ಲಿ ಕ್ಷಯ ಆ
ಸ್ಥಿತಿಗೆ!
ಎಂಥ ರೋಗ ಈ
ಜನದ ನಡುವೆ!
ಎಲ್ಲಿ ಕೊಡಲಿ ಮದ್ದು
ಇಲ್ಲಿ ಇಂಥ ಮನೆಯಲ್ಲಿ
ಇಂಥ ರೋಗಿಗೆ
ತೊಟ್ಟಿಮನೆಯಂಥ
ಈ ಕುಟುಂಬದಲ್ಲಿ!
ಸಾವಿಗೆ ಒಂದೇ ಒಂದಡಿ
ಮೇಲಿನ ತ್ರಿಶಂಕು ರೋಗಿ!
ಈ ಸಂಕಟದ ನನ್ನ
ಈ ಗತಿ
ಯಾವ ಆಸ್ಪತ್ರೆಗೂ
ಕಳಿಸಲೂ ಆಗದ ಸ್ಥಿತಿ
ಏನು ವೃತ್ತಿಯೋ
ಎಷ್ಟರ ವೈದ್ಯವೋ ಏನೋ…
ಅಂತೂ ವಿಧಿಯೆಂದು
ಹೇಳಿದೆ…
ಬೈಕ್ ಏರಿ ಹೊರಟೆ…

**********************************

4 thoughts on “ಈ ರೋಗ…

Leave a Reply

Back To Top